ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ 2021: ತಡರಾತ್ರಿ ಆಹಾರ ಸೇವಿಸುವ ಮುನ್ನ ಗಮನಿಸಿ

|
Google Oneindia Kannada News

ಇಂದು ಎಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬ ದೀಪಾವಳಿಗೆ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಸಂತೋಷದ ಬೆಳಕನ್ನು ಮೂಡಿಸುವ ಶಕ್ತಿ ಇದೆ. ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸಿ ಅತ್ಯುತ್ತಮ ಜೀವನವನ್ನು ರೂಪಿಸುವ ಬೆಳಕನ್ನು ಮೂಡಿಸುತ್ತದೆ.

ಜೊತೆಗೆ ವಿಧವಿಧವಾದ ಖಾದ್ಯಗಳೊಂದಿಗೆ ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡುವ ದಿನ ಇದು. ಹೀಗಾಗಿ ಈ ದಿನಕ್ಕಾಗಿ ಬಹುತೇಕರು ಕಾತುರದಿಂದ ಕಾಯುತ್ತಾರೆ. ದೀಪದಿಂದ ದೀಪ ಬೆಳಗಿಸುತ್ತಾ, ನಾನಾ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಆದರೆ ನೀವು ದೀಪಾವಳಿಯಂದು ತಡರಾತ್ರಿಯವರೆಗೂ ಊಟವನ್ನು ಸೇವಿಸಲು ಯೋಜಿಸುತ್ತಿದ್ದರೆ, ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು.

ಯಾಕೆಂದರೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಪೌಷ್ಟಿಕತಜ್ಞ ರುಜುತಾ ದಿವೇಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಯಾವ ಆಹಾರ ಸೇವೆನೆಯಲ್ಲಿ ಮಾಡುವ ತಪ್ಪುಗಳ ಬಗ್ಗೆ ವಿವಿರಿಸಿದ್ದಾರೆ. ಜೊತೆಗೆ ಇದು ಆರೋಗ್ಯಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.

ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದು ಬೇಡ

ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದು ಬೇಡ

ದೀಪಾವಳಿ ಹಬ್ಬಕ್ಕೆ ಮನೆಗಳಲ್ಲಿ ಸಿಹಿ ತಿನಿಸುಗಳನ್ನು ಮಾಡಲಾಗುತ್ತದೆ. ಅದರಲ್ಲೂ ವಿಧವಿಧವಾದ ಸಿಹಿ ಖಾದ್ಯಗಳನ್ನು ಮಾಡಿ ಮನಸ್ಪೂರ್ವಕವಾಗಿ ಸೇವಿಸುವ ರೂಢಿಯಿದೆ. ಎಂದಿಗಿಂತ ಸೇವಿಸುವ ಆಹಾರದಲ್ಲಿ ಇಂದು ಕೊಂಚ ಅಧಿಕವಾಗಿಯೇ ಇರುತ್ತದೆ. ಹೀಗಾಗಿ ಒಂದು ದಿನದ ಖಾದ್ಯಗಳನ್ನು ಯಥೇಚ್ಛವಾಗಿ ಸೇವಿಸಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದು ಬೇಡ ಎನ್ನುತ್ತಾರೆ ಪೌಷ್ಟಿಕತಜ್ಞ. ಯಾವುದೇ ಆಗಲಿ ಅತಿಯಾದರೆ ವಿಷವೇ ಎನ್ನುವ ಮಾತನ್ನು ಇಲ್ಲಿ ತಜ್ಞರು ಪ್ರತಿಪಾದಿಸಿದ್ದಾರೆ. ಹಾಗಾದ್ರೆ ಇಂದು ನಮ್ಮ ಆಹಾರ ಪದ್ಧತಿ ಹೇಗಿರಬೇಕು? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಏನೂ ತಿನ್ನದೇ ಇರುವುದು ಆರೋಗ್ಯಕ್ಕೆ ಹಾನಿಕಾರ

ಏನೂ ತಿನ್ನದೇ ಇರುವುದು ಆರೋಗ್ಯಕ್ಕೆ ಹಾನಿಕಾರ

ಕೆಲವರು ಈ ದಿನ ತಡರಾತ್ರಿ ಊಟ ಮಾಡಿದರೆ ದಪ್ಪಗಾಗಬಹುದು ಅಥವಾ ಜೀರ್ಣಕ್ರಿಯೆ ಕೆಡುತ್ತದೆ ಎಂದು ಭಾವಿಸಿ ಭಯಪಡುತ್ತಾರೆ. ಇನ್ನೂ ಹೆಚ್ಚಿನವರು ದೀಪಾವಳಿಯಂದು ಏನನ್ನೂ ತಿನ್ನುವುದನ್ನು ಮತ್ತು ಕುಡಿಯುವುದನ್ನು ತಪ್ಪಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಬ್ಬವನ್ನು ಪೂರ್ತಿಯಾಗಿ ಸವಿಯಲು ಸಾಧ್ಯವಾಗುತ್ತಿಲ್ಲ. ಆದರೆ ಹಬ್ಬದ ಸಮಯದಲ್ಲಿ ಅತೀಯಾಗಿ ತಿನ್ನುವುದು, ಏನೂ ತಿನ್ನದೇ ಇರುವುದು ಆರೋಗ್ಯಕ್ಕೆ ಹಾನಿಕಾರ. ಯಾವುದನ್ನು ತಿಂದರೆ? ಎಷ್ಟು ತಿಂದರೆ ಒಳ್ಳೆಯದು ಎನ್ನುವುದು ಅರ್ಥಮಾಡಿಕೊಳ್ಳಬೇಕು. ಕಡಿಮೆ ತಿನ್ನಬೇಕು ಎನ್ನುವ ನಿಯಮ ಪಾಲಿಸಿ ರಾತ್ರಿ ತಡರಾತ್ರಿಯವರೆಗೂ ಆಹಾರ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ.

ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗೆ ಬಲಿಯಾಗಬಹುದು

ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗೆ ಬಲಿಯಾಗಬಹುದು

ಪೌಷ್ಟಿಕತಜ್ಞ ರುಜುತಾ ದಿವೇಕರ್ ಅವರ ಪ್ರಕಾರ, ತಡರಾತ್ರಿಯ ಊಟಕ್ಕೆ ದಿನದ ಊಟವನ್ನು ಬಿಟ್ಟುಬಿಟ್ಟರೆ ಅಥವಾ ದಿನವಿಡೀ ದೈನಂದಿನ ಸೇವನೆಗಿಂತ ಕಡಿಮೆ ಸೇವಿಸುವುದನ್ನು ಮಾಡಬೇಡಿ. ಇದಕ್ಕೆ ಕಾರಣ ಹಗಲಿನಲ್ಲಿ ಕಡಿಮೆ ತಿಂದರೆ ಸ್ವಾಭಾವಿಕವಾಗಿ ರಾತ್ರಿ ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತೀರಿ. ದಿನದಲ್ಲಿ ಊಟವನ್ನು ಬಿಟ್ಟುಬಿಡುವುದರಿಂದ ಅತಿಯಾಗಿ ತಿನ್ನುವುದು ಆರೋಗ್ಯ ಸಮಸ್ಯೆಗೆ ಬಲಿಯಾಗಬಹುದು.

ಇದನ್ನು ಸಹ ಮಾಡಬೇಡಿ

ಇದನ್ನು ಸಹ ಮಾಡಬೇಡಿ

ಬೆಳಗ್ಗೆ ಹೆಚ್ಚು ವ್ಯಾಯಾಮ ಮಾಡಿ, ರಾತ್ರಿ ಏನು ತಿಂದರೂ ತೊಂದರೆಯಾಗದು ಎಂದು ಯೋಚಿಸುತ್ತಿದ್ದರೆ, ಇಂಥಹ ಯೋಚನೆ ಮಾಡಬೇಡಿ. ನೀವು ಅತಿಯಾಗಿ ತಿನ್ನುವ ಬಲಿಪಶುವೂ ಆಗಬಹುದು. ಅದೇ ಸಮಯದಲ್ಲಿ, ನೀವು ಆಮ್ಲೀಯತೆ ಮತ್ತು ಕಿರಿಕಿರಿಯನ್ನು ಅನುಭವಿಸಬಹುದು. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಹೊತ್ತು ಮಲಗುವುದರಿಂದ ಅತೀಯಾದ ಸೇವನೆ ಉತ್ತಮ ಅಭ್ಯಾಸವಲ್ಲ.

ಮೊಸರು ಮತ್ತು ಬಾಳೆಹಣ್ಣು ತಿನ್ನಿರಿ

ಮೊಸರು ಮತ್ತು ಬಾಳೆಹಣ್ಣು ತಿನ್ನಿರಿ

ತಡರಾತ್ರಿ ಊಟಕ್ಕೆ ಹೋಗುವ ಮುನ್ನ ಮೊಸರು ಮತ್ತು ಬಾಳೆಹಣ್ಣು ತಿನ್ನಿ. ಇದು ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ಎರಡೂ ವಸ್ತುಗಳು ಪ್ರಿಬಯಾಟಿಕ್ ಮತ್ತು ಪ್ರೋಬಯಾಟಿಕ್‌ಗಳ ಉತ್ತಮ ಸಂಯೋಜನೆಯಾಗಿದೆ. ಪೌಷ್ಟಿಕತಜ್ಞರ ಪ್ರಕಾರ, ಚಾಕೊಲೇಟ್‌ಗಳು, ಕುಕೀಗಳು ಅಥವಾ ಕೇಕ್‌ಗಳಂತಹ ತ್ವರಿತ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ. ಈ ದಿನ ನೀವು ಕೆಲವು ವಿಶೇಷ ಆಯ್ದ ಸಿಹಿತಿಂಡಿಗಳನ್ನು ಮಾತ್ರ ತಿನ್ನುವುದು ಉತ್ತಮ.

ಒಂದು ಅಥವಾ ಎರಡು ಪದಾರ್ಥಗಳನ್ನು ಆರಿಸಿ

ಒಂದು ಅಥವಾ ಎರಡು ಪದಾರ್ಥಗಳನ್ನು ಆರಿಸಿ

ಹಲವು ಆಯ್ಕೆಗಳಲ್ಲಿ ಕೇವಲ ಒಂದು ಅಥವಾ ಎರಡು ಪದಾರ್ಥಗಳನ್ನು ಆರಿಸಿ. ತಡರಾತ್ರಿಯ ಊಟಕ್ಕೆ ಒಂದು ಅಥವಾ ಎರಡು ಸ್ಟಾರ್ಟರ್‌ಗಳನ್ನು ಆರಿಸಿ. ನೀವು ಆಯ್ಕೆ ಮಾಡಲು ಹೆಚ್ಚಿನ ಭಕ್ಷ್ಯಗಳನ್ನು ಹೊಂದಿರುತ್ತೀರಿ, ಆದರೆ ಅವೆಲ್ಲವನ್ನೂ ತಿನ್ನುವ ಬದಲು, ಕೇವಲ ಒಂದು ಭಕ್ಷ್ಯವನ್ನು ಆಯ್ಕೆ ಮಾಡುವುದು ಉತ್ತಮ, ಹೆಚ್ಚೆಂದರೆ ನೀವು ಮೂರು ಪದಾರ್ಥಗಳನ್ನು ತಿನ್ನಬಹುದು. ಇದರಿಂದ ನಿಮಗೆ ಯಾವುದೇ ಹಾನಿಯಾಗುವುದಿಲ್ಲ.

Recommended Video

Dravid ಬಂದಿದ್ದಕ್ಕೆ Rohit Sharma ಫುಲ್ ಖುಷ್ | Oneindia Kannada
ತುಪ್ಪದಿಂದ ಪಾದಗಳನ್ನು ಮಸಾಜ್ ಮಾಡಿ

ತುಪ್ಪದಿಂದ ಪಾದಗಳನ್ನು ಮಸಾಜ್ ಮಾಡಿ

ರುಜುತಾ ದಿವೇಕರ್ ಅವರ ಪ್ರಕಾರ, ತಡರಾತ್ರಿಯ ಊಟದ ನಂತರ ಪಾದಗಳನ್ನು ತುಪ್ಪದಿಂದ ಮಸಾಜ್ ಮಾಡಬೇಕು. ಇದರಿಂದ ಗ್ಯಾಸ್ ಮತ್ತು ವಾಯು ಸಮಸ್ಯೆ ನಿವಾರಣೆಯಾಗಿ ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಸಹ ಒಳ್ಳೆಯದು.

English summary
If you are planning a late night dinner on Diwali, then you should avoid making some mistakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X