ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚ್ಚಾ ತೈಲ: ರಷ್ಯಾ ಹಿಂದಿಕ್ಕಿ, ತೈಲ ಖರೀದಿಯಲ್ಲಿ ಮುನ್ನುಗ್ಗಿದ ಭಾರತ!; ಹೇಗೆ?

|
Google Oneindia Kannada News

ಕಚ್ಚಾ ತೈಲ ಮಾರುಕಟ್ಟೆ ಬದಲಾಗುತ್ತಿದೆ, ವಿಶ್ವದಲ್ಲಿ ಹಣದುಬ್ಬರಕ್ಕೆ ದೇಶಗಳು ನಲುಗುತ್ತಿವೆ ಇಂತಹ ಪರಿಸ್ಥಿತಿಯಲ್ಲಿ ಭಾರತ ತೈಲ ಖರೀದಿಯಲ್ಲಿ ರಷ್ಯಾ ದೇಶವನ್ನು ಹಿಂದಿಕ್ಕಿದೆ. ಇದಕ್ಕೆ ಕಾರಣ ಭಾರತ ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಖರೀದಿ ಹಾಗೂ ಭಾರತದ ಮಾರುಕಟ್ಟೆ ವ್ಯವಸ್ಥೆ ಹಾಳಾಗದಂತೆ ನೋಡಿಕೊಂಡಿದೆ. ಈ ಮಾಹಿತಿಯು ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ವರದಿಯಲ್ಲಿ ಹೇಳಲಾಗಿದೆ. ಸದ್ಯ ಸೌದಿ ಅರೇಬಿಯಾ ರಷ್ಯಾವನ್ನು ಹಿಂದಿಕ್ಕಿ ಭಾರತದ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ಎನಿಸಿಕೊಂಡಿದೆ. ಆಗಸ್ಟ್‌ನಲ್ಲಿ ಭಾರತವು ಸೌದಿ ಅರೇಬಿಯಾದಿಂದ ಬರೋಬ್ಬರಿ ದಿನಕ್ಕೆ 8.63 ಲಕ್ಷ ಬ್ಯಾರೆಲ್‌ಗಳ ತೈಲವನ್ನು ಖರೀದಿಸಿದೆ. ಈ ಖರೀದಿಯು ಜುಲೈ ತಿಂಗಳಿಗಿಂತ 4.8% ಹೆಚ್ಚಾಗಿದೆ. ಈ ಎರಡು ದೇಶಗಳ ನಡುವೆ ಬಹಳ ಕಡಿಮೆ ವ್ಯತ್ಯಾಸವಿದೆ.

ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಉಭಯ ದೇಶಗಳು ಅನೇಕ ಸಂದರ್ಭಗಳಲ್ಲಿ ನಿರಂತರವಾಗಿ ನರಳುತ್ತಿವೆ. ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಇಡೀ ಜಗತ್ತು ಈಗಾಗಲೇ ಜಾಗತಿಕ ಆಹಾರ ಬಿಕ್ಕಟ್ಟಿನ ಅಂಚಿಗೆ ಬಂದಿದೆ. ಇಂತಹ ಪರಸ್ಥಿತಿಯಲ್ಲಿ ಜಾಗತಿಕ ಆರ್ಥಿಕ ಮಂದಗತಿಯ ಭಯವೂ ಹುಟ್ಟಿಕೊಂಡಿದೆ. ಆದರೆ, ಇಂದು ಹೊರಬಿದ್ದಿರುವ ಅಂಕಿ-ಅಂಶಗಳು ರಷ್ಯಾಕ್ಕೆ ಆತಂಕ ತಂದಿದೆ. ಮತ್ತೊಂದೆಡೆ, ಈ ಅಂಕಿ-ಅಂಶಗಳು ಕ್ಷೀಣಿಸುತ್ತಲೇ ಇದ್ದರೆ, ಈ ಅಂಕಿಅಂಶಗಳು ರಷ್ಯಾಕ್ಕೆ ಹೆಚ್ಚು ಆತಂಕಕಾರಿಯಾಗಬಹುದು.

ಅತ್ತ ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ; ಇತ್ತ ಪೆಟ್ರೋಲ್ ಬೆಲೆ ಏರಿಕೆಅತ್ತ ತೈಲ ಉತ್ಪಾದನೆ ಕಡಿತಕ್ಕೆ ನಿರ್ಧಾರ; ಇತ್ತ ಪೆಟ್ರೋಲ್ ಬೆಲೆ ಏರಿಕೆ

 ತೈಲ ಖರೀದಿಯಲ್ಲಿ ರಷ್ಯಾ ಹಿಂದಿಕ್ಕಿದ ಭಾರತ

ತೈಲ ಖರೀದಿಯಲ್ಲಿ ರಷ್ಯಾ ಹಿಂದಿಕ್ಕಿದ ಭಾರತ

ಆಗಸ್ಟ್ ತಿಂಗಳಿನಲ್ಲಿ ಮೊದಲ ಸ್ಥಾನದಲ್ಲಿ ಉಳಿದಿದೆ, ಇದು ಭಾರತದ ಮೊದಲ ಅತಿದೊಡ್ಡ ತೈಲ ಪೂರೈಕೆದಾರವಾಗಿದ್ದು ತೈಲ ಖರೀದಿಯಲ್ಲಿ ಏರಿಕೆ ಕಂಡಿದೆ. ಆದಾಗ್ಯೂ, ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಾಸವು ತುಂಬಾ ದೊಡ್ಡದಾಗಿ ಕಂಡು ಬಂದಿಲ್ಲ. ಆದರೆ, ಆಗಷ್ಟ್‌ನಲ್ಲಿ ಕಂಡು ಬಂದಿದೆ, ಇದಕ್ಕೆ ಮೂಲ ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅನೇಕ ಆರ್ಥಿಕ ಬದಲಾವಣೆಗಳನ್ನು ರಷ್ಯಾ ಎದುರಿಸುತ್ತಿದೆ ಹಾಗೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಉತ್ತಮವಾಗಿವೆ.

 ತೈಲ ಆಮದು 16 ವರ್ಷಗಳಲ್ಲೇ ಅತ್ಯಂತ ಕಡಿಮೆ

ತೈಲ ಆಮದು 16 ವರ್ಷಗಳಲ್ಲೇ ಅತ್ಯಂತ ಕಡಿಮೆ

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಭಾರತವು ಆಗಸ್ಟ್‌ನಲ್ಲಿ ಸೌದಿ ಅರೇಬಿಯಾದಿಂದ ದಿನಕ್ಕೆ 8,63,950 ಬ್ಯಾರೆಲ್‌ಗಳಷ್ಟು (bpd) ತೈಲವನ್ನು ಖರೀದಿಸಿತು, ಜುಲೈ ತಿಂಗಳಿಗೆ ಹೋಲಿಸಿದರೆ 4.8% ಹೆಚ್ಚಳವಾಗಿದೆ, ಆದರೆ ರಷ್ಯಾದಲ್ಲಿ ಈ ಅಂಕಿ ಅಂಶವು 2.4% ರಷ್ಟು ಕುಸಿದು 855,950 ಬ್ಯಾರೆಲ್‌ಗಳಿಗೆ ತಲುಪಿದೆ. ಇದರೊಂದಿಗೆ, ಒಪೆಕ್ ರಾಷ್ಟ್ರಗಳಿಂದ ಭಾರತದ ತೈಲ ಆಮದು 59.8% ಕ್ಕೆ ಇಳಿದಿದೆ, ಇದು ಕಳೆದ 16 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ವಾಸ್ತವವಾಗಿ ಒಪೆಕ್‌(OPEC) 13 ಪೆಟ್ರೋಲಿಯಂ ರಫ್ತುದಾರರ ಸಂಸ್ಥೆಯಾಗಿದ್ದು, ಇದನ್ನು 14 ಸೆಪ್ಟೆಂಬರ್ 1960 ರಂದು ಸ್ಥಾಪಿಸಲಾಯಿತು.

 ಚೀನಾದ ನಂತರ ರಷ್ಯಾಕ್ಕೆ ಭಾರತ ಎರಡನೇ ಅತಿದೊಡ್ಡ ತೈಲ ಗ್ರಾಹಕ

ಚೀನಾದ ನಂತರ ರಷ್ಯಾಕ್ಕೆ ಭಾರತ ಎರಡನೇ ಅತಿದೊಡ್ಡ ತೈಲ ಗ್ರಾಹಕ

ಚೀನಾದ ನಂತರ ಭಾರತ ಅತಿ ಹೆಚ್ಚು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನಡೆಯುತ್ತಿರುವ ರುಸ್ಸೋ-ಉಕ್ರೇನ್ ಯುದ್ಧದ ಕಾರಣ, ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ರಷ್ಯಾ ತನ್ನ ಆರ್ಥಿಕತೆಯನ್ನು ನಡೆಸಲು ಕಡಿಮೆ ಬೆಲೆಯಲ್ಲಿ ತೈಲ ಮತ್ತು ಇತರ ಕಚ್ಚಾ ವಸ್ತುಗಳನ್ನು ನೀಡಿತು, ನಂತರ ಭಾರತವು ರಷ್ಯಾದಿಂದ ತೈಲ ಆಮದನ್ನು ಹೆಚ್ಚಿಸಿತು. ಆದರೆ, ಜೂನ್ ನಲ್ಲಿ ದಾಖಲೆ ಮಟ್ಟ ತಲುಪಿದ ನಂತರ ಈಗ ಇಳಿಕೆ ಕಾಣುತ್ತಿದೆ.

 ರಷ್ಯಾ ಈಗ ಕಚ್ಚಾ ತೈಲ ರಫ್ತಿನಲ್ಲಿ ರಿಯಾಯಿತಿ ?

ರಷ್ಯಾ ಈಗ ಕಚ್ಚಾ ತೈಲ ರಫ್ತಿನಲ್ಲಿ ರಿಯಾಯಿತಿ ?

ಮಾರುಕಟ್ಟೆ ತಜ್ಞರ ಪ್ರಕಾರ, ರಷ್ಯಾ ಈಗ ಕಚ್ಚಾ ತೈಲ ರಫ್ತಿನಲ್ಲಿ ರಿಯಾಯಿತಿಯನ್ನು ಕಡಿಮೆ ಮಾಡುತ್ತಿದೆ. ಅದೇ ಸಮಯದಲ್ಲಿ ತೈಲ ಪೂರೈಕೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಮತ್ತು ಭಾರತ ನಡುವಿನ ಒಪ್ಪಂದದ ಕೆಲವು ಷರತ್ತುಗಳಿವೆ, ಇದರಿಂದಾಗಿ ತೈಲ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ರಷ್ಯಾದೊಂದಿಗೆ ತೈಲ ಆಮದು ಅಂಕಿ-ಅಂಶಗಳಲ್ಲಿನ ಇಳಿಕೆ ಇದಕ್ಕೆ ಕಾರಣ.
ವಾಸ್ತವವಾಗಿ ಆಗಸ್ಟ್‌ನ ತಿಂಗಳಲ್ಲಿ ಬಲಿಷ್ಠ ದೇಶವಾದ ರಷ್ಯಾ, ಭಾರತಕ್ಕೆ ದಿನಕ್ಕೆ 855,950 ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡಿದೆ, ಇದು ಜುಲೈಗಿಂತ 2.4% ಕಡಿಮೆಯಾಗಿದೆ. ಈ ಕಾರಣದಿಂದಾಗಿ, ಸೌದಿ ಅರೇಬಿಯಾವು ರಷ್ಯಾವನ್ನು ಹಿಂದಿಕ್ಕಿ ಭಾರತಕ್ಕೆ ಎರಡನೇ ಅತಿದೊಡ್ಡ ತೈಲ ಪೂರೈಕೆದಾರ ಎನಿಸಿಕೊಂಡಿದೆ.

English summary
India's oil imports from Russia jumped to nearly 18 percent of its total petroleum crude imports in July in value terms, according to the latest commerce ministry data. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X