ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೋತ್ತರ ಸಮೀಕ್ಷೆ: ಒಡಿಶಾದಲ್ಲಿ ಮೋದಿ ಅಲೆಗೆ ಅಡ್ಡಿಯಾದ ಪಟ್ನಾಯಕ್ ಚಂಡಮಾರುತ

|
Google Oneindia Kannada News

ಕೆಲವೇ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಸ್ಥಳೀಯ ರಾಜಕಾರಣದ ಪ್ರಭಾವಳಿಯನ್ನೂ ಮೀರಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಮೋದಿ ಸುನಾಮಿ ಎಂದು ಬಣ್ಣಿಸಲಾಗುವ ಈ ದಿಗ್ವಿಜಯದ ಅಲೆಯಲ್ಲಿ ತಮ್ಮ ಪಕ್ಷವನ್ನು ಉಳಿಸಿಕೊಂಡಿರುವುದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೆಗ್ಗಳಿಕೆ. 'ಫ್ಯಾನಿ' ಚಂಡಮಾರುತದ ಅಬ್ಬರಕ್ಕೆ ಬೆದರದೆ ಸವಾಲನ್ನು ಎದುರಿಸಿದ್ದ ನವೀನ್ ಪಟ್ನಾಯಕ್, ಅದೇ ರೀತಿ ಮೋದಿಯ ಅಬ್ಬರಕ್ಕೂ ಅವರು ನಿಯಂತ್ರಣ ಹಾಕಿದ್ದಾರೆ.

ಸರಳತೆ ಮತ್ತು ಬದ್ಧತೆಗೆ ಹೆಸರಾದ ನವೀನ್ ಪಟ್ನಾಯಕ್ ಮತ್ತು ಪ್ರಬಲ ಹಾಗೂ ಹೆಚ್ಚು ಪ್ರಭಾವಶಾಲಿ ವ್ಯಕ್ತಿತ್ವದ ನರೇಂದ್ರ ಮೋದಿ ಅವರ ನಡುವಿನ ಪೈಪೋಟಿ ಯಾವ ರೀತಿ ಇರಲಿದೆ ಎಂಬ ಕುತೂಹಲ ಮೂಡಿತ್ತು.

ಬಿಜೆಪಿ ಮಾತ್ರವಲ್ಲ, ಬೇರೆ ಪಕ್ಷದವರಿಗೂ ಮೋದಿಯೇ ಪ್ರಧಾನಿಯಾಗಬೇಕೆಂಬ ಆಸೆ! ಬಿಜೆಪಿ ಮಾತ್ರವಲ್ಲ, ಬೇರೆ ಪಕ್ಷದವರಿಗೂ ಮೋದಿಯೇ ಪ್ರಧಾನಿಯಾಗಬೇಕೆಂಬ ಆಸೆ!

ಬಿಜು ಜನತಾದಳದ ಕೋಟೆಯನ್ನು ಸಂಪೂರ್ಣವಾಗಿ ಭೇದಿಸಲಾಗದೆ ಹೋದರೂ ಬಿಜೆಪಿ ತನ್ನ ಕಮಲದ ಸಂಪನ್ನು ಹರಡಿರುವುದಂತೂ ನಿಜ. ಕಾಂಗ್ರೆಸ್‌ಅನ್ನು ಸಂಪೂರ್ಣವಾಗಿ ಮೂಲಗೆ ತಳ್ಳಿ ಪ್ರಮುಖ ವಿರೋಧಪಕ್ಷವಾಗಿ ರಾಜ್ಯದಲ್ಲಿ ಹೊರಹೊಮ್ಮಿರುವ ಬಿಜೆಪಿ, ಬಿಜೆಡಿಗೆ ಸವಾಲಾಗಿಯೂ ಎದುರು ನಿಂತಿದೆ. ನವೀನ್ ಪಟ್ನಾಯಕ್ ಅವರನ್ನು ಹೊರುತುಪಡಿಸಿದರೆ ಬಿಜೆಡಿಯಲ್ಲಿ ಎರಡನೆಯ ಸಾಲಿನ ನಾಯಕತ್ವ ವಹಿಸಿಕೊಳ್ಳುವ ಪ್ರಬಲ ನಾಯಕರಿಲ್ಲ. ಹೀಗಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಸಮಯಕ್ಕಾಗಿ ಕಾಯುತ್ತಿದೆ.

ದಿ ಹಿಂದೂ ಪತ್ರಿಕೆಗಾಗಿ ಸಿಎಸ್‌ಡಿಎಸ್-ಲೋಕನೀತಿ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ವಿವರ ಹೀಗಿದೆ.

ಬಿಜೆಪಿ ಮತಗಳಿಗೆ ಹೆಚ್ಚಳ

ಬಿಜೆಪಿ ಮತಗಳಿಗೆ ಹೆಚ್ಚಳ

2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಡಿ ಎಂಟು ಕ್ಷೇತ್ರಗಳನ್ನು ಕಳೆದುಕೊಂಡಿದ್ದರೂ, ನರೇಂದ್ರ ಮೋದಿ ಅವರಿಗೆ ಆದ್ಯತೆ ನೀಡುವ ಮತದಾರರ ಬಯಕೆ ನಡುವೆಯೂ ಬಿಜೆಪಿಗಿಂತ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಡಿ 12 ಸೀಟುಗಳಲ್ಲಿ ಗೆದ್ದಿದ್ದರೆ, ಬಿಜೆಪಿ 8ರಲ್ಲಿ ಗೆದ್ದಿದೆ. ಬಿಜೆಪಿ ತನ್ನ ಹಿಂದಿನ ಮತ ಹಂಚಿಕೆ ಪ್ರಮಾಣವನ್ನು ಶೇ 17ರಿಂದ ಶೇ 38.4ಕ್ಕೆ ಹೆಚ್ಚಿಸಿಕೊಂಡಿದೆ. ಆದರೆ, ಬಿಜೆಡಿಯ ಮತ ಹಂಚಿಕೆ ಪ್ರಮಾಣ ಶೇ 42.8ಕ್ಕೆ ಕುಸಿದಿದೆ. ಕಳೆದ ಸಾಲಿನಂತೆ ಶೂನ್ಯ ಸಾಧನೆ ಮಾಡದೆ ಕೋರಾಪುಟ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಖಾತೆ ತೆರದಿದ್ದರೂ ಕಾಂಗ್ರೆಸ್ ಮತಗಳಿಗೆ ಪ್ರಮಾಣ ಅಧೋಗತಿಗೆ ತಲುಪಿದೆ.

1998ರಿಂದ 2014ರ ತನಕ ಸಂಸತ್ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದೇನು, ಫಲಿತಾಂಶ ಬಂದಿದ್ದೇನು? 1998ರಿಂದ 2014ರ ತನಕ ಸಂಸತ್ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?

ಬಿಜೆಪಿ-ಬಿಜೆಡಿ ಪೈಪೋಟಿ

ಬಿಜೆಪಿ-ಬಿಜೆಡಿ ಪೈಪೋಟಿ

ಇದೇ ಸಂದರ್ಭದಲ್ಲಿ ಬಿಜೆಡಿಯ ವಿಧಾನಸಭೆ ಸಾಧನೆ ಗಮನಾರ್ಹ. ಪಟ್ನಾಯಕ್ ಅವರ ಪಕ್ಷ ಇಲ್ಲಿ ಕೇವಲ ಐದು ಸೀಟುಗಳನ್ನು ಕಳೆದುಕೊಂಡಿದೆ. 146ರಲ್ಲಿ 112 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಅಂದರೆ ಬಹುಮತದ ನಾಲ್ಕನೇ ಮೂರರಷ್ಟು ಸೀಟುಗಳಲ್ಲಿ ಜಯಗಳಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಅದರ ಮತಗಳಿಕೆ ಪ್ರಮಾಣ ಶೇ 44.7. ಬಿಜೆಪಿ 23 ಸೀಟುಗಳಲ್ಲಿ ಗೆದ್ದಿದ್ದು, ಶೇ 32.5ರಷ್ಟು ಮತಗಳನ್ನು ಪಡೆದುಕೊಂಡಿದೆ. ಈ ಮೂಲಕ ಪ್ರಮುಖ ವಿರೋಧಪಕ್ಷದ ಸ್ಥಾನದಿಂದ ಕಾಂಗ್ರೆಸ್‌ಗೆ ಗೇಟ್ ಪಾಸ್ ನೀಡಿದೆ.

ಮುಖ್ಯಮಂತ್ರಿ ಗಾದಿಗೆ ಪಟ್ನಾಯಕ್ ಅವರೇ ಸೂಕ್ತ ವ್ಯಕ್ತಿಯೆಂದು ಬಹುಪಾಲು ಮಂದಿ ಪ್ರತಿಕ್ರಿಯಿಸಿದ್ದಾರೆ. ಪ್ರತಿ ಮೂವರಲ್ಲಿ ಇಬ್ಬರು ಪಟ್ನಾಯಕ್ ಅವರನ್ನೇ ಆರಿಸಿದ್ದರು. ಹಾಗೆಂದು ಒಡಿಶಾ ಜನರು ಮೋದಿ ಪ್ರಭಾವವನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗದು. ಮುಂದಿನ ಪ್ರಧಾನಿ ಯಾರಾಗಬೇಕು ಎಂಬುದಕ್ಕೆ ಒಡಿಶಾದ ಬಿಜೆಡಿ ಬೆಂಬಲಿಗರೂ ಮೋದಿ ಅವರನ್ನೇ ಹೆಸರಿಸಿದ್ದಾರೆ.

ಸಿಎಂಗೆ ಗಾದಿಗೆ ನವೀನ್ ಪಟ್ನಾಯಕ್

ಸಿಎಂಗೆ ಗಾದಿಗೆ ನವೀನ್ ಪಟ್ನಾಯಕ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯ ಮಟ್ಟದ ನಾಯಕತ್ವಕ್ಕೆ ಬಿಜೆಡಿಯನ್ನು ಎದುರಿಸುವುದು ಸುಲಭವಾಗಿಲ್ಲ. ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಅಧಿಕೃತ ವರ್ಚಸ್ಸನ್ನು ರಾಜ್ಯದಾಚೆಗೆ ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ, ಬಿಜೆಡಿಯು ಅನೇಕ ರೀತಿಗಳಲ್ಲಿ ಸಮರ್ಥವಾಗಿ ಎದುರಿಸಿ ಅವರು ಮುಖ್ಯಮಂತ್ರಿ ಗಾದಿಗೆ ಪರ್ಯಾಯ ವ್ಯಕ್ತಿ ಎಂಬುದನ್ನು ಬಿಂಬಿಸಿಕೊಳ್ಳುವುದನ್ನು ತಡೆಯಿತು. ಈ ಸಮೀಕ್ಷೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಎಂದು ಕೇವಲ ಶೇ 17ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಐದರಲ್ಲಿ ಮೂವರು ನವೀನ್ ಪಟ್ನಾಯಕ್ ಅವರನ್ನೇ ಬೆಂಬಲಿಸಿದ್ದಾರೆ.

ಕರ್ನಾಟಕ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಕರಾರುವಾಕ್ ಫಲಿತಾಂಶ ನೀಡಿದ್ದ 5 ವಾಹಿನಿಗಳುಕರ್ನಾಟಕ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್: ಕರಾರುವಾಕ್ ಫಲಿತಾಂಶ ನೀಡಿದ್ದ 5 ವಾಹಿನಿಗಳು

ಬಡವರು, ಕೆಳವರ್ಗಕ್ಕೆ ಬಿಜೆಡಿ

ಬಡವರು, ಕೆಳವರ್ಗಕ್ಕೆ ಬಿಜೆಡಿ

ಮಧ್ಯಮ ಮತ್ತು ಮೇಲ್ವರ್ಗಕ್ಕೆ ಬಿಜೆಪಿ ಹೆಚ್ಚು ಆಪ್ತ ಎಂಬುದನ್ನು ಸಮೀಕ್ಷೆ ತಿಳಿಸಿದೆ. ಆದರೆ, ಬಡವರು ಮತ್ತು ಕೆಳವರ್ಗದವರಿಗೆ ಹೆಚ್ಚು ಪ್ರಿಯರಾದ ನವೀನ್ ಪಟ್ನಾಯಕ್ ಅವರ ವರ್ಚಸ್ಸನ್ನು ಹಿಮ್ಮೆಟ್ಟಿಸಲು ಈ ಹಿರಿಮೆ ಸಫಲವಾಗಿಲ್ಲ. ಬಿಜೆಪಿ ಮತ್ತು ಬಿಜೆಡಿ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ, ಪುರುಷರಿಗಿಂತ ಮಹಿಳೆಯರ ನಡುವೆ ಬಿಜೆಪಿ ಮತ್ತು ಬಿಜೆಡಿಗಳೆರಡೂ ಅಲ್ಪಮಟ್ಟಿನ ಜನಪ್ರಿಯತೆ ಹೆಚ್ಚಿಸಿಕೊಂಡಿವೆ. ವರ್ಗಗಳ ವಿಚಾರಕ್ಕೆ ಬಂದಾಗ ಮತದಾರರ ಆಯ್ಕೆ ವಿಭಿನ್ನವಾಗುತ್ತದೆ.

ರೈತರ ಒಲವು ಯಾರ ಕಡೆಗೆ

ರೈತರ ಒಲವು ಯಾರ ಕಡೆಗೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಮುನ್ನಡೆ ಪಡೆದುಕೊಳ್ಳಲು ಆರ್‌ಜೆಡಿಗೆ ಪಟ್ನಾಯಕ್ ಸರ್ಕಾರವು ರೈತರಿಗೆ ಹಣಕಾಸಿನ ನೆರವು ನೀಡುವ 'ಕಾಲಿಯಾ' ಯೋಜನೆ ಸಾಕಷ್ಟು ಮಹತ್ವದ ಪಾತ್ರ ವಹಿಸಿತ್ತು ಎಂದು ಸಮೀಕ್ಷೆ ತಿಳಿಸಿದೆ. ಕಾಲಿಯಾ ಯೋಜನೆಯಿಂದ ಪ್ರಯೋಜನ ಪಡೆದವರು ಎಂದು ಹೇಳಿಕೊಂಡ ಶೇ 39ರಷ್ಟು ರೈತರಲ್ಲಿ ಬಿಜೆಪಿಗಿಂತ ಶೇ 9ರಷ್ಟು ಹೆಚ್ಚು ಮಂದಿ ಮಾತ್ರ ಬಿಜೆಡಿ ಪರ ಮತ ಹಾಕಿದ್ದಾಗಿ ತಿಳಿಸಿದ್ದಾರೆ. ಕಾಲಿಯಾದ ಲಾಭ ಪಡೆಯದ ಇತರೆ ರೈತರು ಇಷ್ಟೇ ಅಂತರದಲ್ಲಿ ಬಿಜೆಡಿ ಬದಲು ಬಿಜೆಪಿ ಬಗ್ಗೆ ಒಲವು ತೋರಿಸಿದ್ದಾರೆ.

English summary
Lok Sabha election results 2019: CSDS-Lokniti poll survey in Odisha CM Naveen Patnaik overcome BJP Narendra Modi's wave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X