• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

25 ವರ್ಷದಲ್ಲಿ ಮೊದಲ ಬಾರಿಗೆ ಶ್ರೀಮಂತರ ಪಟ್ಟಿಯಿಂದ ಟ್ರಂಪ್‌ ಔಟ್‌!

|
Google Oneindia Kannada News

ವಾಷಿಂಗ್ಟನ್‌, ಅಕ್ಟೋಬರ್‌ 06: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಿಯಲ್‌ ಎಸ್ಟೇಟ್‌ನ ಪ್ರಮುಖ ವ್ಯಕ್ತಿಯು ಸುಮಾರು 25 ವರ್ಷಗಳ ಬಳಿಕ ಅಮೆರಿಕದ ಫೋರ್ಬ್ಸ್‌ನ 400 ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎಂದು ನಿಯತಕಾಲಿಕೆ (ಮ್ಯಾಗಜೀನ್‌) ವರದಿ ಮಾಡಿದೆ.

"ಕಳೆದ ವರ್ಷ ಟ್ರಂಪ್‌ ಎಷ್ಟು ಸಂಪತ್ತನ್ನು ಹೊಂದಿದ್ದರೋ ಅಷ್ಟೇ ಸಂಪತ್ತನ್ನು ಹೊಂದಿದ್ದರು. ಆದರೆ ಕೊರೊನಾ ವೈರಸ್‌ ಸೋಂಕು ಆರಂಭವಾದ ಬಳಿಕ ಟ್ರಂಪ್‌ನ ಸಂಪತ್ತಿನಲ್ಲಿ ಸುಮಾರು 600 ಮಿಲಿಯನ್‌ ಯುನೈಟೆಡ್‌ ಸ್ಟೇಟ್ಸ್‌ ಡಾಲರ್‌ ಸಂಪತ್ತು ನಷ್ಟವಾಗಿದೆ," ಎಂದು ವರದಿಯು ಹೇಳುತ್ತದೆ.

ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿ: ನಿರ್ಮಲಾ ಸೀತಾರಾಮನ್, ಕಿರಣ್ ಮಜೂಂದಾರ್‌ಗೆ ಸ್ಥಾನಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿ: ನಿರ್ಮಲಾ ಸೀತಾರಾಮನ್, ಕಿರಣ್ ಮಜೂಂದಾರ್‌ಗೆ ಸ್ಥಾನ

ಟ್ರಂಪ್‌ನ ಸಂಪತ್ತು 2.5 ಬಿಲಿಯನ್‌ ಡಾಲರ್‌ ಆಗಿದ್ದು, 600 ಮಿಲಿಯನ್‌ ಡಾಲರ್‌ ಕಡಿಮೆಯಾದ ಕಾರಣದಿಂದಾಗಿ ಟ್ರಂಪ್‌ರನ್ನು ತನ್ನ ಶ್ರೀಮಂತರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಫೋರ್ಬ್ಸ್‌ನ ವರದಿಯು ಹೇಳಿದೆ. ಇನ್ನು ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಲವಾರು ಸುವರ್ಣಾವಕಾಶವನ್ನು ಹೊಂದಿದ್ದರು ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.

"2016 ರ ಚುನಾವಣೆಯ ಸಂದರ್ಭ ಫೆಡರಲ್ ಎಥಿಕ್ಸ್ ಅಧಿಕಾರಿಗಳು ಟ್ರಂಪ್‌ನ ರಿಯಲ್ ಎಸ್ಟೇಟ್ ಸಂಪತ್ತನ್ನು ಬೇರೆಯವರಿಗೆ ಹಸ್ತಾಂತರಿಸುವ ಒತ್ತಾಯವನ್ನು ಮಾಡಿದ್ದರು. ಆದ್ದರಿಂದ ಟ್ರಂಪ್‌ ಫಂಡ್‌ಗಳಿಗೆ ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು," ಎಂದು ಈ ವರದಿಯು ಹೇಳುತ್ತದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಸಂಪತ್ತನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದರು. ಆ ಸಂದರ್ಭದಲ್ಲಿ ಟ್ರಂಪ್‌ನ ಎಲ್ಲಾ ಸಾಲಗಳು ಕಡಿತಗೊಳಿಸಿ, 3.5 ಬಿಲಿಯನ್‌ ಡಾಲರ್‌ ಸಂಪತ್ತನ್ನು ಟ್ರಂಪ್‌ ಹೊಂದಿದ್ದರು.

ಇನ್ನು ಟ್ರಂಪ್‌ನ ಈ ಸಂಪತ್ತಿನ ಇಳಿಕೆಯ ಹೊಣೆಯನ್ನು ಈ ಫೋರ್ಬ್ಸ್‌ ವರದಿಯು ಟ್ರಂಪ್‌ ಮೇಲೆಯೇ ಹಾಕಿದೆ. "ಟ್ರಂಪ್‌ನ ಸಂಪತ್ತು ಇಳಿಕೆಯ ಹೊಣೆಯನ್ನು ನಾವು ಯಾರಿಗಾದರೂ ಹೊರಿಸುವುದಾದರೆ, ಮೊದಲು ಟ್ರಂಪ್‌ ಅವರೇ ಆ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಈ ಸಂಪತ್ತು ಇಳಿಕೆಗೆ ಅವರೇ ಕಾರಣ," ಎಂದು ಫೋರ್ಬ್ಸ್‌ ವರದಿ ಆರೋಪ ಮಾಡಿದೆ.

ಅಮೆರಿಕಾದ 400 ಶ್ರೀಮಂತರ ಪಟ್ಟಿಯಲ್ಲಿ 7 ಭಾರತೀಯ ಮೂಲದವರಿಗೆ ಸ್ಥಾನಅಮೆರಿಕಾದ 400 ಶ್ರೀಮಂತರ ಪಟ್ಟಿಯಲ್ಲಿ 7 ಭಾರತೀಯ ಮೂಲದವರಿಗೆ ಸ್ಥಾನ

ವೈಟ್‌ ಹೌಸ್‌ಗೆ ಅಮೆರಿಕದ ಅಧ್ಯಕ್ಷರಾಗಿ ಬರುವ ಕೆಲವು ದಿನಗಳ ಮುನ್ನ ಟ್ರಂಪ್‌ ತಾನು ಸರ್ಕಾರವನ್ನು ನಡೆಸುವುದರ ಜೊತೆಗೆಯೇ ತನ್ನ ವ್ಯವಹಾರವನ್ನು ಕೂಡಾ ನೋಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿದ್ದರು. ಈ ಬಗ್ಗೆ ಮಾತನಾಡಿದ್ದ ಟ್ರಂಪ್‌, "ನಾನು ನೋಡಲು ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಗಮನ ಹರಿಸಲ್ಲ, ಆದರೆ ನಾನು ಏನು ಮಾಡಲು ಬಯಸುತ್ತೇನೋ ಅದನ್ನು ನಾನು ಮಾಡುತ್ತೇನೆ," ಎಂದು ಹೇಳಿದ್ದರು.

ಟ್ರಂಪ್‌ನ ಫೋರ್ಬ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಹೇಗಿದೆ ಪ್ರಯಾಣ ನೋಡಿ!

ಟ್ರಂಪ್‌ ಫೋರ್ಬ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಆರಂಭದಲ್ಲಿ ಕೆಳಮಟ್ಟದಲ್ಲಿ ಇದ್ದು, ಬಳಿಕ ಒಂದು ವರ್ಷದಲ್ಲೇ ಭಾರೀ ಏರಿಕೆ ಕಂಡಿದ್ದಾರೆ. ವರ್ಷಗಳು ಕಳೆದಂತೆ ಈ ಪಟ್ಟಿಯಲ್ಲಿ ಟ್ರಂಪ್‌ನ ಹೆಸರು ಬದಲಾವಣೆ ಆಗುತ್ತಲೇ ಹೋಗಿದೆ. ಆದರೆ 2016 ರ ಚುನಾವಣೆಯ ಬಳಿಕ ಟ್ರಂಪ್‌ನ ಸಂಪತ್ತು ಭಾರೀ ಇಳಿಕೆಯಾಗಿದ್ದು, ಟ್ರಂಪ್‌ ಈಗ ಆ ಪಟ್ಟಿಯಿಂದಲೇ ಹೊರ ಬಂದಿದ್ದಾರೆ.

1996: 368 ಸ್ಥಾನ
1997: 105 ಸ್ಥಾನ
1998: 110 ಸ್ಥಾನ
1999: 145 ಸ್ಥಾನ
2000: 167 ಸ್ಥಾನ
2001: 110 ಸ್ಥಾನ
2002: 92 ಸ್ಥಾನ
2003: 71 ಸ್ಥಾನ
2004: 74 ಸ್ಥಾನ
2005: 83 ಸ್ಥಾನ
2006: 94 ಸ್ಥಾನ
2007: 117 ಸ್ಥಾನ
2008: 134 ಸ್ಥಾನ
2009: 158 ಸ್ಥಾನ
2010: 153 ಸ್ಥಾನ
2011: 128 ಸ್ಥಾನ
2012: 128 ಸ್ಥಾನ
2013: 134 ಸ್ಥಾನ
2014: 122 ಸ್ಥಾನ
2015: 121 ಸ್ಥಾನ
2016: 156 ಸ್ಥಾನ
2017: 248 ಸ್ಥಾನ
2018: 259 ಸ್ಥಾನ
2019: 275 ಸ್ಥಾನ
2020: 339 ಸ್ಥಾನ
2021: ಪಟ್ಟಿಯಿಂದ ಟ್ರಂಪ್‌ ಔಟ್‌

(ಒನ್‌ಇಂಡಿಯಾ ಸುದ್ದಿ)

English summary
Former US President Donald Trump Falls Off The Forbes 400 Rich List For First Time In 25 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X