ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿಗಳಿಂದ ಗಾವುದ ದೂರ ಉಳಿದಿದ್ದ ಕಲಬುರ್ಗಿ ಹೆಸರಿನಲ್ಲಿಯೇ ಪ್ರಶಸ್ತಿಯೇ?

By ಡಾ.ಶಶಿಕಾಂತ ಪಟ್ಟಣ ರಾಮದುರ್ಗ
|
Google Oneindia Kannada News

ಡಾ ಎಂ ಎಂ ಕಲಬುರ್ಗಿ ಕನ್ನಡ ನಾಡು ಕಂಡ ಒಬ್ಬ ಅಪರೂಪದ ಶ್ರೇಷ್ಠ ಸಂಶೋಧಕ ಕನ್ನಡದ ಕೊಲಂಬಸ್ ಚಿಂತಕ ಪ್ರಗತಿಪರ ಹೋರಾಟಗಾರರು. ಅವರೆಂದಿಗೂ ವಾರ್ತೆ, ಕೀರ್ತಿ, ಪ್ರಶಸ್ತಿ ಬೆನ್ನು ಹತ್ತಿದವರಲ್ಲ. ಡಾ.ಎಂ.ಎಂ.ಕಲಬುರ್ಗಿ ಅವರು ಇದ್ದಾಗ ಕೆಲವರು ಅವರಿಗೆ ಸಿಗಬೇಕಾದ ಬಸವ ಪ್ರಶಸ್ತಿಯನ್ನು ಎರಡು ಸಲ ತಪ್ಪಿಸಿ ಮತ್ತು ತಮಗೆ ಬೇಕಾದವರಿಗೆ ಕೊಡಿಸಿದರು.

ನಾನು ಹಲವು ಕಾರಣಗಳಿಗಾಗಿ "ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಪುರಸ್ಕಾರ" ಇಡುವುದನ್ನು ವಿರೋಧಿಸುತ್ತೇನೆ.

ಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆಕಲಬುರ್ಗಿ ಹತ್ಯೆ: ಗೌರಿ ಕೊಲೆಯ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

1 ) ಡಾ ಎಂ ಎಂ ಕಲಬುರ್ಗಿ ಅವರು ಕಾರ್ಯದ ಮೇಲೆ ಕಾಯಕದ ಮೇಲೆ ನಂಬಿಕೆ ಇಟ್ಟು ಸತ್ಯ ಶುದ್ಧವಾದ ಹಸ್ತದಿಂದ ತಮ್ಮ ಅನೇಕ ಯೋಜನೆಗಳನ್ನು ಮುಗಿಸಿದವರು.

2 ) ತಮಗೆ ದೊರೆತ ಪಂಪ ಪ್ರಶಸ್ತಿಯ ಹಣವನ್ನು ಅಣ್ಣಿಗೇರಿ ಪಂಪ ಪ್ರತಿಷ್ಟಾನಕ್ಕೆ ಅದರ ಅಭಿವೃದ್ಧಿಗೆ ಮರಳಿ ಕೊಟ್ಟವರು. ಎಂದೂ ಹಣದ ಹಿಂದೆ ಬಿದ್ದವರಲ್ಲ ಅಪ್ಪಟ ಪ್ರಾಮಾಣಿಕತನವನ್ನು ಹೊಂದಿದ್ದರು.ಅಂಬಲಿ ಕಂಬಳಿ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ ಎಂದೆನ್ನುವ ಮನೋಭಾವದರು .

Do not misuse use MM Kalburgis name

3 ) ಡಾ ಎಂ ಎಂ ಕಲಬುರ್ಗಿ ಗುರುಗಳು ಇರುವಾಗಲೇ ಗದುಗಿನ ತೋಂಟದ ಮಠದ ಡಾ ಸಿದ್ಧಲಿಂಗ ಸ್ವಾಮಿಗಳು ಡಾ ಕಲಬುರ್ಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಇಡುವುದಾಗಿ ಮುಂದೆ ಬಂದಾಗ ಅದನ್ನು ಸಾರಾ ಸಗಟಾಗಿ ತಳ್ಳಿ ಹಾಕಿದವರು.ತಮ್ಮ ಜೀವನುದ್ದಕ್ಕೂ ಕನ್ನಡ ಮತ್ತು ಬಸವಣ್ಣನವರ ಕಾರ್ಯ ಮಾಡಿದ ಮೇರು ವ್ಯಕ್ತಿ.

4 ) ಮಠೀಯ ವ್ಯವಸ್ಥೆಯ ವಿರುದ್ಧ ಮತ್ತು ಅಲ್ಲಿನ ಅವ್ಯವಹಾರಗಳ ವಿರುದ್ಧ ನಿರಂತರ ಹೋರಾಟ ನಡೆಸಿದ ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯು ಕೂಡ ಇಂತಹ ಸಂಪ್ರದಾಯಿ ವ್ಯವಸ್ಥೆಯೇ ಮಾಡಿರುವದರಿಂದ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಇಡುವುದು ಸರಿಯಲ್ಲ.

ಜೈಲಿನಲ್ಲಿಯೇ ಎಂ.ಎಂ.ಕಲಬುರ್ಗಿ ಹಂತಕರ ವಿಚಾರಣೆ ಜೈಲಿನಲ್ಲಿಯೇ ಎಂ.ಎಂ.ಕಲಬುರ್ಗಿ ಹಂತಕರ ವಿಚಾರಣೆ

5 ) ಇತ್ತೀಚಿಗೆ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಬಸವ ಶ್ರೀ ಪ್ರಶಸ್ತಿ ಘೋಷಿಸಿದ ಚಿತ್ರದುರ್ಗ ಮಠದ ಡಾ ಮುರುಘಾ ಶರಣರು ದೊಡ್ಡ ಮೊತ್ತದ ಲಕ್ಷಾಂತರ ರೂಪಾಯಿಯ ಮೊತ್ತದ ಚೆಕ್ ಒಂದನ್ನು ಡಾ ಎಂ ಎಂ ಕಲಬುರ್ಗಿ ಅವರ ಭಾವ ಚಿತ್ರದ ಮುಂದೆ ಇಟ್ಟು ಪೂಜೆ ಮಾಡಿ ಹಣವನ್ನು ತಮ್ಮ ಮಠದ ಲೆಕ್ಕಕೆ ಹಾಕಿಕೊಂಡರು.ಡಾ ಎಂ ಎಂ ಕಲಬುರ್ಗಿ ಅವರು ಯಾವುದೇ ಫಲಾಫೇಕ್ಷೆಯಿಲ್ಲದೆ ಚಿತ್ರದುರ್ಗ ಮಠದ ಸ್ವಾಮಿಗಳ ಬೆಳ್ಳಿ ಮಹೋತ್ಸವಕ್ಕೆ ಕೊನೆಯ ಉಸಿರಿನವರೆಗೂ ದುಡಿದರು.

6 ) ಡಾ ಎಂ ಎಂ ಕಲಬುರ್ಗಿ ಅವರು ಕಠಿಣವಾದ ಸಂಕೀರ್ಣ ಸಂಶೋಧನೆಯನ್ನು ಅತ್ಯಂತ ಸುಲಲಿತವಾದ ಸರಳ ಬಿಡಿ ಬಿಡಿ ಲೇಖನಗಳಲ್ಲಿ ಇಟ್ಟು ನಮ್ಮಂತಹ ಅನೇಕ ಓದುಗರನ್ನು ಅಧ್ಯಯನಕಾರರನ್ನು ಬೆಳೆಸಿದರು. ಇಂದು ಅಷ್ಟೊಂದು ಶುದ್ಧ ಪ್ರಮಾಣದ ಸಂಶೋಧನೆ ನಡೆಯದಿರುವುದು ಋರಂತದ ಸಂಗತಿಯಾಗಿದೆ.

Do not misuse use MM Kalburgis name

7 ) ಮಠಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಘನತೆ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಡಾ ಎಂ ಎಂ ಕಲಬುರ್ಗಿ ಅಂತವರ ಹೆಸರಿನಲ್ಲಿ ಪ್ರಶಸ್ತಿ ಇಡುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಗೌರಿ ಲಂಕೇಶ ಹತ್ಯೆಯ ತನಿಖೆ ತೀವ್ರವಾಯಿತು ಆದರೆ ಡಾ ಎಂ ಎಂ ಕಲಬುರ್ಗಿ ಅವರ ಹತ್ತ್ಯೆಯ ಬಗ್ಗೆ ಯಾವೊಬ್ಬ ಸ್ವಾಮೀಜಿ ಅಕ್ಕ ಮಾತೆಯರು ಚಕಾರ ಶಬ್ದವನ್ನು ಎತ್ತಿಲ್ಲ.

ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಹಿಂದಿನ ಮುಖ್ಯ ಮಂತ್ರಿ ಪ್ರತಿಸ್ಥಾನಕ್ಕೆಂದು ಎರಡು ಕೋಟಿ ಹಣ ಮಂಜೂರು ಮಾಡಿತ್ತು .ಅಂದು ಧಾರವಾಡದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅನೇಕ ಸಾಹಿತಿಗಳು ಮುಖ್ಯ ಮಂತ್ರಿ ಅವರಿಗೆ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ವಾಗ್ದಾನ ಮಾಡಿದ ಎರಡು ಕೋಟಿ ಹಣದ ಬಗ್ಗೆ ಕೇಳಲಾಯಿತ್ತಾದರೂ ಇಲ್ಲಿಯವರೆಗೂ ಯಾವ ಸ್ಪಷ್ಟ ನಿರ್ಧಾರವಿಲ್ಲ.ಡಾ ಬೇಂದ್ರೆ ಬಸವರಾಜ ಕಟ್ಟಿಮನಿ ಪ್ರತಿಷ್ಟಾನ ಮಾಡಿ ಅವರ ಕೃತಿಗಳನ್ನು ನಿರಂತರವಾಗಿ ಜನರಿಗೆ ಪರಿಚಯಿಸುವ ಹೆಮ್ಮೆಯ ಕಾರ್ಯ ಮಾಡಿದ ಡಾ ಎಂಎಂ ಕಲಬುರ್ಗಿ ಅವರ ಹೆಸರಿನಲ್ಲಿ ಒಂದು ಮಠವು ತಮ್ಮ ಮಠದ ಭಕ್ತ ಶ್ರೀಮಂತ ಉದ್ಯಮಿ ಕೊಡುವ 25000 ಹಣವನ್ನು ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಎಂದು ಘೋಷಿ ಯಾವುದೇ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಮಾನ್ಯತೆ ಇರದ ಇಂತಹ ಪ್ರಶಸ್ತಿಗಳು ತಮಗೆ ಬೇಕಾದವರನ್ನು ಓಲೈಸಲು ಡಾ ಎಂ ಎಂ ಕಲಬುರ್ಗಿ ಅವರ ಹೆಸರು ಬಳಸ ಬೇಕೇ ಎಂತಹ ನಾಚಿಕೆಗೆಡುತನ.? ಮಠಗಳಿಗೆ ನಿಜವಾಗಿ ಡಾ ಎಂ ಎಂ ಕಲಬುರ್ಗಿ ಅವರ ಬಗ್ಗೆ ಗೌರವ ಪ್ರೀತಿ ಇದ್ದರೆ ಸರಕಾರವು ಮಾಡಬಯಸಿದ ಪ್ರತಿಷ್ಟಾನ ಕೈಗೆತ್ತಿಕೊಳ್ಳಲಿ ಮತ್ತು ಅವರ ಕೃತಿಗಳನ್ನು ಮರು ಮುದ್ರಣ ಮಾಡಲಿ.

ಚಿಂತಕ ಕಲಬುರ್ಗಿ ಕೊಂದದ್ದು ಹುಬ್ಬಳ್ಳಿಯ ಗಣೇಶ ವಿಸ್ಕಿನ್?ಚಿಂತಕ ಕಲಬುರ್ಗಿ ಕೊಂದದ್ದು ಹುಬ್ಬಳ್ಳಿಯ ಗಣೇಶ ವಿಸ್ಕಿನ್?

8 ) ಡಾ ಯು ಆರ್ ಅನಂತ ಮೂರ್ತಿ ಅವರಿಗೆ ಸರಕಾರವು ಕೊಡಮಾಡಿದ ಬಸವ ಪ್ರಶಸ್ತಿ ದೊರೆತಾಗ ಅದನ್ನು ತಾತ್ವಿಕವಾಗಿ ವಿರೋಧಿಸಿದ ಡಾ ಎಂ ಎಂ ಕಲಬುರ್ಗಿ ಅವರನ್ನು ಪತ್ರಕರ್ತರು ಸಾಹಿತಿಗಳು ಅವರ ವಿದ್ಯಾರ್ಥಿ ಬಳಗವೂ ಸೇರಿ ಟೀಕಿಸಿತು. ಅಷ್ಟೇ ಅಲ್ಲ ಮುಂದೆ ಅವರ ಹತ್ಯೆಗೂ ಕಾರಣವಾಯಿತು. ಅಂದು ಡಾ ಎಂ ಎಂ ಕಲಬುರ್ಗಿ ಅವರನ್ನು ಒಬ್ಬ ಜಾತಿವಾದಿ ಅವರಿಗೆ ಇಂಗ್ಲಿಷ್ ಸಂಸ್ಕೃತ ಬರುವದಿಲ್ಲ ಎಂದೆಲ್ಲ ಟೀಕೆ ಮಾಡಿದವರು ಇಂದು ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನೋವಿನ ಸಂಗತಿಯಾಗಿದೆ.

Do not misuse use MM Kalburgis name

9 ) ನೇರ ನುಡಿಯ ಡಾ ಎಂ ಎಂ ಕಲಬುರ್ಗಿ ಅವರನ್ನು ಕನ್ನಡಿಗರು ಅದರಲ್ಲೂಧಾರವಾಡದ ಅವರೇ ಬೆಳಿಸಿದ ಕೆಲ ಪತ್ರಕರ್ತರು ಸಾಹಿತಿಗಳು ಸಂಶೋಧಕರು ಅವರನ್ನು ಮಾನಸಿಕವಾಗಿ ಹಿಂಸಿಸಿದರು.ಅವರಲ್ಲಿ ಕಲಬುರ್ಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಡಾ ಎಚ ಮಹೇಶ್ವರಯ್ಯ ಒಬ್ಬರು ಅವರಂತೆ ಇನ್ನು ಅನೇಕರು ಧಾರವಾಡದಲ್ಲಿ ಬೆಂಗಳೂರಿನಲ್ಲಿದ್ದಾರೆ.

ಭಾಲ್ಕಿ ಮಠವು ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನು ಪ್ರಕಟಗೊಳಿಸಿ ಮೊದಲು ಡಾ ವೀರಣ್ಣ ರಾಜೂರ ನಂತರ ಮಹಾರಾಷ್ಟ್ರದ ಸಂಶೋಧಕರಿಗೆ ಕೊಟ್ಟಿತು. ಈ ಸಲ ಡಾ ಎಚ ಮಹೇಶ್ವರಯ್ಯ ಅವರಿಗೆ ನೀಡಿತ್ತು ಇದೊಂದು ತರಾತುರಿಯ ನಿರ್ಧಾರ ಸಾಕಷ್ಟು ಪ್ರತಿಭಟನೆಗೆ ಭಯ ಪಟ್ಟು ಡಾ ಬಸವಲಿಂಗ ಪಟ್ಟದ್ದೇವರು ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನು ಮುಂದೂಡಿದರು. ಅಷ್ಟು ಸಾಕಾಗಿತ್ತು .

10 ) ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯ ಮಾನದಂಡವೇನು ?ಇದು ಸಂಶೋಧನೆಗೋ ಅಥವಾ ಕೇವಲ ಲಿಂಗಾಯತರಿಗೋ ಅಥವಾ ಬಸವ ತತ್ವ ಪ್ರಸಾರ ಮಾಡುವವರಿಗೂ ಕೊಡಬಹುದೇ ?ಎಂಬ ಅಂಶಗಳು ಸ್ಪಷ್ಟವಾಗಿಲ್ಲ . ಪ್ರಶಸ್ತಿ ಮುಂದೆ ಹಾಕಿದ ಬೆನ್ನಲ್ಲೇ ಪತ್ರಿಕಾ ಸಭೆ ನಡೆಸಿ ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನುಲಿಂಗಾಯತ ಚಳುವಳಿಯ ಮಹಾ ದಂಡ ನಾಯಕ ಡಾ ಎಸ ಎಂ ಜಾಮದಾರ ಅವರಿಗೆ ನೀಡಿದ್ದು ಇನ್ನು ದೊಡ್ಡ ತಪ್ಪು ( ವ್ಯಕ್ತಿಗತವಾಗಿ ಡಾ ಶಿವಾನಂದ ಜಾಮದಾರ ಅವರ ಬಗ್ಗೆ ನನಗೆ ಗೌರವವಿದೆ) ಅವರ ಕಾರ್ಯ ಯೋಜನೆ ಹೋರಾಟ ಅಪ್ರತಿಮ. ಯಾವುದೇ ಇನ್ನಿತರ ಪ್ರಶಸ್ತಿಗೆ ಅವರು ಭಾಜನರು .ಆದರೆ ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಇದು ಡಾ ಕಲಬುರ್ಗಿ ಅವರ ಸಂಶೋಧನಾ ಕಾರ್ಯ ವೈಖರಿ ಯುವ ಸಂಶೋಧಕರಿಗೆ ಸ್ಪೂರ್ತಿಯಾಗಲು ಅಥವಾ ಸಂಶೋಧನಾ ಕ್ಷೇತ್ರದಲ್ಲಿ ದುಡಿದ ಹಿರಿಯ ಸಂಶೋಧಕರಿಗೆ ನೀಡಬೇಕಾಗಿತ್ತು .

ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!ಎಂ.ಎಂ.ಕಲಬುರ್ಗಿ ಕೊಂದವರೇ ಗೌರಿ ಲಂಕೇಶ್ ಹತ್ಯೆ ಮಾಡಿದ್ದು!

11 ) ಡಾ ಎಂ ಎಂ ಕಲಬುರ್ಗಿ ಅವರ ಬಗ್ಗೆ ಗೌರವ ಪ್ರೀತಿ ಇರುವುದರ ಬಗ್ಗೆ ಯಾರು ಪ್ರಮಾಣ ಪತ್ರ ನೀಡಬೇಕು ? ಯಾಕಂದರೆ ಉತ್ತರ ಕರ್ನಾಟಕದ ಹೆಸರಾಂತ ಮಠವೊಂದು ಧಾರವಾಡದ ಸಂಶೋಧಕ ಪತ್ರ ಕರ್ತರಿಂದ ಡಾ ಎಂ ಎಂ ಕಲಬುರ್ಗಿ ಅವರ ಮೇಲೆ ನಿರಂತರ ದಾಳಿ ಮಾಡುತ್ತಾ ಅವರ ಬೆನ್ನ ಹಿಂದೆ ನಿಂತು ಡಾ ಎಂ ಎಂ ಕಲಬುರ್ಗಿ ಅವರ ಸಣ್ಣ ಪುಟ್ಟ ತಪ್ಪುಗಳನ್ನು ಭೂತ ಕನ್ನಡಿಯಲಿ ಹಿಡಿದು ಅವರ ಹತ್ಯೆಗೂ ಕಾರಣವಾಗಲು ಈ ವ್ಯವಸ್ಥೆಯೇ ಕಾರಣ ಹೀಗಾಗಿ ಅಂತಹ ಒಬ್ಬ ಶ್ರೇಷ್ಠ ಮಟ್ಟದ ದೊಡ್ಡ ಸಂಶೋಧಕರ ಹೆಸರಿನಲ್ಲಿ ತಮ್ಮ ಪ್ರತಿಷ್ಠೆಗೆ ಡಾ ಎಂ ಎಎಂ ಕಲಬುರ್ಗಿ ಅವರ ಹೆಸರನ್ನು ಬಳಸುವದನ್ನು ನಾನು ಸಂಪೂರ್ಣ ವಿರೋಧಿಸುತ್ತೇನೆ.

12 ) ಕೆಲ ತಿಂಗಳ ಹಿಂದೆ ಒಬ್ಬ ಜವಾಬ್ದಾರಿ ನಿವೃತ್ತ ಅಧಿಕಾರಿಯೊಬ್ಬರು ಡಾ ಕಲಬುರ್ಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರು. ಆಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಅವರಿಗೆ ಹಾಗೆ ಮಾತನಾಡದಿರಲು ವಿನಂತಿ ಮತ್ತು ಎಚ್ಚರಿಕೆ ಮೇಲ್ ಮಾಡಿದೆನು.ಡಾ ಎಂ ಎಂ ಕಲಬುರ್ಗಿ ಅವರನ್ನು ಹೀನಾಯವಾಗಿ ಟೀಕಿಸಿದ ಅನೇಕರು ಈಗಲೂ ಅನೇಕ ಸಂಘ ಸಂಸ್ಥೆ ಮಠಗಳಲ್ಲಿ ಬಸವ ಸಮಿತಿಯಲ್ಲಿ ರಾರಾಜಿಸುತ್ತಿದ್ದಾರೆ.

ಗೌರಿ-ಕಲ್ಬುರ್ಗಿ ಹತ್ಯೆಗೆ ಒಂದೇ ಪಿಸ್ತೂಲು ಬಳಕೆ, ಎಸ್ ಐಟಿಯಿಂದ ಖಾತ್ರಿ ಗೌರಿ-ಕಲ್ಬುರ್ಗಿ ಹತ್ಯೆಗೆ ಒಂದೇ ಪಿಸ್ತೂಲು ಬಳಕೆ, ಎಸ್ ಐಟಿಯಿಂದ ಖಾತ್ರಿ

13 ) ಡಾ ಎಂ ಎಂ ಕಲಬುರ್ಗಿ ಅವರು ಹತ್ಯೆಯಾಗುವ ಎಂಟು ತಿಂಗಳು ಮೊದಲು ಬೀದರಿನ ಬಸವ ಸೇವಾ ಪ್ರತಿಷ್ಟಾನದ ಅಕ್ಕ ಅನ್ನಪೂರ್ಣ ಅವರು ಡಾ ಎಂ ಎಂ ಕಲಬುರ್ಗಿ ಅವರ ಮನೆಗೆ ಹೋಗಿ ತಮ್ಮ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೊಡಮಾಡುವ ಗುರುಬಸವ ಕಾರುಣ್ಯ ಪ್ರಶಸ್ತಿಯನ್ನು ಸುಮಾರು 50000 ಐವತ್ತು ಸಾವಿರ ರೂಪಾಯಿ ಹಣ ಕೊಡುವದಾಗಿ ವ್ಯಕ್ತಿಗತವಾಗಿ ಹೇಳಿದರೂ ಒಪ್ಪದ ಕನ್ನಡ ಶ್ರೇಷ್ಠ ಮಟ್ಟದ ಮಾನವತಾವಾದಿ ಡಾ ಎಂ ಎಂ ಕಲಬುರ್ಗಿ ಗುರುಗಳು.ಅಷ್ಟೇ ಅಲ್ಲ ಭಾಗವಹಿಸಿದ ಕಾರ್ಯಕ್ರಮದಲ್ಲಿ ಕೊಟ್ಟ ಪ್ರವಾಸಿ ಭತ್ಯೆಯನ್ನು ಎಷ್ಟು ಖರ್ಚು ಆಗಿತ್ತೋ ಅಷ್ಟು ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ಮರುಕಳಿಸಿದ್ದಾರೆ.

ಭಾಲ್ಕಿ ಮಠದವರು ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಇಟ್ಟಿರುವ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಗೆ ಒಂದು ಮಾನದಂಡವಿಲ್ಲ ಸ್ಥಾಯಿ ನಿಧಿಯಿಲ್ಲ ತಜ್ಞರ ಅಭಿಪ್ರಾಯಗಳಿಲ್ಲ ಮತ್ತು ರಾಷ್ಟ್ರೀಯ ಪುರಸ್ಕಾರ ಸಮಿತಿಯ ಮಾನ್ಯತೆ ಇಲ್ಲ , ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಕೊಡುವುದು ಬೇಡವಾದಾಗ ಅವರನ್ನು ಆಯ್ಕೆಯಿಂದ ಬಿಡುವುದು ಇನ್ನೊಬ್ಬರನ್ನು ಆಯ್ಕೆ ಮಾಡುವುದು ಇಂತಹ ಅವಘಡಗಳು ಮುಂದೆಯೂ ಬರುವ ಹಿನ್ನೆಲೆಯಲ್ಲಿ ವಿವಾದಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತವೆ .ಸಾಮಾಜಿಕ ಸ್ವಾಸ್ಥ್ಯವೂ ಹಾಳಾಗುತ್ತದೆ .ಕಾರಣ ಡಾ ಎಂ ಎಂ ಕಲಬುರ್ಗಿ ಅವರ ಹೆಸರನ್ನು ಯಾವೊಬ್ಬ ವ್ಯಕ್ತಿ ಸಂಸ್ಥೆ ಮಠಗಳು ಬಳಸಿಕೊಳ್ಳದಿರಲಿ ಎಂದು ವಿನಂತಿಸುತ್ತೇನೆ. ನನ್ನ ಈ ಲೇಖನದಿಂದ ಹಲವರ ಮನಸ್ಸಿಗೆ ನೋವಾದರೂ ಸಹಿತ ತಾತ್ವಿಕವಾಗಿ ಇಂತಹ ಆಡಂಬರವನ್ನು ನಾನು ವಿರೋಧಿಸುತ್ತೇನೆ.

ಡಾ ಬಸವಲಿಂಗ ಪಟ್ಟದೇವರು ತಿಳಿದವರು ಜ್ಞಾನಿಗಳು ಅನುಭವಿಗಳು ಇಂತಹ ಅವಘಡಗಳು ಮುಂದೆ ನಡೆಯದಂತೆ ಮತ್ತು ಲೇಖನದಲ್ಲಿ ನಾನು ಸೂಚಿಸಿದ ಹಲವು ಅಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿ . ಡಾ ಎಂ ಎಂ ಕಲಬುರ್ಗಿ ಅವರೊಬ್ಬ ಸತ್ಯದ ಪ್ರತಿಪಾದಕರು ಅವರ ಸಮಾಧಿಯ ಮೇಲೆ ನಾವು ಸುಳ್ಳಿನ ಮಹಲು ಕಟ್ಟುವುದು ಬೇಡಾ.

English summary
Ideologist MM Kalburgi is a non political guy who believed in working not any name and fame. but now people trying to use misuse his name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X