ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಅನಿಯಮಿತ ಮುಟ್ಟಿನ ಸಮಸ್ಯೆ ಉಂಟುಮಾಡುವುದೇ?

|
Google Oneindia Kannada News

ಬೆಂಗಳೂರು, ಜೂನ್ 10: ಕೊರೊನಾ ಸೋಂಕು ಮಹಿಳೆಯರ ಋತುಚಕ್ರದ ಮೇಲೂ ಪರಿಣಾಮ ಬೀರಬಹುದೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಈಗಾಗಲೇ ಹಲವು ವೈದ್ಯರು ಕೊರೊನಾ ಸೋಂಕಿನ ಲಕ್ಷಣಗಳು ಹಾಗೂ ದೇಹದ ವಿವಿಧ ಭಾಗಗಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಹಾಗೆಯೇ ಋತುಚಕ್ರದ ಮೇಲೆ ಸೋಂಕು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ವೈದ್ಯರು ವಿವರಿಸಿದ್ದು ಹೀಗೆ.

ಮಾನಸಿಕ ಒತ್ತಡ ಋತುಚಕ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದು, ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಇದಲ್ಲದೆ, ಸೋಂಕು ತಗುಲುವ ಚಿಂತೆ ಹಾಗೂ ಕುಟುಂಬ ಸದಸ್ಯರನ್ನು ಕಳೆದುಕೊಳ್ಳುತ್ತಿರುವುದು ಒತ್ತಡವನ್ನು ಹೆಚ್ಚು ಮಾಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ಯಾನಿಟರಿ ಸ್ಯಾಪ್ಕಿನ್ ಗಳನ್ನು ನೀಡಲಾಗುತ್ತಿತ್ತು.

ಆದರೆ, ಸಾಂಕ್ರಾಮಿಕ ರೋಗ ಪರಿಣಾಮ ಆ ಕಾರ್ಯಕ್ರಮಗಳೆಲ್ಲಾ ಸ್ಥಗಿತಗೊಂಡಿವೆ. ಪರಿಣಾಮ ಮಕ್ಕಳು ಹಿಂದಿನ ಸಂಪ್ರದಾಯದಂತೆ ಬಟ್ಟೆ ಬಳಕೆ ಮುಂದುವರೆಸಿದ್ದಾರೆ. ಇನ್ನು ಮಹಿಳಾ ಆರೋಗ್ಯ ಕಾರ್ಯಕರ್ತರು ಮುಟ್ಟು ಸಮಯದಲ್ಲಿ ನ್ಯಾಪ್ಕಿನ್ ಗಳನ್ನು ಬದಲಾಯಿಸಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸವಾಲಿನ ಸಮಯ

ಸವಾಲಿನ ಸಮಯ

ಸಾಂಕ್ರಾಮಿಕ ರೋಗ ಸವಾಲಿನ ಸಮಯವಾಗಿದ್ದು, ಇಂತಹ ಸಮಯದಲ್ಲಿ ಒತ್ತಡದಿಂದ ಮುಟ್ಟಿನ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ. ಆದರೆ, ಈ ಸಮಸ್ಯೆ ಗಂಭೀರವಾಗಿದ್ದರೆ, ಮಹಿಳೆಯರು ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.
ಇಂಟರ್ನೆಟ್ ಬಳಕೆ ವ್ಯವಸ್ಥೆ ಹೊಂದಿರುವವರು ಆನ್‌ಲೈನ್ ಮೂಲಕವೂ ವೈದ್ಯರನ್ನು ಸಂಪರ್ಕಿಸಬಹುದು. ಸೂಕ್ತ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡುವುದರಿಂದ ಗಂಭೀರ ಸಮಸ್ಯೆಗಳಾಗುವುದನ್ನು ತಡೆಯಬಹುದು.
ಕೆಲವು ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಗಳಿಲ್ಲದೇ ಇರಬಹುದು ಆದರೆ, ಈ ಸಮಯದಲ್ಲಿ ವಿಳಂಬ ಮಾಡದೆ ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು.

 ಬೇರೆ ಬೇರೆ ರೀತಿಯ ಸಮಸ್ಯೆ

ಬೇರೆ ಬೇರೆ ರೀತಿಯ ಸಮಸ್ಯೆ

ಋತುಚಕ್ರದ ಕುರಿತು ಬೇರೆ ಬೇರೆ ಹೆಣ್ಣುಮಕ್ಕಳಿಗೆ ವಿಭಿನ್ನವಾದ ಸಮಸ್ಯೆ ಇರುತ್ತದೆ. ಕೆಲವೊಬ್ಬರಿಗೆ 24 ದಿನಕ್ಕೇ ಋತುಸ್ರಾವ ಶುರುವಾಗುತ್ತಿದೆ, ಇನ್ನು ಕೆಲಸವರಿಗೆ 35 ದಿನಗಳಾಗುತ್ತದೆ. ಅದರಲ್ಲೂ ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ ಅಥವಾ ಕಡಿಮೆ ತೂಕ ಮತ್ತು ಜಡ ಜೀವನಶೈಲಿಯಿಂದ ಅನಿಯಮಿತ ಋತುಸ್ರಾವವಾಗುತ್ತದೆ. ಇದರಿಂದಾಗಿ ದೇಹ ತೂಕ ಹೆಚ್ಚಾಗಬಹುದು.

 ವ್ಯಾಯಾಮ ಅತಿ ಮುಖ್ಯ

ವ್ಯಾಯಾಮ ಅತಿ ಮುಖ್ಯ

ಈ ಸಮಸ್ಯೆಯಿಂದ ಪಾರಾಗಲು ಜೀವನಶೈಲಿಯನ್ನು ಸುಧಾರಿಸುವುದು, ತೂಕ ಇಳಿಸುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯವಾಗುತ್ತದೆ.

 ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ

ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ

ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಸಾಕಷ್ಟು ಮಹಿಳೆಯರು ಸೂಕ್ತ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯರಲ್ಲಿ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಸಮಸ್ಯೆ ಹೆಚ್ಚಾಗುತ್ತಿದ್ದು, ಇದರಿಂದ ದೈಹಿಕ ಮತ್ತು ಭಾವನಾತ್ಮಕ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ವರದಿ ಮಾಡಿವೆ.

 ಸಾಮಾನ್ಯ ಋತುಸ್ರಾವ ಎಂದರೇನು?

ಸಾಮಾನ್ಯ ಋತುಸ್ರಾವ ಎಂದರೇನು?

ಋತುಚಕ್ರದ ಮೊದಲ ದಿನದಿಂದ ಮುಂದಿನ ಋತುಚಕ್ರದ ಮೊದಲ ದಿನದವರೆಗೆ, ಋತುಸ್ರಾವದ ನಡುವಿನ ಸಮಯವನ್ನು ಋತುಚಕ್ರ ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಇವು 21-35 ದಿನಗಳ ಅವಧಿಯಲ್ಲಿ ನಡೆಯುತ್ತವೆ. ಮುಟ್ಟಾದ ಬಳಿಕ ಕೆಲವು ಮಹಿಳೆಯರಲ್ಲಿ 2-7 ದಿನಗಳ ಕಾರ ರಕ್ತಸ್ರಾವವಾಗುತ್ತದೆ. ಈ ಸಮಯದಲ್ಲಿ ಕೆಲವು ಮಹಿಳೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಗರ್ಭಧಾರಣೆಗೆ ಮಹಿಳೆಯರನ್ನು ಸಿದ್ಧಪಡಿಸುವಂತಹ ವಿಧಾನ ಇದಾಗಿದೆ. ಅಂಡಾಣುಗಳು ಫಲವತ್ತತೆ ಆಗದೆ ಇದ್ದರೆ ಆಗ ರಕ್ತಸ್ರಾವದ ಮೂಲಕವಾಗಿ ಇದು ಹೊರಗೆ ಹೋಗುತ್ತದೆ.

 ವೈದ್ಯರನ್ನು ಭೇಟಿಯಾಗಿ

ವೈದ್ಯರನ್ನು ಭೇಟಿಯಾಗಿ

ಕೊರೊನಾ ಸಾಂಕ್ರಾಮಿಕ ರೋಗ ದೇಶದ ಬೆನ್ನು ಬಿಡದಂತೆ ಕಾಡುತ್ತಿದ್ದು, ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆಗಳು ಹೆಚ್ಚಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. ಅನಿಯಮಿತ ಋತುಸ್ರಾವ, ಅಧಿಕ ರಕ್ತಸ್ರಾವ ಸಮಸ್ಯೆಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಭಾರತದಲ್ಲಿ 355 ಮಿಲಿಯನ್ ರಷ್ಟು ಮಹಿಳೆಯರು ಮುಟ್ಟಾಗುತ್ತಿದ್ದು. ಇದರಲ್ಲಿ ಶೇ.60ರಷ್ಟು ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರಿಗೆ ವೈದ್ಯಕೀಯ ಸಹಾಯದ ಅಗತ್ಯವಿದೆ.
 ಸಾಂಕ್ರಾಮಿಕ ರೋಗ ಹೇಗೆ ಪರಿಣಾಮ ಬೀರುತ್ತಿದೆ?

ಸಾಂಕ್ರಾಮಿಕ ರೋಗ ಹೇಗೆ ಪರಿಣಾಮ ಬೀರುತ್ತಿದೆ?

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿವಿಧ ಸಾಕಷ್ಟು ರಾಷ್ಟ್ರಗಳಲ್ಲಿಯೂ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಸಮೀಕ್ಷೆ ಹಾಗೂ ಆಧ್ಯಯನಗಳು ತಿಳಿಸಿವೆ.

ಎವರ್ಟೀನ್ 2021 ರ 6 ನೇ ವಾರ್ಷಿಕ ಮುಟ್ಟಿನ ನೈರ್ಮಲ್ಯ ಸಮೀಕ್ಷೆಯು 41 ಪ್ರತಿಶತ ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿಸಿದೆ. ಈ ಪೈಕಿ ಶೇ.13.7 ರಷ್ಟು ಮಹಿಳೆಯರು ಮಾತ್ರ ಕೊರೊನಾ ಸೋಂಕಿಗೊಳಗಾಗಿದ್ದಾರೆಂದು ತಿಳಿಸಿದೆ.

English summary
Irregularities of the menstrual cycle can affect women at some point in their menstruating years. Heavy menstrual bleeding, irregular bleeding, prolonged bleeding or reduced bleeding are common reasons for which women seek a gynaecologist’s help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X