ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿದಿನ ಅತ್ಯಾಚಾರಗಳು ಎಷ್ಟು ಗೊತ್ತಾ?

|
Google Oneindia Kannada News

ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುವುದು ದೆಹಲಿಯ ಪೊಲೀಸರು ದಾಖಲೆಗಳುನ್ನು ಬಿಡುಗಡೆ ಮಾಡುವ ಮೂಲಕ ಒಪ್ಪಿಕೊಂಡ್ಡಿದ್ದಾರೆ. ದೆಹಲಿಯ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ದೌರ್ಜನೆ ಸೇರಿದಂತೆ ಅತ್ಯಾಚಾರ ಪ್ರಕರಣಗಳನ್ನು ತಡೆಯುವುವಲ್ಲಿ ಪೊಲೀಸ್ ವಿಫಲವಾಗಿದೆ ಎಂಬ ಸಾಕ್ಷಿಯಾಗಿ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿಯು ರಾಷ್ಟ್ರ ರಾಜಧಾನಿ ದೆಹಲಿಯನ್ನು ಮತ್ತಷ್ಟು ಬೆಚ್ಚಿಬಿಳಿಸಿದೆ.

ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಗಂಭೀರ ವಿಷಯವನ್ನು ದೆಹಲಿ ಪೊಲೀಸರೆ ಬಿಚ್ಚಿಟ್ಟಿದ್ದಾರೆ. ಪೊಲೀಸರ ಅಂಕಿ-ಅಂಶಗಳ ಪ್ರಕಾರ, 2022ರ ಮೊದಲ 6 ತಿಂಗಳಲ್ಲಿ ದೆಹಲಿಯಲ್ಲಿ 1,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ವರ್ಷ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ 6% ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಮಾಡಲಾದ ಪ್ರಕರಣಗಳಲ್ಲಿ 17%ರಷ್ಟು ಹೆಚ್ಚಳವಾಗಿದೆ.

ಮಹಿಳೆಯರಿಗೆ ದೆಹಲಿ ಎಷ್ಟು ಸುರಕ್ಷಿತ? 6 ತಿಂಗಳಲ್ಲಿ 1,100 ಅತ್ಯಾಚಾರ ಮಹಿಳೆಯರಿಗೆ ದೆಹಲಿ ಎಷ್ಟು ಸುರಕ್ಷಿತ? 6 ತಿಂಗಳಲ್ಲಿ 1,100 ಅತ್ಯಾಚಾರ

ದೇಶದ ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ದೆಹಲಿಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧಗಳು ಸಾಕ್ಷಿಯಾಗಿದೆ. 2022ರ ಮೊದಲ 6 ತಿಂಗಳಲ್ಲಿ ದೆಹಲಿಯಲ್ಲಿ ಪ್ರತಿದಿನ ಕನಿಷ್ಠ 6 ಅತ್ಯಾಚಾರಗಳು ನಡೆದಿವೆ. ಈ ವರ್ಷದಲ್ಲಿ ಇಲ್ಲಿಯವರೆಗೆ ನಾವು ಪ್ರತಿದಿನ 6 ಅತ್ಯಾಚಾರ ಪ್ರಕರಣಗಳು ಮತ್ತು 7 ಕಿರುಕುಳ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಾಗಿ 2022ರ ಮೊದಲ 6 ತಿಂಗಳಲ್ಲಿ ದೆಹಲಿಯಲ್ಲಿ 1,100 ಕ್ಕೂ ಹೆಚ್ಚು ಅತ್ಯಾಚಾರಗಳು ವರದಿಯಾಗಿವೆ.

6 ತಿಂಗಳಲ್ಲಿ 1,244 ಅತ್ಯಾಚಾರ ಪ್ರಕರಣಗಳು!

6 ತಿಂಗಳಲ್ಲಿ 1,244 ಅತ್ಯಾಚಾರ ಪ್ರಕರಣಗಳು!

ದೆಹಲಿ ಪೊಲೀಸರ ಅಂಕಿಅಂಶಗಳ ಪ್ರಕಾರ, ಈ ವರ್ಷ ಅತ್ಯಾಚಾರ ಪ್ರಕರಣಗಳಲ್ಲಿ 6% ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳಲ್ಲಿ 17% ಹೆಚ್ಚಳವಾಗಿದೆ. ಜನವರಿ 2022ರಿಂದ ಜುಲೈ 15ರವರೆಗೆ ದೆಹಲಿಯಲ್ಲಿ 1,480 ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,244 ಪ್ರಕರಣಗಳು ದಾಖಲಾಗಿವೆ.

ದೆಹಲಿಯು ಈ ವರ್ಷ ಅಪಹರಣ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ದೆಹಲಿ ಪೊಲೀಸರ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಹರಣ ಪ್ರಕರಣಗಳಲ್ಲಿ 20% ಹೆಚ್ಚಳವಾಗಿದೆ. ಜನವರಿ 2022 ಮತ್ತು ಜುಲೈ 15 ರ ನಡುವೆ ದೆಹಲಿಯಲ್ಲಿ 2,197 ಅಪಹರಣ ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ ಬಳಿಕ ಕೌಟುಂಬಿಕ ದೌರ್ಜನ್ಯ ಹೆಚ್ಚಳ

ಕೋವಿಡ್‌ ಬಳಿಕ ಕೌಟುಂಬಿಕ ದೌರ್ಜನ್ಯ ಹೆಚ್ಚಳ

ಕೊರೊನಾ ನಂತರ ದೇಶಾದ್ಯಂತ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಕರೋನಾ ಸಾಂಕ್ರಾಮಿಕದ ನಂತರ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಈ ವರ್ಷ 2,704 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವರ್ಷ 2,096 ಪ್ರಕರಣಗಳು ದಾಖಲಾಗಿದ್ದವು.

ಅತ್ಯಾಚಾರ ಸಂತ್ರಸ್ತೆಯ ಆರೋಪಿಯು ಪರಿಚಯಸ್ಥನಾಗಿದ್ದಾನೆ!

ಅತ್ಯಾಚಾರ ಸಂತ್ರಸ್ತೆಯ ಆರೋಪಿಯು ಪರಿಚಯಸ್ಥನಾಗಿದ್ದಾನೆ!

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಪರಾಧ ಹಾಗೂ ಸಾಮಾಜಿಕ ಸಮಸ್ಯೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಹೇಳಿದ್ದಾರೆ. ಮಕ್ಕಳು, ಮಹಿಳೆಯರು ನಮ್ಮ ಸಹಾಯವಾಣಿ ಸಂಖ್ಯೆ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿದಿರಬೇಕು ಎಂದು ನಾವು ಸೂಚಿಸುತ್ತೇವೆ. ದೆಹಲಿ ಪೊಲೀಸರು ಈ ಅಪರಾಧಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಸಂತ್ರಸ್ತರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಅತ್ಯಂತ ಪ್ರಯತ್ನವಾಗಿದೆ. ಇದರೊಂದಿಗೆ, ಅಂತಹ ಪ್ರಕರಣಗಳಲ್ಲಿನ ಅಂಕಿ-ಅಂಶಗಳ ಪ್ರಕಾರ, ಸುಮಾರು 99.5% ಪ್ರಕರಣಗಳಲ್ಲಿ ಆರೋಪಿಯು ಸಂತ್ರಸ್ತೆಯ ಪರಿಚಯಸ್ಥನಾಗಿದ್ದಾನೆ ಎಂದು ಅವರು ಗಂಭೀರ ವಿಷಯವನ್ನು ಬಿಚ್ಚಿಟ್ಟರು.

ಅನುಮಾನಾಸ್ಪದ ಸ್ಥಳಗಳನ್ನು ಗುರುತಿಸಿರುವ ಪೊಲೀಸರು

ಅನುಮಾನಾಸ್ಪದ ಸ್ಥಳಗಳನ್ನು ಗುರುತಿಸಿರುವ ಪೊಲೀಸರು

ದೆಹಲಿ ಪೊಲೀಸರಿಂದ ಹೆಚ್ಚು ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಹೇಳಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಪಿಂಕ್ ಬೂತ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಇದರೊಂದಿಗೆ ನಾವು ಅನುಮಾನಾಸ್ಪದ ಸ್ಥಳಗಳನ್ನು ಸಹ ಗುರುತಿಸಿದ್ದೇವೆ, ಅಲ್ಲಿ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಾರೆ. ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗಾಗಿ ವಿಶೇಷ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ.

English summary
At least six rape cases and seven cases of molestation have been registered every day in the national capital so far read more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X