ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಕೊರೊನಾಗೆ DRDO ಅಭಿವೃದ್ಧಿಪಡಿಸಿದ 2ಡಿಜಿ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ನವದೆಹಲಿ, ಮೇ 17: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಔಷಧಿ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಗೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಮೇ 15ರಂದು ಅನುಮೋದನೆ ನೀಡಿದೆ.

Recommended Video

Coronaಗೆ DRDO ಅಭಿವೃದ್ಧಿಪಡಿಸಿದ 2ಡಿಜಿ ಔಷಧಿ ಬಗ್ಗೆ ನಿಮಗೆಷ್ಟು ಗೊತ್ತು? | Oneindia Kannada

ದೇಶದಲ್ಲಿ ಪ್ರಸ್ತುತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ.

ಡಿಆರ್‌ಡಿಒ 2-ಡಿಜಿ ಔಷಧಿ ಲೋಕಾರ್ಪಣೆ ಮಾಡಿದ ರಾಜನಾಥ್ ಸಿಂಗ್ಡಿಆರ್‌ಡಿಒ 2-ಡಿಜಿ ಔಷಧಿ ಲೋಕಾರ್ಪಣೆ ಮಾಡಿದ ರಾಜನಾಥ್ ಸಿಂಗ್

ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸಲು ಏಪ್ರಿಲ್ 12ರಂದು ಅನುಮೋದನೆ ನೀಡಲಾಗಿದೆ. ಸ್ಪುಟ್ನಿಕ್-ವಿ ಲಸಿಕೆಯು ಕೊರೊನಾವೈರಸ್ ವಿರುದ್ಧ ಶೇ.91.60ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ವೈದ್ಯಕೀಯ ಪ್ರಯೋಗದಲ್ಲಿ ದೃಢಪಟ್ಟಿದೆ ಎಂದು ಕಂಪನಿ ಹೇಳಿದೆ. ಇದರ ಮಧ್ಯೆ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಕೊವಿಡ್ 2ಡಿಜಿ ಔಷಧಿ ಹೇಗೆ ಕಾರ್ಯ ನಿರ್ವಹಿಸಲಿದೆ. ಈ ಔಷಧಿ ಬಳಕೆ ಹೇಗಿರಬೇಕು. ಮಾರುಕಟ್ಟೆಯಲ್ಲಿ ಈ ಔಷಧಿ ಲಭ್ಯತೆ ವ್ಯವಸ್ಥೆ ಹೇಗಿದೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಕೊರೊನಾ 2ಡಿಜಿ ಔಷಧಿ ಬಳಕೆ ಮತ್ತು ಪರಿಣಾಮ

ಕೊರೊನಾ 2ಡಿಜಿ ಔಷಧಿ ಬಳಕೆ ಮತ್ತು ಪರಿಣಾಮ

ಕೊವಿಡ್-19 ವಿರೋಧಿ ಔಷಧಿ ಆಗಿರುವ 2ಡಿಜಿ ಪುಡಿ ರೂಪದಲ್ಲಿ ಇರಲಿದ್ದು, ನೀರಿನಲ್ಲಿ ಬೆರೆಸಿ ಕುಡಿಯುವ ಮೂಲಕ ಸೇವಿಸಬಹುದಾಗಿದೆ. 2ಡಿಜಿ ಔಷಧಿಯು ಕೊರೊನಾವೈರಸ್ ರೋಗಾಣುವನ್ನು ಒಂದು ಕಡೆ ಸಂಗ್ರಹಿಸಿ ದೇಹವನ್ನೆಲ್ಲಾ ಹರಡುವ ಅಪಾಯವನ್ನು ತಪ್ಪಿಸುವುದರ ಜೊತೆಗೆ ವೈರಸ್ ವಿರುದ್ಧ ಹೋರಾಡಲಿದೆ. ಈ ಔಷಧಿಯಿಂದ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ನಿಯಂತ್ರಣಕ್ಕೆ ಬರಲಿದ್ದು, ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ತಗ್ಗಲಿದೆ. ಅಲ್ಲದೇ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಶೀಘ್ರ ಗುಣಮುಖ ಆಗುತ್ತಾರೆ ಎಂದು ಸರ್ಕಾರ ತಿಳಿಸಿದೆ.

2ಡಿಜಿ ಔಷಧಿಯ ಕೆಲಸ ಹೇಗಿರುತ್ತದೆ?

2ಡಿಜಿ ಔಷಧಿಯ ಕೆಲಸ ಹೇಗಿರುತ್ತದೆ?

ಮನುಷ್ಯನ ದೇಹದಲ್ಲಿ ಶಕ್ತಿ ಉತ್ಪಾದನೆ ಮತ್ತು ಕೊವಿಡ್-19 ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು 2ಡಿಜಿ ಔಷಧಿಯು ವೃದ್ಧಿಯಾಗುವಂತೆ ಮಾಡುತ್ತದೆ. ರೋಗಾಣುಗಳ ಉತ್ಪತ್ತಿ ಮತ್ತು ಬೆಳವಣಿಗೆಯನ್ನು ತಡೆಗಟ್ಟುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. RT-PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ಈ ಔಷಧಿಯನ್ನು ಬಳಕೆ ಮಾಡುವುದಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ.

ಕೊವಿಡ್ 2ನೇ ಅಲೆ ನಡುವೆ 2ಡಿಜಿ ಹೇಗೆ ಪರಿಣಾಮಕಾರಿ?

ಕೊವಿಡ್ 2ನೇ ಅಲೆ ನಡುವೆ 2ಡಿಜಿ ಹೇಗೆ ಪರಿಣಾಮಕಾರಿ?

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜೀವಕೋಶ ಪ್ರವೇಶಿಸುವ 2ಡಿಜಿ ಔಷಧಿಯು ರೋಗಾಣುವಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕೊವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಪ್ರಯೋಗದ ಸಂದರ್ಭದಲ್ಲಿ ಈ ಔಷಧಿಯ ಅಣು ರೋಗಿಗಳು ಕಡಿಮೆ ಅವಧಿಯಲ್ಲಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಇದರ ಜೊತೆಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಹೆಚ್ಚಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧಿ ಬೆಲೆ?

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧಿ ಬೆಲೆ?

ಭಾರತದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧಿಯ ಬೆಲೆ ಎಷ್ಟು ಎಂಬುದನ್ನು ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ನ್ಯೂಸ್ 18 ಮೂಲಗಳ ಪ್ರಕಾರ, ರೆಡ್ಡೀಸ್ ಪ್ರಯೋಗಾಲಯ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಔಷಧಿಗೆ 500-600 ರೂಪಾಯಿ ನಿಗದಿಗೊಳಿಸುವ ಸಾಧ್ಯತೆಯಿದೆ. ಪ್ರಸ್ತುತ ಆಸ್ಪತ್ರೆಗಳ ಅಗತ್ಯತೆಗೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಔಷಧಿ ಉತ್ಪಾದನೆ ಮಾಡಲಾಗುತ್ತಿದೆ. ಈ ಔಷಧಿ ಉತ್ಪಾದನೆ ರೀತಿ ತುಂಬಾ ಸುಲಭವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆಟುಕಲಿದೆ ಎಂದು ಹೇಳಲಾಗುತ್ತಿದೆ.

English summary
DRDO-Developed Anti-COVID Drug 2 DG; Know Its Use, Cost, Benefits And All You Need To Know About In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X