ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೇಲಿಹಂಟ್ ಸಮೀಕ್ಷೆ : ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 1 : ಭಾರತದ ನಂ.1 ಸುದ್ದಿ ಮತ್ತು ಪ್ರಾದೇಶಿಕ ಭಾಷೆಯ ಕಂಟೆಂಟ್ ಅಪ್ಲಿಕೇಷನ್ ಆಗಿರುವ ಡೇಲಿಹಂಟ್, ನೀಲ್ಸನ್ ಇಂಡಿಯಾ ಜತೆಗೂಡಿ ನಡೆಸಿರುವ ಪ್ರತಿಷ್ಠೆಯ "ಟ್ರಸ್ಟ್ ಆಫ್ ದಿ ನೇಷನ್" ಜಂಟಿ ರಾಜಕೀಯ ಸಮೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

ಈ ಸಮೀಕ್ಷೆಯನ್ನು ಭಾರತದ ಅತೀದೊಡ್ಡ ಮತ್ತು ಅತ್ಯಂತ ಕರಾರುವಾಕ್ಕಾದ, ಸ್ವತಂತ್ರ ರಾಜಕೀಯ ಡಿಜಿಟಲ್ ಸಮೀಕ್ಷೆ ಎಂದು ರಾಷ್ಟ್ರಾದ್ಯಂತ ಪರಿಗಣಿಸಲಾಗಿದ್ದು, ಭಾರತ ಮತ್ತು ವಿದೇಶದಿಂದ 54 ಲಕ್ಷಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ಸಮೀಕ್ಷೆಯಲ್ಲಿ ಮೋದಿಯವರ ಮೇಲೆ ಭಾರತದ ನಂಬಿಕೆ ಅವ್ಯಾಹತವಾಗಿದೆ. ಪ್ರಾಮಾಣಿಕ, ಬಲಿಷ್ಠ ಮತ್ತು ನಿರ್ಣಾಯಕ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಮೋದಿಯವರಿಗೆ ಎರಡನೇ ಅವಕಾಶ ನೀಡಬೇಕು, ಅವರು ಭವ್ಯ ಭವಿತವ್ಯ ನೀಡಲಿದ್ದಾರೆ ಎಂದು ಶೇ.50ಕ್ಕಿಂತ ಹೆಚ್ಚು ಮತದಾರರು ನಂಬಿಕೆ ವ್ಯಕ್ತವಾಗಿದೆ.

ಈ ವಿಶಿಷ್ಟವಾದ ಸಮೀಕ್ಷೆಯಲ್ಲಿ ಭಾರತದ ಉದ್ದಗಲದಿಂದ ನಿಜವಾದ ಮತದಾರರು ಮತ ಹಾಕಿದ್ದು, ಮೆಟ್ರೋ ಪ್ರದೇಶದಿಂದ ಮಾತ್ರವಲ್ಲ, ಟಯರ್ 2 ಮತ್ತು 3 ನಗರಗಳಿಂದ, ಗ್ರಾಮೀಣ ಪ್ರದೇಶದಿಂದಲೂ ಮತದಾರರಾಗಿ ನೋಂದಾಯಿಸಿಕೊಂಡವರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ.

ಸಮೀಕ್ಷೆಯ ವಿಧಾನ

* ಡೇಲಿಹಂಟ್ ಮತ್ತು ನೀಲ್ಸನ್ ಇಂಡಿಯಾ ಜತೆಗೂಡಿ ಈ ಸಮೀಕ್ಷೆಯನ್ನು ಸೃಷ್ಟಿಸಿದ್ದವು. ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ, ಬಾಂಗ್ಲಾ, ಗುಜರಾತಿ, ಮರಾಠಿ, ತಮಿಳು, ಮಲಯಾಳಂ ಮತ್ತು ಒರಿಯಾ ಸೇರಿದಂತೆ 10 ಭಾಷೆಗಳಲ್ಲಿ ಏಕಕಾಲಕ್ಕೆ ಡೇಲಿಹಂಟ್ ನ ವೇದಿಕೆಗಳಲ್ಲಿ ಪ್ರಸಾರ ಮಾಡಲಾಯಿತು.

* ಎಲ್ಲ ದತ್ತಾಂಶಗಳನ್ನು ಸಂಗ್ರಹಿಸಿದ ಡೇಲಿಹಂಟ್, ನೀಲ್ಸನ್‌ನ ಎಪಿಐ ಮೂಲಕ ನೀಲ್ಸನ್‌ಗೆ ರವಾನಿಸಿತು.

* ದತ್ತಾಂಶಗಳನ್ನು ಸಂಗ್ರಹಿಸಿದ ನೀಲ್ಸನ್, ಇಂತಹ ಸಮೀಕ್ಷೆಗಳಿಗೆ ಅನ್ವಯವಾಗುವ ಅಂತಾರಾಷ್ಟ್ರೀಯವಾಗಿ ಮಾನ್ಯವಾದ ನಿಯಮ ಮತ್ತು ಸ್ಟಾಂಡರ್ಡ್ ಪ್ರಕಾರ ವರದಿ ಮಾಡಿದೆ.

* ವಿವಿಧ ವಯೋಮಾನದವರು (19-24, 25-34, 35ಕ್ಕೂ ಹೆಚ್ಚು) ಮತ್ತು ಎಲ್ಲ ಲಿಂಗದವರು ಭಾಗವಹಿಸಿದ್ದಾರೆ.

* ಹೆಚ್ಚು ಆಯ್ಕೆಯಿರುವ 10 ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡಲು ಜನರಿಗೆ "ಟ್ರಸ್ಟ್ ಆಫ್ ದಿ ನೇಷನ್" ವಿನಂತಿಸಿಕೊಂಡಿತ್ತು.

ಮುಖ್ಯಾಂಶಗಳು | ಡೇಲಿಹಂಟ್ ಟ್ರಸ್ಟ್ ಆಫ್ ದಿ ನೇಷನ್ ಸಮೀಕ್ಷೆ

* ಮೋದಿಯವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಿನ 2014 ವರ್ಷಕ್ಕೆ ಹೋಲಿಸಿದರೆ ಶೇ.63ಕ್ಕಿಂತ ಹೆಚ್ಚು ಮತದಾರರು ನರೇಂದ್ರ ಮೋದಿಯವರ ಮೇಲೆ ಅದೇ ರೀತಿಯ ನಂಬಿಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಾಯಕನಾಗಿ ಅವರ ಸಾಮರ್ಥ್ಯದ ಮೇಲೆ ಸಂತೃಪ್ತಿ ಇದೆ ಎಂದು ಹೇಳಿದ್ದಾರೆ.

* ನರೇಂದ್ರ ಮೋದಿಯವರಿಗೆ ಪ್ರಧಾನಿಯಾಗಿ ಎರಡನೇ ಅವಕಾಶ ನೀಡಿದರೆ ತಮಗೆ ಉತ್ತಮ ಭವಿಷ್ಯ ನೀಡಬಲ್ಲರು ಎಂದು ಶೇ.50ಕ್ಕಿಂತ ಹೆಚ್ಚು ಜನರು ನಂಬಿದ್ದಾರೆ.

* ಜನರು ಬಳಸುವ ಮೊಬೈಲನ್ನೇ ಆದಾಯದ ಅಳತೆಗೋಲಾಗಿ ಪರಿಗಣಿಸಿದರೆ, ಹೈ ಎಂಡ್ ಫೋನ್ ಬಳಕೆದಾರರಿಗೆ ವ್ಯತಿರಿಕ್ತವಾಗಿ, ಶೇ.90ರಷ್ಟು ಕೆಳ ಮತ್ತು ಮಧ್ಯಮ ರೇಂಜ್ ಫೋನನ್ನು ಬಳಸುವ ಜನರು ನರೇಂದ್ರ ಮೋದಿಯವರಿಗೆ ಭಾರೀ ಬೆಂಬಲ ನೀಡಿದ್ದಾರೆ.

* ಭಾರತದ ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ 'ವಿಶ್ವಾಸ' ಮತ್ತು 'ನಂಬಿಕೆ' ಅಂಶವನ್ನು ವಿಶ್ಲೇಷಣಾತ್ಮಕವಾಗಿ ನೋಡಿದಾಗ ಕೆಲ ಅಚ್ಚರಿಯ ಸಂಗತಿಗಳನ್ನು ನೀಡಿವೆ :

* ಬೃಹತ್ ಪ್ರಮಾಣದಲ್ಲಿ ನೋಡಿದಾಗ, ಕರ್ನಾಟಕವನ್ನು ಹೊರತುಪಡಿಸಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೋದಿಯವರ ನಾಯಕತ್ವದ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.
* ಒಂದೆಡೆ, ಒರಿಸ್ಸಾದಲ್ಲಿ ನರೇಂದ್ರ ಮೋದಿಯವರ ಮೇಲೆ ಮತದಾರರು ಅಪಾರ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ, ತಮಿಳುನಾಡಿನಲ್ಲಿ ಮೋದಿಯವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಹೊಂದಿಲ್ಲ.

* 5 ರಾಜ್ಯಗಳ ಚುನಾವಣೆಯ ವಿಷಯಕ್ಕೆ ಬಂದಾಗ,

* ಛತ್ತೀಸ್ ಘಡ, ಮಧ್ಯ ಪ್ರದೇಶ ಮತ್ತು ರಾಜಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ.
* ತೆಲಂಗಾಣದಲ್ಲಿ ಮಾತ್ರ ಈ ಟ್ರೆಂಡ್ ಗೆ ವಿರುದ್ಧವಾಗಿದೆ.

* ಬಹುಕಾಲದಿಂದ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಶೇ.60ಕ್ಕಿಂತ ಹೆಚ್ಚು ಮತದಾರರು ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಈ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಂತ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹೆಚ್ಚು ಮತ ಗಳಿಸಿದ್ದಾರೆ.

* ರಾಷ್ಟ್ರೀಯ ವಿಪ್ಪತ್ತು ಬಂದೊದಗಿದಾಗ, ನರೇಂದ್ರ ಮೋದಿಯವರು ಅತ್ಯಂತ ಸಮರ್ಥವಾಗಿ ನಿಭಾಯಿಸಬಲ್ಲರು, ದೇಶವನ್ನು ಮುನ್ನಡೆಸಬಲ್ಲರು ಎಂದು ಶೇ.62ರಷ್ಟು ಜನರು ಹೇಳಿದ್ದಾರೆ. ಅವರ ನಂತರ ರಾಹುಲ್ ಗಾಂಧಿ (ಶೇ.17), ಅರವಿಂದ್ ಕೇಜ್ರಿವಾಲ್ (ಶೇ.8), ಅಖಿಲೇಶ್ ಯಾದವ್ (ಶೇ.3) ಮತ್ತು ಮಾಯಾವತಿ (ಶೇ.2)ರಷ್ಟು ಮತ ಬಿದ್ದಿವೆ.

ದೆಹಲಿಯಲ್ಲಿ ನಡೆದ 'ಭಾರತ್ ಬಿಯಾಂಡ್ ಇಂಡಿಯಾ' ಪತ್ರಿಕಾಗೋಷ್ಠಿಯ ನಂತರ, ಭಾರತದ ಅತೀದೊಡ್ಡ ಸ್ವತಂತ್ರ ರಾಜಕೀಯ ಡಿಜಿಟಲ್ ಸಮೀಕ್ಷೆ ಬಗ್ಗೆ ಮಾತನಾಡಿದ, ಡೇಲಿಹಂಟ್ ನ ಅಧ್ಯಕ್ಷ ಉಮಂಗ್ ಬೇಡಿ ಅವರು, "ನಿಜವಾದ ಇಂಡಿಯಾ 'ಭಾರತ'ದ ಮತದಾರರು ಬೃಹತ್ ಸಂಖ್ಯೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು, 'ಟ್ರಸ್ಟ್ ಆಫ್ ದಿ ನೇಷನ್' ಒಂದು ಅದ್ಭುತ ವೇದಿಕೆ ಕಲ್ಪಿಸಲಿದೆ ಎಂಬ ನಮ್ಮ ನಂಬಿಕೆಯನ್ನು ಸಾರ್ಥಕವಾಗಿಸಿದೆ. ಜನಸಂಖ್ಯೆ, ಸಾಮಾಜಿಕ, ಪ್ರಾದೇಶಿಕ ಮತ್ತು ಭಾಷಾವಾರು ದೃಷ್ಟಿಯಿಂದ ದತ್ತಾಂಶವನ್ನು ಅತ್ಯಂತ ಕೂಲಂಕಷವಾಗಿ ವಿಶ್ಲೇಷಿಸಿದಾಗ ಆಳ ಮತ್ತು ಅರ್ಥವತ್ತಾದ ಅಭಿಮತವನ್ನು ಸಂಗ್ರಹಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೋಟ್ಯಂತರ ಭಾರತೀಯರಿಗೆ ಹುಡುಕಲು, ಬಳಸಲು, ಹಂಚಿಕೊಳ್ಳಲು, ತಿಳಿಸುವುದು ಮಾತ್ರವಲ್ಲ ರಂಜಿಸುವ ಮಾಹಿತಿಯನ್ನು ಒದಗಿಸಬೇಕೆಂಬ ಡೇಲಿಹಂಟ್ ನ ಮಹದೋದ್ದೇಶದೊಂದಿಗೆ 'ಟ್ರಸ್ಟ್ ಆಫ್ ದಿ ನೇಷನ್' ಸಮೀಕ್ಷೆ ಪರ್ಫೆಕ್ಟಾಗಿ ಹೊಂದಿಕೊಂಡಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಸಮೀಕ್ಷೆ ನಡೆಸಲು ಸಹಾಯ ಮಾಡಿದ ಸಂಶೋಧನಾ ಸಂಗಾತಿ ನೀಲ್ಸನ್ ಇಂಡಿಯಾಗೆ ಆಭಾರಿಯಾಗಿದ್ದೇವೆ."

"ನೀಲ್ಸನ್ ಒಂದು ಜಾಗತಿಕ ಮಾಪನ ಮತ್ತು ದತ್ತಾಂಶ ವಿಶ್ಲೇಷಣಾ ಕಂಪನಿಯಾಗಿದ್ದು, ವಿಶ್ವದಾದ್ಯಂತ ಗ್ರಾಹಕರ ಮತ್ತು ಮಾರುಕಟ್ಟೆಯ ಅತ್ಯಂತ ಪರಿಪೂರ್ಣವಾದ ಮತ್ತು ನಂಬಿಗಸ್ತ ಮಾಹಿತಿಯನ್ನು ಒದಗಿಸುತ್ತದೆ. ಈ ಸಮೀಕ್ಷೆಯ ಭಾಗವಾಗಲು ನಮಗೆ ಸಂತೋಷವಾಗುತ್ತದೆ. ಸಮೀಕ್ಷೆಯನ್ನು ವೈಜ್ಞಾನಿಕ ವಿಧಾನದೊಂದಿಗೆ ಡಿಸೈನ್ ಮಾಡಿ, ಡೇಲಿಹಂಟ್ ನ ವಿವಿಧ ಪ್ಲಾಟ್ ಫಾರಂ ಮೂಲಕ ಸಂಗ್ರಹಿಸಲಾದ ದತ್ತಾಂಶವನ್ನು ವಿಶ್ಲೇಷಿಸಿ ನಿಖರವಾದ ಫಲಿತಾಂಶವನ್ನು ಕಂಡುಕೊಂಡಿದ್ದೇವೆ" ಎಂದು ನೀಲ್ಸನ್ - ದಕ್ಷಿಣ ಏಷ್ಯಾದ ಅಧ್ಯಕ್ಷ ಪ್ರಸೂನ್ ಬಸು ಅವರು ಹೇಳಿದ್ದಾರೆ.

English summary
Bharat continues to believe in prime minister Narendra Modi. He is seen as Honest, Strong and decisive leader in the 'Trust of The Nation' biggest political digital survey conducted by Dailyhunt-Nielsen India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X