ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬಲ್ ಲಸಿಕೆ ಹಾಕಲಾಗಿದೆಯೇ? ನಿಮಗೆ ಕೋವಿಡ್‌ ಬರುವ ಸಾಧ್ಯತೆ 3 ಪಟ್ಟು ಕಡಿಮೆ: ಅಧ್ಯಯನ

|
Google Oneindia Kannada News

ಲಂಡನ್, ಆ.06: ತಮ್ಮ ಕೊರೊನಾವೈರಸ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಜನರು ಕೋವಿಡ್ -19 ಸೋಂಕಿಗೆ ಒಳಗಾಗುವ ಸಾಧ್ಯತೆ ಮೂರು ಪಟ್ಟು ಕಡಿಮೆ ಎಂದು ಇತ್ತೀಚಿನ ಯುಕೆ ಅಧ್ಯಯನವು ಕಂಡುಹಿಡಿದಿದೆ.

ದೇಶದಲ್ಲಿ ಕೋವಿಡ್‌ ಸೋಂಕುಗಳ ಕುರಿತು ಯುಕೆಯ ಅತಿದೊಡ್ಡ ಅಧ್ಯಯನಗಳಲ್ಲಿ ಒಂದಾದ ರಿಯಲ್-ಟೈಮ್ ಅಸೆಸ್ಮೆಂಟ್ ಆಫ್ ಕಮ್ಯುನಿಟಿ ಟ್ರಾನ್ಸ್‌ಮಿಷನ್ (ಸಮುದಾಯ ಪ್ರಸರಣದ ನೈಜ-ಸಮಯದ ಮೌಲ್ಯಮಾಪನ ಅಧ್ಯಯನ) (REACT-1) ಅಧ್ಯಯನದ ಪ್ರಕಾರ, ಮೇ 20 ರಿಂದ ಜೂನ್ 7 ರವರೆಗಿನ ಅವಧಿಯನ್ನು ಒಳಗೊಂಡ ಕೊನೆಯ REACT-1 ವರದಿಯಿಂದ ಇಂಗ್ಲೆಂಡ್‌ನಲ್ಲಿ ಸೋಂಕುಗಳು ನಾಲ್ಕು ಪಟ್ಟು 0.15 ಶೇಕಡದಿಂದ 0.63 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಬುಧವಾರ ವರದಿ ತಿಳಿಸಿದೆ. ಆದರೂ ಅದರ ಫಲಿತಾಂಶಗಳು ಜುಲೈ 12 ರಿಂದ ಸೋಂಕುಗಳ ಕುಸಿತವನ್ನು ತೋರಿಸಿದೆ.

'2 ನೇ ಅಲೆ ಸಂದರ್ಭ 2 ಡೋಸ್‌ ಲಸಿಕೆ ಶೇ.95 ಸಾವು ತಡೆ‌ಗಟ್ಟಿದೆ': ವಿ.ಕೆ. ಪೌಲ್‌'2 ನೇ ಅಲೆ ಸಂದರ್ಭ 2 ಡೋಸ್‌ ಲಸಿಕೆ ಶೇ.95 ಸಾವು ತಡೆ‌ಗಟ್ಟಿದೆ': ವಿ.ಕೆ. ಪೌಲ್‌

ಇಂಪೀರಿಯಲ್ ಕಾಲೇಜ್ ಲಂಡನ್ ಮತ್ತು ಇಪ್ಸೊಸ್ ಮೊರಿ ವಿಶ್ಲೇಷಣೆಯಲ್ಲಿ ಜೂನ್ 24 ಮತ್ತು ಜುಲೈ 12 ರ ನಡುವೆ ಇಂಗ್ಲೆಂಡಿನಲ್ಲಿ 98,000 ಸ್ವಯಂಸೇವಕರು ಅಧ್ಯಯನದಲ್ಲಿ ಪಾಲ್ಗೊಂಡಿದ್ದು, ಡಬಲ್ ಕೋವಿಡ್‌ ಲಸಿಕೆ ಹಾಕಿದ ಜನರು ಸಹ ಕೊರೊನಾ ವೈರಸ್ ಅನ್ನು ಇತರರಿಗೆ ವರ್ಗಾಯಿಸುವ ಸಾಧ್ಯತೆ ಕಡಿಮೆ ಎಂದು ಸೂಚಿಸುತ್ತದೆ.

 ಎಚ್ಚರಿಕೆಯಿಂದ ನಿರ್ಬಂಧ ಸಡಿಲಿಸಬಹುದು

ಎಚ್ಚರಿಕೆಯಿಂದ ನಿರ್ಬಂಧ ಸಡಿಲಿಸಬಹುದು

"ನಮ್ಮ ಕೊರೊನಾ ವೈರಸ್‌ ವಿರುದ್ದದ ಲಸಿಕೆ ಅಭಿಯಾನವು ಕೋವಿಡ್‌ ಸೋಂಕಿನ ವಿರುದ್ದ ಗೋಡೆಯನ್ನು ನಿರ್ಮಿಸುತ್ತಿದೆ. ಹಾಗಿರುವಾಗ ನಾವು ಎಚ್ಚರಿಕೆಯಿಂದ ನಿರ್ಬಂಧಗಳನ್ನು ಕೊಂಚ ಸಡಿಲಿಕೆ ಮಾಡಬಹುದು ಹಾಗೂ ನಾವು ಇಷ್ಟಪಡುವ ವಸ್ತುಗಳನ್ನು ಮರಳಿ ಪಡೆಯಬಹುದು ಎಂಬ ಸೂಚನೆ ನೀಡಿದೆ. ಆದರೆ ನಾವು ಈ ಕೊರೊನಾ ವೈರಸ್‌ನೊಂದಿಗೆ ಬದುಕಲು ಕಲಿಯುವುದರಿಂದ ನಾವು ಜಾಗರೂಕರಾಗಿರಬೇಕು, ಇದು ಅತ್ಯಂತ ಮುಖ್ಯ," ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಹೇಳಿದರು.

ಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನಭಾರತದ ನೈಜ ಕೋವಿಡ್ ಸಾವಿನ ಸಂಖ್ಯೆ ನಾಲ್ಕಲ್ಲ ಕನಿಷ್ಠ 30 ಲಕ್ಷ ಎಂದ ಅಧ್ಯಯನ

 ಕೋವಿಡ್‌ ಲಸಿಕೆ ಸುರಕ್ಷಿತ

ಕೋವಿಡ್‌ ಲಸಿಕೆ ಸುರಕ್ಷಿತ

ಈ ಅಧ್ಯಯನದ ವರಿದಿಯು ನೀವು ಕೋವಿಡ್‌ ಸೋಂಕಿತರ ಸಂಪರ್ಕದಲ್ಲಿದ್ದರೆ ಸ್ವಯಂ-ಪ್ರತ್ಯೇಕಿಸುವ ಮೂಲಕ ವೈಯಕ್ತಿಕ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮಲ್ಲಿ ಕೊರೊನಾ ವೈರಸ್‌ ಸೋಂಕಿನ ರೋಗಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಗಾಗಬೇಕು ಮತ್ತು ಸೂಕ್ತವೆನಿಸಿದಲ್ಲಿ ಮಾಸ್ಕ್‌ ಧರಿಸಬೇಕು. ಇನ್ನೂ ಕೋವಿಡ್‌ ಲಸಿಕೆ ಪಡೆಯದೆ ಇರುವವರು ದಯವಿಟ್ಟು ಲಸಿಕೆಯನ್ನು ಪಡೆದುಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ. ಹಾಗೆಯೇ ಎರಡೂ ಡೋಸ್‌ ಕೋವಿಡ್‌ ಲಸಿಕೆಗಳನ್ನು ಪಡೆದುಕೊಳ್ಳಿ ಎಂದು ನಾನು ಒ‌ತ್ತಾಯಿಸುತ್ತೇನೆ. ಏಕೆಂದರೆ ಕೋವಿಡ್‌ ಲಸಿಕೆಗಳು ಸುರಕ್ಷಿತವಾಗಿದೆ ಮತ್ತು ಅವು ಕಾರ್ಯನಿರ್ವಹಿಸುತ್ತಿವೆ," ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಮನವಿ ಮಾಡಿದ್ದಾರೆ.

ಸಾರ್ವಜನಿಕ ಆರೋಗ್ಯ ಇಂಗ್ಲೆಂಡಿನ (ಪಿಎಚ್‌ಇ) ಅಂಕಿಅಂಶಗಳು ಯುಕೆಯಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಕೋವಿಡ್ -19 ರ ಎಲ್ಲಾ ರೂಪಾಂತರಗಳ ವಿರುದ್ಧ "ಅತ್ಯಂತ ಪರಿಣಾಮಕಾರಿ" ಎಂದು ತೋರಿಸುತ್ತದೆ.

 ಫೈಜರ್/ಬಯೋಟೆಕ್‌, ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ ಪರಿಣಾಮಕಾರಿ

ಫೈಜರ್/ಬಯೋಟೆಕ್‌, ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ ಪರಿಣಾಮಕಾರಿ

ಕೊರೊನಾ ವೈರಸ್‌ ಸೋಂಕಿನ ವಿರುದ್ದದದ ಫೈಜರ್/ಬಯೋಟೆಕ್‌ ಕೋವಿಡ್‌ ಸೋಂಕಿನ ವಿರುದ್ದ 96 ಪ್ರತಿಶತ ಪರಿಣಾಮಕಾರಿ ಮತ್ತು ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯು ಸೋಂಕಿನ ವಿರುದ್ದ 92 ಪ್ರತಿಶತ ಪರಿಣಾಮಕಾರಿ ಎಂದು ಸಮುದಾಯ ಪ್ರಸರಣದ ನೈಜ-ಸಮಯದ ಮೌಲ್ಯಮಾಪನ ಅಧ್ಯಯನದ ವರದಿಯು ತಿಳಿಸಿದೆ. ಇವೆರಡು ಕೋವಿಡ್‌ ಲಸಿಕೆಗಳು ಸೋಂಕು ತಗುಲಿದರೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ತೀವ್ರ ಕಡಿಮೆ ಮಾಡುತ್ತದೆ ಎಂದು ಹೇಳಿದೆ. ಇಂಗ್ಲೆಂಡ್‌ನಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವು 22 ಮಿಲಿಯನ್ ಸೋಂಕುಗಳನ್ನು, ಸುಮಾರು 52,600 ಆಸ್ಪತ್ರೆಗೆ ದಾಖಲಾಗುವುದನ್ನು ಮತ್ತು 35,200 ರಿಂದ 60,000 ಸಾವುಗಳನ್ನು ತಡೆಗಟ್ಟಿದೆ ಎಂದು ಪಿಎಚ್‌ಇ ಅಂದಾಜಿಸಿದೆ.

"ಫಲಿತಾಂಶಗಳು ಲಸಿಕೆ ಕಾರ್ಯಕ್ರಮದ ಪಾಸಿಟಿವ್‌ ಪರಿಣಾಮವನ್ನು ತೋರಿಸುತ್ತವೆ, ಕೋವಿಡ್‌ ಲಸಿಕೆ ಹಾಕದ ಜನರಿಗಿಂತ ಕೋವಿಡ್‌ ಲಸಿಕೆ ಪಡೆದವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗು ಸಾಧ್ಯತೆ ಎರಡು ಪಟ್ಟು ಕಡಿಮೆ ಮತ್ತು ಈ ಭೀಕರ ರೋಗವನ್ನು ಸುತ್ತಮುತ್ತಲಿನವರಿಗೆ ಹರಡುವ ಸಾಧ್ಯತೆ ಕಡಿಮೆ," ಎಂದು ಯುಕೆ ಲಸಿಕೆ ಸಚಿವ ನಧಿಮ್ ಜಹಾವಿ ತಿಳಿಸಿದರು.

 ಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್‌ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿ ಡೆಲ್ಟಾದಿಂದಾಗಿ ಶೇ.60 ರಷ್ಟು ಕೋವಿಡ್‌ ಪ್ರತಿಕಾಯ ನಾಶ: ದೆಹಲಿ ಅಧ್ಯಯನ ವರದಿ

 ಮತ್ತೆ ಡೆಲ್ಟಾ ತಗುಲುವ ಅಪಾಯ

ಮತ್ತೆ ಡೆಲ್ಟಾ ತಗುಲುವ ಅಪಾಯ

ಡೆಲ್ಟಾ ರೂಪಾಂತರದ ಬಗ್ಗೆಗಿನ ಇತ್ತೀಚಿನ ಪಿಎಚ್‌ಇ ಅಪಾಯದ ಮೌಲ್ಯಮಾಪನವು ಆಲ್ಫಾಗೆ ಹೋಲಿಸಿದರೆ ಡೆಲ್ಟಾ ಕೋವಿಡ್‌ ರೂಪಾಂತರ ಮತ್ತೆ ತಗುಲುವ ಅಪಾಯ ಹೆಚ್ಚಿಸುವ ಆರಂಭಿಕ ಚಿಹ್ನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಹಿನ್ನೆಲೆ ಪಿಎಚ್‌ಇ ಮೂಲಕ ಹೆಚ್ಚಿನ ತನಿಖೆಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಡೇಟಾವನ್ನು ಶುಕ್ರವಾರ ನವೀಕರಿಸಲಾಗುತ್ತದೆ. ಯುಕೆ ನ ಆರೋಗ್ಯ ಸೇವೆಯು ಯುವ ವಯೋಮಾನದವರ ಪರವಾಗಿ ಔಪಚಾರಿಕ ವೈಜ್ಞಾನಿಕ ಸಲಹೆಯ ನಂತರ ಈಗ ತನ್ನ ಕೋವಿಡ್ -19 ಲಸಿಕೆ ಕಾರ್ಯಕ್ರಮವನ್ನು 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, ಪ್ರಸ್ತುತ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಿಸ್ತರಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
People who have received both doses of their coronavirus vaccine are three times less likely to get infected with COVID-19, a latest UK study has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X