ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ

|
Google Oneindia Kannada News

Recommended Video

Lok Sabha Elections 2019 : ಸಿವೋಟರ್-ಐಎಎನ್‌ಎಸ್ ಸಮೀಕ್ಷೆ | Oneindia Kannada

ನವದೆಹಲಿ, ಮಾರ್ಚ್ 27: ಐಎಎನ್‌ಎಸ್ ಸುದ್ದಿ ಸಂಸ್ಥೆಗಾಗಿ ಸಿವೋಟರ್ ನಡೆಸಿದ ದೇಶದ ಸ್ಥಿತಿಗತಿ ಮಾರ್ಚ್ 2019 ಅಲೆ 2 ಅಭಿಪ್ರಾಯ ಸಮೀಕ್ಷೆಯು ಎನ್‌ಡಿಎ ಮೈತ್ರಿಕೂಟವು ಯುಪಿಎ ಮೈತ್ರಿಕೂಟಕ್ಕಿಂತ ಮುನ್ನಡೆ ಸಾಧಿಸಲಿದೆ ಎಂದು ತಿಳಿಸಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಮಾಡಿಕೊಂಡಿರುವ ಚುನಾವಣಾ ಪೂರ್ವ ಹೊಂದಾಣಿಕೆಯಲ್ಲಿ ದೇಶದಾದ್ಯಂತ ಶೇ 42ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ಶೇ 30.4ರಷ್ಟು ಮತಗಳನ್ನು ಸೆಳೆಯಲಿದೆ.

Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

ಜನವರಿ 1ರಿಂದ ನಡೆಸಿದ 70 ಸಾವಿರ ಜನರ ಅಭಿಪ್ರಾಯ ಸಂಗ್ರಹದ ಸಮೀಕ್ಷೆಯನ್ನು ಆಧರಿಸಿ ಮಾರ್ಚ್ 24ರಂದು ಸಿವೋಟರ್ ವರದಿ ನೀಡಿದೆ.

ಮಹಾಘಟಬಂಧನದಲ್ಲಿ ಉಂಟಾಗುವ ಮತ ಹಂಚಿಕೆಯ ಲಾಭವನ್ನು ಎನ್‌ಡಿಎ ಪಡೆದುಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಮಹಾಮೈತ್ರಿಕೂಟದ ಭಾಗವಾಗಿಲ್ಲ. ಇಲ್ಲಿ ಎನ್‌ಡಿಎ ಶೇ 35.4ರಷ್ಟು ಮತಗಳನ್ನು ಸೆಳೆದುಕೊಳ್ಳುವ ನಿರೀಕ್ಷೆಯಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎರಡು ಮಿತ್ರಪಕ್ಷಗಳು ಮತ ಹಂಚಿಕೆಯಲ್ಲಿ ಭಾಗವಾಗದ ಕೆಲವು ರಾಜ್ಯಗಳಿವೆ. ಅವುಗಳಲ್ಲಿ ಎನ್‌ಡಿಎ ಸಾಕಷ್ಟು ಹಿಂದೆ ಬೀಳಲಿದೆ. ತಮಿಳು ನಾಡು ಮತ್ತು ಕೇರಳದಲ್ಲಿ ಎನ್‌ಡಿಎ ಮೈತ್ರಿಕೂಟ ಹೆಚ್ಚು ಮತಗಳನ್ನು ಪಡೆದುಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ಎರಡೂ ಮೈತ್ರಿಕೂಟಗಳ ನಡುವೆ ಜಿದ್ದಾಜಿದ್ದಿ ಕದನ ಏರ್ಪಡಲಿದೆ.

ಮತಹಂಚಿಕೆಯಲ್ಲಿ ಎನ್‌ಡಿಎಗೆ ಹಿನ್ನಡೆ

ಮತಹಂಚಿಕೆಯಲ್ಲಿ ಎನ್‌ಡಿಎಗೆ ಹಿನ್ನಡೆ

2014ರ ಚುನಾವಣೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟ ಬಹಳ ಕಡಿಮೆ ಮತಗಳನ್ನು ಪಡೆದುಕೊಳ್ಳಲಿದೆ ಎಂದು ಸಿವೋಟರ್ ಸಮೀಕ್ಷೆ ತಿಳಿಸಿದೆ. ಬಿಹಾರದಲ್ಲಿ ಎನ್‌ಡಿಎ ಮತ ಹಂಚಿಕೆಯು ಶೇ 52.6ರಷ್ಟನ್ನು ನಿರೀಕ್ಷಿಸಲಾಗಿದೆ ಮತ್ತು ರಾಜಸ್ಥಾನದಲ್ಲಿ ಎನ್‌ಡಿಎಗೆ ಶೇ 50.7ರಷ್ಟು ಮತಗಳು ದೊರಕಲಿವೆ. ಬಿಜೆಪಿ ಅತ್ಯಂತ ಪ್ರಬಲವಾಗಿರುವ ಗುಜರಾತ್‌ನಲ್ಲಿ ಎನ್‌ಡಿಎಗೆ ಶೇ 58.2ರಷ್ಟು ಮತಗಳು ಲಭ್ಯವಾಗಲಿವೆ. ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಶೇ 48.1ರಷ್ಟು ಮತ್ತು ಹರಿಯಾಣದಲ್ಲಿ ಶೇ 42.6ರಷ್ಟು ಮತಗಳು ಸಿಗಲಿವೆ.

ಎನ್‌ಡಿಎಗೆ ಎಷ್ಟು ಸೀಟು?

ಎನ್‌ಡಿಎಗೆ ಎಷ್ಟು ಸೀಟು?

ಚುನಾವಣಾ ಪೂರ್ವ ಮೈತ್ರಿಕೂಟದ ಆಧಾರದಲ್ಲಿ ಸೀಟು ಹಂಚಿಕೆಯಲ್ಲಿ ಎನ್‌ಡಿಎ ಹಿನ್ನಡೆ ಅನುಭವಿಸಲಿದೆ ಎನ್ನಲಾಗಿದೆ. ಮಾರ್ಚ್ 10ರಂದು ನಡೆಸಿದ ಮೊದಲ ಸಿವೋಟರ್ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ 264 ಸೀಟುಗಳನ್ನು ಗೆಲ್ಲಲಿದೆ ಎನ್ನಲಾಗಿತ್ತು. ಆದರೆ, ಎರಡನೆಯ ಸಮೀಕ್ಷೆಯಲ್ಲಿ 261ಕ್ಕೆ ಅದರ ಸ್ಥಾನ ಕುಸಿಯಲಿದ್ದು, ಬಹುಮತಕ್ಕೆ ಕೊರತೆ ಎದುರಾಗಲಿದೆ. ಬಿಜೆಪಿ ಸ್ವತಃ 241 ಸೀಟುಗಳನ್ನು ಪಡೆದುಕೊಳ್ಳಲಿದೆ. ಚುನಾವಣೆ ಬಳಿಕ ನಡೆಯುವ ಮೈತ್ರಿಯು ಬಿಜೆಪಿಗೆ ಬೇಕಿರುವ 272 ಸೀಟುಗಳಿಗಿಂತಲೂ ಹೆಚ್ಚಿನ ಬಲವನ್ನು ನೀಡಲಿದೆ.

ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2

ಯುಪಿಎ ಕಥೆಯೇನು?

ಯುಪಿಎ ಕಥೆಯೇನು?

ಸೀಟು ಹಂಚಿಕೆ ವಿಚಾರದಲ್ಲಿ ಯುಪಿಎ, ಎನ್‌ಡಿಎಗಿಂತ ಹಿನ್ನಡೆ ಅನುಭವಿಸಲಿದೆ. ಕರ್ನಾಟಕದಲ್ಲಿ ಜೆಡಿಎಸ್, ಬಿಹಾರದಲ್ಲಿ ಆರ್‌ಜೆಡಿ, ಜಾರ್ಖಂಡ್‌ನಲ್ಲಿ ಜೆಎಂಎಂ, ಕೇರಳದಲ್ಲಿ ಯುಡಿಎಫ್, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಜತೆಗೂಡಿ ಸ್ಪರ್ಧಿಸಿಸಲೂ ಕೇವಲ 143 ಸೀಟುಗಳನ್ನು ಅದು ಪಡೆದುಕೊಳ್ಳಲಿದೆ.

ಕಾಂಗ್ರೆಸ್ ಒಟ್ಟು 91 ಸೀಟುಗಳನ್ನು ತನ್ನ ಹೆಸರಿಗೆ ಪಡೆದುಕೊಂಡರೆ, 52 ಸೀಟುಗಳು ಅದರ ಮೈತ್ರಿಪಕ್ಷಗಳಿಗೆ ಸಿಗಲಿದೆ. ಇದಕ್ಕೂ ಮೊದಲು ನಡೆಸಿದ್ದ ಸಮೀಕ್ಷೆಯಲ್ಲಿ ಕಾಂಗ್ರೆಸ್ 86 ಮತ್ತು ಅದರ ಮಿತ್ರಪಕ್ಷಗಳು 55 ಸೀಟುಗಳನ್ನು ಪಡೆದುಕೊಳ್ಳಲಿವೆ ಎಂದು ತಿಳಿಸಲಾಗಿತ್ತು.

ಚುನಾವಣೋತ್ತರ ಮೈತ್ರಿ ಅನಿವಾರ್ಯ

ಚುನಾವಣೋತ್ತರ ಮೈತ್ರಿ ಅನಿವಾರ್ಯ

ಚುನಾವಣೋತ್ತರ ಮೈತ್ರಿಗಳು ಯಶಸ್ವಿಯಾದರೆ ಈ ಸೀಟುಗಳ ಹಂಚಿಕೆಯ ಸಂಖ್ಯೆಯಲ್ಲಿ ಗಣನೀಯ ಬದಲಾವಣೆಗಳಾಗಬಹುದು. ಎನ್‌ಡಿಎ, ಯುಪಿಎಗಿಂತ ಭಾರಿ ಮುನ್ನಡೆ ಪಡೆದುಕೊಳ್ಳುವುದರಿಂದ ಚುನಾವಣೋತ್ತರ ಮೈತ್ರಿಯಿಂದ 272ರ ಮ್ಯಾಜಿಕ್ ಸಂಖ್ಯೆ ದಾಟಲಿದೆ.

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ 10 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಿಜೋ ನ್ಯಾಷನಲ್ ಫ್ರಂಟ್ ಒಂದು, ಬಿಜು ಜನತಾದಳ ಹತ್ತು ಮತ್ತು ತೆಲಂಗಾಣ ರಾಷ್ಟ್ರ ಸಮಿತಿ 16 ಸೀಟುಗಳಲ್ಲಿ ಗೆಲುವು ಕಾಣಲಿವೆ.

ಮಹಾರಾಷ್ಟ್ರದಲ್ಲಿ ಶಿವಸೇನಾ-14, ಅಸ್ಸಾಂನಲ್ಲಿ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ 1 ಸೀಟು, ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ 1 ಸೀಟು, ತಮಿಳುನಾಡಿನಲ್ಲಿ ಎಐಎಡಿಎಂಕೆ 7, ಉತ್ತರ ಪ್ರದೇಶದಲ್ಲಿ ಅಪ್ನಾ ದಳ್ ಒಂದು ಸೀಟನ್ನು ಗೆಲ್ಲಲಿವೆ.

ಚುನಾವಣಾ ಪೂರ್ವ ಮೈತ್ರಿಕೂಟದೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಮಾಡಿಕೊಂಡರೆ ಅದರ ಸಂಖ್ಯೆ 298ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.

ಇದೇ ರೀತಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೂಡ ಭಾರಿ ಏರಿಕೆ ಕಂಡುಕೊಳ್ಳಲಿದೆ. ಆದರೆ, ಎನ್‌ಡಿಯ ಮಟ್ಟವನ್ನು ತಲುಪುವುದು ಅದಕ್ಕೆ ಅಸಾಧ್ಯ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲ ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲ

ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮುಂದು

ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮುಂದು

ಒಂದು ವೇಳೆ ದೆಹಲಿಯಲ್ಲಿ ಎಎಪಿಯೊಂದಿಗೆ ಮತ್ತು ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟದೊಂದಿಗೆ ಕಾಂಗ್ರೆಸ್ ಮೈತ್ರಿ ನಡೆಯದೆ ಇದ್ದರೆ ಏನಾಗುತ್ತದೆ? ಸಮೀಕ್ಷೆ ಪ್ರಕಾರ, ದೆಹಲಿಯ ನಾಲ್ಕು ಸೀಟುಗಳಲ್ಲಿ ಮೂರು ಲೋಕಸಭಾ ಸೀಟುಗಳು ಎನ್‌ಡಿಎ ಬಳಿಯೇ ಉಳಿದುಕೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ ನಡೆಯದೆ ಇದ್ದರೆ ಯುಪಿಎ ಕೇವಲ ಎರಡು ಸೀಟು ಪಡೆದುಕೊಳ್ಳಲಿದೆ. ಸಮಾಜವಾದಿ ಪಕ್ಷಕ್ಕೆ ನಾಲ್ಕು ಮತ್ತು ಬಹುಜನ ಸಮಾಜಪಕ್ಷಕ್ಕೆ ಎರಡು ಸೀಟುಗಳು ಸಿಗಲಿವೆ. ಕಳೆದ ಚುನಾವಣೆಯಲ್ಲಿ 73 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ 72ರಲ್ಲಿ ಜಯಭೇರಿ ಭಾರಿಸಲಿದೆ.

ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ್ ಯಶಸ್ವಿಯಾದರೆ ಅದು 28 ಸೀಟುಗಳನ್ನು ಗೆಲ್ಲಲಿದೆ. ಹಿಂದಿನ ಸಮೀಕ್ಷೆಯಲ್ಲಿ 29 ಸೀಟುಗಳನ್ನು ಮಹಾಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಲಾಗಿತ್ತು

English summary
cVoter IANS The State of the Nation opinion poll wave 2 said that the NDA with post poll alliance may get 298 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X