ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ತುಳಸಿ ಕಟ್ಟೆಗೆ ಪ್ರದಕ್ಷಿಣೆ ಹಾಕುವ ಸುಸಂಸ್ಕೃತ ನಾಯಿ

|
Google Oneindia Kannada News

ಧಾರ್ಮಿಕ ಬಿಕ್ಕಟ್ಟು, ಕೋಮು ಗಲಭೆ, ಕ್ರೈಂ, ಘರ್ಷಣೆ ಇವೆಲ್ಲದರ ಮಧ್ಯೆ ಕೊಂಚ ಮನಸ್ಸಿಗೆ ಖುಷಿ ನೀಡುವಂತಹ ಸುದ್ದಿಗಳಿದ್ದರೆ ಅದೆಷ್ಟು ಚಂದ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮನಸ್ಸಿಗೆ ಮುದ ನೀಡುವಂತಹ ಹಾಗೂ ಮೈಂಡ್ ರಿಲೀಫ್‌ ಮಾಡುವ ವಿಡಿಯೋಗಳು ಕಾಣ ಸಿಗುತ್ತವೆ.

ಅಂದಹಾಗೆ ನಮ್ಮ ನಡುವೆ ಹಲವಾರು ಜನ ಪ್ರಾಣಿ ಪ್ರಿಯರಿದ್ದಾರೆ. ಸಾಕುಪ್ರಾಣಿಗಳಿಗಾಗಿನೇ ಪ್ರತ್ಯೇಕ ಕೋಣೆ, ಎಸಿ, ಬಾತ್‌ರೂಮ್ ನಿರ್ಮಾಣ ಮಾಡಿ ಪ್ರತ್ಯೇಕವಾಗಿ ವೈದ್ಯರನ್ನಿಟ್ಟು ಮನುಷ್ಯರಿಗಿಂತ ಹೆಚ್ಚು ಚೆನ್ನಾಗಿ ನೋಡಿಕೊಳ್ಳುವವರಿದ್ದಾರೆ. ತಮ್ಮಷ್ಟೇ ಐಷಾರಾಮಿ ಜೀವನದಲ್ಲಿ ಪ್ರಾಣಿಗಳನ್ನು ಸಾಕುವಂತವರಿದ್ದಾರೆ.

6 ರಿಂದ 245 ರವರೆಗೆ: ಕರ್ನಾಟಕದ ಶ್ವಾನಪಡೆಯ ಇತಿಹಾಸ ನಿಮಗೆ ಗೊತ್ತಾ? 6 ರಿಂದ 245 ರವರೆಗೆ: ಕರ್ನಾಟಕದ ಶ್ವಾನಪಡೆಯ ಇತಿಹಾಸ ನಿಮಗೆ ಗೊತ್ತಾ?

ಇಂಥೆಲ್ಲಾ ಪ್ರಾಣಿಗಳನ್ನು ನೋಡುವುದೇ ಒಂದು ಖುಷಿ. ಕೆಲ ಪ್ರಾಣಿಗಳ ತುಂಟಾಟ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ. ಆದರೆ ಇಂಥ ಪ್ರಾಣಿಗಳಿಗೂ ಸಂಸ್ಕಾರ ಕಳಿಸಬಹುದು ಅಂದ್ರ ನೀವು ನಂಬುತ್ತೀರಾ? ಅಥವಾ ಎಲ್ಲದರೂ ನೋಡಿದ್ದೀರಾ? ಅಂಥಹ ಒಂದು ಶ್ವಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Cultured Dog: Dog Performs Pradakshina to Tulsi Plant

ಸಾಮಾನ್ಯವಾಗಿ ಸಾಕು ನಾಯಿಗಳು ತನ್ನ ಮಾಲೀಕರಿಗೆ ರಕ್ಷಣೆ ನೀಡುವುದನ್ನು ಕಲಿತ್ತಿರುತ್ತವೆ. ತನ್ನನ್ನು ಸಾಕಿದ ಮನೆಗೆ ಕಾವಲುಗಾರನಾಗಿರುತ್ತದೆ. ಮಕ್ಕಳೊಂದಿಗೆ ಆಟ, ಹಿರಿಯರೊಂದಿಗೆ ತುಂಟಾಟ, ಪರರ ಮೇಲೆ ದಾಳಿ, ಮಾಲೀಕ ಹೇಳಿದಂತೆ ನಡೆದುಕೊಳ್ಳುವುದು ಅದರ ಲಕ್ಷಣಗಳಾಗಿರುತ್ತವೆ.

ಆದರೆ ಇಲ್ಲೊಂದು ನಾಯಿ ಪ್ರತಿನಿತ್ಯ ತುಳಿಸಿಕಟ್ಟೆಗೆ ಪ್ರದಕ್ಷಣೆ ಹಾಕುತ್ತದೆ. ಎರಡು ಸುತ್ತು ಹಾಕಿ ನಮಸ್ಕರಿಸುತ್ತದೆ. ಈ ವಿಡಿಯೋ ಯಾವ ಸ್ಥಳದೆಂದು ತಿಳಿದು ಬಂದಿಲ್ಲ. ಆದರೆ ಈ ಅದ್ಬುತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮನೆಯಿಂದ ಓರ್ವ ಮಹಿಳೆ ತುಳಿಸಿಕಟ್ಟೆಗೆ ದೀಪವನ್ನು ಇಡುತ್ತಾರೆ.

Cultured Dog: Dog Performs Pradakshina to Tulsi Plant

ನಂತರ ಅವರು ನಮಸ್ಕರಿಸುತ್ತಿದ್ದಂತೆ ನಾಯಿ ಕೂಡ ಅವರೊಂದಿಗೆ ಪ್ರದಕ್ಷಿಣೆ ಹಾಕುತ್ತದೆ. ಮಹಿಳೆಯೊಂದಿಗೆ ಎರಡು ಬಾರಿ ತುಳಸಿಕಟ್ಟೆಯನ್ನು ಸುತ್ತಿ ನಂತರ ಮತ್ತೊಮ್ಮೆ ನಮಸ್ಕರಿಸುತ್ತದೆ. ಈ ವಿಡಿಯೋಕ್ಕೆ 600 ಹೆಚ್ಚು ಕಾಮೆಂಟ್‌ಗಳು ಬಂದಿದ್ದು ಕೆಲವರು ಇದೊಂದು ಸುಸಂಸ್ಕೃತ ನಾಯಿ ಎಂದು ಬರೆದಿದ್ದಾರೆ. ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ಪ್ರಾಣಿ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗಿದು 767K ವೀಕ್ಷಣೆ ಪಡೆದುಕೊಂಡಿದೆ.

ತುಳಸಿ ಪೂಜೆಗಿರುವ ಮಹತ್ವ

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆಯ ಸ್ಥಾನ ಸಿಕ್ಕಿದೆ. ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ತುಳಸಿಯನ್ನು ವರ್ಷವಿಡೀ ಪೂಜಿಸಲಾಗುತ್ತಿದ್ದರೂ, ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯನ್ನು ಮಾಡಿ ಮತ್ತು ತುಳಸಿಯ ಮುಂದೆ ದೀಪ ದಾನ ಮಾಡುವುದರಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ನೀಡುತ್ತದೆ ಎಂಬ ನಂಬಿಕೆ ಇದೆ.

English summary
A dog performs Pradakshina to Tulsi plant with owner video goes viral in social media. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X