ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಬಜಾರಿನಲ್ಲೂ ಬಿಜೆಪಿಗೆ ಹಿನ್ನಡೆ, ಎಎಪಿಗೆ ಮುನ್ನಡೆ

|
Google Oneindia Kannada News

Recommended Video

Delhi Assembly Election Results 2020 : AAP is the favor even at Satta Bazaar

ನವದೆಹಲಿ, ಫೆಬ್ರವರಿ 10: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾದ ಬಳಿಕ ವಿವಿಧ ಸುದ್ದಿ ವಾಹಿನಿಗಳು ಮತ್ತು ಚುನಾವಣೆ ಹಾಗೂ ರಾಜಕೀಯ ಸಮೀಕ್ಷೆಯಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳು ಜತೆಗೂಡಿ ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿ ಫಲಿತಾಂಶ ಹೊರ ಹಾಕಿವೆ. ನಿರೀಕ್ಷೆಯಂತೆ ಆಮ್ ಆದ್ಮಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಗೆ ಹಿನ್ನಡೆಯಾಗಿದೆ. ಇದೀಗ ಬೆಟ್ಟಿಂಗ್ ಬಜಾರಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ಬಿಡ್? ಯಾವ ಪಕ್ಷಕ್ಕೆ ಗೆಲುವು ಎಂಬ ವಿವರ ಲಭ್ಯವಾಗಿದೆ.

ದೆಹಲಿಯ 70 ಕ್ಷೇತ್ರಗಳಲ್ಲಿ 672 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರ 1.4 ಕೋಟಿ ಮತಗಳು ಅವರ ಹಣೆಬರಹ ನಿರ್ಧರಿಸಲಿವೆ. 70 ಕ್ಷೇತ್ರಗಳ 2,688 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಿದೆ. ಸರಳ ಬಹುಮತಕ್ಕೆ 36 ಮತಗಳು ಅಗತ್ಯವಿದೆ.

2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿದೆ.

EXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತEXIT POLL: ದೆಹಲಿಯಲ್ಲಿ ಎಎಪಿ 3.0 ಸರ್ಕಾರ ಖಚಿತ

ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮುರಿದಿರುವುದರಿಂದ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 8ರಂದು ಮತದಾನ ನಡೆದಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬರಲಿದೆ.

ಸಮೀಕ್ಷೆಗಳ ಸರಾಸರಿ

ಸಮೀಕ್ಷೆಗಳ ಸರಾಸರಿ

ಟೈಮ್ಸ್ ನೌ-ಐಪಿಒಎಸ್‌ಒಎಸ್, ರಿಪಬ್ಲಿಕ್-ಜನ್ ಕಿ ಬಾತ್, ನ್ಯೂಸ್ ಎಕ್ಸ್-ಪೋಲ್‌ಸ್ಟ್ರಾಟ್, ಸಿಸೆರೋ ಎಕ್ಸಿಟ್ ಪೋಲ್, ಇಂಡಿಯಾ ಟಿವಿ ಸಮೀಕ್ಷೆ, ಎಬಿಪಿ-ಸಿ ವೋಟರ್, ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ

ಕ್ರಮವಾಗಿ ಎಎಪಿ -44, 48-61, 52-56, 54, 44, 49-67, 59-68 ಗಳಿಸಬಹುದು ಎಂದು ವರದಿ ಬಂದಿದೆ. ಸಮೀಕ್ಷೆಗಳ ಸರಾಸರಿಯಂತೆ ಮ್ಯಾಜಿಕ್ ನಂಬರ್ 36 ದಾಟಿ ಆಮ್ ಆದ್ಮಿ ಪಕ್ಷ ಗೆಲುವು ದಾಖಲಿಸಬಹುದಾಗಿದೆ.

ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಯಾರಿಗೆ ಎಷ್ಟು?

ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಯಾರಿಗೆ ಎಷ್ಟು?

ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ 54-56 ಸ್ಥಾನ ನೀಡಲಾಗಿದೆ. ಬಿಜೆಪಿ 11 ರಿಂದ 13 ಸ್ಥಾನ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ 3 ರಿಂದ 4 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ.

ಆಮ್ ಆದ್ಮಿ ಪಕ್ಷಕ್ಕೆ 70 ಪೈಸೆ, ಬಿಜೆಪಿ 85 ಪೈಸೆ, ಕಾಂಗ್ರೆಸ್ 5 ರು ನಂತೆ ಬಿಡ್ಡಿಂಗ್ ನಡೆದಿದೆ. ಬೆಟ್ಟಿಂಗ್ ಬಜಾರಿನ ಊಹೆ ಪ್ರಕಾರ, ಎಎಪಿ ಮುನ್ನಡೆ ಸಾಧಿಸಿದರೂ ಗೆಲುವು ಸುಲಭವಾಗಿಲ್ಲ. ಬಿಜೆಪಿ ರೇಸಿನಲ್ಲಿ ಹಿಂದೆಯೇ ಇದೆ.

ಗ್ಯಾಲರಿ: ದೆಹಲಿಯಲ್ಲಿ ಚುನಾವಣ ಪ್ರಚಾರ, ಫಲಿತಾಂಶದ ನಿರೀಕ್ಷೆ

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ

2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಎಎಪಿ ಶೇ 54.3 ಹಾಗೂ ಬಿಜೆಪಿ 34.3% ಮತ ಪಡೆದುಕೊಂಡಿದ್ದವು. ಈ ಬಾರಿ ಕನಿಷ್ಠ 48 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ. ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಅವರು ಎಎಪಿ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಿನ್ನಡೆಗೆ ಕಾರಣವೇನು?

ಬಿಜೆಪಿ ಹಿನ್ನಡೆಗೆ ಕಾರಣವೇನು?

ಬಿಜೆಪಿಯ ಪ್ರಚಾರ ಸಭೆಗಳಲ್ಲಿ ಬಹುತೇಕ ರಾಷ್ಟ್ರೀಯ ವಿಷಯಗಳೇ ಹೆಚ್ಚಾಗಿದ್ದವು, ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಬಗ್ಗೆ ಭಾಷಣಗಳಲ್ಲಿ ಹೆಚ್ಚು ಕೇಳಿ ಬಂದಿದೆ. ಆದರೆ, ಆಮ್ ಆದ್ಮಿ ಪಕ್ಷ ಸ್ಥಳೀಯ್ ಸಮಸ್ಯೆಗಳು ಅನುಷ್ಠಾನಗೊಳಿಸಬಹುದಾದ ರಿಯಾಲಿಟಿ ಯೋಜನೆಗಳತ್ತ ಹೆಚ್ಚಿನ ಗಮನ ನೀಡಿದ್ದು ಕಾರಣವಿರಬಹುದು ಎಂದು ಬೆಟ್ಟಿಂಗ್ ಮಾರುಕಟ್ಟೆ ಪಂಟರ್ ಗಳು ಹೇಳಿದ್ದಾರೆ. ಉಚಿತ ಪ್ರಯಾಣ, ವಿದ್ಯುತ್, ಕುಡಿಯುವ ನೀರು ಪೂರೈಕೆ ಮುಂತಾದ ಜನಪ್ರಿಯ ಯೋಜನೆಗಳು ಇಂದಿಗೂ ಮತದಾರರನ್ನು ಸೆಳೆಯಬಲ್ಲ ಅಂಶಗಳಾಗಿವೆ.

English summary
Delhi Assembly Election Exit Poll 2020: Satta bazaar also roots for a AAP comeback, gives 54-56 seats; BJP close behind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X