ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ 2021: ಈ 5 ವಸ್ತುಗಳು ಲಕ್ಷ್ಮಿಯ ಆಗಮನದ ಸಂಕೇತ

|
Google Oneindia Kannada News

ಲಕ್ಷ್ಮಿ ದೇವಿಯನ್ನು ಸಿರಿ, ಸಂಪತ್ತು, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ದೇವತೆಯೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ದೇವರಿಗೂ ಕೆಲವು ಚಿಹ್ನೆಗಳನ್ನು, ವಸ್ತುಗಳನ್ನು, ಪ್ರಾಣಿಗಳನ್ನು, ಪಕ್ಷಿಗಳನ್ನು, ಸಸ್ಯಗಳನ್ನು ಅವರ ಸಂಕೇತವಾಗಿ ನಿಗದಿಪಡಿಸಲಾಗಿದೆ. ಹಾಗೆಯೇ ದೀಪಾವಳಿಯ ದಿನಗಳಲ್ಲಿ ಈ ಪಕ್ಷಿ ಅಥವಾ ವಸ್ತುವು ನಿಮಗೆ ಎದುರಾದರೆ ಹಣದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬದ ಆಚರಣೆ ಆರಂಭವಾಗಿಲಿದೆ. ಧನ್ತೇರಸ್ 2021 ಅನ್ನು 2 ನವೆಂಬರ್ 2021 ರಂದು ಆಚರಿಸಲಾಗುತ್ತದೆ. ಇದರ ನಂತರ ನರಕ ಚತುರ್ಥಿ, ಲಕ್ಷ್ಮಿ ಪೂಜೆ (ದೀಪಾವಳಿ), ಗೋವರ್ಧನ ಪೂಜೆ ಮತ್ತು ಭಾಯಿ ದೂಜ್ ಆಚರಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದ ಪಡೆಯಲು ಈ ಐದು ದಿನಗಳು ಬಹಳ ಮುಖ್ಯ.

ಕೋವಿಡ್ ಸಾಂಕ್ರಾಮಿಕ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಹಲವಾರು ರಾಜ್ಯಗಳು ವಿವಿಧ ನಿರ್ಬಂಧಗಳನ್ನು ವಿಧಿಸಿವೆ. ಕೆಲವು ರಾಜ್ಯಗಳು ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದ್ದರೆ, ಕೆಲವು ರಾಜ್ಯಗಳು ಈ ವರ್ಷ ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅನುಮತಿಸಿವೆ. ಆದರೆ ಶುಕ್ರವಾರ ಪಟಾಕಿ ಸಿಡಿಸುವ ಸಂಬಂಧ ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಮೇಲೆ ನಿಷೇಧವಿದೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಜನವರಿ 1, 2022 ರವರೆಗೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆದೇಶಿಸಿದೆ.

ಗೂಬೆ ವೀಕ್ಷಣೆ

ಗೂಬೆ ವೀಕ್ಷಣೆ

ಲಕ್ಷ್ಮಿ ದೇವಿಗಿರುವ ನಾನಾ ಹೆಸರುಗಳಲ್ಲಿ ಉಲ್ಕವಾಹಿನಿ ಕೂಡ ಒಂದು. ಉಲ್ಕವಾಹಿನಿ ಎಂದರೆ ಗೂಬೆಯ ಮೇಲೆ ಕುಳಿತು ಸವಾರಿ ಮಾಡುವವಳು ಎಂದರ್ಥ. ಆಧುನಿಕ ಯುಗದಲ್ಲಿ ತಿರಸ್ಕಾರಕ್ಕೊಳಗಾದ ಗೂಬೆ ಧಾರ್ಮಿಕ ಗ್ರಂಥಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ. ಲಕ್ಷ್ಮಿಯ ವಾಹನವಾಗಿರುವ ಗೂಬೆಯು ಶ್ರೀಮಂತಿಕೆಯನ್ನು, ದೃಷ್ಟಿ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಯಾವುದೇ ಶುಕ್ರವಾರದಂದು ಗೂಬೆ ಕಾಣಿಸಿಕೊಂಡರೆ, ಅದು ತುಂಬಾ ಮಂಗಳಕರವಾಗಿರುತ್ತದೆ. ಮತ್ತೊಂದೆಡೆ, ದೀಪಾವಳಿಯ 5 ದಿನಗಳಲ್ಲಿ ಗೂಬೆಯನ್ನು ನೋಡುವುದು ಲಾಟರಿಯಂತೆ. ಅಂದರೆ ಲಕ್ಷ್ಮಿಯ ಕೃಪೆಯಿಂದ ನೀವು ಸಾಕಷ್ಟು ಹಣವನ್ನು ಪಡೆಯುತ್ತೀರಿ.

ಅಕ್ಕಿ

ಅಕ್ಕಿ

ಧಾನ್ಯವೆನ್ನುವುದು ಜೀವಿಗಳಿಗಿರುವ ಪ್ರಮುಖ ಸಂಪತ್ತು ಎಂದು ಪರಿಗಣಿಸಲಾಗಿದೆ. ಧಾನ್ಯ ಹೇರಳವಾಗಿರುವುದು ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಆದ್ದರಿಂದ ಲಕ್ಷ್ಮಿ ಯಾರ ಮನೆಯಲ್ಲಿ ನೆಲೆಸುತ್ತಾಳೋ ಆ ಮನೆಯಲ್ಲಿ ಧನ, ಧಾನ್ಯ ಹೇರಳವಾಗಿರುತ್ತದೆ ಎನ್ನುವ ನಂಬಿಕೆಯಿದೆ. ಲಕ್ಷ್ಮಿದೇವಿಯ ಹಲವು ಅವತಾರಗಳಲ್ಲಿ ಒಂದು ಅವತಾರವನ್ನು ಧಾನ್ಯಲಕ್ಷ್ಮಿ ಎಂದು ಕರೆಯಲಾಗುತ್ತದೆ. ಇದು ಅಷ್ಟ ಲಕ್ಷ್ಮಿಯರಲ್ಲಿ ಒಂದು. ಹೀಗಾಗಿ ಇದ್ದಕ್ಕಿದ್ದಂತೆ ಮನೆಯಲ್ಲಿ ಇಟ್ಟಿದ್ದ ಹಣ ಅಥವಾ ಅಕ್ಕಿಯನ್ನು ಕಂಡರೆ ಶುಭವಾಗುತ್ತದೆ ಎಂದು ನಂಬಲಾಗುತ್ತದೆ. 5 ದಿನಗಳಲ್ಲಿ ಮನೆಯಲ್ಲಿ ಎಲ್ಲೋ ಇಟ್ಟಿರುವ ಹಣ ಅಥವಾ ಅಕ್ಕಿಯನ್ನು ಹಠಾತ್ತನೆ ಕಂಡುಹಿಡಿಯುವುದು ಸಹ ತುಂಬಾ ಮಂಗಳಕರವಾಗಿದೆ.

ಬಂದಿದೆ ದೀಪಾವಳಿ: ರಂಗೋಲಿಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್‌ಬಂದಿದೆ ದೀಪಾವಳಿ: ರಂಗೋಲಿಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್‌

ಏಕಾಕ್ಷಿ ತೆಂಗಿನಕಾಯಿ

ಏಕಾಕ್ಷಿ ತೆಂಗಿನಕಾಯಿ

ಸಾಮಾನ್ಯವಾಗಿ ತೆಂಗಿನಕಾಯಿಗಳ ಸಿಪ್ಪೆಯನ್ನು ಸುಲಿದಾಗ ನಾವು ಅದರಲ್ಲಿ ಮೂರು ಕಣ್ಣುಗಳನ್ನು ನೋಡಬಹುದು. ಆದರೆ ಏಕಾಕ್ಷಿ ತೆಂಗಿನಕಾಯಿಯೆಂದರೆ ಒಂದೇ ಕಣ್ಣನ್ನು ಹೊಂದಿರುವ ತೆಂಗಿನಕಾಯಿ. ಈ ರೀತಿ ತೆಂಗಿನ ಕಾಯಿಗಳು ನೋಡಲು ಸಿಗೋದು ಅತ್ಯಂತ ವಿರಳ. ಈ ಅಪರೂಪದ ಏಕಾಕ್ಷಿ ತೆಂಗಿನಕಾಯಿಗಳು ಲಕ್ಷ್ಮಿ ದೇವಿಯ ಪ್ರಾತಿನಿಧ್ಯವನ್ನು ಸೂಚಿಸುತ್ತದೆ. ಏಕಾಕ್ಷಿ ತೆಂಗಿನಕಾಯಿಯನ್ನು ಸೇವಿಸಲು ಬಳಸುವುದಿಲ್ಲ. ಬದಲಾಗಿ, ಅದನ್ನು ಲಕ್ಷ್ಮಿ ಪೂಜೆಗೆ ಬಳಸುತ್ತಾರೆ. ಇದು ಹಬ್ಬದಂದು ಸಿಕ್ಕರೆ ಶುಭ ಸೂಚಕವಾಗಿದೆ.

ದೀಪಾವಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ: ಹಸಿರು ಪಟಾಕಿಗೆ ಮಾತ್ರ ಅವಕಾಶದೀಪಾವಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ: ಹಸಿರು ಪಟಾಕಿಗೆ ಮಾತ್ರ ಅವಕಾಶ

ಕಪ್ಪು ಇರುವೆಗಳ ಸಮೂಹ

ಕಪ್ಪು ಇರುವೆಗಳ ಸಮೂಹ

ನವೆಂಬರ್ 2 ರಿಂದ ನವೆಂಬರ್ 6, 2021 ರ ಅವಧಿಯಲ್ಲಿ, ನಿಮ್ಮ ಮನೆಯಲ್ಲಿ ಎಲ್ಲಿಯಾದರೂ ಕಪ್ಪು ಇರುವೆಗಳನ್ನು ಕಂಡರೆ, ಅದು ನಿಮ್ಮ ಮನೆಗೆ ಲಕ್ಷ್ಮಿ ದೇವಿಯ ಆಗಮನದ ಸ್ಪಷ್ಟ ಸೂಚನೆಯಾಗಿದೆ. ಹೀಗಾಗಿ ದೀಪಾವಳಿ ಆಚರಣೆ ವೇಳೆ ಸಕ್ಕರೆ ಹಾಕುವುದು ರೂಢಿಯಲ್ಲಿದೆ. ಜೊತೆಗೆ ದೀಪಾವಳಿಯ 5 ದಿನಗಳಲ್ಲಿ ಮನೆಯಲ್ಲಿ ಹಕ್ಕಿ ಗೂಡು ಮಾಡಿದರೆ ಶ್ರೀಮಂತರಾಗುತ್ತೀರಿ ಎಂದು ಅರ್ಥ ಎನ್ನಲಾಗುತ್ತದೆ. ಲಕ್ಷ್ಮಿಯು ನಿಮ್ಮಿಂದ ತೃಪ್ತರಾಗಲು ಇದು ಅತ್ಯಂತ ಮಂಗಳಕರ ಸಂಕೇತವಾಗಿದೆ. ಈ 5 ದಿನಗಳಲ್ಲಿ ನೀವು ಮನೆಯಿಂದ ಹೊರಗೆ ಬಂದಾಗ ನೀವು ಯಾರಾದರೂ ಗುಡಿಸುವುದನ್ನು ನೋಡಿದರೆ, ನಿಮಗೆ ಹಣ ಸಿಗುತ್ತದೆ ಎಂದು ನಂಬಲಾಗುತ್ತದೆ.

English summary
The great festival of Deepavali is going to start. Dhanteras 2021 will be celebrated on 2 November 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X