ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೊಳ್ಳೆಯಿಂದ ಕೊರೊನಾವೈರಸ್ ಹರಡುತ್ತಾ? ಉತ್ತರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜುಲೈ 19: ಸೊಳ್ಳೆ, ನೊಣ, ಇನ್ನಿತರ ಕೀಟಗಳಿಂದ ಮಹಾಮಾರಿ ಕೊರೊನಾವೈರಸ್ ಹರಡುವ ಸಾಧ್ಯತೆಯಿದೆ ಎಂಬ ಆತಂಕಕ್ಕೆ ವಿಜ್ಞಾನಿಗಳಿಂದ ಇದೀಗ ಸ್ಪಷ್ಟನೆ ಸಿಕ್ಕಿದೆ.

Recommended Video

Andre Russell wasn't unhappy with me : Dinesh Karthik | Oneindia Kannada

ಮುಖ್ಯವಾಗಿ ಮಲೇರಿಯಾ, ಡೆಂಗ್ಯೂನಂಥ ಮಹಾಮಾರಿಯಂತೆ ಕೊರೊನಾವೈರಾಣುವನ್ನು ಹೊತ್ತ ಸೊಳ್ಳೆಗಳು ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬ ವ್ಯಕಿಗೆ ಸೋಂಕು ಹರಡಿಸಬಲ್ಲುದೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದು, ಇತ್ತೀಚಿನ ಅಧ್ಯಯನದಿಂದಗೆ ಸೊಳ್ಳೆಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದು ದೃಢಪಟ್ಟಿದೆ.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

ಸೈಂಟಿಫಿಕ್ ರಿಪೋರ್ಟ್ ಜರ್ನಲ್ ನಲ್ಲಿ ಇತ್ತೀಚಿನ ಪ್ರಯೋಗದ ವಿವರ ಪ್ರಕಟವಾಗಿದ್ದು, ಕೊವಿಡ್ 19ರೋಗ ಹರಡುವ ಸಾರ್ಸ್ CoV-2ವೈರಸ್ ಅನ್ನು ಸೊಳ್ಳೆಗಳು ಹೊತ್ತು ಸಾಗಲ್ಲ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಅನೇಕ ಬಾರಿ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಸೊಳ್ಳೆಗಳು ವೈರಸ್ ಹರಡಲು ಎಂದು ಹೇಳಿದೆ.

ಸೈಂಟಿಫಿಕ್ ರಿಪೋರ್ಟ್ ಜರ್ನಲ್ ನಲ್ಲಿ ಪ್ರಕಟ

ಸೈಂಟಿಫಿಕ್ ರಿಪೋರ್ಟ್ ಜರ್ನಲ್ ನಲ್ಲಿ ಪ್ರಕಟ

ಸೈಂಟಿಫಿಕ್ ರಿಪೋರ್ಟ್ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನೆ ಲೇಖನದಂತೆ ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡಲು ಸಾಧ್ಯವಿಲ್ಲವೆಂದು ತಿಳಿಸಲಾಗಿದೆ. ಈಡೀಸ್ ಈಜಿಪ್ಟಿ, ಈಡೀಸ್ ಅಲ್ಬೋಪಿಕ್ಟುಸ್, ಕ್ಯಲೆಕ್ಸ್ ಕ್ವಿನ್ ಕ್ವೆಫಾಸ್ಕಿಟಸ್ ಸೊಳ್ಳೆಗಳ ಪ್ರಭೇದಗಳ ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಕೊರೊನಾ ಸೋಂಕು ಉಗಮ ಸ್ಥಾನ ಚೀನಾದಲ್ಲಿ ಈ ಸೊಳ್ಳೆಗಳ ಪ್ರಭೇದಗಳಿವೆ. ಅಮೆರಿಕಾದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ಸಂಶೋಧಕ ಸ್ಟೀಫನ್ ಹಿಗ್ಸ್ ನೀಡಿರುವ ಮಾಹಿತಿಯಂತೆ ಸೊಳ್ಳೆಗಳಿಂದ ಸೋಂಕು ಹರಡುವ ಸಾಧ್ಯತೆ ಇಲ್ಲ ಎನ್ನುವುದು ಖಚಿತವಾಗಿದೆ.

ಎಲ್ಲಾ ಪ್ರಮುಖ ಸೊಳ್ಳೆಗಳ ಬಗ್ಗೆ ಅಧ್ಯಯನ

ಎಲ್ಲಾ ಪ್ರಮುಖ ಸೊಳ್ಳೆಗಳ ಬಗ್ಗೆ ಅಧ್ಯಯನ

ಡೆಂಗ್ಯೂ ವೈರಸ್ ಈಡೀಸ್ Albopictus ಸೊಳ್ಳೆ ಪ್ರಧಾನವಾಗಿ ಮತ್ತು ಸೋಂಕಿತ ಏಡಿಸ್ ಏಜಿಪ್ಟೈ( Aedes aegypti), ಕ್ಯುಲೆಕ್ಸ್ ಕ್ವಿನ್ ಕ್ವೆಫಾಸ್ಕಿಟಸ್ ಸೊಳ್ಳೆಗಳ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಇದು Arbovirus ಎಂಬ ವೈರಸಿನ ಕುಟುಂಬಕ್ಕೆ ಸೇರಿದೆ. ಇದರಲ್ಲಿ 4 ವಿಧಗಳಿದ್ದು, ಎಲ್ಲವೂ ಭಾರತದಲ್ಲಿ ಪ್ರತ್ಯೇಕಿಸಲಾಗಿದೆ. ಈ ಎಲ್ಲಾ ಪ್ರಬೇಧಗಳಿಂದ ಹರಡುವ ಸೋಂಕುಗಳ ಸ್ಯಾಂಪಲ್ ಪಡೆದು ಪರೀಕ್ಷಿಸಲಾಗಿದ್ದು, ಸಾರ್ಸ್ ಕೋವಿ-2 ಸೋಂಕನ್ನು ಹರಡಲು ಸಾಧ್ಯವಿಲ್ಲ, ವೈರಸ್ ಪ್ರತಿಸೃಷ್ಟಿ ಸಾಧ್ಯವಾಗಿಲ್ಲ ಎಂದು ಕಾನ್ಸಾಸ್ ವಿವಿಯ ಸ್ಟೀಫನ್ ಹಿಗ್ಸ್ ಹೇಳಿದ್ದಾರೆ.

ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

ಕೋವಿಡ್ 19 ರೋಗ, ಲಕ್ಷಣಗಳು

ಕೋವಿಡ್ 19 ರೋಗ, ಲಕ್ಷಣಗಳು

ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು. ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

ರೋಗವಿರುವವರು ಕೆಮ್ಮಿದರೆ, ಕೈಕುಲುಕುವಿಕೆ, ಯಾವುದೋ ವಸ್ತುವನ್ನು ಮುಟ್ಟಿ ಅಥವಾ ಪ್ರಾಣಿಗಳನ್ನು ಮುಟ್ಟಿ ಕೈತೊಳೆದುಕೊಳ್ಳದೆ ನಿಮ್ಮ ಮುಖ್ಯ, ಬಾಯಿಗಳನ್ನು ಮುಟ್ಟಿದಾಗಲೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ.

ಸೋಂಕಿತರ ಮಲದ ಮೇಲೆ ಕೂತ ನೊಣ

ಸೋಂಕಿತರ ಮಲದ ಮೇಲೆ ಕೂತ ನೊಣ

ವೈರಸ್‌ಗೆ ತುತ್ತಾಗಿರುವ ವ್ಯಕ್ತಿಯ ಕಫ ಇನ್ನಿತರೆ ಉಸಿರಾಟದ ಮಾದರಿಗಳನ್ನು ಪರೀಕ್ಷಿಸಿದಾಗ ಎಲ್ಲಕ್ಕಿಂತ ವ್ಯಕ್ತಿಯ ಮಲದಲ್ಲಿ ಈ ವೈರಸ್ ಹೆಚ್ಚು ಹೊತ್ತುಗಳ ಕಾಲ ಇರಲಿದೆ ಎನ್ನುವುದು ತಿಳಿದುಬಂದಿದೆ. ಕೊರೊನಾವೈರಸ್‌ನಿಂದ ವ್ಯಕ್ತಿ ಗುಣವಾದ ಬಳಿಕವೂ ಮಲದಲ್ಲಿ ಈ ವೈರಸ್ ಕಾಣಿಸಿಕೊಂಡಿದೆ.

ಆದರೆ ತಾಂತ್ರಿಕವಾಗಿ ನಾನು ಹೇಳುವುದಾದರೆ ಈ ವೈರಸ್ ನೊಣಗಳಿಂದ ಹರಡುವುದಿಲ್ಲ. ಅಷ್ಟೇ ಅಲ್ಲದೆ ಇದು ಸೊಳ್ಳೆಗಳಿಂದ ಕೂಡ ಬರುವಂತಹ ಕಾಯಿಲೆ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

English summary
Scientists have confirmed for the first time that the novel coronavirus behind the COVID-19 pandemic cannot be transmitted to people by mosquitoes, a finding that adds evidence to WHO's claim that the disease is not mosquito-borne.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X