ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಕೆಜಿಗೆ 16,000 ರೂಪಾಯಿಗೆ ಮಾರಾಟವಾಗುವ ಸ್ವೀಟ್

|
Google Oneindia Kannada News

ಚಿನ್ನದ ಬಿರಿಯಾನಿ ಮತ್ತು ಗೋಲ್ಡನ್ ವಡಾ ಪಾವ್‌ಗಳ ನಂತರ ಇದೀಗ ಗೋಲ್ಡನ್ ಮಿಠಾಯಿಗಳ ಸರದಿ. ಸ್ವೀಟ್ಸ್ ತಿನ್ಬೇಕು, ಸ್ವೀಟ್ಸ್ ಅಂದ್ರೆ ಪಂಚಪ್ರಾಣ ಅನ್ನೋ ಎಲ್ಲರಿಗೂ ಈ ಸುದ್ದಿ ರೋಮಾಂಚನಗೊಳಿಸಬಹುದು. ನಾವು ಹೆಚ್ಚಾಗಿ ಭಾರತೀಯ ಸಿಹಿತಿಂಡಿಗಳನ್ನು ಬೆಳ್ಳಿಯ ಹಾಳೆಯೊಂದಿಗೆ ನೋಡಿದ್ದೇವೆ. ಈಗ ದೆಹಲಿಯ ಸಿಹಿತಿಂಡಿ ಅಂಗಡಿಯು ಸಂಪ್ರದಾಯವನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿದೆ. ಇದು ಚಿನ್ನದ ಲೇಪಿತ ಮಿಠಾಯಿಯನ್ನು ಮಾರಾಟ ಮಾಡುತ್ತಿದೆ. ಆದರೆ ಈ ಗೋಲ್ಡನ್ ಮಿಠಾಯಿಯನ್ನು ಸವಿಯಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಚಿನ್ನ ಲೇಪಿತ ಮಿಠಾಯಿಯ ಬೆಲೆ ರೂ. ಪ್ರತಿ ಕೆಜಿಗೆ 16,000 ರು. ಇದನ್ನು ದೆಹಲಿಯ ಮೌಜ್‌ಪುರದಲ್ಲಿರುವ ಶಗುನ್ ಸ್ವೀಟ್ಸ್ ಎಂದು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಿಹಿತಿಂಡಿಗಳ ತಯಾರಿಕೆಯ ವಿಡಿಯೊವನ್ನು ಆಹಾರ ಬ್ಲಾಗರ್ ಅರ್ಜುನ್ ಚೌಹಾಣ್ ಅವರು ತಮ್ಮ foodieee ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಸಿಹಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನಂತರ ಗೋಲ್ಡನ್ ಫಾಯಿಲ್‌ನ ಪದರವನ್ನು ಹೇಗೆ ಲೇಪಿಸಲಾಗುತ್ತದೆ ಎಂದು ವಿಡಿಯೊ ತೋರಿಸುತ್ತದೆ. "16000 ರು ಪ್ರತಿ ಕೆಜಿ ಚಿನ್ನ ಲೇಪಿತ ಮಿಠಾಯಿಯನ್ನು(ಸ್ವೀಟ್) ತಿನ್ನಲು ಇಚ್ಚಿಸುವ ನಿಮ್ಮ ಶ್ರೀಮಂತ ಸ್ನೇಹಿತನನ್ನು ಟ್ಯಾಗ್ ಮಾಡಿ" ಎಂದು ವಿಡಿಯೊದ ಶೀರ್ಷಿಕೆ ಹೇಳುತ್ತದೆ.

ವೀಡಿಯೊವನ್ನು ಇಲ್ಲಿ ವೀಕ್ಷಿಸಿ

Delhi Sweet Shop Sells Gold Plated Mithai at Rs. 16,000/kg, Would You Try It?

ಬಿರಿಯಾನಿಯೊಂದು ಭಾರೀ ವೈರಲ್ ಆಗಿತ್ತು

ಕಳೆದ ವರ್ಷವಷ್ಟೇ ಚಿನ್ನ ಲೇಪಿತ ದುಬಾರಿ ಬಿರಿಯಾನಿಯೊಂದು ಭಾರೀ ವೈರಲ್ ಆಗಿತ್ತು. ಭಾರತದಲ್ಲಿ ಜನರು ಇಷ್ಟಪಟ್ಟು ತಿನ್ನುವ ತಿನಿಸು ಎಂದರೆ ಬಿರಿಯಾನಿ. ಬಾಸುಮತಿ ಅನ್ನವನ್ನು ಹಬೆಯಲ್ಲಿ ಬೇಯಿಸಿ ಚಿಕನ್ ಅಥವಾ ಮಟನ್ ಅಥವಾ ತರಕಾರಿಗಳೊಂದಿಗೆ ಬೇಯಿಸಲಾಗುತ್ತದೆ. ಹೈದರಾಬಾದಿ ಬಿರಿಯಾನಿ ತುಂಬಾ ಫೇಮಸ್. ಆದರಿದು ವಿಶ್ವದ ದುಬಾರಿ ಬಿರಿಯಾನಿ. ಏನೀದರ ವಿಶೇಷತೆ? ಅಂದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ. ಬಿರಿಯಾನಿ ಬೆಲೆ ಬಗ್ಗೆ ಹೇಳಿದರೆ ರಸ್ತೆ ಬದಿಯಲ್ಲಿ 50 ರೂಪಾಯಿಗೆ ಒಂದು ಪ್ಲೇಟ್ ಬಿರಿಯಾನಿ ಸಿಗುತ್ತದೆ, ದುಬಾರಿ ಹೋಟೆಲ್ ನಲ್ಲಿ ಒಂದರಿಂದ ಎರಡು ಸಾವಿರ ರೂ. ಅಗುತ್ತದೆ. ಆದರೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಬೆಲೆ ಎಷ್ಟು ಗೊತ್ತಾ? 20 ಸಾವಿರ ರೂಪಾಯಿ. ಈ ಬಿರಿಯಾನಿಯನ್ನು ಚಿಕನ್ ಮತ್ತು ಮಟನ್‌ನೊಂದಿಗೆ ಚಿನ್ನದೊಂದಿಗೆ ಬಡಿಸಲಾಗುತ್ತದೆ. ಭಾರತದಲ್ಲಿ 5 ಸ್ಟಾರ್ ಹೋಟೆಲ್‌ಗೆ‌ ಹೋಗಿ ಬಿರಿಯಾನಿ ತಿಂದರೆ, ಸಾವಿರ, ಎರಡು ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ತಟ್ಟೆ ಬೆಲೆ 20 ಸಾವಿರ ರೂಪಾಯಿ.

Delhi Sweet Shop Sells Gold Plated Mithai at Rs. 16,000/kg, Would You Try It?

ಇಂತಹ ಒಂದು ರೆಸ್ಟೋರೆಂಟ್ ಬಾಂಬೆ ಬ್ರೋಟ್ ರೆಸ್ಟೋರೆಂಟ್. ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ. ಒಂದು ತಟ್ಟೆಯ ಬೆಲೆ 20 ಸಾವಿರ ರೂಪಾಯಿ. ಇನ್ನೂ ಈ ಬಿರಿಯಾನಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂದು ತಿಳಿದರೆ ಆಶ್ಚರ್ಯಪಡಬಹುದು. ವಾಸ್ತವವಾಗಿ ಈ ಬಿರಿಯಾನಿಯಲ್ಲಿ ಚಿನ್ನ ಬಡಿಸಲಾಗುತ್ತದೆ. ಶಾಕ್ ಆಗ್ಬೇಡಿ, ಆದರೆ ಇದು ನಿಜಾ, ಇತ್ತೀಚೆಗೆ ಗೋಲ್ಡ್ ರಾಯಲ್ ಬಿರಿಯಾನಿಯನ್ನು ಲಾಂಚ್ ಮಾಡಲಾಗಿದೆ. ಈ ಬಿರಿಯಾನಿಯನ್ನು 23 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗುತ್ತದೆ. ಒಂದು ತಟ್ಟೆಯಲ್ಲಿ 5 ಜನ ಬಿರಿಯಾನಿ ತಿನ್ನಬಹುದು. ಲಾಂಚ್ ಆದಾಗಿನಿಂದ ಈ ಬಿರಿಯಾನಿಯ ರುಚಿಯ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದನ್ನು ತಿನ್ನಲೆಂದು ರೆಸ್ಟೋರೆಂಟ್‌ನಲ್ಲಿ ಜನಜಂಗುಳಿ ಇರುತ್ತದೆ. ಈಗ ಅದರ ಬೆಲೆಯಿಂದಾಗಿ ಬಿರಿಯಾನಿ ಪ್ರಿಯರ ಬಾಯಲ್ಲಿ ಇದೇ ಸುದ್ದಿ.

English summary
The gold-plated mithai is worth Rs. 16,000 per kg and the shop is called Shagun Sweets located in Maujpur, Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X