• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18ನೇ ಶತಮಾನದ ಭಾರತೀಯನಿಗೆ ಸಂತ ಪದವಿ, ಈತನ ಪವಾಡವೇನು?

|
Google Oneindia Kannada News

ಚೆನ್ನೈ, ಮೇ 15: ಸುದೀರ್ಘ ಚರ್ಚೆಗಳ ಬಳಿಕ ಕೇರಳದ ದೇವಸಹಾಯಮ್ ಎಂಬುವವರನ್ನು ಸಂತ ಎಂದು ಕ್ರೈಸ್ತ ಧರ್ಮದ ಪೋಪ್ ಫ್ರಾನ್ಸಿಸ್ ಘೋಷಿಸಿದ್ದಾರೆ. ರೋಮನ್ ಕ್ಯಾಥೋಲಿಕ್ ಧರ್ಮದಲ್ಲಿ ಸಂತ ಪದವಿ ಪಡೆದ ಭಾರತದ ಮೊದಲ ಸಾಮಾನ್ಯ ವ್ಯಕ್ತಿ ಎಂಬ ಶ್ರೇಯಸ್ಸು ದೇವಸಹಾಯಮ್‌ಗೆ ಸಿಕ್ಕಿದೆ. 18ನೇ ಶತಮಾನದಲ್ಲಿ ಜೀವಿಸಿದ್ದ ದೇವಸಹಾಯಂ ಜಾತಿಪದ್ಧತಿ ವಿರುದ್ಧ ಹೋರಾಟ ನಡೆಸಿದ್ದರು. ಹಾಗೆಯೇ, ಕೋಮು ಸೌಹಾರ್ದತೆಯ ವಾತಾರಣ ಮೂಡಿಸಲು ಪ್ರಯತ್ನ ಮಾಡಿದ್ದರು. ಅಂದಿನ ಸಾಂಪ್ರದಾಯಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಇವರು ಕೊಲೆಯಾದರು ಎಂದು ಹೇಳಲಾಗುತ್ತದೆ.

ಅಂದಿನ ತಿರುವನಂತಪುರಂ ಸಾಮ್ರಾಜ್ಯದಲ್ಲಿ ಮೂಲತಃ ಹಿಂದೂ ಆಗಿದ್ದ ದೇವಸಹಾಯಂ ಹುಟ್ಟು ಹೆಸರು ನೀಲಕಂಡನ್ ಪಿಳ್ಳೈ. ಕನ್ಯಾಕುಮಾರಿಯಲ್ಲಿ ಜನಿಸಿದ ಅವರು 1745ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ದೇವಸಹಾಯಂ ಮತ್ತು ಲೆಜಾರಸ್ ಎಂಬ ಹೆಸರುಗಳಿಂದ ಗುರುತಿಸಿಕೊಂಡರು. ಅಂದಿನ ಸಂಪ್ರದಾಯಬದ್ಧ ಸಮಾಜದಲ್ಲಿ ಬಹಳ ಕಷ್ಟಕಾರ್ಪಣ್ಯಗಳನ್ನು ಎದುರಿಸಿದರೂ ದೇವಸಹಾಯಮ್ ಅವರ ಧರ್ಮಸೇವೆ ಮತ್ತು ಸಮಾಜಸೇವೆ ಅಬಾಧಿತವಾಗಿ ಮತ್ತು ಬದ್ಧತೆಯಿಂದ ನಡೆದಿತ್ತು ಎಂದು ಕ್ರೈಸ್ತ ಧರ್ಮೀಯರು ಸ್ಮರಿಸುತ್ತಾರೆ.

ಮೂರು ಬೇಡಿಕೆ ಇಟ್ಟು ಪ್ರಧಾನಿ, ಸುಪ್ರೀಂ ಕೋರ್ಟ್ ಸಿಜೆಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್ಮೂರು ಬೇಡಿಕೆ ಇಟ್ಟು ಪ್ರಧಾನಿ, ಸುಪ್ರೀಂ ಕೋರ್ಟ್ ಸಿಜೆಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್

ಸಂತನಾಗಲು ಬೇಕಿತ್ತು ಪವಾಡ:
ಹಲವು ಚರ್ಚೆ, ಪ್ರಕ್ರಿಯೆ ಮೂಲಕ 2012ರಲ್ಲಿ ದೇವಸಹಾಯಮ್ ಅವರ ಬಲಿದಾನವನ್ನು ವ್ಯಾಟಿಕಾನ್ ಅಧಿಕೃತವಾಗಿ ಗುರುತಿಸಿತು. ಸಂತನೆಂದು ಘೋಷಿಸಲು ಪವಾಡ ಘಟನೆಗಳ ಅಗತ್ಯ ಇತ್ತು. 2012ರಲ್ಲಿ ಒಬ್ಬ ಮಹಿಳೆ ತನಗೆ ದೇವಸಹಾಯಮ್ ಪ್ರಾರ್ಥನೆಯಿಂದ ಪವಾಡದ ಅನುಭವವಾಯಿತು ಎಂದು ಹೇಳಿಕೊಂಡಿದ್ದಳು. ಏಳು ತಿಂಗಳ ಗರ್ಭಿಣಿಯಾಗಿದ್ದ ಆಕೆಯ ಭ್ರೂಣ ವೈದ್ಯಕೀಯವಾಗಿ ಸತ್ತಿದೆ ಎಂದು ಘೋಷಿಸಲಾಗಿತ್ತು. ಆಗ ಆ ಮಹಿಳೆ ದೇವಸಹಾಯಂ ಅವರನ್ನು ಪ್ರಾರ್ಥಿಸಿದ ಬಳಿಕ ಗರ್ಭದೊಳಗೆ ಮಗುವಿನ ಚಲನೆ ಆಯಿತಂತೆ. ಹಾಗಂತ ಆ ಮಹಿಳೆ ವಿವರಿಸಿದ ಪವಾಡದ ಘಟನೆ ಇತ್ಯಾದಿಯನ್ನು ಪರಿಗಣಿಸಿ ದೇವಸಹಾಯಂಗೆ ಸಂತಪದವಿ ನೀಡಲು ವ್ಯಾಟಿಕನ್ ನಿರ್ಧರಿಸಿತೆನ್ನಲಾಗಿದೆ.

ಜಾತಿ ವಿರುದ್ಧ ಹೋರಾಡಿದವನಿಗೆ ಜಾತಿ ಹೆಸರು:
ವ್ಯಾಟಿಕನ್ ನಗರದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ದೇವಸಹಾಯಂಗೆ ಸಂತಪದವಿ ಘೋಷಣೆ ಮಾಡಲಾಗಿದೆ. ಕುತೂಹಲವೆಂದರೆ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ದೇವಸಹಾಯಂರ ಮೂಲ ಜಾತಿ ಹೆಸರಾದ ಪಿಳ್ಳೈ ಅನ್ನು ನಮೂದಿಸಲಾಗಿತ್ತು. ಇದಕ್ಕೆ ಭಾರತದ ಹಲವು ಕ್ರೈಸ್ತರು ವಿರೋಧಿಸಿ ಪ್ರತಿಭಟಿಸಿದ್ದರು. ಜಾತಿ ಹೆಸರು ಬರೆಯುವ ಮೂಲಕ ದೇವಸಹಾಯಂರ ಮೂಲ ಆಶಯವನ್ನೇ ಗಾಳಿಗೆ ತೂರುತ್ತಿದ್ದೀರಿ ಎಂಬುದು ಪ್ರತಿಭಟನಾಕಾರರ ಅಸಮಾಧಾನವಾಗಿತ್ತು. ನಂತರ ಜಾತಿ ಹೆಸರನ್ನು ಆಹ್ವಾನ ಪತ್ರಿಕೆಯಿಂದ ತೆಗೆದುಹಾಕಲಾಯಿತು.

ಲಕ್ಷ ಲಕ್ಷ ರೂಪಾಯಿ ಸುರಿದು ಸಿದ್ಧಪಡಿಸಿದ ಹಡಗುಗಳಿಗೆ ಗುಜರಿ ವಸ್ತುವಿನ ಬೆಲೆ!ಲಕ್ಷ ಲಕ್ಷ ರೂಪಾಯಿ ಸುರಿದು ಸಿದ್ಧಪಡಿಸಿದ ಹಡಗುಗಳಿಗೆ ಗುಜರಿ ವಸ್ತುವಿನ ಬೆಲೆ!

ಜನಾಂದಲೋಲನ ಅವಕಾಶ ಕೈತಪ್ಪಿತು:
"ಸಂತ ದೇವಸಹಾಯಂ ಅವರು ಸಮಾನತೆಗಾಗಿ ಬದ್ಧರಾದವರು. ಜಾತೀಯತೆ ಮತ್ತು ಕೋಮುವಾದದ ವಿರುದ್ಧ ಹೋರಾಡಿದವರು. ಭಾರತದಲ್ಲಿ ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರಿಗೆ ಸಂತ ಪದವಿ ಕೊಡಲಾಗಿದೆ. ಸಮಾಜದಲ್ಲಿ ಹೊಗೆಯಾಡುತ್ತಿರುವ ಕೋಮು ವಿಷ ಬೀಜದ ವಿರುದ್ಧ ಎದ್ದುನಿಲ್ಲಲು ಇದನ್ನು ಒಂದು ಜನಾಂದೋಲನವಾಗಿ ಮಾಡುವ ಅವಕಾಶವನ್ನು ಚರ್ಚ್ ಕೈಚೆಲ್ಲಿದೆ" ಎಂದು ದೇವಸಹಾಯಂ ಹೆಸರಿನವರೇ ಆದ ಕೇರಳದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಹತಾಶೆ ತೋಡಿಕೊಂಡಿದ್ಧಾರೆ.

ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಇದೂವರೆಗೆ ಸುಮಾರು 20 ಮಂದಿ ಭಾರತೀಯರಿಗೆ ಸಂತ ಅಥವಾ ಉಚ್ಚ ಪದವಿ ಕೊಡಲಾಗಿದೆ. ಇವರಲ್ಲಿ ಮದರ್ ತೆರೇಸಾ ಕೂಡ ಒಳಗೊಂಡಿದ್ಧಾರೆ. ಭಾರತೀಯ ಸಮುದಾಯಕ್ಕೆ ಸೇರಿದ ನಾಲ್ವರಿಗೆ ಇದುವರೆಗೆ ಸಂತ ಪದವಿ ಸಿಕ್ಕಿರುವ ಮಾಹಿತಿ ಇದೆ.

(ಒನ್ಇಂಡಿಯಾ ಸುದ್ದಿ)

English summary
Pope has Declared Devasahayam, the 18 century Indian christian, as Saint after recognizing his social service and martyrdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X