ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಕ ಸಾಧನ: ಜೀವ ಉಳಿಸಲ್ಲ, ಜೀವ ತೆಗೆಯುತ್ತೆ ಡ್ರೋನ್..!

By ಅನಿಕೇತ್
|
Google Oneindia Kannada News

ಎಲ್ಲೆಲ್ಲೂ ಡ್ರೋನ್‌ನದ್ದೇ ಸುದ್ದಿ, ಡ್ರೋನ್ ಬಗ್ಗೆಯೇ ಚರ್ಚೆ. ಅರೆ ಕೊರೊನಾ ನಡುವೆ ಇದ್ಯಾಕೆ ಡೋನ್ ಬಂತು ಅನ್ನೋ ಪ್ರಶ್ನೆ ನಿಮನ್ನ ಕಾಡಬಹುದು. ಆದ್ರೆ ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಡ್ರೋನ್ ಪ್ರತಾಪ್‌ನ ಟ್ರ್ಯಾಜಿಡಿ. ದೇಶದ ತುಂಬಾ ಮನೆಮಾತಾಗಿದ್ದ ಡ್ರೋನ್ ಪ್ರತಾಪ್‌ನ ಅಸಲಿಯತ್ತು ಹೊರಬೀಳುತ್ತಿದ್ದಂತೆ, ಡ್ರೋನ್ ಪ್ರತಾಪ್ ಅಭಿಮಾನಿಗಳಿಂದ ಹಿಡಿದು ಆತನ ಮಾತಿನಿಂದ ಹುಮ್ಮಸ್ಸು ತುಂಬಿಕೊಂಡು ಎದೆ ಉಬ್ಬಿಸಿದ್ದ ಯುವಕರವರೆಗೆ ಎಲ್ಲರೂ ರೊಚ್ಚಿಗೆದ್ದಿದ್ದಾರೆ.

ಆದರೆ ಇಲ್ಲಿ ನಿಜವಾಗೂ ಆಲೋಚಿಸಬೇಕಾದ ವಿಷಯವನ್ನೇ ನಾವು ಮರೆತುಬಿಟ್ಟಿದ್ದೇವೆ. ಡ್ರೋನ್ ಪ್ರತಾಪ್ ಪ್ರತಿಪಾದಿಸಿದ ರೀತಿ ಆಧುನಿಕ ಜಗತ್ತಿನಲ್ಲಿ ಡ್ರೋನ್‌ಗಳು ಬರೀ ಜೀವ ಉಳಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಜೀವ ತೆಗೆಯುವ ಸಾಧನಗಳಾಗಿ ಮಾರ್ಪಟ್ಟಿವೆ.

ಡ್ರೋನ್ ನೋಂದಣಿ ಮಾಡಿಸಿ, ಇಲ್ಲದಿದ್ದರೆ ಶಿಕ್ಷೆ ಖಚಿತಡ್ರೋನ್ ನೋಂದಣಿ ಮಾಡಿಸಿ, ಇಲ್ಲದಿದ್ದರೆ ಶಿಕ್ಷೆ ಖಚಿತ

ಅದರಲ್ಲೂ ಕೆಲ ಪಾಶ್ಚಿಮಾತ್ಯ ದೇಶಗಳಲ್ಲಿ ಸೈಕೋ ಮನಸ್ಥಿತಿಯ ಮನುಷ್ಯರು, ಡ್ರೋನ್ ಬಳಸಿ ಬೆಚ್ಚಿಬೀಳಿಸುವ ಅನಾಹುತಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗೆ ಡ್ರೋನ್‌ಗಳ ಕುರಿತು ಸಾಮಾನ್ಯರಿಗೆ ತಿಳಿಯದ ನೂರಾರು ಶಾಕಿಂಗ್ ಸಂಗತಿಗಳು ಇಲ್ಲಿವೆ.

 ಸೇನಾ ಪಡೆಗಳ ಮಾಸ್ಟರ್ ಪೀಸ್..!

ಸೇನಾ ಪಡೆಗಳ ಮಾಸ್ಟರ್ ಪೀಸ್..!

ಡ್ರೋನ್ ಅಂದ ತಕ್ಷಣ ನೆನಪಾಗೋದು ಪುಟ್ಟ ಹೆಲಿಕಾಪ್ಟರ್ ಮಾದರಿ ಹಾಗೂ ಅದಕ್ಕೆ ಜೋಡಿಸಿರುವ 1 ಕ್ಯಾಮೆರಾ ಜೊತೆ ಜೋರಾಗಿ ಗಾಳಿ ಬೀಸುತ್ತಾ ಹಾರಾಡುವ ವಸ್ತು. ಆದರೆ ಇವೆಲ್ಲಾ ನಾವು, ನೀವು ನಿತ್ಯ ಕಾಣುವ ಸಾಮಾನ್ಯ ಡ್ರೋನ್‌‌ಗಳು ಅಷ್ಟೇ. ನಾವು ಕಾಣದ, ಕ್ಷಣಮಾತ್ರದಲ್ಲೇ ಎಲ್ಲವನ್ನೂ ಉಡಾಯಿಸಬಲ್ಲ ಬಲಶಾಲಿ ಡ್ರೋನ್‌ಗಳು ಜಗತ್ತಿನಲ್ಲಿವೆ. ಇವುಗಳು ಎಷ್ಟು ಪವರ್‌ಫುಲ್ ಅನ್ನೋದು ನಿಮ್ಮ ಊಹೆಗೂ ನಿಲುಕುವುದಿಲ್ಲ. ಉದಾದರಣೆಗೆ ಮಿಲಿಟರಿ ಡ್ರೋನ್ಸ್‌. ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಸೇನಾಪಡೆಗಳನ್ನ ಗಟ್ಟಿಗೊಳಿಸುತ್ತಿವೆ. ಆದರಲ್ಲೂ ಬಲಾಢ್ಯ ರಾಷ್ಟ್ರಗಳು ಮಿಲಿಟರಿ ಡ್ರೋನ್‌ಗಳ ಸಂಶೋಧನೆಯಲ್ಲಿ ಎತ್ತಿದ ಕೈ. ಇಂತಹ ಬಲಾಢ್ಯ ರಾಷ್ಟ್ರಗಳಿಂದ ಡ್ರೋನ್ ಖರೀದಿಗೆ ಸಾವಿರಾರು ಕೋಟಿ ಸುರಿಯುತ್ತಿರುವ ಬಡ ರಾಷ್ಟ್ರಗಳು, ಹಣದ ಬಗ್ಗೆ ಲೆಕ್ಕ ಹಾಕುತ್ತಿಲ್ಲ. ಭಾರತ ಕೂಡ ಸೇನೆಗಾಗಿ ಸುಮಾರು 7.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಮೆರಿಕದಿಂದ ಡ್ರೋನ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗೆ ಸದ್ಯದ ಪರಿಸ್ಥಿತಿಯಲ್ಲಿ ಡ್ರೋನ್‌ಗಳು ಸೇನಾ ಪಡೆಗಳ ಪಾಲಿಗೆ 'ಮಾಸ್ಟರ್ ಪೀಸ್' ಆಗಿವೆ. ಗಡಿಯಲ್ಲಿ ಗಸ್ತು ತಿರುಗಲು, ವೈರಿಗಳ ಹುಟ್ಟಡಗಿಸಲು ಡ್ರೋನ್ ಬೇಕೆ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?ಇರಾನ್ನಿನ ಸೇನಾಧಿಕಾರಿ ಹತ್ಯೆ, ಭಾರತದ ಮೇಲೇನು ಪರಿಣಾಮ?

 ಸೂಲೈಮನ್ ಸತ್ತಿದ್ದು ಡ್ರೋನ್‌ನಿಂದಲೇ..!

ಸೂಲೈಮನ್ ಸತ್ತಿದ್ದು ಡ್ರೋನ್‌ನಿಂದಲೇ..!

ಡ್ರೋನ್‌ಗಳ ವಿದ್ವಂಸಕ ಶಕ್ತಿ ಇಡೀ ಜಗತ್ತಿಗೆ ಮನದಟ್ಟಾಗಿದ್ದು ಇರಾನ್‌ ಸೇನಾಧಿಕಾರಿ ಖಾಸಿಂ ಸುಲೈಮಾನ್ ಹತ್ಯೆ ನಂತರ. ಇರಾಕ್‌ನ ಬಾಗ್ದಾದ್ ಇಂಟರ್‌ನ್ಯಾಷನಲ್ ಏರ್ಪೋಟ್ ಬಳಿ ಸುಲೈಮಾನ್ ವಾಹನದ ಮೇಲೆ ಅಮೆರಿಕದ ಮಾನವರಹಿತ ಡ್ರೋನ್ ದಾಳಿ ನಡೆಸಿ ಹತ್ಯೆ ಮಾಡಿತ್ತು. ಸುಲೈಮಾನ್ ಹತ್ಯೆ ಬಳಿಕ 3ನೇ ಮಹಾಯುದ್ಧದ ಮಾತುಗಳು ಕೇಳಿಬಂದಿದ್ದವು. ಆದರೆ ಕ್ರೂರಿ ಕೊರೊನಾ ಎಂಟ್ರಿಯಾಗ್ತಿದ್ದಂತೆ ಯುದ್ಧದ ಮಾತುಗಳಾಡಿದ್ದ ಮಹಾಶಯರು ತೆಪ್ಪಗಾಗಿದ್ದರು. ಕೆಲದಿನಗಳ ಹಿಂದೆ ಖಾಸಿಂ ಸುಲೈಮಾನ್ ಹತ್ಯೆ ಕುರಿತು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ವರದಿ ನೀಡಿದ್ದು, ಅಮೆರಿಕ ಮಾಡಿದ್ದು ಕಾನೂನು ಬಾಹೀರ ಎಂದಿದ್ದಾರೆ. ಆದರೆ ಇಲ್ಲೊಂದು ವಿಚಾರ ತಿಳಿಯಲೇಬೇಕು. ಅಮೆರಿಕ ತನ್ನ ಅಸ್ತಿತ್ವದ ಉಳಿವಿಗಾಗಿ ನ್ಯೂಕ್ಲಿಯರ್ ಬಾಂಬ್ ಸಂಶೋಧನೆ ಮಾಡಿದಂತೆ ಡ್ರೋನ್‌ಗಳನ್ನೂ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಅಭಿವೃದ್ಧಿಗೊಳಿಸುತ್ತಿದೆ. ತನ್ನ ವಿರುದ್ಧ ಧ್ವನಿ ಎತ್ತುವ ರಾಷ್ಟ್ರಗಳಿಗೆ ಇದೇ ಡ್ರೋನ್‌ಗಳನ್ನ ಬಳಸಿ ಶಾಕ್ ನೀಡುತ್ತಿದೆ. ಇದು ಜಗತ್ತಿನ ಮೇಲೆ ಹಿಡಿತ ಸಾಧಿಸಲು ಶ್ರೀಮಂತ ರಾಷ್ಟ್ರಗಳ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಅಂದರೂ ತಪ್ಪಾಗುವುದಿಲ್ಲ.

ದಾಳಿ ಡ್ರೋಣ್ ಗಳ ಸೇರ್ಪಡೆಗೆ ಮುಂದಾದ ಭಾರತೀಯ ವಾಯು ಸೇನೆದಾಳಿ ಡ್ರೋಣ್ ಗಳ ಸೇರ್ಪಡೆಗೆ ಮುಂದಾದ ಭಾರತೀಯ ವಾಯು ಸೇನೆ

 ಉಗ್ರರ ಕೈಗೆ ಸಿಕ್ಕರೆ ಕಥೆ ಫಿನಿಶ್..!

ಉಗ್ರರ ಕೈಗೆ ಸಿಕ್ಕರೆ ಕಥೆ ಫಿನಿಶ್..!

ಜಗತ್ತು ಉಗ್ರರ ಬೆದರಿಕೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಡ್ರೋನ್‌ಗಳು ಮತ್ತೊಂದು ಯಡವಟ್ಟು ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ನ್ಯೂಕ್ಲಿಯರ್ ಬಾಂಬ್‌ಗಳನ್ನೇ ತದ್ರೂಪಗೊಳಿಸುತ್ತಿರುವ ಟೆರರ್ ಗ್ಯಾಂಗ್ ಮುಂದೆ ಡ್ರೋನ್‌ಗಳ ಸಂಶೋಧನೆಗೂ ಮುಂದಾಗಬಹುದು. ಅಥವಾ ಕದ್ದು-ಮುಚ್ಚಿ ಡ್ರೋನ್ ಪಡೆಯುವಲ್ಲಿ ಯಶಸ್ವಿಯೂ ಆಗಬಹುದು. ಹೀಗೆ ಅಪ್ಪಿತಪ್ಪಿ ಈ ಅಪಾಯಕಾರಿ ಡ್ರೋನ್‌ಗಳು ಉಗ್ರಪಡೆಯ ಕೈಸೇರಿದರೆ, ಪರಿಸ್ಥಿತಿ ಊಹಿಸೋದಕ್ಕೂ ಅಸಾಧ್ಯ. ದೂರದಲ್ಲಿ ಎಲ್ಲೋ ರಿಮೋಟ್‌ನಿಂದ ಆಪರೇಟ್ ಆಗುವ ಡ್ರೋನ್‌ಗಳು, ಬಾಂಬ್ ದಾಳಿ ನಡೆಸಲು ಶಕ್ತವಾಗಿರುತ್ತವೆ. ಹೀಗೆ ಉಗ್ರರ ಕೈಗೆ ಡ್ರೋನ್ ಸಿಕ್ಕರೆ ನ್ಯೂಕ್ಲಿಯರ್ ಬಾಂಬ್ ಪ್ರಯೋಗ ನಡೆಯೋದರಲ್ಲಿ ಯಾವ ಅನುಮಾನವೂ ಇಲ್ಲ.

"ಡ್ರೋನ್" ಬಳಸಿ ಬೆಳೆ ಪರಿಸ್ಥಿತಿ ಸರ್ವೆ : ಸಚಿವ ಶಿವಶಂಕರರೆಡ್ಡಿ

 ಏರ್‌ಪೋರ್ಟ್ ಸುತ್ತಮುತ್ತ ಡ್ರೋನ್ ಹಾರಾಟ

ಏರ್‌ಪೋರ್ಟ್ ಸುತ್ತಮುತ್ತ ಡ್ರೋನ್ ಹಾರಾಟ

ಇದು ಬರೀ ಟ್ರೇಲರ್ ಅಷ್ಟೇ. ಹುಡುಗಾಟಿಕೆ ಮಾಡಲು ಹೋಗಿ ಡ್ರೋನ್‌ಗಳಿಂದ ಅನಾಹುತಗಳನ್ನ ಸೃಷ್ಟಿ ಮಾಡುತ್ತಿರುವವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಏರ್‌ಪೋರ್ಟ್‌ಗಳ ಬಳಿ ಡ್ರೋನ್ ಹಾರಿಸಿ, ಸಾವಿರಾರು ಜನರ ಜೀವಕ್ಕೆ ಅಪಾಯ ತಂದೊಡ್ಡಿದ ಪ್ರಕರಣಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆದಿವೆ. ಇದೇ ಕಾರಣಕ್ಕೆ ಭಾರತದಲ್ಲಿ ಏರ್‌ಪೋರ್ಟ್ ಸುತ್ತಮುತ್ತ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಲೈಸೆನ್ಸ್ ಕೂಡ ಕಡ್ಡಾಯವಾಗಿದೆ. ಇಷ್ಟೇ ಆಗಿದ್ದರೆ ಬೇರೆ ಮಾತು, ಆದರೆ ಡ್ರಗ್ ದಂಧೆಗೂ ಡ್ರೋನ್ ಬಳಸಿದ ಖತರ್ನಾಕ್‌ಗಳಿದ್ದಾರೆ. ಇದನ್ನೆಲ್ಲಾ ಅಳೆದು-ತೂಗಿ ನೋಡಿದರೆ ಡ್ರೋನ್‌ಗಳು ಜೀವ ಉಳಿಸುವುದಕ್ಕಿಂತ ಹೆಚ್ಚಾಗಿ ಜೀವ ತೆಗೆಯುವ ಸಾಧನಗಳಾಗುತ್ತಿವೆ. ಒಳ್ಳೆಯದನ್ನ ಮಾಡಬೇಕಾದ ಡ್ರೋನ್‌ಗಳಿಂದ ಬರೀ ಕೆಟ್ಟದನ್ನೇ ಬಯಸಿ ಕೂರುತ್ತಿರುವುದು ವಿಪರ್ಯಾಸದ ಸಂಗತಿ.

English summary
An unmanned aerial vehicle (UAV) popularly known as Drones won't save drone will kill reveals the dark side of the drones says the US Federal Administration study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X