• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ - ಕಿತ್ತೂರು - ಧಾರವಾಡ ಹೊಸ ರೈಲು ಮಾರ್ಗ ಏನಾಯ್ತು? ಇಲ್ಲಿದೆ ಮಾಹಿತಿ

|
Google Oneindia Kannada News

ಶೈಕ್ಷಣಿಕ ನಗರಿ ಧಾರವಾಡದಿಂದ ಬೆಳಗಾವಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಮತ್ತು ವೀರರಾಣಿ ಕಿತ್ತೂರಿನ ರಾಣಿ ಚೆನ್ನಮ್ಮನ ಊರಿನ ಮೂಲಕ ಹಾದುಹೋಗುವ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲ್ವೆ ಮಾರ್ಗ ಯೋಜನೆಗೆ ಕಾಮಗಾರಿ ಆರಂಭಿಸಲು ಹಾಗೂ ರೈತರ ಜಮೀನು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಶೀಘ್ರದಲ್ಲೇ ಈ ರೈಲು ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸರ್ಕಾರವು ಭರವಸೆ ನೀಡಿದೆ.

ಈ ಹೊಸ ರೈಲು ಮಾರ್ಗವು ಪೂರ್ಣಗೊಂಡ ನಂತರ ಎರಡು ದೊಡ್ಡ ನಗರಗಳ ನಡುವಿನ ಪ್ರಸ್ತುತ ರೈಲು ಮಾರ್ಗದಲ್ಲಿ ಮೂರು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾದ ಸಮಯಕ್ಕೆ ಹೋಲಿಸಿದರೆ ಬೆಳಗಾವಿ ಮತ್ತು ಧಾರವಾಡ ನಡುವಿನ ಪ್ರಯಾಣದ ಸಮಯ ಸುಮಾರು ಒಂದು ಗಂಟೆಗೆ ಕಡಿಮೆಯಾಲಿದೆ ಏಕೆಂದರೆ, ರೈಲುಗಳು ಇನ್ನು ಮುಂದೆ ಒಡಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಲೊಂಡಾ ಅಥವಾ ಖಾನಾಪೂರನಿಂದ ರೈಲು ಸಂಚರಿಸುವ ಅಗತ್ಯತೆಯೂ ಇರುವುದಿಲ್ಲ.

ರೈಲು, ರಸ್ತೆ ಸಾರಿಗೆಯಂತೆ ಬರುತ್ತಿದೆ ಜಲ ಸಾರಿಗೆ; 1900 ಕೋಟಿ ಯೋಜನೆ ರೈಲು, ರಸ್ತೆ ಸಾರಿಗೆಯಂತೆ ಬರುತ್ತಿದೆ ಜಲ ಸಾರಿಗೆ; 1900 ಕೋಟಿ ಯೋಜನೆ

ಇನ್ನು ನೂತನ ಮಾರ್ಗವಾದ ಬೆಳಗಾವಿ - ಕಿತ್ತೂರು - ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಧಾರವಾಡ ತಾಲ್ಲೂಕಿನ 10 ಗ್ರಾಮಗಳಲ್ಲಿ ಅಗತ್ಯವಿರುವ ಜಮೀನಿನ ಭೂಸ್ವಾಧೀನ ಸಂಭದಿಸಿದಂತೆ ಜುಲೈ 26ರಂದು ರೂ.38ಕೋಟಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.

ಭೂಸ್ವಾಧೀನ ಪ್ರಕ್ರಿಯೆಯ ನಂತರ ಕಾಮಗಾರಿ

ಭೂಸ್ವಾಧೀನ ಪ್ರಕ್ರಿಯೆಯ ನಂತರ ಕಾಮಗಾರಿ

ರೈಲ್ವೆ ಮಂಡಳಿಯಿಂದ ₹823 ಕೋಟಿ ಮೊತ್ತದ ಯೋಜನೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈಗಾಗಲೇ ಅಗತ್ಯ ಅನುಮತಿಗಳನ್ನು ನೀಡಿದ್ದು, ಭೂಸ್ವಾಧೀನ ಪ್ರಕ್ರಿಯೆಯ ನಂತರ ಕಾಮಗಾರಿಯು ಆರಂಭಗೊಂಡಿದೆ. ಕರ್ನಾಟಕ ಕ್ಯಾಬಿನೆಟ್ ಐತಿಹಾಸಿಕ ಪಟ್ಟಣವಾದ ಕಿತ್ತೂರಿನ ಮೂಲಕ ಬೆಳಗಾವಿ ಮತ್ತು ಧಾರವಾಡ ನಡುವಿನ ಹೊಸ 73-ಕಿಮೀ ರೈಲು ಮಾರ್ಗವನ್ನು ಅನುಮೋದಿಸಿತು. ಬೆಳಗಾವಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಹಲವು ಕೈಗಾರಿಕೆಗಳು ಬರುತ್ತಿರುವುದನ್ನು ಧಾರವಾಡ-ಬೆಳಗಾವಿ ರೈಲ್ವೆ ಯೋಜನೆಗೆ ಅನುದಾನ ಮಂಜೂರಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಅನುಮತಿಯನ್ನು ನೀಡದೆ.

ಐತಿಹಾಸಿಕ ಕಿತ್ತೂರು ಸೇರಿ 11 ಹೊಸ ರೈಲು ನಿಲ್ದಾಣಗಳು

ಐತಿಹಾಸಿಕ ಕಿತ್ತೂರು ಸೇರಿ 11 ಹೊಸ ರೈಲು ನಿಲ್ದಾಣಗಳು

927.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ರೈಲು ಮಾರ್ಗ ನಿರ್ಮಾಣವಾಗಲಿದೆ. ರೈಲ್ವೆ ಯೋಜನೆಯು ಐತಿಹಾಸಿಕ ಕಿತ್ತೂರು ಪಟ್ಟಣ ಸೇರಿದಂತೆ 11 ಹೊಸ ರೈಲು ನಿಲ್ದಾಣಗಳನ್ನು ಹೊಂದಿರುತ್ತದೆ. ಧಾರವಾಡ, ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೇಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ.ನಲ್ಲಿ ನಿಲ್ದಾಣಗಳ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿದೆ. ಹುಬ್ಬಳ್ಳಿ-ಬೆಳಗಾವಿ ಎರಡು ನಗರಗಳ ನಡುವಿನ ಪ್ರಸ್ತುತ ರೈಲು ಮಾರ್ಗದಲ್ಲಿ ಮೂರು ಗಂಟೆಗಳ ಪ್ರಯಾಣದ ಸಮಯಕ್ಕೆ ಹೋಲಿಸಿದರೆ ಬೆಳಗಾವಿ ಮತ್ತು ಧಾರವಾಡ ನಡುವಿನ ಪ್ರಯಾಣದ ಸಮಯವು ಕೇವಲ ಒಂದು ಗಂಟೆಗೆ ಕಡಿಮೆಯಾಗಲಿದೆ ಏಕೆಂದರೆ ರೈಲುಗಳು ಇನ್ನು ಮುಂದೆ ಲೋಂಡಾ ಮತ್ತು ಖಾನಾಪುರದ ಮೂಲಕ ಸುತ್ತುವರಿದ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿಲ್ಲ.

 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗ

73 ಕಿ.ಮೀ ಉದ್ದದ ಹೊಸ ರೈಲು ಮಾರ್ಗ

ಕಿತ್ತೂರು ಮೂಲಕ ಹಾದುಹೋಗುವ ಬೆಳಗಾವಿ-ಧಾರವಾಡ ನಡುವಿನ 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ಕಳೆದ ವರ್ಷವೇ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿದ್ದ ಪ್ರಸ್ತಾವಿತ ಯೋಜನೆಯು 2019ರಲ್ಲಿ ದಿವಂಗತ ಸುರೇಶ್ ಅಂಗಡಿ (ಬಿಜೆಪಿ ನಾಯಕ ಮತ್ತು ಆಗಿನ ಬೆಳಗಾವಿ ಸಂಸದ) ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿ ನೇಮಕಗೊಂಡ ನಂತರ ಪ್ರಚೋದನೆಯನ್ನು ಪಡೆಯಿತು. ಈ ರೈಲು ಮಾರ್ಗದ ಸಮೀಕ್ಷೆಯನ್ನು ಅಂಗಡಿ ಪಡೆದರು. ಈ ಯೋಜನೆಯನ್ನು ಆಗಸ್ಟ್ 2019ರಲ್ಲಿ ಮಂಜೂರು ಮಾಡಲಾಗಿದೆ. ಯೋಜನೆಯ ಸಿವಿಲ್ ಇಂಜಿನಿಯರಿಂಗ್ ಘಟಕಕ್ಕೆ ರೂ.755.69 ಕೋಟಿ ವೆಚ್ಚವಾಗಲಿದ್ದು, ವಿದ್ಯುತ್ ಕಾಮಗಾರಿಗಳಿಗೆ ರೂ.25.93 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಅಂದಾಜಿಸಿದೆ. ಲೈನ್ ವಿದ್ಯುದ್ದೀಕರಣಕ್ಕೆ ರೂ.67.79 ಕೋಟಿಗಳಿದ್ದರೆ, ಸಿಗ್ನಲ್ ಮತ್ತು ದೂರಸಂಪರ್ಕ ಕಾಮಗಾರಿಗೆ ರೂ.77.99 ಕೋಟಿ ವೆಚ್ಚವಾಗಲಿದೆ.

ಬೆಳಗಾವಿ ಸಿಕ್ಕಿರುವ ರೈಲು ಕೊಡುಗೆ

* ಬೆಳಗಾವಿ- ಬೆಂಗಳೂರು ಸೂಪರ್‌ಫಾಸ್ಟ್‌ ರೈಲು
* ಬೆಳಗಾವಿ- ಕಿತ್ತೂರು- ಧಾರವಾಡ ರೈಲು ಮಾರ್ಗ ಭೂಸ್ವಾಧೀನ ಆರಂಭ
* ಬಾಗಲಕೋಟೆ- ಕುಡಚಿ ರೈಲು ಮಾರ್ಗ ಕಾಮಗಾರಿಗೆ ಹೆಚ್ಚಿನ ಒತ್ತು
* ಕಿಸಾನ್‌ ರೈಲು ಆರಂಭ
* ವಿಜಯಪುರ- ಮಂಗಳೂರು ರೈಲು

Recommended Video

   Nancy Pelosi ಅವರ ತೈವಾನ್ ಭೇಟಿಯಿಂದ ಕೆಂಡಾಮಂಡಲವಾದ ಚೀನಾ !! *World | OneIndia Kannada
   English summary
   The state government has sanctioned the release of Rs.38 crore on July 26 for the land acquisition of land required in 10 villages of Dharwad taluk for the construction of the new Belagavi-Kittur-Dharwad railway line,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X