ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ! ದೀರ್ಘಕಾಲದ ನೋವು: ಈಗ ಪ್ರಮುಖ ಆರೋಗ್ಯ ಸಮಸ್ಯೆ

By ಡಾ. (ಮೇಜರ್) ಪಂಕಜ್ ಎನ್ ಸುರಂಗೆ, ಐಪಿಎಸ್‍ಸಿ
|
Google Oneindia Kannada News

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಮಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬೆರಳು ಕುಯ್ದುಕೊಂಡಾಗ, ಸುಟ್ಟುಕೊಂಡಾಗ ಅಥವಾ ಸ್ನಾಯುಸೆಳೆತ ಉಂಟಾದಾಗ ಸ್ವಾಭಾವಿಕವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇಂತಹ ನೋವು ತಾತ್ಕಾಲಿಕವಾಗಿರುತ್ತದೆ ಮತ್ತು ಗಾಯ ಮಾಯವಾದ ನಂತರ ನೋವು ನಿವಾರಣೆಯಾಗುತ್ತದೆ. ಆದಾಗ್ಯೂ, ವ್ಯಕ್ತಿಯ ಆರೋಗ್ಯ ಪರಿಸ್ಥಿತಿಗಳಿಂದಾಗಿ ಕೆಲವು ನೋವುಗಳು ವಾರಗಟ್ಟಲೆ ಮತ್ತು ತಿಂಗಳುಗಟ್ಟಲೆ ಮುಂದುವರಿಯುತ್ತವೆ. ಯಾವ ನೋವು ಮೂರು ತಿಂಗಳಿಗೂ ಅಧಿಕ ಕಾಲದವರೆಗೆ ಮುಂದುವರಿಯುತ್ತದೆಯೋ ಅಂತಹ ನೋವನ್ನು ದೀರ್ಘಾವಧಿಯ ನೋವು ಎಂದು ಪರಿಗಣಿಸಲಾಗುತ್ತದೆ.

ದೀರ್ಘಾವಧಿಯ ನೋವು ತಲೆಯಿಂದ ಕಾಲಿನವರೆಗೆ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು. ಕೀಲುನೋವು(ಮೊಣಕಾಲು, ಭುಜ, ಕುತ್ತಿಗೆ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ), ಕೆಳ ಬೆನ್ನು ನೋವು, ಸ್ಲಿಪ್ಡ್ ಡಿಸ್ಕ್, ಸ್ಪಾಂಡಿಲಿಟಿಸ್ ಅಥವಾ ಸಿಯಾಟಿಕಾ, ನ್ಯೂರಾಲಜಿ ಪೇಯ್ನ್, ಮೈಗ್ರೇನ್, ಮುಖದ ನೋವು, ಸಂಧಿವಾತ ನೋವು ಮತ್ತು ಕ್ಯಾನ್ಸರ್ ನೋವಿನಂತಹ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ನೋವಿನ ಪ್ರಮಾಣ ಸಣ್ಣದಾಗಿರಬಹುದು ಅಥವಾ ಸುಡುವ ರೀತಿಯ ನೋವು ಆಗಿರಬಹುದು. ದೇಹದಲ್ಲಿ ಕಾಠಿಣ್ಯತೆ ಅಥವಾ ಹಿಂಡುವಂತಹ ನೋವು ಆಗಿರಬಹುದು, ಓರಾ ಸ್ಟಿಂಗಿಂಗ್ ಅಥವಾ ಥ್ರೋಬಿಂಗ್ ಸಂವೇದನೆಯವರೆಗೆ ಇರಬಹುದು. ದೀರ್ಘಕಾಲದ ನೋವು ಒಬ್ಬರು ಯೋಚನೆ ಮಾಡುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ ಮತ್ತು ಪ್ರಪಂಚದಾದ್ಯಂತ ಇದರ ಪ್ರಮಾಣ ಹೆಚ್ಚಳವಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕ ಜನಸಂಖ್ಯೆಯ ಸುಮಾರು ಶೇ.30 ಜನರು ಕೆಲವು ರೀತಿಯ ದೀರ್ಘಕಾಲದ ನೋವನ್ನು ಅನುಭವಿಸುತ್ತಿದ್ದಾರೆ. ಇಂಡಿಯನ್ ಸೊಸೈಟಿ ಫಾರ್ ಸ್ಟಡಿ ಆಫ್ ಪೇಯ್ನ್ ಪ್ರಕಾರ, ಭಾರತದಲ್ಲಿ ಇಂತಹ ದೀರ್ಘಕಾಲೀನ ನೋವಿನಿಂದ ಶೇ.23 ರಷ್ಟು ಜನರು ಬಳಲುತ್ತಿದ್ದಾರೆ. ಭಾರತೀಯರು ಸಾಮಾನ್ಯವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತಾರೆ ಮತ್ತು ಅವರ ನೋವಿನ ಸಮಸ್ಯೆಗಳನ್ನು ಇತರರಿಗೆ ಬಹಿರಂಗಪಡಿಸುವುದಿಲ್ಲವಾಗಿರುವುದರಿಂದ ಟಿಪ್ ಆಫ್ ಐಸ್‍ಬರ್ಗ್ ಆಗಿರಬಹುದು.

ಹೆಚ್ಚುತ್ತಿರುವ ಜೀವಿತಾವಧಿಯಿಂದ ಸಮಾಜದಲ್ಲಿ ವಯಸ್ಸಾದವರ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡುಬಂದಿದೆ. ಇದು ದೀರ್ಘಕಾಲದ ನೋವಿನ ಹೆಚ್ಚಳವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಜಡ ಮತ್ತು ದೈಹಿಕವಾಗಿ ನಿಷ್ಕ್ರಿಯ ಜೀವನಶೈಲಿಯನ್ನು ಮುನ್ನಡೆಸುವ ಕಾರಣಗಳಿಂದಾಗಿ ಚಿಕ್ಕ ವಯೋಮಾನದ ಜನಸಂಖ್ಯೆಯ ಮೇಲೆಯೂ ಪರಿಣಾಮ ಬೀರುತ್ತದೆ.

ಮಹಿಳೆಯರಲ್ಲಿ ದೀರ್ಘಕಾಲದ ನೋವಿನ ಪ್ರಮಾಣ

ಮಹಿಳೆಯರಲ್ಲಿ ದೀರ್ಘಕಾಲದ ನೋವಿನ ಪ್ರಮಾಣ

ವಿಶೇಷವೆಂದರೆ ಮಹಿಳೆಯರಲ್ಲಿ ದೀರ್ಘಕಾಲದ ನೋವಿನ ಪ್ರಮಾಣ ಹೆಚ್ಚಿರುತ್ತದೆ. ಇದರ ಪ್ರಮಾಣ ಮತ್ತು ಹರಡುವಿಕೆ 65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಿರುತ್ತದೆ. ಈ ದೀರ್ಘಕಾಲೀನ ನೋವಿಗೆ ಪ್ರಮುಖ ಮತ್ತು ಸಾಮಾನ್ಯ ಕಾರಣವೆಂದರೆ ಬೆನ್ನು ನೋವು ಮತ್ತು ಕೀಲುನೋವು. ಆರ್ಥಿರಿಟೀಸ್ ಅಥವಾ ಸಂಧಿವಾತ, ಬೆನ್ನುಮೂಳೆಯ ಕ್ಷೀಣಗೊಳ್ಳುವ ಪರಿಸ್ಥಿತಿಗಳು ಮತ್ತು ಕ್ಯಾನ್ಸರ್ ನೋವುಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಈ ದೀರ್ಘಕಾಲದ ನೋವು ಒಂದು ಪ್ರಮುಖವಾದ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮಿದೆ. ಇದು ಮುಂದಿನ ಎರಡು ದಶಕಗಳಲ್ಲಿ ಶಸ್ತ್ರಚಿಕಿತ್ಸೆಯ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಗಮನಾರ್ಹವಾದ ವೆಚ್ಚಕ್ಕೆ ಕಾರಣವಾಗುತ್ತದೆ. ಇದರಿಂದ ಸಾಮಾಜಿಕ ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ದೀರ್ಘಕಾಲದ ನೋವು ಒಬ್ಬರ ಸಾಮಾಜಿಕ ಜೀವನಕ್ಕೆ ಅಡ್ಡಿಯನ್ನೂ ಉಂಟು ಮಾಡಬಹುದು. ದೈನಂದಿನ ಚಟುವಟಿಕೆಗಳು ಕೆಲಸ ಮಾಡುವುದು ಅಥವಾ ವ್ಯಾಯಾಮ ಮಾಡುವುದು, ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ನೋಡಿಕೊಳ್ಳುವುದು ಅಥವಾ ಸ್ವತಂತ್ರ ಜೀವನಶೈಲಿಯನ್ನು ಮುನ್ನಡೆಸುವುದು. ಇದು ಖಿನ್ನತೆ ಅಥವಾ ಆತಂಕ ಹಾಗೂ ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ನೋವು ನಿವಾರಕ ಔಷಧ ಬಳಕೆ

ನೋವು ನಿವಾರಕ ಔಷಧ ಬಳಕೆ

ಪಾಶ್ಚಿಮಾತ್ಯ ದೇಶಗಳಲ್ಲಿ ನೋವು ನಿವಾರಕ ಔಷಧವು ಕಳೆದ ಮೂರ್ನಾಲ್ಕು ದಶಕಗಳಿಂದ ಸೂಪರ್-ಸ್ಪೆಷಾಲಿಟಿ ಆಗಿದೆ. ಆದಾಗ್ಯೂ, ಭಾರತದಲ್ಲಿ ಇದು ಕೇವಲ 15-20 ವರ್ಷ ಹಳೆಯದಾಗಿದೆ. ದೇಶಾದ್ಯಂತ ಹಲವಾರು ಆಸ್ಪತ್ರೆಗಳು ಈಗ ನೋವು ನಿರ್ವಹಣೆಯನ್ನು ಪ್ರತ್ಯೇಕ ವಿಭಾಗವಾಗಿ ನೀಡುತ್ತದೆ. ಐದು ವರ್ಷಗಳ ಹಿಂದೆ ದೀರ್ಘಕಾಲದ ನೋವಿನಿಂದ ಬಳಲುತ್ತಿರುವ ಭಾರತೀಯ ರೋಗಿಗಳನ್ನು ನಿರ್ವಹಿಸಲು ಪಾಶ್ಚಾತ್ಯ ಶಿಷ್ಟಾಚಾರಗಳನ್ನು ಬಳಸಲಾಗುತ್ತಿತ್ತು. ಆದಾಗ್ಯೂ, ಈಗ ನಾವು ಉತ್ತಮ ಫಲಿತಾಂಶಗಳಿಗಾಗಿ ನಮ್ಮದೇ ಆದ ಶಿಷ್ಠಾಚಾರಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಇವುಗಳನ್ನು ಮತ್ತಷ್ಟು ಉತ್ತಮಗೊಳಿಸಲಾಗುತ್ತಿದೆ.

ದೀರ್ಘಕಾಲದ ನೋವಿನ ಬಹುತೇಕ ಸಂದರ್ಭಗಳಲ್ಲಿ ಕಡಿಮೆ ಆಕ್ರಮಣಕಾರಿ ಮಧ್ಯಸ್ಥಿಕೆಗಳು (ಇಂಟರ್‍ವೆನ್ಷನಲ್ ನೋವು ನಿರ್ವಹಣೆ ಎಂದು ಕರೆಯಲಾಗುತ್ತದೆ) ತೆರೆದ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಉತ್ತಮ ಪರ್ಯಾಯಗಳಾಗಿವೆ. ಏಕೆಂದರೆ, ಅವು ರೋಗಿಗೆ ಕಡಿಮೆ ಅಪಾಯ ಮತ್ತು ಆಘಾತವನ್ನು ಒಳಗೊಂಡಿರುತ್ತವೆ. ಅವರು ಹೆಚ್ಚು ಸುರಕ್ಷಿತರಾಗಿದ್ದಾರೆ ಮತ್ತು ಇದಕ್ಕೆ ಆಸ್ಪತ್ರೆಗೆ ಹೋಗುವ ಅಗತ್ಯವಿರುವುದಿಲ್ಲ.

ಹೆಚ್ಚಿನ ಕಾರ್ಯವಿಧಾನಗಳನ್ನು ದಿನದ ಆರೈಕೆ ವ್ಯವಸ್ಥೆಯಲ್ಲಿ ಮಾಡಬಹುದಾಗಿರುವುದರಿಂದ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಬಹುದಾಗಿದೆ. ರೋಗಿಗಳು ಚಿಕಿತ್ಸೆ ಪಡೆದ ದಿನವೇ ಮನೆಗೆ ತೆರಳಬಹುದು. ಮೊದಲಿನ ಮಧ್ಯಸ್ಥಿಕೆಗಳು ನೋವನ್ನು ನಿವಾರಿಸುವುದಲ್ಲದೇ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಣೆ ಮಾಡುತ್ತದೆ. ನೋವು ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ಮಧ್ಯಸ್ಥಿಕೆ ಕಾರ್ಯವಿಧಾನಗಳಿಗೆ ನಾವು ಪ್ರಸ್ತುತ ಭಾರತೀಯ ಶಿಷ್ಟಾಚಾರಗಳನ್ನು ಹೊಂದಿರುವುದು ಒಂದು ದೊಡ್ಡ ಹೆಜ್ಜೆಯಾಗಿದೆ.

ಚಿಕಿತ್ಸಾ ಕಾರ್ಯವಿಧಾನ

ಚಿಕಿತ್ಸಾ ಕಾರ್ಯವಿಧಾನ

ಬೆನ್ನುನೋವು, ಸ್ಲಿಪ್ಡ್ ಡಿಸ್ಕ್, ಡಿಸ್ಕ್ ಬಲ್ಜ್, ಸಿಯಾಟಿಕಾ ಇತ್ಯಾದಿ ಸಮಸ್ಯೆಗಳಿಗೆ ಓಝೋನ್ ಡಿಸೆಕ್ಟಮಿ, ಪರ್ಕಟೇನಿಯಸ್ ಡಿಸ್ಕ್ ಡೀಕಂಪ್ರೆಶನ್ ಮತ್ತು ಎಂಡೋಸ್ಕೋಪಿಕ್ ಡಿಸೆಕ್ಟಮಿಯಂತಹ ತಾಂತ್ರಿಕತೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಡಿಸ್ಕ್ ಹರ್ನಿಯೇಟೆಡ್ ಭಾಗವನ್ನು ತೆಗೆದುಹಾಕಲು ಸಣ್ಣ ವ್ಯಾಪ್ತಿಯನ್ನು ಸೇರಿಸಲಾಗುತ್ತದೆ.

ಕೀಲುಗಳ ಸಂಧಿವಾತದಿಂದ ಬಳಲುತ್ತಿರುವ ರೋಗಿಗಳು ಪ್ರಗತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಆರಂಭಿಕ ಹಂತಗಳಲ್ಲಿ ಪುನರುತ್ಪಾದಕ ಮಧ್ಯಸ್ಥಿಕೆಗಳೊಂದಿಗೆ ನಿರ್ವಹಣೆ ಮಾಡುತ್ತಾರೆ. ಮೊಣಕಾಲು, ಭುಜ, ಸೊಂಟ ಮತ್ತು ಬೆನ್ನುಮೂಳೆಯ ಕೂಲುಗಳ ಸುಧಾರಿತ ಸಂಧಿವಾತದಲ್ಲಿ ನೋವನ್ನು ರೇಡಿಯೋಫ್ರೀಕ್ವೆನ್ಸಿ ಕಾರ್ಯವಿಧಾನಗಳೊಂದಿಗೆ ನಿರ್ವಹಣೆ ಮಾಡಲಾಗುತ್ತದೆ. ನರ ನೋವು, ನರ ರೋಗ, ನರರೋಗ ನೋವು ಸೇರಿದಂತೆ ಔಷಧಿ ಮತ್ತು ನರ ವಿಜ್ಞಾನದ ವಿಧಾನಗಳೊಂದಿಗೆ ನಿರ್ವಹಣೆ ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯವಿಧಾನಗಳನ್ನು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಮಾಡಲಾಗುತ್ತದೆ ಮತ್ತು ರೋಗಿಗಳನ್ನು ಚಿಕಿತ್ಸೆ ನೀಡಿದ ಅದೇ ದಿನದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ದೀರ್ಘಕಾಲದ ನೋವು ಮತ್ತು ತಾಂತ್ರಿಕ ಪ್ರಗತಿಯ ಬಗ್ಗೆ ಉತ್ತಮ ತಿಳುವಳಿಕೆಯೊಂದಿಗೆ ನೋವು ನಿವಾರಕ ತಜ್ಞ ವೈದ್ಯರು ಈಗ ದೀರ್ಘಕಾಲದ ನೋವನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲರು. ಹೆಚ್ಚಿನ ಸಂದರ್ಭಗಳಲ್ಲಿ ಅದನ್ನು ಗುಣಪಡಿಸಬಲ್ಲರು. ಆದಾಗ್ಯೂ, ನೋವನ್ನು ತಡೆಗಟ್ಟುವುದೇ ಅತ್ಯುತ್ತಮ ಔಷಧವಾಗಿದೆ ಮತ್ತು ರೋಗಿಗಳು ದೀರ್ಘಕಾಲದ ನೋವನ್ನು ಅನುಭವಿಸುವುದನ್ನು ತಡೆಯಲು ನೋವಿನ ಗಂಭೀರ ಸಮಸ್ಯೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡುವುದು ವೈದ್ಯರ ಜವಾಬ್ದಾರಿಯಾಗಿದೆ.

English summary
Rising Burden of Chronic Pain' by Dr. (Maj) Pankaj N Surange, Managing Director and CEO, IPSC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X