ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಜಮ್ಮು-ಕಾಶ್ಮೀರ ಗಡಿ ನಿರ್ಣಯ, ಕ್ಷೇತ್ರ ಪುನಾರಚನೆ ಇತಿಹಾಸ

|
Google Oneindia Kannada News

ಶ್ರೀನಗರ್, ಜೂನ್ 25: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ನಂತರ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯಿತು.

ನವದೆಹಲಿಯಲ್ಲಿ ಮೂರೂವರೆ ಗಂಟೆಗಳ ಕಾಲ ನಡೆದ ಸರ್ವ ಪಕ್ಷ ಸಭೆಯಲ್ಲಿ ಜಮ್ಮು ಕಾಶ್ಮೀರದ ಗಡಿ ನಿರ್ಣಯ ಹಾಗೂ ಕ್ಷೇತ್ರಗಳ ಪುನರ್ ರಚನೆ ವಿಚಾರವೇ ಕೇಂದ್ರ ಬಿಂದುವಾಗಿತ್ತು. ರಾಜ್ಯದ ಗಡಿ ನಿರ್ಣಯ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ ರಚನೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ರಾಜ್ಯ ನಾಯಕರಿಗೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಿ ಎದುರು ವಿಶ್ವಾಸದ್ರೋಹದ ಕಥೆ ತೆರೆದಿಟ್ಟ ಜಮ್ಮು-ಕಾಶ್ಮೀರ ನಾಯಕರು!ಪ್ರಧಾನಿ ಎದುರು ವಿಶ್ವಾಸದ್ರೋಹದ ಕಥೆ ತೆರೆದಿಟ್ಟ ಜಮ್ಮು-ಕಾಶ್ಮೀರ ನಾಯಕರು!

ಜಮ್ಮು ಕಾಶ್ಮೀರದಲ್ಲಿ ಗಡಿ ನಿರ್ಣಯ ಅಥವಾ ಪುನರ್ ರಚನೆ ವಿಷಯ ಪ್ರಸ್ತಾಪ ಆಗುತ್ತಿರುವುದು ಏಕೆ?, ಗಡಿ ನಿರ್ಣಯ ಎಂದರೇನು?, ಕಣಿವೆ ರಾಜ್ಯದಲ್ಲಿ ಈ ಗಡಿ ನಿರ್ಣಯ ಹೇಗೆ ನಡೆಸುವುದಕ್ಕೆ ಸಾಧ್ಯ?, ಜಮ್ಮು ಮತ್ತು ಕಾಶ್ಮೀರ ಎಂಬುದರ ಅರ್ಥವೇನು?, ವಿವಾದ ಸೃಷ್ಟಿ ಆಗುವುದರ ಹಿಂದಿನ ಅಸಲಿ ಕಾರಣವೇನು?, ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದ್ದು ಏಕೆ?, ಕೇಂದ್ರ ಸರ್ಕಾರ ಅದನ್ನು ರದ್ದುಗೊಳಿಸಿದ್ದು ಏಕೆ? ಹೀಗೆ ಹಲವು ಪ್ರಶ್ನೆಗಳಿಗೆ ಒಂದೇ ವರದಿಯಲ್ಲಿ ಉತ್ತರವನ್ನು ತಿಳಿದುಕೊಳ್ಳಿರಿ.

"ಕಣಿವೆ ರಾಜ್ಯದಲ್ಲಿ ಕೆಳಮಟ್ಟದ ಪ್ರಜಾಪ್ರಭುತ್ವದ ರಕ್ಷಣೆ"

"ಜಮ್ಮು ಕಾಶ್ಮೀರದಲ್ಲಿ ಕೆಳಮಟ್ಟದಲ್ಲಿರುವ ಪ್ರಜಾಪ್ರಭುತ್ವ ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಗಡಿ ನಿರ್ಣಯ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ, ಅದರಿಂದ ಜಮ್ಮು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬಂದು ಅಭಿವೃದ್ಧಿ ಪಥ ಸುಗಮವಾಗುತ್ತದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕ್ಷೇತ್ರ ಪುನಾರಚನೆ ಪ್ರಸ್ತಾಪಕ್ಕೆ ಉಮರ್ ಅಬ್ದುಲ್ಲಾ ವಿರೋಧ

ಕ್ಷೇತ್ರ ಪುನಾರಚನೆ ಪ್ರಸ್ತಾಪಕ್ಕೆ ಉಮರ್ ಅಬ್ದುಲ್ಲಾ ವಿರೋಧ

ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರಗಳ ಪುನಾರಚನೆ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಿರೋಧ ವ್ಯಕ್ತಪಡಿಸಿದರು. ಸರ್ವ ಪಕ್ಷ ಸಭೆ ನಂತರ ಮಾತನಾಡಿದ ಅವರು, "ಈ ಹಂತದಲ್ಲಿ ಗಡಿ ನಿರ್ಣಯ ಹಾಗೂ ಕ್ಷೇತ್ರಗಳ ಪುನಾರಚನೆ ಅಗತ್ಯವಿಲ್ಲ," ಎಂದರು.

"ಜಮ್ಮು-ಕಾಶ್ಮೀರವೊಂದರಲ್ಲೇ ಏಕೆ ಗಡಿ ನಿರ್ಣಯ ಮತ್ತು ಪುನಾರಚನೆ ಪ್ರಕ್ರಿಯೆ ನಡೆಸಬೇಕು. ರಾಜ್ಯದಲ್ಲಿ ಇದೀಗ ಪುನಾರಚನೆ ಅಗತ್ಯವಿಲ್ಲ. 2026ರ ವೇಳೆಗೆ ಇತರೆ ರಾಜ್ಯಗಳಲ್ಲಿ ಗಡಿ ನಿರ್ಣಯ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಜಮ್ಮು ಕಾಶ್ಮೀರವೊಂದನ್ನೇ ಏಕೆ ಪ್ರತ್ಯೇಕಗೊಳಿಸಲಾಗುತ್ತಿದೆ. 2019ರ ಆಗಸ್ಟ್ 5ರಂದು ರಾಜ್ಯವನ್ನು ಭಾರತದೊಂದಿಗೆ ಒಂದು ಗೂಡಿಸಿದ ವೇಳೆ ಗಡಿ ನಿರ್ಣಯ ಪ್ರಕ್ರಿಯೆಯನ್ನು ಪ್ರತ್ಯೇಕಿಸುವುದರಿಂದ ಉದ್ದೇಶಕ್ಕೆ ಹಿನ್ನಡೆ ಆಗಲಿದೆ," ಓಮರ್ ಅಬ್ದುಲ್ಲಾ ತಿಳಿಸಿದರು.

 ಜಮ್ಮು ಕಾಶ್ಮೀರ ಕುರಿತ ಮೋದಿ ಸಭೆ; ಇಲ್ಲಿವೆ ಪ್ರಮುಖ ಅಂಶಗಳು ಜಮ್ಮು ಕಾಶ್ಮೀರ ಕುರಿತ ಮೋದಿ ಸಭೆ; ಇಲ್ಲಿವೆ ಪ್ರಮುಖ ಅಂಶಗಳು

"ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು ಪಾಕಿಸ್ತಾನವಲ್ಲ"

"ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯ ಅಡಿ ವಿಶೇಷ ಸ್ಥಾನಮಾನವನ್ನು ನಮ್ಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಮತ್ತು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರೇ ಹೊರತೂ ಪಾಕಿಸ್ತಾನವಲ್ಲ. ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಅಸಂವಿಧಾನಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಜಮ್ಮು ಕಾಶ್ಮೀರದ ಜನರು ಅವಮಾನಕ್ಕೀಡಾಗಿದ್ದಾರೆ. ತೀವ್ರವಾಗಿ ನೊಂದಿರುವ ಜನರು ಭಾವನಾತ್ಮಕವಾಗಿ ಕುಸಿದು ಹೋಗಿದ್ದಾರೆ," ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ಅಡಿ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಒತ್ತಾಯಿಸಿದರು. ರಾಜ್ಯದ ಜನರು ಅದಕ್ಕಾಗಿ ಶಾಂತಿಯುತ ಮತ್ತು ಸಾಂವಿಧಾನಿಕವಾಗಿ ತಿಂಗಳು ಮತ್ತು ವರ್ಷಗಳ ಕಾಲ ಒಟ್ಟಾಗಿ ಹೋರಾಡುತ್ತಾರೆ ಎಂದು ಪ್ರತಿಪಾದಿಸಿದರು.

ಗಡಿ ನಿರ್ಣಯ ಬೆನ್ನಲ್ಲೇ ಚುನಾವಣೆಗೆ ಮುಹೂರ್ತ

ಗಡಿ ನಿರ್ಣಯ ಬೆನ್ನಲ್ಲೇ ಚುನಾವಣೆಗೆ ಮುಹೂರ್ತ

ಕೇಂದ್ರ ಸಂಸತ್ತಿನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಂಗಡಣೆ ಮಾಡಲಾಯಿತು. ಜಮ್ಮು ಕಾಶ್ಮೀರದಲ್ಲಿ ಗಡಿ ನಿರ್ಣಯ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದು ಘೋಷಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಬೆಂಬಲವನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಂತೆ ಸರ್ಕಾರ ಪತನವಾಯಿತು. 2018ರಿಂದಲೂ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸುವುದು ಬಾಕಿ ಉಳಿದುಕೊಂಡಿದೆ.

ಏನಿದು ಗಡಿ ನಿರ್ಣಯ?

ಏನಿದು ಗಡಿ ನಿರ್ಣಯ?

ಗಡಿ ನಿರ್ಣಯ ಎಂದರೆ ಯಾವುದೇ ಒಂದು ಪ್ರದೇಶದ ಜನಸಂಖ್ಯೆಯ ಆಧಾರದಲ್ಲಿ ಬದಲಾವಣೆಗಳನ್ನು ಪ್ರತಿಬಿಂಬಿಸುವ ಹಾಗೂ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಗಡಿಗಳನ್ನು ಪುನಾರಚಿಸುವುದಾಗಿದೆ. ಈ ಪ್ರಕ್ರಿಯೆಯನ್ನು ಸ್ವತಂತ್ರ ಸಂಸ್ಥೆ ಆಗಿರುವ ಗಡಿ ನಿರ್ಣಯ ಆಯೋಗವು ನಡೆಸುತ್ತದೆ. ಅದರ ಹೊರತಾಗಿ ಯಾವುದೇ ಕಾರ್ಯಕಾರಿ ಹಾಗೂ ರಾಜಕೀಯ ಪಕ್ಷಗಳಿಗೆ ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಇರುವುದಿಲ್ಲ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ನೇತೃತ್ವದಲ್ಲಿ ಆಯೋಗ ರಚನೆಯಾಗಿರಲಿದ್ದು, ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರು ಮತ್ತು ರಾಜ್ಯ ಚುನಾವಣಾ ಆಯುಕ್ತರನ್ನು ಒಳಗೊಂಡಿದೆ. ಇವರ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಐವರು ಸಂಸದರು ಹಾಗೂ ಸಹಾಯಕರು ಸದಸ್ಯರಾಗಿದ್ದಾರೆ, ಅದಾಗ್ಯೂ ಅವರ ಶಿಫಾರಸುಗಳು ಆಯೋಗಕ್ಕೆ ಬದ್ಧವಾಗಿರುವುದಿಲ್ಲ.

ಈ ಹಿಂದೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಸೇರಿದಂತೆ ಮೂವರು ಸಂಸದರು ಗಡಿ ನಿರ್ಣಯ ಆಯೋಗದ ಸಭೆಗಳನ್ನು ಬಹಿಷ್ಕರಿಸಿದ್ದರು. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಹಿನ್ನೆಲೆ ಆಯೋಗದ ಅಧ್ಯಕ್ಷರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿದರೆ ಸಭೆಗಳಿಗೆ ಹಾಜರಾಗುವುದಾಗಿ ಸೂಚಿಸಿದ್ದರು.

ಇನ್ನೊಂದು ಕಡೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸೇರಿದಂತೆ ಇತರ ಪಕ್ಷದ ನಾಯಕರು ಆಗಸ್ಟ್ 5 ರ ನಿರ್ಧಾರ ಮತ್ತು ಗಡಿ ನಿರ್ಣಯದ ಬಗ್ಗೆ ಕೇಂದ್ರ ಸರ್ಕಾರದ ಕಸರತನ್ನು ಸುಪ್ರೀಂಕೋರ್ಟ್ ಮುಂದೆ ಪ್ರಶ್ನಿಸಿವೆ.

ಜಮ್ಮು ಕಾಶ್ಮೀರದಲ್ಲಿ ಗಡಿ ನಿರ್ಣಯ ಹೇಗೆ?

ಜಮ್ಮು ಕಾಶ್ಮೀರದಲ್ಲಿ ಗಡಿ ನಿರ್ಣಯ ಹೇಗೆ?

370 ವಿಧಿ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವವರೆಗೂ, ಜಮ್ಮು ಮತ್ತು ಕಾಶ್ಮೀರದಲ್ಲಿನ ಲೋಕಸಭಾ ಸ್ಥಾನಗಳ ಗಡಿ ನಿರ್ಣಯವನ್ನು ಭಾರತದ ಸಂವಿಧಾನ ಹಾಗೂ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಮತ್ತು ಜಮ್ಮು ಮತ್ತು ಕಾಶ್ಮೀರ ಜನಪ್ರತಿನಿಧಿ ಕಾಯ್ದೆ, 1957 ಅಡಿ ನಿರ್ಧರಿಸಲಾಗುತ್ತಿತ್ತು.

1981 ಜನಗಣತಿ ಆಧಾರದ ಮೇಲೆ 1995ರಲ್ಲಿ ಪುನಾರಚನೆ ಮಾಡಲಾಗಿತ್ತು. 1991ರಲ್ಲಿ ಯಾವುದೇ ಜನಗಣತಿ ನಡೆಸಿರಲಿಲ್ಲ. 2001ರ ಜನಗಣತಿ ನಂತರ 2026ರವರೆಗೂ ಗಡಿ ನಿರ್ಣಯವನ್ನು ತಡೆ ಹಿಡಿಯುವ ಕಾನೂನನ್ನು ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಜಾರಿಗೊಳಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ಎಂಬುದರ ಹಿಂದಿನ ಅರ್ಥ?

ಜಮ್ಮು ಮತ್ತು ಕಾಶ್ಮೀರ ಎಂಬುದರ ಹಿಂದಿನ ಅರ್ಥ?

ವಿಶೇಷ ಸ್ಥಾನಮಾನವನ್ನು ಕಳೆದುಕೊಂಡ ನಂತರ ವಿಧಾನಸಭೆ ಮತ್ತು ಲೋಸಭೆ ಕ್ಷೇತ್ರಗಳನ್ನು ಭಾರತ ಸಂವಿಧಾನದ ಅಡಿಯಲ್ಲೇ ಗುರುತಿಸಲಾಗುತ್ತದೆ. ಗಡಿ ನಿರ್ಣಯ ಆಯೋಗವನ್ನು ಕಳೆದ ವರ್ಷವೇ ರಚಿಸಲಾಗಿದ್ದು, ಕೊರೊನಾವೈರಸ್ ಬಿಕ್ಕಟ್ಟಿನ ಹಿನ್ನೆಲೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ಪುನರ್ವವ್ಯವಸ್ಥೆ ಕಾಯ್ದೆ 2019ರ ಪ್ರಕಾರ, ರಾಜ್ಯದ ಹೊಸ ಶಾಸಕಾಂಗದಲ್ಲಿ 90 ಸ್ಥಾನಗಳಿವೆ. ಹೊಸದಾಗಿ ಕ್ಷೇತ್ರಗಳನ್ನು ಗುರುತಿಸಿದ ನಂತರದಲ್ಲಿ ಹಿಂದಿಗಿಂತ ಏಳು ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗುತ್ತದೆ. 2019ಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ 87 ವಿಧಾನಸಭೆ ಕ್ಷೇತ್ರಗಳಿದ್ದವು. ಈ ಪೈಕಿ ಲಡಾಖ್ ನಾಲ್ಕು ಕ್ಷೇತ್ರಗಳು ಸೇರಿದ್ದವು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವ್ಯಾಪ್ತಿಗೆ ಬರುವುದರಿಂದ 24 ವಿಧಾನಸಭೆ ಕ್ಷೇತ್ರದ ಸ್ಥಾನಗಳು ಖಾಲಿ ಉಳಿದಿವೆ.

ವಿವಾದ ಸೃಷ್ಟಿ ಹಿಂದಿನ ಕಾರಣವೇನು?

ವಿವಾದ ಸೃಷ್ಟಿ ಹಿಂದಿನ ಕಾರಣವೇನು?

ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಂಖ್ಯೆ ಆಧಾರದ ಮೇಲೆ ಗಡಿ ನಿರ್ಣಯ ಮಾಡುವುದಕ್ಕೆ ಮುಂದಾಗಿದೆ. ಈ ಗಡಿ ನಿರ್ಣಯದ ನಂತರದಲ್ಲಿ ಜಮ್ಮುವಿಗೆ ಎಷ್ಟು ವಿಧಾನಸಭಾ ಕ್ಷೇತ್ರ ಮತ್ತು ಕಾಶ್ಮೀರಕ್ಕೆ ಎಷ್ಟು ವಿಧಾನಸಭಾ ಕ್ಷೇತ್ರ ಎನ್ನುವುದು ಖಾತ್ರಿಯಾಗುತ್ತದೆ. 2011ರ ಜನಗಣತಿ ಪ್ರಕಾರ, ಜಮ್ಮುವಿಗಿಂತ ಕಾಶ್ಮೀರ ದೊಡ್ಡದು ಎನಿಸುತ್ತದೆ. ಜನಸಂಖ್ಯೆ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 87 ವಿಧಾನಸಭೆ ಕ್ಷೇತ್ರಗಳಲ್ಲಿ 68 ಲಕ್ಷ ಜನಸಂಖ್ಯೆ ಹೊಂದಿರುವ ಕಾಶ್ಮೀರಕ್ಕೆ 46 ಹಾಗೂ 53 ಲಕ್ಷ ಜನಸಂಖ್ಯೆ ಹೊಂದಿರುವ ಜಮ್ಮುವಿಗೆ 37 ಕ್ಷೇತ್ರಗಳು ಬರುತ್ತವೆ.

ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಗಡಿ ನಿರ್ಣಯ

ರಾಷ್ಟ್ರಪತಿ ಆಳ್ವಿಕೆ ಸಂದರ್ಭದಲ್ಲಿ ಗಡಿ ನಿರ್ಣಯ

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಂದರೆ 1994-1995ರ ವೇಳೆಯಲ್ಲಿ ಗಡಿ ನಿರ್ಣಯ ಮತ್ತು ಕ್ಷೇತ್ರಗಳ ಪುನಾರಚನೆ ಮಾಡಲಾಯಿತು. ಅಂದು ವಿಧಾನಸಭೆ ಕ್ಷೇತ್ರಗಳ ಸಂಖ್ಯೆ 76 ರಿಂದ 87ಕ್ಕೆ ಏರಿಕೆಯಾಗಿತ್ತು. ಜಮ್ಮುವಿನಲ್ಲಿ ಕ್ಷೇತ್ರಗಳ ಸಂಖ್ಯೆ 32 ರಿಂದ 37ಕ್ಕೆ ಏರಿಕೆಯಾಗಿತ್ತು. ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 42 ರಿಂದ 46ಕ್ಕೆ ಏರಿಕೆಯಾಗಿತ್ತು.

ದೇಶಾದ್ಯಂತ 2026ರಲ್ಲಿ ಗಡಿ ನಿರ್ಣಯ ಪ್ರಕ್ರಿಯೆ

ದೇಶಾದ್ಯಂತ 2026ರಲ್ಲಿ ಗಡಿ ನಿರ್ಣಯ ಪ್ರಕ್ರಿಯೆ

2002ರಲ್ಲಿ ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ 2026ರವರೆಗೂ ಈ ಪ್ರಕ್ರಿಯೆಯನ್ನು ತಟಸ್ಥವಾಗಿರಿಸುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಅಂದಿನ ಸಂಸದೀಯ ಸಮಿತಿ ನಿರ್ಧಾರದಲ್ಲಿ 2026ರ ನಂತರ ಗಡಿ ನಿರ್ಣಯ ಆಯೋಗ ರಚಿಸುವುದು ಹಾಗೂ ದೇಶಾದ್ಯಂತ ಲೋಕಸಭಾ ಕ್ಷೇತ್ರಗಳನ್ನು ಪುನಾರಚಿಸುವ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

ದೇಶಾದ್ಯಂತ ಒಂದು ವೇಳೆ ಗಡಿ ನಿರ್ಣಯ ಮತ್ತು ಲೋಕಸಭಾ ಕ್ಷೇತ್ರಗಳ ಪುನಾರಚನೆ ಪ್ರಕ್ರಿಯೆ ನಡೆಸಿದರೆ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543 ರಿಂದ 888ಕ್ಕೆ ಏರಿಕೆಯಾಗುವ ಹಾಗೂ ರಾಜ್ಯಸಭೆ ಸ್ಥಾನಗಳ ಸಂಖ್ಯೆ 245 ರಿಂದ 384ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

English summary
Delimitation In Jammu & Kashmir: What It Means? And Why Is It Crucial? Explained in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X