ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ನಿರ್ವಹಣೆಯ ಒತ್ತಡದಲ್ಲಿ ವಿಜ್ಞಾನಿಗಳ ಪರಿಸ್ಥಿತಿ ಏನಾಗಿದೆ ಗೊತ್ತೇ?

|
Google Oneindia Kannada News

''ನಾನು ದಣಿದಿದ್ದೇನೆ, ನನ್ನ ಜೀವನ ಒಂದು ಮ್ಯಾರಥಾನ್‌ನಂತೆ ಕಾಣುತ್ತಿದೆ, ನಾನು ಓಡುತ್ತಲೇ ಇದ್ದೇನೆ, ಹೀಗೆಯೇ ಮುಂದುವರೆಯುವುದು ಅನಿವಾರ್ಯ'' ಇದು ದಕ್ಷಿಣ ಕೆರೋಲಿನಾದ ವೈದ್ಯಕೀಯ ವಿದ್ಯಾಲಯಗಳ ಸಾಂಕ್ರಾಮಿಕ ರೋಗಗಳ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೃತಿಕಾ ಕುಪ್ಪಳ್ಳಿಯವರ ಮಾತು.

ಹೌದು, ಜನರ ಜೀವ ಕಾಪಾಡುವುದು, ಕೊರೊನಾ ವಿರುದ್ಧ ಹೋರಾಡುವ ಒತ್ತಡದಲ್ಲಿ ವಿಜ್ಞಾನಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ತಮ್ಮ ಮಾನಸಿಕ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದಾರೆ, ಮಾನಸಿಕ ಒತ್ತಡದಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

2019ರ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಜರ್ಮನಿಯಿಂದ ಭಾರತಕ್ಕೆ ಹಲವು ವೈದ್ಯರನ್ನು ಕಳುಹಿಸಿಕೊಟ್ಟಿದೆ. ಅದಕ್ಕೆ ಕೊರೊನಾ ಕಾರಣವನ್ನು ನೀಡಲಾಗಿದೆ. ಆದರೆ ವಿಜ್ಞಾನಿಗಳಾಗಲೀ ವೈದ್ಯರಾಗಲೂ ತಮ್ಮೊಳಗಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸೋಲುತ್ತಿದ್ದಾರೆ.

ಒಂದೆಡೆ ಮಾನಸಿಕ ಒತ್ತಡ, ಕೆಲಸದ ಕಡೆ ನಕಾರಾತ್ಮಕ ಭಾವನೆಯಿಂದಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ದಿನಗಳಿಂದ ವಿಜ್ಞಾನಿಗಳು ಹಾಗೂ ಆರೋಗ್ಯ ಕಾರ್ಯಕರ್ತರು, ಕೊರೊನಾದಿಂದ ಜನರ ಜೀವವನ್ನು ರಕ್ಷಿಸಲು ಹಗಲು ರಾತ್ರಿ ಶ್ರಮಪಡುತ್ತಿದ್ದಾರೆ.

ಬಿಡುವಿನ ವೇಳೆಯೇ ಮರೆಯಾಗಿದೆ, ದಿನದ 24 ಗಂಟೆಯೂ ಕೆಲಸ, ದಣಿದರೂ ಕೇಳುವವರಿಲ್ಲ, ಹಸಿದಿದ್ದರೂ ಆಹಾರ ತಂದುಕೊಡುವವರಿಲ್ಲ ಇವರ ಕಥೆಯ ಕೇಳುವವರ್ಯಾರು?.

ಹಿಂದೆಂದೂ ಇರದ ಮಾನಸಿಕ ಒತ್ತಡ

ಹಿಂದೆಂದೂ ಇರದ ಮಾನಸಿಕ ಒತ್ತಡ

ವಿಜ್ಞಾನಿಗಳು ಹಿಂದೆಂದೂ ಕಾಣದ ಮಾನಸಿಕ ಒತ್ತಡವನ್ನು ಈಗ ಅನುಭವಿಸುವಂತಾಗಿದೆ, ಅಮೆರಿಕದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 2020ರಲ್ಲಿ 1100 ವಿಶ್ವವಿದ್ಯಾಲಯದ ನೌಕರರು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರು. 2019ರಲ್ಲಿ ಶೇ.32ರಷ್ಟು ಮಂದಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು, 2020ರಲ್ಲಿ ಶೇ.69ರಷ್ಟು ವಿಜ್ಞಾನಿಗಳು ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ.

ಕೆಲಸ ಬದಲಾಯಿಸುವ ಯೋಚನೆ

ಕೆಲಸ ಬದಲಾಯಿಸುವ ಯೋಚನೆ

ಮಾನಸಿಕ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ವಿಜ್ಞಾನಿಗಳು ತಮ್ಮ ಕೆಸಲವನ್ನೇ ಬದಲಾಯಿಸುವ ಯೋಚನೆ ಮಾಡುತ್ತಿದ್ದಾರೆ. ಅಥವಾ ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ ಇನ್ನೂ ಕೆಲವರು ತಮ್ಮ ಅವಧಿ ಮುಗಿಯುವ ಮುನ್ನವೇ ನಿವೃತ್ತಿಪಡೆಯಲು ಮುಂದಾಗುತ್ತಿದ್ದಾರೆ.

ಆರಾಮವಾಗಿ ನಡೆಯುವ ಬಯಕೆ

ಆರಾಮವಾಗಿ ನಡೆಯುವ ಬಯಕೆ

ಮ್ಯಾರಥಾನ್ ರೀತಿಯಲ್ಲಿ ಓಡಿ ಓಡಿ ಸುಸ್ತಾಗಿದೆ, ಆರಾಮವಾಗಿ ನಡೆಯುವ ಮನಸ್ಸಾಗುತ್ತಿದೆ, ಈ ಸಂಶೋಧನೆಯಿಂದ ಹೊರಗೆ ಹೋಗಬೇಕು ಎನಿಸುತ್ತಿದೆ. ಪ್ರತಿಯೊಬ್ಬರು ಇದೇ ರೀತಿ ಯೋಚನೆ ಮಾಡುತ್ತಿದ್ದಾರೆ.

ಆನ್‌ಲೈನ್ ವರ್ಕ್

ಆನ್‌ಲೈನ್ ವರ್ಕ್

ಕೆನಡಾ ಗ್ಯೂಲ್ಫ್‌ ಯೂನಿವರ್ಸಿಟಿಯ ಪ್ರೊಫೆಸರ್ ಆಮಿ ಗ್ರೀರ್ ನೀಡುವ ಮಾಹಿತಿ ಪ್ರಕಾರ, ನಮ್ಮೆಲ್ಲಾ ಸಂಶೋಧನೆಗಳು ಇದೀಗ ಆನ್‌ಲೈನ್ ಮೂಲಕ ನಡೆಯುತ್ತಿದೆ. ಅದರಿಂದಾಗಿ ಕೆಲಸ ಹಾಗೂ ಮನೆಯನ್ನು ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಕೊರೊನಾದಿಂದ ಜನರನ್ನು ರಕ್ಷಣೆ ಮಾಡುತ್ತಾ ತಮ್ಮ ಹತ್ತಿರದವರನ್ನು ಕಳೆದುಕೊಳ್ಳುತ್ತಿದ್ದಾರೆ.

English summary
Healthcare workers and scientists are working overtime to curb the spread of COVID. But are their efforts coming at the cost of their own mental health?'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X