• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಗೆ ಹೆಸರು ನೋಂದಣಿ ಮಾಡುವುದು ಹೇಗೆ?

|

ನವದೆಹಲಿ, ಏಪ್ರಿಲ್ 22: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆ ಅಭಿಯಾನದ ವೇಗವನ್ನು ಹೆಚ್ಚಿಸಲಾಗುತ್ತಿದೆ. ದೇಶಾದ್ಯಂತ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಕ್ಕೆ ಮೂರು ದಿನ ಮೊದಲೇ ಲಸಿಕೆಗೆ ಹೆಸರು ನೋಂದಣಿ ಕಾರ್ಯ ಆರಂಭವಾಗುತ್ತದೆ. ಏಪ್ರಿಲ್ 28ರಂದು CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ಸಿಹಿಸುದ್ದಿ: ಕೊರೊನಾ ಲಸಿಕೆ ಪಡೆದುಕೊಳ್ಳುವ ಸುಲಭ ವಿಧಾನ

ಕಳೆದ ಜನವರಿ 16ರಂದು ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ದೇಶದಲ್ಲಿ ಈವರೆಗೂ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಆದರೆ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆ ನೀಡವು ಅಭಿಯಾನ ಆರಂಭವಾಗಲಿದ್ದು, ಹೆಸರು ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಲಸಿಕೆಗೆ ಹೆಸರು ನೋಂದಾವಣಿ ಹೇಗೆ?

ಲಸಿಕೆಗೆ ಹೆಸರು ನೋಂದಾವಣಿ ಹೇಗೆ?

ಕೊರೊನಾ ಲಸಿಕೆಗಾಗಿ ನಿಮ್ಮ ಹೆಸರು ನೋಂದಾಯಿಸಲು ನಿಮಗೆ ಪ್ಯಾನ್ ಕಾರ್ಡ್, ಪಿಂಚಣಿ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಎಂಎನ್‌ಆರ್‌ಇಜಿಎ ಜಾಬ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಂತಹ ಗುರುತಿನ ಚೀಟಿಯ ಅಗತ್ಯವಿದೆ. ಈ ಪುರಾವೆಗಳು ಮಾತ್ರ ಅದಕ್ಕೆ ಮಾನ್ಯತೆ ಹೊಂದಿರುತ್ತವೆ. ಆನ್‌ಲೈನ್ ನೋಂದಣಿಯನ್ನು ಪೋಸ್ಟ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು SMS ಬರುತ್ತದೆ. ಅದರಲ್ಲಿ ಲಸಿಕೆ ನೀಡುವ ದಿನಾಂಕ, ಸ್ಥಳ ಮತ್ತು ಸಮಯವನ್ನು ತಿಳಿಸಲಾಗಿರುತ್ತದೆ.

ಕೊವಿಡ್ ಲಸಿಕೆ ಇಂಟೆಲಿಜೆನ್ಸ್ ನೆಟ್ ವರ್ಕ್ (Co-WIN) ವ್ಯವಸ್ಥೆ"- ಈ ಡಿಜಿಟಲೈಸ್ಡ್ ಪ್ಲಾಟ್ ಫಾರ್ಮ್ ನ್ನು ನೈಜ-ಸಮಯದ ಆಧಾರದ ಮೇಲೆ ಕೊರೊನಾವೈರಸ್ ಲಸಿಕೆಗಾಗಿ ಸೇರ್ಪಡೆಗೊಂಡ ಫಲಾನುಭವಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.

CoWin ಮೂಲಕ ಹೆಸರು ನೋಂದಾಯಿಸುವುದು ಹೇಗೆ?

CoWin ಮೂಲಕ ಹೆಸರು ನೋಂದಾಯಿಸುವುದು ಹೇಗೆ?

* ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣ cowin.gov.in ಭೇಟಿ ನೀಡಿ.

* ರಿಜಿಸ್ಟರ್ ಅಥವಾ ಸೈನ್ ಇನ್ ಮೇಲೆ ಕ್ಲಿಕ್ ಮಾಡಿರಿ.

* 10 ಅಂಕಿಗಳ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿರಿ.

* ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. ಈ ಸಂಖ್ಯೆಯನ್ನು ಅಲ್ಲಿ ತೋರಿಸುವ ಜಾಗದಲ್ಲಿ ನಮೂದಿಸಿರಿ.

* ಒಂದು ಬಾರಿ ನಿಮ್ಮ ಹೆಸರು ನೋಂದಣಿಯಾದ ಬಳಿಕ ಲಸಿಕೆಯ ದಿನಾಂಕ ಮತ್ತು ಸಮಯ ನಿಗದಿಯಾಗುತ್ತದೆ.

ನಿಮ್ಮ ಕೊರೊನಾವೈರಸ್ ಲಸಿಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಯಾವ ದಾಖಲೆಗಳಿದ್ದಲ್ಲಿ ಲಸಿಕೆಗೆ ಹೆಸರು ನೋಂದಣಿ

ಯಾವ ದಾಖಲೆಗಳಿದ್ದಲ್ಲಿ ಲಸಿಕೆಗೆ ಹೆಸರು ನೋಂದಣಿ

ಭಾವಚಿತ್ರ ಹೊಂದಿರುವ ಕೆಳಗಿನ ಯಾವುದೇ ಗುರುತಿನ ಚೀಟಿಯನ್ನು ನೋಂದಣಿ ಸಮಯದಲ್ಲಿ ನೀಡಬಹುದು:

• ಆಧಾರ್ ಕಾರ್ಡ್

• ಪ್ಯಾನ್ ಕಾರ್ಡ್

• ಮತದಾರರ ಗುರುಚಿನ ಚೀಟಿ

• ಚಾಲನಾ ಪರವಾನಿಗೆ

• ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಿದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್

• ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ (ಎಂಜಿಎನ್‌ಆರ್‌ಇಜಿಎ) ನೀಡಿದ ಉದ್ಯೋಗ ಪ್ರಮಾಣಪತ್ರ

• ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್

• ಸಂಸದರು/ ಶಾಸಕರು / ಅಧಿಕೃತವಾಗಿ ನೀಡಿದ ಗುರುತಿನ ಚೀಟಿ

• ಬ್ಯಾಂಕ್ / ಅಂಚೆ ಕಚೇರಿಯಿಂದ ನೀಡಿದ ಪಾಸ್‌ಬುಕ್‌

• ಪಾಸ್‌ಪೋರ್ಟ್

• ಪಿಂಚಣಿ ದಾಖಲೆ

• ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ

• ಕೇಂದ್ರ / ರಾಜ್ಯ ಸರ್ಕಾರ / ಪಿಎಸ್ಯುಗಳು / ಸಾರ್ವಜನಿಕ ಕಂಪನಿಗಳು ನೌಕರರಿಗೆ ನೀಡಿರುವ ಭಾವಚಿತ್ರವುಳ್ಳ ಉದ್ಯೋಗದ ಗುರುತಿನ ಚೀಟಿ

ಆರೋಗ್ಯ ಸೇತು ಮೂಲಕ ಹೆಸರು ನೋಂದಾವಣಿ ಹೇಗೆ?

ಆರೋಗ್ಯ ಸೇತು ಮೂಲಕ ಹೆಸರು ನೋಂದಾವಣಿ ಹೇಗೆ?

* ಆರೋಗ್ಯ ಸೇತು ಅಪ್ಲಿಕೇಶನ್ ಮೇಲ್ಭಾಗದಲ್ಲಿ ಇರುವ CoWIN ಟ್ಯಾಬ್ ಮೇಲೆ ಕ್ಲಿಕ್ ಮಾಡಿರಿ.

* ಲಸಿಕೆ ನೋಂದಣಿ ಮೇಲೆ ಒತ್ತಿರಿ > ಮೊಬೈಲ್ ಸಂಖ್ಯೆ ನಮೂದಿಸಿರಿ > OTP ಹಾಕಿರಿ.

* ಪರಿಶೀಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ "ಲಸಿಕೆಗಾಗಿ ಹೆಸರು ನೋಂದಣಿ" ಪುಟ ತೆರೆದುಕೊಳ್ಳುತ್ತದೆ.

* CoWIN ಅಪ್ಲಿಕೇಶನ್ ನಲ್ಲಿ ಪಾಲಿಸುವ ನಿಯಮಗಳ ರೀತಿಯಲ್ಲಿ ಹೆಸರು ನೋಂದಣಿ ಮಾಡಬೇಕಾಗುತ್ತದೆ.

ಕೊವಿಡ್-19 ಲಸಿಕೆ ಪಡೆದ ನಂತರ ಮುಂದೇನು?

ಕೊವಿಡ್-19 ಲಸಿಕೆ ಪಡೆದ ನಂತರ ಮುಂದೇನು?

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲವು ನಿಯಮಗಳಿವೆ. ಅದರಂತೆ ಲಸಿಕೆ ನೀಡುವ ಸ್ಥಳವನ್ನು ಕಾಯುವ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿ ಎಂದು ವಿಭಾಗಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಲಸಿಕೆ ಪಡೆದ ವ್ಯಕ್ತಿಯು ತಕ್ಷಣವೇ ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಕನಿಷ್ಠ ಸಮಯ ಅದೇ ಸ್ಥಳದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಈ ವೇಳೆಯಲ್ಲೇ ಲಸಿಕೆ ಪಡೆದ ವ್ಯಕ್ತಿಯ ದೇಹದಲ್ಲಿ ಆಗುವ ಬದಲಾವಣೆಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ.

ಎರಡು ಡೋಸ್ ಲಸಿಕೆಗಳ ನಡುವಿನ ಅಂತರ ಎಷ್ಟಿರಬೇಕು?

ಎರಡು ಡೋಸ್ ಲಸಿಕೆಗಳ ನಡುವಿನ ಅಂತರ ಎಷ್ಟಿರಬೇಕು?

ಭಾರತದಲ್ಲಿ ಪ್ರಸ್ತುತ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಎರಡು ಮಾದರಿಯ ಲಸಿಕೆಗಳನ್ನು ನೀಡಲಾಗುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ಪಡೆದ 28 ರಿಂದ 42 ದಿನಗಳೊಳಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಕೊವಿಶೀಲ್ಡ್ ಲಸಿಕೆ ಪಡೆದ 28 ರಿಂದ 56 ದಿನಗಳ ಒಳಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನಿಯಮವಿದೆ.

English summary
Covid Vaccination Registration: Those Above 18 Can Register for Inoculation From April 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X