ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ಗೆ ಪರ್ಯಾಯ ಸ್ವದೇಶಿ 'ಕೂ': ನೀವೂ 'ಕೂ' ಮಾಡಿದಿರಾ?

|
Google Oneindia Kannada News

ಕೆಲವು ದಿನಗಳಿಂದ ಎಲ್ಲೆಡೆ 'ಕೂ'ನದ್ದೇ ಕೂಗು. ಜನಪ್ರಿಯ ಮೈಕ್ರೋಬ್ಲಾಗಿಂಗ್ ಸಂಸ್ಥೆ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ವಿವಿಧ ಕಾರಣಗಳಿಂದಾಗಿ ಮುಸುಕಿನ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೇ ಟ್ವಿಟ್ಟರ್‌ಗೆ ಪರ್ಯಾಯವಾಗಿ 'ಕೂ' ಎಂಬ ಸಂಪೂರ್ಣ ಸ್ವದೇಶಿ ಮೈಕ್ರೋಬ್ಲಾಗಿಂಗ್ ಆಪ್‌ ಬಗ್ಗೆ ಜನರು ಮಾತನಾಡತೊಡಗಿದ್ದಾರೆ. ಮುಖ್ಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಸಚಿವರು 'ಕೂ' ಆಪ್‌ನಲ್ಲಿ ಖಾತೆ ತೆರೆಯುವ ಮೂಲಕ ಅದರತ್ತ ಜನರನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.

'ಕೂ' ಬಹುತೇಕ ಟ್ವಿಟ್ಟರ್‌ನಲ್ಲಿನ ಫೀಚರ್‌ಗಳನ್ನೇ ಹೊಂದಿದೆ. ದೇಶಿ 'ಕೂ'ಅನ್ನು ಬೆಂಬಲಿಸುತ್ತಿರುವುದು ಭಾರತದ ಕಂಪೆನಿಗಳಿಗೆ ಪ್ರೋತ್ಸಾಹ ನೀಡುವುದು ಒಂದೆಡೆಯಾದರೆ, ರೈತರ ಪ್ರತಿಭಟನೆಗಳ ಕುರಿತಾಗಿ ಸಕ್ರಿಯವಾಗಿದ್ದ ಕೆಲವು ಖಾತೆಗಳನ್ನು ಬ್ಲಾಕ್ ಮಾಡುವಂತೆ ನೀಡಿದ್ದ ತನ್ನ ಆದೇಶವನ್ನು ಪಾಲಿಸದ ಟ್ವಿಟ್ಟರ್ ವಿರುದ್ಧದ ಕಾರ್ಯತಂತ್ರವಾಗಿಯೂ ಕಾಣಿಸುತ್ತಿದೆ.

 ಕೇಂದ್ರ ಸರ್ಕಾರದಿಂದ ನಿರ್ದೇಶನ: ಅನೇಕ ಖಾತೆಗಳ ವಿರುದ್ಧ ಕ್ರಮ ಕೈಗೊಂಡ ಟ್ವಿಟ್ಟರ್ ಕೇಂದ್ರ ಸರ್ಕಾರದಿಂದ ನಿರ್ದೇಶನ: ಅನೇಕ ಖಾತೆಗಳ ವಿರುದ್ಧ ಕ್ರಮ ಕೈಗೊಂಡ ಟ್ವಿಟ್ಟರ್

ಈಗಾಗಲೇ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮುಂತಾದವರು 'ಕೂ' ಖಾತೆ ತೆರೆದಿದ್ದಾರೆ. ಅಲ್ಲದೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಡಿಜಿಟಲ್ ಇಂಡಿಯಾ, ಇಂಡಿಯಾ ಪೋಸ್ಟ್, ಮೈಗವ್, ಎನ್‌ಐಸಿ, ಡಿಜಿ ಲಾಕರ್, ಉಮಾಂಗ್ ಆಪ್, ಕಾಮನ್ ಸರ್ವೀಸಸ್ ಸೆಂಟರ್, ಎನ್‌ಐಎಕ್ಸ್‌ಐ, ಸಿಬಿಐಸಿ, ಎನ್‌ಐಇಎಲ್‌ಐಟಿ ಮುಂತಾದ ಸರ್ಕಾರದ ಸಂಸ್ಥೆಗಳು, ಸಚಿವಾಲಯಗಳು ಸಹ 'ಕೂ' ಕೂ ಎನ್ನುತ್ತಿವೆ. ಮುಂದೆ ಓದಿ.

10 ತಿಂಗಳ ಪ್ರಾಯ

10 ತಿಂಗಳ ಪ್ರಾಯ

'ಕೂ' ವೇದಿಕೆಯು ಸುಮಾರು 10 ತಿಂಗಳಷ್ಟು ಹಳತು. 'ಇದು ಭಾರತೀಯರ ಧ್ವನಿಗಳನ್ನು ಅನುರಣಿಸುತ್ತದೆ' ಎಂಬ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಆತ್ಮನಿರ್ಭರ್ ಭಾರತ್ ಆಪ್ ಆವಿಷ್ಕಾರ ಚಾಲೆಂಜ್‌ನ ಭಾಗವಾಗಿ ಈ ಆಪ್ ಅಭಿವೃದ್ಧಿಯಾಗಿದೆ. ಸಾಮಾಜಿಕ ವರ್ಗದ ವಿಭಾಗದಲ್ಲಿ ಅದು ಎರಡನೆಯ ಬಹುಮಾನ ಪಡೆದಿತ್ತು.

ಭಾರತ ಸರ್ಕಾರದ ನಾಗರಿಕ ಚಟುವಟಿಕೆಯ ವೇದಿಕೆ ಮೈಗವ್‌ನಲ್ಲಿ ಕಳೆದ ವರ್ಷ ಈ ಆಪ್ ಚಾಲೆಂಜ್ ಅನ್ನು ಆರಂಭಿಸಲಾಗಿತ್ತು. ದೇಶದೆಲ್ಲೆಡಗಳಿಂದ ತಾಂತ್ರಿಕ ಉದ್ಯಮಗಳು ಹಾಗೂ ಸ್ಟಾರ್ಟ್‌ಅಪ್‌ಗಳಿಂದ 6,940 ಪ್ರವೇಶಗಳು ಬಂದಿದ್ದವು.

ಪ್ರಧಾನಿ ಮೋದಿ ಶ್ಲಾಘನೆ

ಪ್ರಧಾನಿ ಮೋದಿ ಶ್ಲಾಘನೆ

ಈ ಆಪ್ ಚಾಲೆಂಜ್ ದೇಸಿ ವೇದಿಕೆಗಳಿಗೆ ಆರಂಭವಷ್ಟೇ. ಕಳೆದ ಆಗಸ್ಟ್‌ನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ಕೂ ಆಪ್‌ಅನ್ನು ಶ್ಲಾಘಿಸಿದ್ದರು. 'ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಹೊಸ ಆಪ್ ಒಂದು ಬಂದಿದೆ. ಅದಕ್ಕೆ ಕೂ ಎಂದು ಹೆಸರು. ಅಲ್ಲಿ ನಾವು ನಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಪದಗಳು, ವಿಡಿಯೋ ಅಥವಾ ಆಡಿಯೋಗಳ ಮೂಲಕ ಮಾತೃಭಾಷೆಯಲ್ಲಿಯೇ ಹಂಚಿಕೊಳ್ಳಬಹುದು' ಎಂದು ಮೋದಿ ಹೇಳಿದ್ದರು.

ಪ್ರಾದೇಶಿಕ ಭಾಷೆಗಳಲ್ಲಿ ಕೂ

ಪ್ರಾದೇಶಿಕ ಭಾಷೆಗಳಲ್ಲಿ ಕೂ

ಭಾರತದ ಅನೇಕ ಭಾಷೆಗಳಲ್ಲಿ 'ಕೂ' ಆಪ್ ಲಭ್ಯವಾಗುತ್ತಿರುವುದು ಅದರ ಪ್ರಮುಖ ಸಕಾರಾತ್ಮಕ ಅಂಶಗಳಲ್ಲಿ ಒಂದು. 'ಭಾರತೀಯರಿಗೆ ಸಂಪರ್ಕ, ಹೇಳಿಕೆ ಮತ್ತು ತೊಡಗಿಸಿಕೊಳ್ಳುವಿಕೆಯಲ್ಲಿ ವಿಶ್ವಾಸಾರ್ಹ ಸ್ಥಳೀಯ ಜಾಗವನ್ನು ಕೂ ಸೃಷ್ಟಿಸಿದೆ. ಇದನ್ನು ಜನರು-ಪ್ರಥಮ ವೇದಿಕೆಯನ್ನಾಗಿಸಲಾಗಿದೆ. ಇಲ್ಲಿ ಸಕ್ರಿಯ ಮಾತುಕತೆಗಳ ಮೂಲಕ ಜನರು ತಮ್ಮ ಅಭಿಪ್ರಾಯ ಮಂಡಿಸಬಹುದು. ಬಳಕೆದಾರರು ಕ್ರಿಯೇಟರ್‌ಗಳನ್ನು ಫಾಲೋ ಮಾಡಬಹುದು' ಎಂದು ಆಪ್ ತನ್ನ ಬಗ್ಗೆ ಹೇಳಿಕೊಂಡಿದೆ. ಮತ್ತೊಂದು ವಿಶೇಷ ಸಂಗತಿಯೆಂದರೆ ಗೂಗಲ್ ಪ್ಲೇ ಸ್ಟೋರ್‌ನ 2020ರ 'ಬೆಸ್ಟ್ ಡೈಲಿ ಎಸೆನ್ಶಿಯಲ್ ಆಪ್' ಎಂಬ ಪ್ರಶಂಸೆಗೆ ಪಾತ್ರವಾಗಿರುವುದು.

ಸ್ವದೇಶಿ ನಿರ್ಮಿತ 'ಹೈಕ್' ಮೆಸೇಜಿಂಗ್ ಆಪ್ ಸ್ಥಗಿತಸ್ವದೇಶಿ ನಿರ್ಮಿತ 'ಹೈಕ್' ಮೆಸೇಜಿಂಗ್ ಆಪ್ ಸ್ಥಗಿತ

ನೋಂದಾಯಿಸುವುದು ಸುಲಭ

ನೋಂದಾಯಿಸುವುದು ಸುಲಭ

ಕೂ ಆಪ್‌ನಲ್ಲಿ ನೋಂದಣಿ ಮಾಡಿಸಲು ನಿಮ್ಮ ಫೋನ್ ನಂಬರ್ ಸಾಕು. ಫೋನ್ ನಂಬರ್ ದಾಖಲಿಸಿದ ಬಳಿಕ ಅದರ ಒಟಿಪಿ ಸಂದೇಶ ಬರುತ್ತದೆ. ಅದನ್ನು ಹೊಂದಿಸಿದರೆ ಮತ್ತೊಂದು ವಿಂಡೋ ತೆರೆಯುತ್ತದೆ. ಮೊದಲು ಆಪ್ ನಿಮ್ಮ ಭಾಷೆ ಬಳಸುವ ಆಯ್ಕೆ ನೀಡುತ್ತದೆ. ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮರಾಠಿ ಸಧ್ಯ ಲಭ್ಯವಿದೆ. ಅಸ್ಸಾಮಿ, ಬಾಂಗ್ಲಾ, ಮಲಯಾಳಂ, ಗುಜರಾತಿ, ಕೊಂಕಣಿ, ಕಾಶ್ಮೀರಿ, ಮಣಿಪುರಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಉರ್ದು ಭಾಷೆಗಳು ಶೀಘ್ರವೇ ಸೇರ್ಪಡೆಯಾಗಲಿವೆ.

ಟ್ವಿಟ್ಟರ್ ಪಡಿಯಚ್ಚು

ಟ್ವಿಟ್ಟರ್ ಪಡಿಯಚ್ಚು

ಸೈನ್ ಅಪ್ ಕೆಲಸ ಮುಗಿದ ಬಳಿಕ ಮುಖ್ಯ ಭಾಗ ತೆರೆಯುತ್ತದೆ. ಅದನ್ನು ನೋಡಿದಾಗ ಟ್ವಿಟ್ಟರ್‌ನ ಪಡಿಯಚ್ಚು ನೋಡಿದಂತೆ ಭಾಸವಾಗುತ್ತದೆ. ಟ್ವಿಟ್ಟರ್‌ನಂತೆಯೇ @ ಬಳಸಿ ಇಲ್ಲಿ ಪ್ರೊಫೈಲ್ ಸೃಷ್ಟಿಸಬೇಕು. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವಂತೆ ಇಲ್ಲಿ 'ಕೂ ಮಾಡಿ' ಎಂದು ಆಪ್ ಕೇಳುತ್ತದೆ. ಇದರಲ್ಲಿ ಕೂಡ 'ರೀ-ಕೂ' 'ಕಾಮೆಂಟ್ ಸಹಿತ ರೀ-ಕೂ' ಅವಕಾಶಗಳಿವೆ.


ಮೆಚ್ಚುಗೆಯಾದ ಪೋಸ್ಟ್ಅನ್ನು ಲೈಕ್ ಮಾಡಲು ಫೇಸ್‌ಬುಕ್‌ನಲ್ಲಿರುವಂತೆ 'ಹೆಬ್ಬೆಟ್ಟು' ಗುರುತು ಇದೆ. ಫಾಲೋ ಮಾಡುವ ಕೂ ಖಾತೆಗಳು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿನ ಪ್ರಮುಖರು ಮಾಡುವ ಟ್ವೀಟ್‌ಗಳ ಆಧಾರದಲ್ಲಿ ಟ್ರೆಂಡಿಂಗ್ ಸಂಗತಿಗಳನ್ನು ಪರಿಶೀಲಿಸಬಹುದು.

ಎಲ್ಲೆಡೆ ಕೂ ಚರ್ಚೆ

ಎಲ್ಲೆಡೆ ಕೂ ಚರ್ಚೆ

'ಕೂ ಮಾಡುವುದು ಬಹಳ ಸುಲಭ. ಕನಿಷ್ಠ 10 ಕೂಗಳನ್ನು ಸೃಷ್ಟಿಸುವ ಜನರನ್ನು ಬಳಕೆದಾರರು ಗುರುತಿಸುವ ಸಾಧ್ಯತೆ ಹೆಚ್ಚು' ಎಂದು ಆಪ್‌ನಲ್ಲಿ ಸಲಹೆಗಳನ್ನು ನೀಡಲಾಗಿದೆ. ಸುಗಮ ಬಳಕೆಯ ಆಯ್ಕೆಗಳು ಹಾಗೂ ಪ್ರಾದೇಶಿಕ ಭಾಷೆಗಳ ಲಭ್ಯತೆಯ ಕಾರಣ ಕೂ ಜನಪ್ರಿಯತೆ ಹೆಚ್ಚುವ ಸಾಧ್ಯತೆ ಇದೆ. ಟ್ವಿಟ್ಟರ್‌ನಲ್ಲಿ 'ಕೂ ಆಪ್' ಟ್ರೆಂಡಿಂಗ್‌ನಲ್ಲಿದ್ದು, ಕೂ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

English summary
People are discussing about desi microblogging platform Koo which is considering to be an alternative to Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X