ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾಕ್ಕೆ ಎಚ್ಚರಿಕೆ ನೀಡಿದ ಟ್ರಂಪ್ ಎದೆಯಲ್ಲಿ ವಿಲವಿಲ!

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 14: ಭಾರತ ಮತ್ತು ಚೀನಾ ರಾಷ್ಟ್ರಗಳು 'ಅಭಿವೃದ್ಧಿ ಹೊಂದುತ್ತಿರುವ' ರಾಷ್ಟ್ರಗಳಾಗಿ ಉಳಿದಿಲ್ಲ. ಅವು 'ಅಭಿವೃದ್ಧಿ ಹೊಂದಿದ ಆರ್ಥಿಕತೆ' ಗಳಾಗಿವೆ. ಆದರೆ 'ಅಭಿವೃದ್ಧಿ ಹೊಂದುತ್ತಿರುವ ದೇಶ' ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಉಪಯೋಗ ಪಡೆಯುತ್ತಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಇದು ಹೀಗೆಯೇ ಮುಂದುವರಿಯಲು ನಾನು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ತಮ್ಮ 'ಅಮೆರಿಕ ಫಸ್ಟ್' ಪಾಲಿಸಿಗೆ ಆದ್ಯತೆ ನೀಡುತ್ತಿರುವ ಟ್ರಂಪ್, ಭಾರತವು ಅಮೆರಿಕದ ಸರಕುಗಳಿಗೆ ಅತಿಯಾದ ಆಮದು ಸುಂಕ ವಿಧಿಸುತ್ತಿರುವುದನ್ನು ಖಂಡಿಸಿ, ಭಾರತವನ್ನು 'ಟ್ಯಾರಿಫ್ ಕಿಂಗ್' ಎಂದು ಅವಹೇಳನ ಮಾಡಿದ್ದರು.

'ಇನ್ನು ಸಹಿಸೋಕಾಗಲ್ಲ', ಭಾರತಕ್ಕೆ ಡೊನಾಲ್ಡ್ ಟ್ರಂಪ್ ಟ್ವೀಟ್ ಬಾಣ'ಇನ್ನು ಸಹಿಸೋಕಾಗಲ್ಲ', ಭಾರತಕ್ಕೆ ಡೊನಾಲ್ಡ್ ಟ್ರಂಪ್ ಟ್ವೀಟ್ ಬಾಣ

ಈಗಾಗಲೇ ಚೀನಾದ ಸರಕುಗಳ ಮೇಲೆ ಅಮೆರಿಕ ಅತಿಯಾದ ಆಮದು ಸುಂಕ ಹೇರಿದ್ದು, ಚೀನಾ ಸಹ ಅದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ. ತನ್ನಿಮಿತ್ತ ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿದೆ.

ಭಾರತ ಅಮೆರಿಕದಿಂದ ರಫ್ತಾಗುತ್ತಿದ್ದ ಹಾರ್ಲೆ ಡೆವಿಡ್ಸನ್ ಬೈಕುಗಳ ಮೇಲೆ ಅತಿಯಾಗಿ ಆಮದು ಸುಂಕ ಹೇರುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ದೂರಿದ್ದರು. ಜೊತೆಗೆ ಅಮೆರಿಕದ ವಸ್ತುಗಳ ಮೇಲೆ ಭಾರತ ಹೇರುತ್ತಿರುವ ಅತಿಯಾದ ಸುಂಕಕ್ಕೆ ಪ್ರತಿಯಾಗಿ, ಭಾರತಕ್ಕೆ ನೀಡಿದ್ದ 'ಆದ್ಯತೆಯ ವಹಿವಾಟಿನ ಸೌಲಭ್ಯ'(Generalized System of Preferences)ವನ್ನು ಟ್ರಂಪ್ ಹಿಂಪಡೆದಿದ್ದರು.

'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ'ಅದು ಮುಗಿದ ಕತೆ!' ಮೋದಿ ಹೊಸ ಸರ್ಕಾರಕ್ಕೆ ಅಮೆರಿಕದಿಂದ ಮೊದಲ ಆಘಾತ

ಇದರಿಂದಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆದಿತ್ತು. ಇದನ್ನು ಮರುಪರಿಶೀಲಿಸುವಂತೆ ಭಾರತ ಅಮೆರಿಕಕ್ಕೆ ಮಾಡಿದ್ದ ಮನವಿಯನ್ನೂ ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದರು.

ಅಭಿವೃದ್ಧಿ ಹೊಂದುತ್ತಿರುವ... ಎಂಬುದರ ವ್ಯಾಖ್ಯಾನ!

ಅಭಿವೃದ್ಧಿ ಹೊಂದುತ್ತಿರುವ... ಎಂಬುದರ ವ್ಯಾಖ್ಯಾನ!

ಕಳೆದ ಜುಲೈ ತಿಂಗಳಿನಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದ ಡೊನಾಲ್ಡ್ ಟ್ರಂಪ್, "ಒಂದು ದೇಶವನ್ನು ಯಾವ ಮಾನದಂಡದ ಮೇಲೆ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ವ್ಯಾಖ್ಯಾನಿಸುತ್ತೀರಿ?" ಎಂದು ಪ್ರಶ್ನಿಸಿದ್ದರು. ಭಾರತ, ಚೀನಾ ಮತ್ತು ಟರ್ಕಿಯಂಥ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು 'ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ' ಎಂಬ ಟ್ಯಾಗ್ ನಿಂದ ಸಾಕಷ್ಟು ಉಪಯೋಗ ಪಡೆಯುತ್ತಿವೆ ಎಂಬುದು ಟ್ರಂಪ್ ಆರೋಪವಾಗಿತ್ತು.

WTO ನಿಂದ ಸೌಲಭ್ಯ ಪಡೆಯಬೇಡಿ!

WTO ನಿಂದ ಸೌಲಭ್ಯ ಪಡೆಯಬೇಡಿ!

ಪೆನ್ಸಿಲ್ವೇನಿಯಾದಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಟ್ರಂಪ್, "ಭಾರತ ಮತ್ತು ಚೀನಾ ಎರಡು ದೇಶಗಳು ಏಷ್ಯಾದ ದೈತ್ಯ ಆರ್ಥಿಕತೆಗಳಾಗಿವೆ. ಅವರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ. ಆದ್ದರಿಂದ ಆ ಎರಡೂ ರಾಷ್ಟ್ರಗಳು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಲಾಭ ಪಡೆಯಬಾರದು" ಎಂದು ನೇರವಾಗಿಯೇ ಹೇಳಿದ್ದಾರೆ.

ಎಚ್ಚರಿಕೆಯನ್ನೂ ನೀಡಿದ ಟ್ರಂಪ್

ಎಚ್ಚರಿಕೆಯನ್ನೂ ನೀಡಿದ ಟ್ರಂಪ್

ಇದರೊಟ್ಟಿಗೆ ಭಾರತ ಮತ್ತು ಚೀನಾಕ್ಕೆ ಎಚ್ಚರಿಕೆಯನ್ನೂ ನೀಡಿರುವ ಟ್ರಂಪ್, "ಈ ದೇಶಗಳು ವಿಶ್ವ ವಾಣಿಜ್ಯ ಸಂಸ್ಥೆಯಿಂದ ಉಪಯೋಗ ಪಡೆಯುವುದಕ್ಕೆ ನಾವು ಇನ್ನು ಮುಂದೆ ಅವಕಾಶ ಮಾಡಿಕೊಡುವುದಿಲ್ಲ. ವಿಶ್ವ ವಾಣಿಜ್ಯ ಸಂಸ್ಥೆ ಅಮೆರಿಕದ ವಿಷಯದಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ" ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಎದೆಯಲ್ಲಿ ವಿಲವಿಲ!!

ಟ್ರಂಪ್ ಎದೆಯಲ್ಲಿ ವಿಲವಿಲ!!

ಇಷ್ಟು ಕಾಲ ಆದ್ಯತೆಯ ವಹಿವಾಟಿನ ಬಗ್ಗೆಯಾಗಲೀ,ಅತಿಯಾದ ಆಮದು ಸುಂಕದ ಬಗ್ಗೆಯಾಗಲೀ ಮಾತನಾಡದೆ, ಭಾರತವನ್ನು ನನ್ನ ಸ್ನೇಹಿತ ಎನ್ನುತ್ತಿದ್ದ ಟ್ರಂಪ್ ಏಕಾಏಕಿ ಭಾರತ, ಚೀನಾ ಮೇಲೆ ಕಿಡಿಕಾರುವುದಕ್ಕೆ ಕಾರಣವಿದೆ. ಅಮೆರಿಕದಲ್ಲಿ 2020 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಟ್ರಂಪ್, ತಮ್ಮ 'ಅಮೆರಿಕ ಪ್ರೇಮ'ವನ್ನು ಈ ಮೂಲಕ ತೋರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಯುವ ಗುರಿಯನ್ನು ಹೊಂದಿರುವುದು ಟ್ರಂಪ್ ಗೆ ನುಂಗಲಾರದ ತುತ್ತಾಗಿದೆ. ಆದ್ಯತೆಯ ವಹಿವಾಟಿನ ಸೌಲಭ್ಯವನ್ನು ತಾನೇ ಗುರುತಿಸಿದ ಬಡ ರಾಷ್ಟ್ರಗಳಿಗೆ ನೀಡುತ್ತಿದ್ದ ಅಮೆರಿಕ, ಭಾರತವನ್ನು ಆಪಟ್ಟಿಯಿಂದ ಹೊರಗಿಡಲು ಒಂದು ನೆಪ ಹುಡುಕುತ್ತಿತ್ತು. ಅದಕ್ಕೆ ಸರಿಯಾಗಿ ಹಾರ್ಲೇ ಡೆವಿಡ್ಸನ್ ಬೈಕುಗಳ ಮೇಲಿನ ಆಮದು ಸುಂಕವನ್ನು ಭಾರತ ಶೇ.100 ಕ್ಕೆ ಹೆಚ್ಚಿಸಿತ್ತು. ನಂತರ ಭಾರತ ಅದನ್ನು ಶೇ.50 ಕ್ಕೆ ಇಳಿಸಿದರೂ, ಅಮೆರಿಕ ಅದನ್ನೂ ಒಪ್ಪದೆ, ಭಾರತಕ್ಕೆ ನೀಡಿದ್ದ ಆದ್ಯತೆಯ ವಹಿವಾಟಿನ ಸೌಲಭ್ಯವನ್ನು ಕಸಿಯಿತು.

English summary
President of US, Donald Trump said, India and China are grown economies, still taking advantage from WTO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X