• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಚಿಯಿಂದಲೂ ಬರುತ್ತೆ ಮೆದುಳು ಜ್ವರ ಎಚ್ಚರ, ಹಣ್ಣೊಳಗೇನಿದೆ ಅಂಥದ್ದು?

|

ಪಾಟ್ನಾ, ಜೂನ್ 18: ಲಿಚಿ ಹಣ್ಣಿನಿಂದಲೂ ಮೆದುಳು ಜ್ವರ ಬರಲಿದೆ ಎನ್ನುವ ಆತಂಕಕಾರಿ ವಿಷಯವನ್ನು ವೈದ್ಯರು ಬಿಚ್ಚಿಟ್ಟಿದ್ದಾರೆ.

ಲಿಚಿ ಹಣ್ಣಿನೊಳಗಿರುವ ಈ ವಿಷಯಕಾರಿ ಅಂಶದಿಂದಾಗಿ ಮಕ್ಕಳಲ್ಲಿ ಮೆದುಳು ಜ್ವರ ಹೆಚ್ಚುತ್ತಿದೆ. ಹಾಗೆಂದ ಮಾತ್ರಕ್ಕೆ ಮೆದುಳು ಜ್ವರಕ್ಕೆ ಲಿಚಿಯೊಂದೇ ಕಾರಣ ಎಂದರ್ಥವಲ್ಲ ಆದರೆ ಅದೂ ಕೂಡ ಒಂದು ಕಾರಣವಿರಬಹುದು ಎಂದಿದ್ದಾರೆ.

ಬಿಹಾರದಲ್ಲಿ 100 ಮಕ್ಕಳ ಸಾವಿಗೆ ಕಾರಣವಾದ ಎಇಎಸ್ ಸೋಂಕು ಎಂದರೇನು?

ಕಳೆದ ಮೂರು ವಾರಗಳಿಂದ ಬಿಹಾರದ ಮುಜಾಫರ್‌ಪುರದಲ್ಲಿ 103 ಮಂದಿ ಮಕ್ಕಳ ಸಾವಿಗೆ ಕಾರಣವಾದ ಮೆದುಳಿಗೆ ಸಂಬಂಧಿಸಿದ ರೋಗಕ್ಕೆ ಲಿಚಿ ಹಣ್ಣಿನಲ್ಲಿರುವ ವಿಷಕಾರಿ ಅಂಶವೂ ಕಾರಣ ಎನ್ನಲಾಗಿದೆ.

ಬಿಹಾರದ ಆಸ್ಪತ್ರೆಯಲ್ಲಿ ಮರಣಹೊಂದಿದ ಇಬ್ಬರು ಮಕ್ಕಳ ದೇಹದಲ್ಲಿ ಈ ಲಿಚಿಯಲ್ಲಿರುವ ಕೆಲವು ಹಾನಿಕಾರಕ ಅಂಶಗಳು ಗೋಚರಿಸಿದೆ. ಲಿಚಿಯಲ್ಲಿರುವ ಕೆಲವು ವಿಷಯಕಾರಿ ಅಂಶಗಳು ಅಕ್ಯೂಟ್ ಎನ್ಸೆಪಾಲಿಟೀಸ್ ಸಿಂಡ್ರೋಮ್ ರೋಗಕ್ಕೆ ಕಾರಣವಾಗಬಲ್ಲದು.

ಬಿಹಾರಿಗಳು ಇದಕ್ಕೆ 'ಚಮ್ಕಿ ಭೂಕಾರ್' ಎನ್ನುತ್ತಾರೆ. ಮೆದುಳಿನಲ್ಲಿ ಒಂದು ರೀತಿ ಉರಿ, ಊತ ಆರಂಭವಾಗಿ ಬಳಿಕ ಜ್ವರ ಬರುತ್ತದೆ. ಈ ಜ್ವರದಿಂದ ವಾಂತಿ, ಪ್ರಜ್ಞೆ ತಪ್ಪುವುದು, ಮರೆವು ಸೇರಿದಂತೆ ಹಲವು ಸಮಸ್ಯೆಗಳು ಆರಂಭವಾಗುತ್ತವೆ. ಇದು 10 ವರ್ಷದೊಳಗಿನ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುವ ರೋಗವಾಗಿದೆ.

ಈ ಲಿಚಿಯನ್ನು ಹಸಿದ ಹೊಟ್ಟೆಯಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಕೂಡ ಇದೆ ಎಂದು ವೈದ್ಯರು ಹೇಳಿದ್ದಾರೆ. ಲಿಚಿಯಲ್ಲಿರುವ ಮಿಥೆಲಿನ್ ಸೈಕ್ಲೊಪ್ರೊಫಿಲ್ ಗ್ಲೈಸಿನ್ ರಾಸಾಯನಿಕವು ದೇಹದೊಳಗೆ ಪ್ರವೇಶಿಸಿದರೆ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ಈ ಹಣ್ಣನ್ನು ತಿಂದಾಗ ಇದು ನೇರವಾಗಿ ಮೆದುಳಿಗೆ ತೊಂದರೆ ಉಂಟು ಮಾಡುತ್ತದೆ. ಜೊತೆಗೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕೂಡ ಕಡಿಮೆಯಾಗಿಸುತ್ತದೆ.

ಹೈಪೊಗ್ಲಿಸಿಮಿಯಾ ಆಗುವ ಸಾಧ್ಯತೆ: ಮುಜಾಫುರ್‌ಪುರದ ಎರೆಡು ಆಸ್ಪತ್ರೆಗಳಲ್ಲಿ ಜನವರಿ ಇಂದ ಇಲ್ಲಿಯವರೆಗೆ 179 ಪ್ರಕರಣಗಳು ದಾಖಲಾಗಿವೆ.

ವೈದ್ಯರ ಪ್ರಕಾರ ಹೈಪೊಗ್ಲಿಸಿಮಿಯಾದಿಂದಲೇ ಮೃತಪಟ್ಟಿದ್ದಾರೆ. ಸಿಹಿರಕ್ತಕಣವನ್ನು ಕಡಿಮೆ ಮಾಡುತ್ತದೆ.

ವೈದ್ಯರು ಏನು ಹೇಳುತ್ತಾರೆ: ಎಇಎಸ್ ಲಕ್ಷಣವೆಂದರೆ ಮಕ್ಕಳ ದೇಹದಲ್ಲಿ ಏಕಾಏಕಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗುತ್ತದೆ.

ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಇದ್ದು ಈ ಸಂದರ್ಭದಲ್ಲಿ ಮಕ್ಕಳನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಆರೋಗ್ಯ ಅಧಿಕಾರಿ ಅಲೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.

1995ರಿಂದ ಮುಜಾಫರ್ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Doctors says Lychee may cause AES disease , it would not be prudent to blame Lychee alone for the illness. Then urban kids too should have fallen to the disease, but it is one of the reason behind this disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more