ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತ

|
Google Oneindia Kannada News

ನವದೆಹಲಿ, ಫೆಬ್ರವರಿ 8: ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ಪ್ರಕ್ರಿಯೆ ಶನಿವಾರ ಸಂಜೆ ಆರು ಗಂಟೆಗೆ ಮುಕ್ತಾಯವಾಗಿದ್ದು, ದೆಹಲಿಯನ್ನು ಮುಂದೆ ಐದು ವರ್ಷಗಳವರೆಗೆ ಯಾರು ಆಡಳಿತ ಮಾಡುತ್ತಾರೆ ಎಂಬ ರಹಸ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಈ ಕುತೂಹಲಕ್ಕೆ ಸ್ಪಷ್ಟ ಉತ್ತರ ಸಿಗಲು ಫೆ. 11ರವರೆಗೂ ಕಾಯಬೇಕು. ಮಂಗಳವಾರ ನಡೆಯಲಿರುವ ಮತ ಎಣಿಕೆ ನಿಖರ ಫಲಿತಾಂಶ ನೀಡಲಿದೆ. ಅದಕ್ಕೂ ಮೊದಲು ವಿವಿಧ ಸುದ್ದಿ ವಾಹಿನಿಗಳು ಮತ್ತು ಚುನಾವಣೆ ಹಾಗೂ ರಾಜಕೀಯ ಸಮೀಕ್ಷೆಯಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳು ಜತೆಗೂಡಿ ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿದ್ದು, ಅವುಗಳಲ್ಲಿ ಕಂಡುಕೊಂಡಿರುವ ಫಲಿತಾಂಶ ಕುತೂಹಲ ಮೂಡಿಸಿದೆ.

672 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರ 1.4 ಕೋಟಿ ಮತಗಳು ಅವರ ಹಣೆಬರಹ ನಿರ್ಧರಿಸಲಿವೆ. 70 ಕ್ಷೇತ್ರಗಳ 2,688 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಿದೆ. ಸರಳ ಬಹುಮತಕ್ಕೆ 36 ಮತಗಳು ಅಗತ್ಯವಿದೆ.

Delhi Elections 2020 Live: ಮತದಾನ ಅಂತ್ಯ: ಸಮೀಕ್ಷೆ ಫಲಿತಾಂಶ ಆರಂಭDelhi Elections 2020 Live: ಮತದಾನ ಅಂತ್ಯ: ಸಮೀಕ್ಷೆ ಫಲಿತಾಂಶ ಆರಂಭ

ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿದ್ದ ಪ್ರಮುಖ ಮೂರು ಪಕ್ಷಗಳು. ಈ ಪಕ್ಷಗಳು ಎಷ್ಟು ಸೀಟುಗಳನ್ನು ಗೆಲ್ಲುತ್ತವೆ, ಪಕ್ಷೇತರರೂ ವಿಜಯದ ನಗೆ ಬೀರುವ ಅವಕಾಶವಿದೆಯೇ? ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಅಥವಾ ಯಾರೂ ಸರಳ ಬಹುಮತ ಪಡೆಯಲು ಸಾಧ್ಯವಾಗದೆ ಅತಂತ್ರ ವಿಧಾನಸಭೆ ಸ್ಥಿತಿ ಉಂಟಾಗಲಿದೆಯೇ ಎಂಬ ಕೌತುಕಕ್ಕೆ ತಕ್ಕಮಟ್ಟಿನ ಉತ್ತರಗಳನ್ನು ಈ ಸಮೀಕ್ಷೆಗಳು ನೀಡಿವೆ. ಈ ಸಮೀಕ್ಷೆಗಳ ವಿವರ ಇಲ್ಲಿದೆ.

ಟೈಮ್ಸ್ ನೌ-ಐಪಿಒಎಸ್‌ಒಎಸ್ ಸಮೀಕ್ಷೆ

ಟೈಮ್ಸ್ ನೌ-ಐಪಿಒಎಸ್‌ಒಎಸ್ ಸಮೀಕ್ಷೆ

ಟೈಮ್ಸ್ ನೌ-ಐಪಿಒಎಸ್‌ಒಎಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಯಾವ ಪಕ್ಷಗಳು ಎಷ್ಟು ಸೀಟು ಪಡೆದುಕೊಳ್ಳಲಿವೆ ಎಂಬ ಮಾಹಿತಿ ಇಲ್ಲಿದೆ.

* ಎಎಪಿ- 44

* ಬಿಜೆಪಿ- 26

* ಕಾಂಗ್ರೆಸ್- 00

* ಇತರೆ- 00

ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆ

ರಿಪಬ್ಲಿಕ್-ಜನ್ ಕಿ ಬಾತ್ ಸಮೀಕ್ಷೆ

* ಎಎಪಿ- 48-61

* ಬಿಜೆಪಿ- 09-21

* ಕಾಂಗ್ರೆಸ್- 00- 01

* ಇತರೆ-00

ನ್ಯೂಸ್ ಎಕ್ಸ್-ಪೋಲ್‌ಸ್ಟ್ರಾಟ್

ನ್ಯೂಸ್ ಎಕ್ಸ್-ಪೋಲ್‌ಸ್ಟ್ರಾಟ್

* ಎಎಪಿ 52-56

* ಬಿಜೆಪಿ 10-14

* ಕಾಂಗ್ರೆಸ್ 00- 02

* ಇತರೆ-00

ಸಿಸೆರೋ ಎಕ್ಸಿಟ್ ಪೋಲ್

ಸಿಸೆರೋ ಎಕ್ಸಿಟ್ ಪೋಲ್

* ಎಎಪಿ- 54

* ಬಿಜೆಪಿ- 15

* ಕಾಂಗ್ರೆಸ್- 1

* ಇತರೆ- 00

ಇಂಡಿಯಾ ಟಿವಿ ಸಮೀಕ್ಷೆ

ಇಂಡಿಯಾ ಟಿವಿ ಸಮೀಕ್ಷೆ

* ಎಎಪಿ- 44

* ಬಿಜೆಪಿ- 26

* ಕಾಂಗ್ರೆಸ್- 00

* ಇತರೆ- 00

ಎಬಿಪಿ-ಸಿ ವೋಟರ್ ಸಮೀಕ್ಷೆ

ಎಬಿಪಿ-ಸಿ ವೋಟರ್ ಸಮೀಕ್ಷೆ

* ಎಎಪಿ 49-67

* ಬಿಜೆಪಿ 05-19

* ಕಾಂಗ್ರೆಸ್ 00-04

* ಇತರೆ 00

ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ

ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ

* ಎಎಪಿ 59-68

* ಬಿಜೆಪಿ 02-11

* ಕಾಂಗ್ರೆಸ್- 00

* ಇತರೆ- 00

English summary
Delhi Assembly Election Exit Poll 2020 - Find details about the Delhi Exit Poll 2020 by various media agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X