ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರಾಚ್ಯದಲ್ಲಿ ಕೊರೊನಾ 4ನೇ ಅಲೆ ಹುಟ್ಟಿಗೆ ಕಾರಣವಾಗುತ್ತಿದೆ ಡೆಲ್ಟಾ ರೂಪಾಂತರಿ

|
Google Oneindia Kannada News

ಜಿನಿವಾ, ಜುಲೈ 30: ಡೆಲ್ಟಾ ರೂಪಾಂತರಿಯು ಜಗತ್ತಿನಾದ್ಯಂತ ಸೋಂಕನ್ನು ಪಸರಿಸುತ್ತಿದೆ. ಡೆಲ್ಟಾ ರೂಪಾಂತರಿಯು ಮಧ್ಯಪ್ರಾಚ್ಯದಲ್ಲಿ ಕೊರೊನಾ ನಾಲ್ಕನೇ ಅಲೆ ಸೃಷ್ಟಿಗೆ ಕಾರಣವಾಗಿದೆ. ಭಾರತದಲ್ಲೇ ಮೊದಲು ಕಂಡುಬಂದಿರುವ ಡೆಲ್ಟಾ 95ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ.

ಜಾಗತಿಕವಾಗಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಇದು ಪುನಃ ಕೊರೊನಾ ಅಬ್ಬರ ಹೆಚ್ಚುವುದರ ಸುಳಿವು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

60 ವರ್ಷ ಮೇಲ್ಪಟ್ಟವರಲ್ಲಿ ಕೊವಿಶೀಲ್ಡ್ ಪರಿಣಾಮ ಎಷ್ಟು ವಾರ ಇರುತ್ತೆ!?60 ವರ್ಷ ಮೇಲ್ಪಟ್ಟವರಲ್ಲಿ ಕೊವಿಶೀಲ್ಡ್ ಪರಿಣಾಮ ಎಷ್ಟು ವಾರ ಇರುತ್ತೆ!?

ಜುಲೈ 19 ರಿಂದ 25ರ ನಡುವೆ ಜಾಗತಿಕವಾಗಿ ಕೊರೊನಾ ಸೋಂಕಿಗೆ ಬಲಿಯಾದವರ ಪ್ರಮಾಣ ಶೇ. 21ರಷ್ಟು ಹೆಚ್ಚಳವಾಗಿದೆ. ಕಳೆದ ಒಂದು ವಾರದಲ್ಲಿ ವಿಶ್ವದಾದ್ಯಂತ ಕೊರೊನಾ ಸೋಂಕಿಗೆ 69 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಶೇ.50ರಷ್ಟು ಜನಸಂಖ್ಯೆ ಕೊರೊನಾ ನಿರೋಧಕ ಲಸಿಕೆಗಳನ್ನು ನೀಡಿದ್ದರೂ ನಾಲ್ಕನೇ ಅಲೆಯ ಆರ್ಭಟ ಜೋರಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

ಜತೆಗೆ ಸೋಂಕಿನ ಹೊಸ ಪ್ರಕರಣಗಳು ಕೂಡ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಹೊಸ ಕೇಸ್‌ಗಳು ಶೇ.8ರಷ್ಟು ಏರಿಕೆ ಕಂಡಿವೆ. ಹಲವು ರಾಷ್ಟ್ರಗಳಲ್ಲಿ ಕೊರೊನಾ ಮೂರು ಮತ್ತು ನಾಲ್ಕನೇ ಅಲೆಗಳು ಆರಂಭವಾಗುತ್ತಿವೆ. ಅಮೆರಿಕ ಹಾಗೂ ಆಗ್ನೇಯ ಏಷ್ಯಾ ಪ್ರಾಂತ್ಯಗಳಲ್ಲಿ ಸೋಂಕು ತೀವ್ರವಾಗಿ ಪ್ರಸರಣ ಹೊಂದುತ್ತಿದೆ.

 ಲಸಿಕೆ ಪಡೆಯದವರು ಆಸ್ಪತ್ರೆಗೆ ದಾಖಲಾಗಿದ್ದಾರೆ

ಲಸಿಕೆ ಪಡೆಯದವರು ಆಸ್ಪತ್ರೆಗೆ ದಾಖಲಾಗಿದ್ದಾರೆ

ಬಹುತೇಕ ಪ್ರಕರಣಗಳಲ್ಲಿ ಕೊರೊನಾ ಲಸಿಕೆಯನ್ನು ಪಡೆಯದವರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ದೇಶಗಳಲ್ಲಿ ಡೆಲ್ಟಾ ಸೋಂಕಿನಿಂದಾಗಿ ಮೃತಪಡುತ್ತಿರುವವ ಸಂಖ್ಯೆಯೂ ಹೆಚ್ಚಿದೆ. ಕಳೆದ ವಾರ 41 ಮಿಲಿಯನ್ ಮಂದಿಯಲ್ಲಿ ಶೇ.15ರಷ್ಟು ಮಂದಿಗೆ ಕೊರೊನಾ ಲಸಿಕೆ ಹಾಕಿಸಲಾಗಿದೆ. ಉತ್ತರ ಆಫ್ರಿಕಾದ ಟುನೇಶಿಯಾದಲ್ಲಿ ಅತಿ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

 ಭಾರತದಲ್ಲಿಯೂ ಹೆಚ್ಚಳ

ಭಾರತದಲ್ಲಿಯೂ ಹೆಚ್ಚಳ

ಕೋವಿಡ್‌ ಮುಕ್ತ ಎಂದು ಘೋಷಿಸಲಾಗಿದ್ದ ಪ್ರದೇಶಗಳನ್ನು ಕೊರೊನಾದ ಡೆಲ್ಟಾ ರೂಪಾಂತರಿ ಆವರಿಸಿ ಆತಂಕ ಸೃಷ್ಟಿಸಿದೆ. ನಾಂಜಿಂಗ್‌ ಎಂಬ ನಗರದ ವಿಮಾನ ನಿಲ್ದಾಣದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಮತ್ತೊಂದೆಡೆ, ಡೆಲ್ಟಾ ಸೋಂಕಿನ ತೀವ್ರ ಪ್ರಸರಣದಿಂದ ತತ್ತರಿಸಿರುವ ಆಸ್ಪ್ರೇಲಿಯಾದಲ್ಲಿ ಸೋಂಕಿತರನ್ನು ಹೋಟೆಲ್‌ಗಳಲ್ಲಿ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಹಲವು ವಾರಗಳ ಲಾಕ್‌ಡೌನ್‌ ಬಳಿಕವೂ ಕಳೆದ ಜೂನ್‌ ಮಧ್ಯವಾರದಲ್ಲಿ ಸುಮಾರು ಮೂರು ಸಾವಿರ ಮಂದಿಗೆ ಡೆಲ್ಟಾ ಸೋಂಕು ತಗುಲಿದೆ.

 ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ

ಭಾರತದಲ್ಲೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ

ಕೆಲದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಸೋಂಕು ಮಂಗಳವಾರ 132 ದಿನಗಳ ಬಳಿಕ 29,869 ಹೊಸ ಪ್ರಕರಣ, 415 ಸಾವು ವರದಿಯಾಗಿದ್ದವು. ಕೇರಳದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಆರು ಸದಸ್ಯರ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್‌.ಕೆ.ಸಿಂಗ್‌ ನೇತೃತ್ವದ ತಂಡವು ಶುಕ್ರವಾರ ಕೇರಳಕ್ಕೆ ತೆರಳಲಿದೆ.

ಕೆಲ ದಿನಗಳಿಂದ ಕೊರೊನಾ ತೀವ್ರತೆ ಇಳಿಮುಖವಾಗಿದ್ದ ಭಾರತದಲ್ಲಿಯೂ ಸೋಂಕಿನ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಮತ್ತೆ ಏರುಗತಿಗೆ ಮರಳಿದೆ. ಸತತ ಎರಡನೇ ದಿನ 40 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಯಾದ 24 ಗಂಟೆ ಅವಧಿಯಲ್ಲಿ 43,509 ಹೊಸ ಪ್ರಕರಣ, 640 ಸಾವು ವರದಿಯಾಗಿವೆ. ಬುಧವಾರ ಸಹ 43,654 ಹೊಸ ಪ್ರಕರಣ, 640 ಸಾವು ವರದಿಯಾಗಿದ್ದವು. ಗುರುವಾರ 44,230 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

 ಕೋವಿಶೀಲ್ಡ್ ಶೇ.94ರಷ್ಟು ಪರಿಣಾಮಕಾರಿ

ಕೋವಿಶೀಲ್ಡ್ ಶೇ.94ರಷ್ಟು ಪರಿಣಾಮಕಾರಿ

ಅಸ್ಟ್ರಾಜೆನಿಕಾ ಕಂಪೆನಿಯ ಕೋವಿಶೀಲ್ಡ್ ಕೋವಿಡ್ ಲಸಿಕೆಯ ಎರಡು ಡೋಸ್ 65 ವರ್ಷ ಮೇಲ್ಪಟ್ಟ ಜನರಲ್ಲಿ ಸಾವಿನಿಂದ ಶೇ 95ರಷ್ಟು ರಕ್ಷಣೆ ಒದಗಿಸುತ್ತದೆ ಎಂದು ಇಂಗ್ಲೆಂಡ್ ನ ಸಾರ್ವಜನಿಕ ಆರೋಗ್ಯ ಇಲಾಖೆಯ ಲಸಿಕೆ ಪರಿಣಾಮತ್ವದ ವರದಿ ತಿಳಿಸಿದೆ.

ವೈರಸ್ ನಿಂದ ರಕ್ಷಿಸಿಕೊಳ್ಳಲು ಜನರು ತಾವಾಗಿಯೇ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಇಲಾಖೆ ತಿಳಿಸಿದೆ. ಇತ್ತೀಚಿನ ಅಧ್ಯಯನದ ವರದಿಯಂತೆ, ಕೊರೊನಾ ವೈರಸ್ ನ ಎರಡು ರೂಪಾಂತರಗಳ ಪೈಕಿ ಡೆಲ್ಟಾ ರೂಪಾಂತರ ಹೊಸ ಪ್ರಕರಣಗಳ ಪೈಕಿ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೆ ಜಾಗತಿಕವಾಗಿಯೂ ತೀವ್ರವಾಗಿ ಏರಿಕೆಯಾಗುತ್ತಿದೆ. ಡೆಲ್ಟಾ ರೂಪಾಂತರ ವಿರುದ್ಧ ಲಸಿಕೆಯ ಪರಿಣಾಮತ್ವ ಬಗ್ಗೆ ವರದಿ ಬೆಳಕು ಚೆಲ್ಲಿದೆ ಎಂದು ಇಲಾಖೆ ವರದಿಯನ್ನು ಉಲ್ಲೇಖಿಸಿ ವಕ್ತಾರರು ಹೇಳಿದ್ದಾರೆ.

 ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿವೆ

ಅಮೆರಿಕದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿವೆ

ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿ ಹೊಸ ಕೇಸ್‌ಗಳು ಅಮೆರಿಕದಲ್ಲಿ ವರದಿಯಾಗಿವೆ. ನಿತ್ಯ 1.35 ಲಕ್ಷ ಮಂದಿಗೆ ಕೊರೊನಾ ತಗುಲುತ್ತಿದ್ದು, ಈವರೆಗೆ 7.63 ಕೋಟಿ ಜನ ಸೋಂಕಿಗೆ ತುತ್ತಾಗಿದ್ದು, 6 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸುಮಾರು 34 ಕೋಟಿ ಅಮೆರಿಕನ್ನರಿಗೆ ಲಸಿಕೆ ನೀಡಲಾಗಿದೆ.

 ಚೀನಾದಲ್ಲಿ ಡೆಲ್ಟಾ ಹೆಚ್ಚಳ

ಚೀನಾದಲ್ಲಿ ಡೆಲ್ಟಾ ಹೆಚ್ಚಳ

ಕಳೆದ ಹಲವು ತಿಂಗಳುಗಳಿಂದ ಕೊರೊನಾ ಪ್ರಕರಣಗಳಿಂದ ದೂರವಿದ್ದ ಚೀನಾದಲ್ಲಿ ಮತ್ತೆ ಅಟ್ಟಹಾಸ ಶುರುವಾಗಿದೆ. ಡೆಲ್ಟಾ ರೂಪಾಂತರಿ ಎಲ್ಲೆಡೆ ವ್ಯಾಪಿಸುತ್ತಿದೆ. ಕದಕ್ಷಿಣ ಭಾಗದ ಹುನಾನ್‌ ಪ್ರಾಂತ್ಯದಲ್ಲಿ ನಿತ್ಯ ಸುಮಾರು 15 ಜನರಲ್ಲಿ ಡೆಲ್ಟಾ ಸೋಂಕು ದೃಢಪಡುತ್ತಿದೆ. ಕೋವಿಡ್‌ ಮುಕ್ತ ಎಂದು ಘೋಷಿಸಲಾಗಿದ್ದ ಪ್ರದೇಶಗಳನ್ನು ಕೊರೊನಾದ ಡೆಲ್ಟಾ ರೂಪಾಂತರಿ ಆವರಿಸಿ ಆತಂಕ ಸೃಷ್ಟಿಸಿದೆ. ನಾಂಜಿಂಗ್‌ ಎಂಬ ನಗರದ ವಿಮಾನ ನಿಲ್ದಾಣದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು. ಮತ್ತೊಂದೆಡೆ, ಡೆಲ್ಟಾ ಸೋಂಕಿನ ತೀವ್ರ ಪ್ರಸರಣದಿಂದ ತತ್ತರಿಸಿರುವ ಆಸ್ಪ್ರೇಲಿಯಾದಲ್ಲಿ ಸೋಂಕಿತರನ್ನು ಹೋಟೆಲ್‌ಗಳಲ್ಲಿ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

 96 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆ

96 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆ

ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೊನಾ ವೈರಸ್ ಡೆಲ್ಟಾ ರೂಪಾಂತರಿ ಆರ್ಭಟ ಇದೀಗ 96 ದೇಶಗಳಿಗೆ ವ್ಯಾಪಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜುಲೈ 1 ರಂದು ಬಿಡುಗಡೆಯಾದ ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಅಪ್‌ಡೇಟ್‌ನಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 93 ದೇಶಗಳಿಗೆ ವ್ಯಾಪಿಸಿದ್ದು, ಕಳೆದೊಂದು ವಾರದ ಅವಧಿಯಲ್ಲಿ ಮತ್ತೆ 11 ದೇಶಗಳಿಗೆ ರೂಪಾಂತರಿ ಸೋಂಕು ವ್ಯಾಪಿಸಿದೆ.

ಡೆಲ್ಟಾ ರೂಪಾಂತರವನ್ನು ಡಬಲ್ ರೂಪಾಂತರಿ ಎಂದೂ ಕರೆಯಲಾಗುತ್ತದೆ, ಏಕೆಂದರೆ ಇದು ಎರಡು ರೂಪಾಂತರಗಳನ್ನು ಹೊಂದಿದ್ದು, ಇದು ಆಲ್ಫಾ ರೂಪಾಂತರಕ್ಕಿಂತ ಶೇ. 55 ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು (ಆರಂಭದಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಪತ್ತೆಯಾಗಿತ್ತು) ಮತ್ತು ಇದು ಜಾಗತಿಕವಾಗಿ ಕೊರೊನಾವೈರಸ್‌ನ ಪ್ರಬಲ ಮತ್ತು ಕಳವಳಕಾರಿ ರೂಪಾಂತರವಾಗಿದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ ಪ್ರಸ್ತುತ ಈ ರೂಪಾಂತರಿ ಸೋಂಕು ಟ್ಯುನೀಶಿಯಾ, ಮೊಜಾಂಬಿಕ್, ಉಗಾಂಡಾ, ನೈಜೀರಿಯಾ ಮತ್ತು ಮಲಾವಿ ಸೇರಿದೆತಂ 11 ಆಫ್ರಿಕಾ ದೇಶಗಳಲ್ಲಿ ವರದಿಯಾಗಿದೆ. ಅಲ್ಲದೇ ಇದೇ ವೈರಸ್ ಕಾರಣದಿಂದಾಗಿ ಆಫ್ರಿಕಾದಲ್ಲಿ ದಿನಕಳೆದಂತೆ ಸೋಂಕು ಪೀಡಿತರ ಸಾವುನೋವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ

 ಡೆಲ್ಟಾ ರೂಪಾಂತರಿ ಪ್ರಬಲ ವಂಶಾವಳಿಯಾಗಲಿದೆ

ಡೆಲ್ಟಾ ರೂಪಾಂತರಿ ಪ್ರಬಲ ವಂಶಾವಳಿಯಾಗಲಿದೆ

ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಗಮನಾರ್ಹವಾಗಿ ಹೆಚ್ಚು ಹರಡಬಲ್ಲದು ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಪ್ರಬಲ ವಂಶಾವಳಿಯಾಗುವ ನಿರೀಕ್ಷೆಯಿದೆ. ಜೂನ್ 8 ರಂದು ಕೊನೆಯ ವರದಿಲ್ಲಿ, ಡೆಲ್ಟಾ ರೂಪಾಂತರದ ಫಿನೋಟೈಪಿಕ್ ಗುಣಲಕ್ಷಣಗಳ ಬಗ್ಗೆ ಹೊಸ ಪುರಾವೆಗಳನ್ನು ಪ್ರಕಟಿಸಲಾಗಿದೆ.

ಸಿಂಗಾಪುರದ ಅಧ್ಯಯನವು ಡೆಲ್ಟಾ ರೂಪಾಂತರದ ಸೋಂಕು ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅವಶ್ಯಕತೆ, ತೀವ್ರ ನಿಗಾ ಘಟಕ (ಐಸಿಯು) ಪ್ರವೇಶ ಅಥವಾ ಸಾವುಗಳ ಕುರಿತು ವರದಿ ಮಾಡಿತ್ತು.

ಇದಲ್ಲದೆ, ಜಪಾನ್‌ನಲ್ಲಿನ ಒಂದು ಅಧ್ಯಯನವು ಇತರೆ ರೂಪಾಂತರಗಳಿಗೆ ಹೋಲಿಕೆ ಮಾಡಿದರೆ ಡೆಲ್ಟಾ ರೂಪಾಂತರದ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚು ಎಂದು ಹೇಳಿತ್ತು. ಡಿಸೆಂಬರ್ 2020 ರ ಮೊದಲು ಜಪಾನ್‌ನಲ್ಲಿ ಚಲಾವಣೆಯಲ್ಲಿರುವ ರೂಪಾಂತರಗಳೊಂದಿಗೆ ಹೋಲಿಸಿದಾಗ, ಆಲ್ಫಾ ರೂಪಾಂತರಿ ಸಂತಾನೋತ್ಪತ್ತಿ ಪ್ರಮಾಣ 1.56ರಷ್ಟಿದ್ದರೆ. ಇದೇ ಪ್ರಮಾಣ ಡೆಲ್ಟಾದಲ್ಲಿ 1.78ರಷ್ಟಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

English summary
The World Health Organization said Thursday the Delta variant has led to a "surge" in coronavirus outbreaks triggering a "fourth wave" in the Middle East, where vaccination rates remain low.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X