ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದರ್ಶನಕ್ಕೆ 60ರ ಸಂಭ್ರಮ, ಸವಿ ಸವಿ ನೆನಪು ಸಾವಿರ ನೆನಪು

|
Google Oneindia Kannada News

Recommended Video

ದೂರದರ್ಶನಕ್ಕೆ 60ರ ಸಂಭ್ರಮ

ಮಹಾಭಾರತ್, ಫೌಜಿ, ಮಾಲ್ಗುಡಿ ಡೇಸ್ ನಂಥ ಮಹೋನ್ನತ ಧಾರಾವಾಹಿಗಳನ್ನಿತ್ತು ಹಲವರ ಪಾಲಿನ ಬಾಲ್ಯದ ಸಂಗಾತಿಯಾಗಿದ್ದ ದೂರದರ್ಶನ ತನ್ನ 60 ವರ್ಷದ ಝಲಕ್ ಟ್ವಿಟ್ಟರ್ ನಲ್ಲಿ ನೀಡಿದೆ. ಭಾನುವಾರ ಸೆಪ್ಟೆಂಬರ್ 15, 2019ಕ್ಕೆ ಸರಿಯಾಗಿ ದೂರದರ್ಶನಕ್ಕೆ 60 ತುಂಬಿದೆ. 60ರ ಹರೆಯದ ಹಿರಿಯ ತನ್ನ ಮನರಂಜನೆಯ ಸುವರ್ಣಯುಗದ ಸವಿ ಸವಿ ನೆನಪು ಸಾವಿರ ನೆನಪನ್ನು ಪ್ರೇಕ್ಷಕರೊಡನೆ ಹಂಚಿಕೊಂಡಿದೆ.

90ರ ದಶಕದಲ್ಲಿ ಮೂಡಿಬಂದ ದೂರದರ್ಶನದ ಜನಪ್ರಿಯ ಧಾರಾವಾಹಿಗಳಾದ ಮಾಲ್ಗುಡಿ ಡೇಸ್ (ಶಂಕರ್ ನಾಗ್ ನಿರ್ದೇಶನ), ವ್ಯೋಮ್ ಕೇಶ್ ಭಕ್ಷಿ, ಫ್ಲಾಪ್ ಶೋ ಮುಂತಾದ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡುವಂತೆ ಆಗಾಗ ಬೇಡಿಕೆ ಬರುತ್ತಲೇ ಇರುತ್ತದೆ. ಈಗ ದೂರದರ್ಶನದ ಟ್ವೀಟ್ ನಂತರ ಪ್ರೇಕ್ಷಕರು ತಮ್ಮ ನೆಚ್ಚಿನ ಧಾರಾವಾಹಿ ಸರಣಿ ಯಾವುದು ಎಂಬುದನ್ನು ಹಂಚಿಕೊಳ್ಳುತ್ತಿದ್ದಾರೆ.

'ಡಿಡಿ ಮುಂದೆ ಡಲ್ ಹೊಡೆಯಲಿವೆ ಎಲ್ಲ ಖಾಸಗಿ ಚಾನಲ್'!'ಡಿಡಿ ಮುಂದೆ ಡಲ್ ಹೊಡೆಯಲಿವೆ ಎಲ್ಲ ಖಾಸಗಿ ಚಾನಲ್'!

ರಾಮಾಯಣ, ಹಮ್ ಲೋಗ್, ಬುನಿಯಾದ್, ಸುರಭಿ, ಚಿತ್ರಹಾರ್, ಮಹಾಭಾರತ್, ಫೌಜಿ, ದೇಖ್ ಭಾಯ್ ದೇಖ್, ಫೌಜಿ, ಮಾಲ್ಗುಡಿ ಡೇಸ್ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ದೂರದರ್ಶನ ಪ್ರಸಾರ ಮಾಡಿ, ಜನರ ಮನ ಗೆದ್ದಿದೆ.

ಡಿಜಿಟಲ್ ಪ್ರೇಕ್ಷಕರನ್ನು ತಲುಪುವತ್ತ DD

ಡಿಜಿಟಲ್ ಪ್ರೇಕ್ಷಕರನ್ನು ತಲುಪುವತ್ತ DD

ದೂರದರ್ಶನದ ಟ್ಯೂನ್ ಹಾಗೂ ಐಕಾನ್ ಹಲವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಬಾಲ್ಯದ ನೆನಪನ್ನು ಮನ ಬಿಚ್ಚಿ ಹಂಚಿಕೊಳ್ಳುವಂತೆ ಮಾಡುತ್ತಿದೆ. ಪ್ರಸಾರ್ ಭಾರತಿ ಸಿಇಒ ಶಶಿ ಶೇಖರ್ ವೆಂಪಾಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, 'ದೂರದರ್ಶನ ಹಳೆಯ ಮಾಧ್ಯಮವಾದರೂ ಹೆಚ್ಚು ಜನರ ಮನಸನ್ನು ಮುಟ್ಟಿದ್ದು, ಹೊಸ ತಂತ್ರಜ್ಞಾನ, ಡಿಜಿಟಲ್ ಪ್ರೇಕ್ಷಕರನ್ನು ತಲುಪುವತ್ತ ದಾಪುಗಾಲಿರಿಸಿದೆ' ಎಂದಿದ್ದಾರೆ.

ಟಿವಿ ಕ್ಷೇತ್ರದಲ್ಲಿ ಇದು ಐತಿಹಾಸಿಕ ದಿನ

ಟಿವಿ ಕ್ಷೇತ್ರದಲ್ಲಿ ಇದು ಐತಿಹಾಸಿಕ ದಿನ

ಟಿವಿ ಕ್ಷೇತ್ರದಲ್ಲಿ ಇದು ಐತಿಹಾಸಿಕ ದಿನ, ಸೆಪ್ಟೆಂಬರ್15, 1959ರಿಂದ ಸೇವೆ ಆರಂಭಿಸಿದ ದೂರದರ್ಶನ 6 ದಶಕಗಳಲ್ಲಿ ಪ್ರತಿ ಮನೆಯ ಸಂಗಾತಿಯಾಗಿ ಬೆಳೆದಿದೆ. 1965 ರ ಹೊತ್ತಿಗೆ ಮನೆ ಮನೆಯ ಟಿವಿ ಸೆಟ್ ತಲುಪಲು ಆರಂಭಿಸಿತು. 1972ರಲ್ಲಿ ಮುಂಬೈ, ಅಮೃತ್ ಸರ್ ಕ್ಕೆ ಹಾಗೂ 1975ರಲ್ಲಿ ಇನ್ನೂ 7 ನಗರಗಳಿಗೆ ಪ್ರಸಾರ ಸೇವೆ ವಿಸ್ತರಣೆಗೊಂಡಿತು.

ಫ್ರೀ ಟು ಏರ್ 104 ಚಾನೆಲ್ ಗಳು

ಫ್ರೀ ಟು ಏರ್ 104 ಚಾನೆಲ್ ಗಳು

ಏಪ್ರಿಲ್ 1, 1976ರಂದು ಆಲ್ ಇಂಡಿಯಾ ರೇಡಿಯೋದಿಂದ ಬೇರ್ಪಟ್ಟು ಪ್ರತ್ಯೇಕ ರಾಷ್ಟ್ರೀಯ ಪ್ರಸಾರ ವಿಭಾಗವಾಯಿತು, ಈಗ ಎರಡು ಕೂಡಾ ಪ್ರಸಾರ ಭಾರತಿ ಅಡಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೂರದರ್ಶನದಲ್ಲಿ 34 ಸ್ಯಾಟಲೈಟ್ ಚಾನೆಲ್ ಹಾಗೂ ಫ್ರೀ ಟು ಏರ್ 104 ಚಾನೆಲ್ ಗಳು ಲಭ್ಯವಿದೆ

#60GloriousYearsOfDD ಎಂಬ ಟ್ಯಾಗ್

#60GloriousYearsOfDD ಎಂಬ ಟ್ಯಾಗ್ ಮೂಲಕ ಹಳೆ ನೆನಪುಗಳ ಝಲಕ್ ವುಳ್ಳ 1.32 ನಿಮಿಷದ ಪುಟ್ಟ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಡಿಡಿ ಲೋಗೋ ಅನಾವರಣ, ಮಹಾಭಾರತ್ ಸೀರಿಯಲ್ ದೃಶ್ಯ, ರಾಮಾಯಣ, ಶ್ರೀಕೃಷ್ಣ, ಹಮ್ ಲೋಗ್, ಮಾಲ್ಗುಡಿ ಡೇಸ್, ಬುನಿಯಾದ್, ಬ್ಯೂಮಕೇಶ್ ಬಕ್ಷಿ, ಜಂಗಲ್ ಬುಕ್, ವಿಕ್ರಮ್ ಬೇತಾಳ್, ಡಿಡಿ ನ್ಯೂಸ್ ಆಂಕರ್ ಗಳು, ಚಂದ್ರಯಾನ್ ಲೈವ್ ನ ದೃಶ್ಯಗಳ ವಿಡಿಯೋ ಇದಾಗಿದೆ.

ಅಮುಲ್ ನಿಂದ ವಿಶಿಷ್ಟ ರೀತಿಯಲ್ಲಿ ಶುಭಾಶಯ

1975ರಲ್ಲಿ ಖೇಡಾ ಜಿಲ್ಲೆಯ ಪಿಜ್ ಗ್ರಾಮದಲ್ಲಿ ಮೊದಲ ಬಾರಿಗೆ ಸ್ಥಳೀಯ ದೂರದರ್ಶನ ಆರಂಭವಾಯಿತು ಎಂದು ಅಮುಲ್ ಶುಭಕೋರಿ ಟ್ವೀಟ್ ಮಾಡಿದೆ.

English summary
Doordarshan turned 60 on Sunday bringing back memories of a golden period when entertainment in the country revolved around serials such as Mahabharata, Fauji and Malgudi Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X