ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Green Peas Health Benefits: ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ಹಸಿ ಬಟಾಣಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ನವದೆಹಲಿ, ಜನವರಿ. 24: ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಾಗುವ ತರಕಾರಿಗಳಲ್ಲಿ ಹಸಿ ಬಟಾಣಿಯು ಒಂದು. ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಈ ದ್ವಿದಳ ಧಾನ್ಯವನ್ನು ಅನೇಕ ತಿನಿಸುಗಳಲ್ಲಿ ಸಹ ಪದಾರ್ಥವಾಗಿ ಬಳಸಲಾಗುತ್ತದೆ. ಆದರೆ, ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಚಳಿಗಾಲದ ಉದ್ದಕ್ಕೂ ಸಿಗುವ ಈ ದ್ವಿದಳ ಧಾನ್ಯ ಎ, ಬಿ, ಸಿ, ಇ ಮತ್ತು ಕೆ ಒಳಗೊಂಡಂತೆ ವಿವಿಧ ವಿಟಮಿನ್‌ಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ಈ ಬಟಾಣಿ ಕಾಳುಗಳು ಪೊಟ್ಯಾಸಿಯಮ್, ಫೈಬರ್ ಮತ್ತು ಸತುಗಳ ಉತ್ತಮ ಮೂಲವಾಗಿದೆ.

Chikkamagaluru utsav 2023: ಉತ್ತಮ ಆರೋಗ್ಯಕ್ಕೆ ಸಿರಿ ಧಾನ್ಯಗಳನ್ನು ಬಳಸಿ: ಸಿ.ಟಿ.ರವಿChikkamagaluru utsav 2023: ಉತ್ತಮ ಆರೋಗ್ಯಕ್ಕೆ ಸಿರಿ ಧಾನ್ಯಗಳನ್ನು ಬಳಸಿ: ಸಿ.ಟಿ.ರವಿ

ಹಸಿ ಬಟಾಣಿ ನಿಮ್ಮ ಆಹಾರದ ರುಚಿಯನ್ನು ಉತ್ತಮ ಮಾಡುವುದು ಮಾತ್ರವಲ್ಲ, ವಿವಿಧ ಪೋಷಕಾಂಶಗಳ ಖಜಾನೆಯಾಗಿದೆ. ಚಳಿಗಾಲದಲ್ಲಿ ಈ ಹಸಿ ಬಟಾಣಿ ತಿನ್ನುವುದರಿಂದ ಸಿಗುವ ಹಲವು ಆರೋಗ್ಯ ಪ್ರಯೋಜನಗಳನ್ನು ಪೌಷ್ಟಿಕಾಂಶ ತಜ್ಞರು ಹಂಚಿಕೊಂಡಿದ್ದಾರೆ.

Did you know Green peas Health Benefits, click here

*ಚಳಿಗಾಲದಲ್ಲಿ ಹಸಿ ಬಟಾಣಿಗಳ ನಾಲ್ಕು ಪ್ರಮುಖ ಆರೋಗ್ಯ ಪ್ರಯೋಜನಗಳು ಹೀಗಿವೆ*

*ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಸುತ್ತದೆ*

ಈ ಹಸಿ ಬಟಾಣಿಯು ತುಲನಾತ್ಮಕವಾಗಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುತ್ತವೆ. ಅಂದರೆ ಆಹಾರವನ್ನು ಸೇವಿಸಿದ ನಂತರ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟು ಬೇಗನೆ ಏರುತ್ತದೆ ಎಂಬುದರ ಅಳತೆಯಾಗಿದೆ. ಹಸಿ ಬಟಾಣಿ ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ.

*ಆರೋಗ್ಯಕರ ತ್ವಚೆ*

ಚಳಿಗಾಲದಲ್ಲಿ ತ್ವಚೆಯ ಸಮಸ್ಯೆ ಯಾರಿಗೆ ಇಲ್ಲ ಹೇಳಿ. ಈ ಹಸಿ ಬಟಾಣಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಫೋಲೇಟ್ (ಫೋಲಿಕ್ ಆಸಿಡ್) ಇದ್ದು, ಇದು ಆರೋಗ್ಯಕರ ತ್ವಚೆಯನ್ನು ಕಾಪಾಡುವ ಪೋಷಕಾಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿನ ಪೋಷಕಾಂಶಗಳು ಉರಿಯೂತ ಮತ್ತು ರಾಡಿಕಲ್ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Did you know Green peas Health Benefits, click here

*ಪ್ರೋಟೀನ್‌ನ ಅತ್ಯುತ್ತಮ ಮೂಲ*

ಹಸಿರು ಬಟಾಣಿ ಪ್ರೋಟೀನ್‌ನ ಅತ್ಯುತ್ತಮ ಸಸ್ಯ ಆಧಾರಿತ ಮೂಲಗಳಲ್ಲಿ ಒಂದಾಗಿದೆ. ಇದರಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್‌ ಆರೋಗ್ಯಕ್ಕೆ ಭಾರೀ ಉಪಯುಕ್ತವಾಗಿದೆ. ಸಸ್ಯಹಾರಿಯಾಗಿರುವವರಿಗೆ, ನಾನ್ ವೆಜ್ ತಿನ್ನದೆ ಇರುವವರಿಗೆ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಹಸಿ ಬಟಾಣಿ ಉತ್ತಮ ಆಹಾರ ಆಯ್ಕೆಯಾಗಿದೆ.

*ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ*

ಹಸಿ ಬಟಾಣಿಯಲ್ಲಿ ನಿಯಾಸಿನ್‌ನಲ್ಲಿ ಹೇರಳವಾಗಿದೆ. ಇದರಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ವಿಎಲ್‌ಡಿಎಲ್‌ (ಅತ್ಯಂತ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) ಕೊಲೆಸ್ಟ್ರಾಲ್‌ನ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೋಡಿ ಪಲಾವ್, ಪಲ್ಯಗಳಿಗೆ ಸಹ ಸಾಮಾಗ್ರಿಯಾಗಿ ಉಪಯೋಗವಾಗುವ ಹಸಿರು ಬಟಾಣಿ ಪೋಷಕಾಂಶಗಳ ಖಜಾನೆಯೇ ಆಗಿದೆ. ಚಳಿಗಾಲದಲ್ಲಿ ಕಡಿಮೆ ಬೆಲೆಗೆ, ಉತ್ತಮ ಗುಣಮಟ್ಟದಲ್ಲಿ ದೊರೆಯುವ ಈ ಕಾಳುಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

English summary
4 Incredibles Health advantages of green peas. green peas requently available throughout the winter. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X