ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ಇರುವ ಕೊರೊನಾ ಸೋಂಕಿತರು ಏನೇನು ಅನುಸರಿಸಬೇಕು?

|
Google Oneindia Kannada News

ನವದೆಹಲಿ, ಮೇ 5: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮುಂದುವರೆದಿದ್ದು, ಹಲವು ಆಸ್ಪತ್ರೆಗಳು ಹಾಸಿಗೆ, ಆಮ್ಲಜನಕ ಕೊರತೆಯನ್ನು ಅತೀವವಾಗಿ ಅನುಭವಿಸುತ್ತಿವೆ. ಕೊರೊನಾ ತಗುಲಿದ ರೋಗಿಗಳಿಗೆ ಅಥವಾ ಕೊರೊನಾ ಲಕ್ಷಣಗಳಿರುವವರಿಗೆ, ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳು ಗೋಚರಿಸಿದವರಿಗೆ ಮನೆಯಲ್ಲೇ ಐಸೊಲೇಷನ್‌ನಲ್ಲಿರಲು ಸೂಚಿಸಲಾಗಿದೆ.

ಸೌಮ್ಯ ಲಕ್ಷಣಗಳು ಹೊಂದಿರುವವರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಇದ್ದು, ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗಿದ್ದರೆ ಮನೆಯಲ್ಲಿ ಐಸೊಲೇಷನ್‌ನಲ್ಲಿರುವವರು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು? ಏನೇನು ಮಾಡಬಾರದು ಎಂಬುದರ ಕುರಿತು ಇಲ್ಲಿದೆ ಮಾಹಿತಿ...

 ಮನೆಯಲ್ಲಿರುವವರು ಏನು ಕ್ರಮಗಳನ್ನು ಅನುಸರಿಸಬೇಕು?

ಮನೆಯಲ್ಲಿರುವವರು ಏನು ಕ್ರಮಗಳನ್ನು ಅನುಸರಿಸಬೇಕು?

ಕೊರೊನಾ ಸೋಂಕು ತಗುಲಿದವರು ಅಥವಾ ಸೋಂಕು ಬರದಂತೆ ತಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕು.
* ಆಗಾಗ್ಗೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಬೇಕು
* ಅಗತ್ಯ ವಿಶ್ರಾಂತಿ ಪಡೆಯಬೇಕು
* ಮನೆಯಲ್ಲಿರುವ ಎಲ್ಲಾ ಸದಸ್ಯರೂ ಮಾಸ್ಕ್‌ ಧರಿಸಿರಬೇಕು
* ಉತ್ತಮ ಗಾಳಿ ಬೆಳಕು ಇರುವ ಕೋಣೆಯಲ್ಲಿ ಪ್ರತ್ಯೇಕವಾಗಿರಬೇಕು.

ಕೊರೊನಾ ರೋಗಿಗಳು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು: ವಿವರಣೆ ನೀಡಿದ ಆರೋಗ್ಯ ಸಚಿವಾಲಯಕೊರೊನಾ ರೋಗಿಗಳು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು: ವಿವರಣೆ ನೀಡಿದ ಆರೋಗ್ಯ ಸಚಿವಾಲಯ

 ಯಾವ ಅಂಶಗಳ ಮೇಲೆ ನಿಗಾ ವಹಿಸಬೇಕು?

ಯಾವ ಅಂಶಗಳ ಮೇಲೆ ನಿಗಾ ವಹಿಸಬೇಕು?

ಕೊರೊನಾ ಸೋಂಕು ದೃಢಪಟ್ಟವರು ದೇಹದ ಉಷ್ಣತೆ ಕುರಿತು ನಿಗಾ ವಹಿಸಬೇಕು.
* ಪ್ರತಿ ನಾಲ್ಕು ಗಂಟೆಗೊಮ್ಮೆ ಉಷ್ಣತೆ ಪರೀಕ್ಷಿಸಬೇಕು.
* ದೇಹದಲ್ಲಿ ಆಮ್ಲಜನಕ ಪ್ರಮಾಣ ಗಮನಿಸುವುದು ತುಂಬಾ ಮುಖ್ಯ. ಆಕ್ಸಿಮೀಟರ್ ಮುಖಾಂತರ ಪ್ರತಿ ನಾಲ್ಕು ಗಂಟೆಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಇದರ ಪ್ರಮಾಣ 93ಕ್ಕಿಂತ ಕಡಿಮೆ ಬಂದರೆ ವೈದ್ಯರ ಬಳಿ ಹೋಗುವುದು ಅವಶ್ಯಕ.
* ಕುಟುಂಬದ ಇತರ ಸದಸ್ಯರೂ ಪರೀಕ್ಷೆ ಮಾಡಿಸಿಕೊಳ್ಳಬೇಕು.

 ಮನೆಯಲ್ಲಿದ್ದವರು ಏನೇನು ಮಾಡಬಾರದು?

ಮನೆಯಲ್ಲಿದ್ದವರು ಏನೇನು ಮಾಡಬಾರದು?

*ಮನೆಯಲ್ಲಿದ್ದವರು ಅನುಮತಿ ಇಲ್ಲದೇ ರೆಮ್ಡೆಸಿವಿರ್ ಔಷಧಿ ಬಳಸುವಂತಿಲ್ಲ
* ನೆಬ್ಯುಲೈಸರ್ ಬಳಸುವಂತಿಲ್ಲ
* ವೈದ್ಯರ ಸಲಹೆ ಹೊರತಾಗಿ ಆಮ್ಲಜನಕ ಸಿಲಿಂಡರ್ ಬಳಸುವಂತಿಲ್ಲ

ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?ಯಾವ ಕೊರೊನಾ ಸೋಂಕಿತರಿಗೆ 'ಸಿಟಿ ಸ್ಕ್ಯಾನ್' ಹೆಚ್ಚು ಅಪಾಯಕಾರಿ!?

Recommended Video

ಮುಂಬೈನಲ್ಲಿ ಕೊರೊನಾವೈರಸ್ ಕಡಿವಾಣಕ್ಕೆ ಬಂದಿದ್ದು ಹೇಗೆ? | Oneindia Kannada
 ಮನೆಯಲ್ಲಿದ್ದ ಸೋಂಕಿತರು ಏನು ಸೇವಿಸಬಹುದು?

ಮನೆಯಲ್ಲಿದ್ದ ಸೋಂಕಿತರು ಏನು ಸೇವಿಸಬಹುದು?

* ಯಥೇಚ್ಛವಾಗಿ ನೀರು ಸೇವಿಸಬೇಕು. ಸೂಪ್, ಹಣ್ಣಿನ ರಸ, ಎಳನೀರು ಸೇವನೆ
* ಮಕಾಡೆ ಮಲಗಿ ಸರಾಗವಾಗಿ ಉಸಿರಾಡಿ
* ಆರು ಗಂಟೆಗಳ ಅಂತರದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಸೇವನೆ. ಕೆಮ್ಮಿದ್ದರೆ ಸಿರಪ್ ಸೇವಿಸಬೇಕು.
* ಮಲ್ಟಿ ವಿಟಮಿನ್ ಹಾಗೂ ಮಿನರಲ್ ಮಾತ್ರೆಗಳ ಸೇವನೆ
* ಸ್ಟೀಮ್ ತೆಗೆದುಕೊಳ್ಳುವುದು ಇಲ್ಲವೇ ದಿನಕ್ಕೆ ಮೂರು ಬಾರಿ ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದನ್ನು ಮಾಡಬೇಕು.
* ಇವೆಲ್ಲದರ ಹೊರತಾಗಿಯೂ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲವಾದರೆ ವೈದ್ಯರನ್ನು ತುರ್ತಾಗಿ ಕಾಣುವುದು ಅವಶ್ಯಕವಾಗಿರುತ್ತದೆ.

English summary
Large number of infected patients are under home isolation as they do not need hospitalisation. Here are some dos and don’ts for them
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X