ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ; ಹುಲಿಗಳ ಜೊತೆ ಗೋಲ್ಡನ್ ರಿಟ್ರೈವರ್‌ ನಾಯಿ!

|
Google Oneindia Kannada News

ಹುಲಿ, ಸಿಂಹ ಎಂದರೆ ಯಾರಿಗೆ ಭಯ ಆಗಲ್ಲ ಹೇಳಿ. ಯಾಮಾರಿದ್ರೆ ಮನುಷ್ಯನನ್ನೇ ತಿನ್ನುವ ಈ ಮಾಂಸಹಾರಿಗಳು ನಾಯಿ ಏನಾದರೂ ಸಿಕ್ಕರೆ ಬಿಡುತ್ತವೆಯೇ?. ಆದರೆ ಒಮ್ಮೊಮ್ಮೊ ಪ್ರಾಣಿಗಳ ನಡುವೆಯೂ ಬಾಂಧವ್ಯ ಬೆಳೆದುಬಿಡುತ್ತದೆ. ಅದಕ್ಕೆ ಈಗ ವೈರಲ್ ಆಗಿರುವ ವಿಡಿಯೋ ಸಾಕ್ಷಿ.

ತಾವ್ಯಾರು ಎನ್ನುವುದನ್ನೇ ಮರೆತು ವಿಭಿನ್ನ ಜಾತಿಯ ಪ್ರಾಣಿಗಳು ಒಂದಾಗಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ವೀಡಿಯೋ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಲೈಕ್, ಶೇರ್ ಬಟನ್ ಒತ್ತುವ ಮೂಲಕ ಸ್ನೇಹಕ್ಕೆ ಸಲಾಂ ಎಂದಿದ್ದಾರೆ.

ಫಾರ್ಮ್ ಹೌಸ್‌ಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡ ಧೋನಿ ಫಾರ್ಮ್ ಹೌಸ್‌ಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡ ಧೋನಿ

ವಿಡಿಯೋದಲ್ಲಿ ಹುಲಿಗಳ ಗುಂಪೇ ಇದೆ. ಅದರ ನಡುವೆ ನಾಯಿಯೊಂದು ನಿರ್ಭಯವಾಗಿ ಓಡಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವೀಡಿಯೋ ಈಗ ವೈರಲ್ ಆಗಿದೆ.

ಟೈಗರ್ ಬಿಗ್‌ಫ್ಯಾನ್ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೇ 26 ರಂದು ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. 1.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 52,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಇನ್ಮುಂದೆ ಕಬಿನಿಯ ಅತಿಥಿ ಭೋಗೇಶ್ವರ ಬರೀ ನೆನಪು ಮಾತ್ರ ಇನ್ಮುಂದೆ ಕಬಿನಿಯ ಅತಿಥಿ ಭೋಗೇಶ್ವರ ಬರೀ ನೆನಪು ಮಾತ್ರ

ವಿಡಿಯೋದಲ್ಲಿ, ನಾಯಿಯು ಹುಲಿಗಳ ನಡುವೆ ನಿರ್ಭಯವಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ಆದರೆ ಹುಲಿಗಳು ಕೂಡ ನಾಯಿಯನ್ನು ಏನೂ ಮಾಡದೆ ಅತ್ತಿಂದಿತ್ತ ಓಡಾಡುವುದನ್ನು ನೋಡಬಹುದಾಗಿದೆ. ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನಾಯಿಯಿಂದ ಹುಲಿಗಳಿಗೆ ಹಾಲಿನ ಮೇವು

ನಾಯಿಯಿಂದ ಹುಲಿಗಳಿಗೆ ಹಾಲಿನ ಮೇವು

ಹುಲಿಗಳು ಮತ್ತು ನಾಯಿ ನಡುವೆ ಈ ಮಟ್ಟಕ್ಕೆ ಬಾಂಧವ್ಯ ಬೆಳೆಯಲೂ ಒಂದು ಬಲವಾದ ಕಾರಣವಿದೆ. ಪೋಸ್ಟ್ ಪ್ರಕಾರ ಈ ಹುಲಿಗಳು ಮರಿಗಳಾಗಿದ್ದಾಗ ನಾಯಿ ಹಾಲು ನೀಡುತ್ತಿತ್ತು, ಅದಕ್ಕಾಗಿಯೇ ಹುಲಿಗಳು ನಾಯಿಯನ್ನು ತಮ್ಮ ತಾಯಿಯಂತೆ ಭಾವಿಸುತ್ತವೇ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. "ನಾಯಿ ತಾಯಿಗೆ ಹಲವಾರು ಹುಲಿ ಮಕ್ಕಳನ್ನು ಸಾಕುವುದು ಸುಲಭವಲ್ಲ" ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.

ದೃಶ್ಯ ನೋಡಿದ ನೆಟ್ಟಿಗರಿಗೆ ಅಚ್ಚರಿ

ಅಂತರ್ಜಾಲದಲ್ಲಿ ದೃಶ್ಯಾವಳಿಗಳನ್ನು ನೋಡಿದ ವೀಕ್ಷಕರು ಬೆಚ್ಚಿಬಿದ್ದರು, ಆದರೆ ಕೆಲವರು ವಿಡಿಯೋವನ್ನು ಅರ್ಥ ಮಾಡಿಕೊಂಡು ಕಮೆಂಟ್‌ಗಳನ್ನು ಮಾಡಿದ್ದಾರೆ.

"ಆ ನಾಯಿಯು ಆ ಹುಲಿಗಳನ್ನು ಸಾಕಲು ಸಹಾಯ ಮಾಡಿತು ಮತ್ತು ಅವುಗಳಿಗೆ ತನ್ನ ಹಾಲು ನೀಡಿ ಬೆಳೆಸಿದೆ. ಅವು ನಾಯಿಯನ್ನು ನೋಯಿಸುವ ಸಾಧ್ಯತೆಯಿಲ್ಲ. ಇದು ಸಾಧ್ಯ ಆದರೆ ಅಸಂಭವವಾಗಿದೆ" ಎಂದು ಇನ್ಸ್‌ಸ್ಟಾಗ್ರಾಂ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಮಧ್ಯಪ್ರದೇಶದ ಹುಲಿಗಳ ಆಟಕ್ಕೆ ಮನಸೋತ ನೆಟ್ಟಿಗ

ಮಧ್ಯಪ್ರದೇಶದ ಹುಲಿಗಳ ಆಟಕ್ಕೆ ಮನಸೋತ ನೆಟ್ಟಿಗ

ಮಧ್ಯಪ್ರದೇಶ ಟೈಗರ್ ಫೌಂಡೇಶನ್ ಸೊಸೈಟಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹುಲಿಗಳ ಸುಂದರ ವಿಡಿಯೋವೊಂದನ್ನು ಹಂಚಿಕೊಂಡಿದೆ. ಹುಲಿಗಳು ಓಡಿ ಬಂದು ನೆಗೆಯುವ ವಿಡಿಯೋ ಕ್ಲಿಪ್ ವೈರಲ್ ಆಗಿದೆ.

ಹೀಗೆ ಪರಸ್ಪರ ಓಡಿ, ಜಿಗಿದು, ಹೊರಳಾಡಿ ಈ ಹುಲಿಗಳು ಆಟ ಆಡುವ ದೃಶ್ಯ ನೋಡಲು ಸುಂದರವಾಗಿದೆ. ಶೌರ್ಯ ರೇಶಮವಾಲಾ (@Shaurya Reshamwala) ಎಂಬವರು ಈ ವಿಡಿಯೋವನ್ನು ಸೆರೆ ಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಪನ್ನಾ ಹುಲಿ ಅಭಯಾರಣ್ಯದಲ್ಲಿ 2022ರ ಜೂನ್‌ನಲ್ಲಿ P-151 ಎನ್ನುವ ಹೆಣ್ಣು ಹುಲಿಗೆ ಸೇರಿದ ಮರಿಗಳು ಆಟವಾಡುವುತ್ತಿವೆ ಎಂದು ಮಾಹಿತಿ ನೀಡಲಾಗಿದೆ.

ಒಡಹುಟ್ಟಿದವರ ಆಟಕ್ಕೆ ಸುಸಂದ ಮೆಚ್ಚುಗೆ

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ವಿಡಿಯೋ ಹಂಚಿಕೊಂಡಿದ್ದಾರೆ. "ಒಡಹುಟ್ಟಿದವರು ಆಟವಾಡುತ್ತಿರುವ ವೀಡಿಯೋವನ್ನು ಸತತವಾಗಿ ನೋಡುತ್ತಿದ್ದೇನೆ. ಒಂದು ದಶಕದ ಹಿಂದೆ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ನಶಿಸಿಹೋಗಿದೆ ಎನ್ನಲಾಗಿತ್ತು. ಈಗ ಇಲ್ಲಿ 45/50 ವಯಸ್ಕ ಮತ್ತು 20/25 ಹುಲಿಮರಿಗಳನ್ನು ಹೊಂದಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹುಲಿ ಆಟದ ದೃಶ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ವಿಡಿಯೋವನ್ನು ತಮ್ಮ ಖಾತೆಗಳಲ್ಲಿ ರಿಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ.

English summary
Video of golden retriever dog roaming fearlessly with Tigers went viral on social media. Viewers were shocked to see the footage on the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X