• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯಲ್ಲೇ ಕೊರೊನಾ ಚಿಕಿತ್ಸೆ; ಆಮ್ಲಜನಕ ಸಾಂದ್ರಕಗಳನ್ನು ಬಳಸುವುದು ಹೇಗೆ?

|

ನವದೆಹಲಿ, ಮೇ 13: ಭಾರತದಲ್ಲಿ ಬೀಸಿದ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಮೊದಲಿಗಿಂತ ಭೀಕರವಾಗಿದೆ. ನೆಗಡಿ, ಕೆಮ್ಮು, ಜ್ವರ ಹಾಗೂ ಹೊಟ್ಟೆನೋವಿನ ಹೊರತಾಗಿ ಶ್ವಾಸಕೋಶದ ಮೇಲೆ ರೋಗಾಣು ದಾಳಿ ಮಾಡುವುದರಿಂದ ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಎರಡನೇ ಅಲೆಯಲ್ಲಿ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆಮ್ಲಜನಕದ ಸಿಲಿಂಡರ್ ಹಾಗೂ ಆಮ್ಲಜನಕ ಸಾಂದ್ರಕಗಳನ್ನು ಕಡ್ಡಾಯವಾಗಿ ಬಳಸುವಂತಾ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಹಾಸಿಗೆ ವ್ಯವಸ್ಥೆ ಅಭಾವದ ಜೊತೆಗೆ ಆಮ್ಲಜನಕ ಕೊರತೆ ಸೃಷ್ಟಿಯಾಗಿದೆ.

ಆಮ್ಲಜನಕ ಸಿಲಿಂಡರ್ V/S ಸಾಂದ್ರಕ; ಕೊವಿಡ್ ರೋಗಿಗಳಿಗೆ ಯಾವುದು ಉತ್ತಮ?ಆಮ್ಲಜನಕ ಸಿಲಿಂಡರ್ V/S ಸಾಂದ್ರಕ; ಕೊವಿಡ್ ರೋಗಿಗಳಿಗೆ ಯಾವುದು ಉತ್ತಮ?

ಕಳೆದ ಮಾರ್ಚ್ ತಿಂಗಳಿನಿಂದ ಈಚೆಗೆ ಕೊರೊನಾವೈರಸ್ ಸೋಂಕು ತಗುಲಿದವರಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾವಿನ ಪ್ರಮಾಣವನ್ನು ತಗ್ಗಿಸಲು ಉಸಿರಾಟ ವ್ಯವಸ್ಥೆಯನ್ನು ಸ್ಥಿರವಾಗಿಟ್ಟುಕೊಳ್ಳಲು ಮನೆಗಳಲ್ಲೇ ಆಮ್ಲಜನಕ ಸಿಲಿಂಡರ್ ಬಳಸಲು ಸಲಹೆ ನೀಡಲಾಗುತ್ತಿದೆ. ಮನೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಸಿಲಿಂಡರ್ ಬಳಕೆ ಮಾಡುವುದು ಹೇಗೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಎಂಥ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಬಳಸಬೇಕು?

ಎಂಥ ಸಂದರ್ಭದಲ್ಲಿ ಆಕ್ಸಿಜನ್ ಸಿಲಿಂಡರ್ ಬಳಸಬೇಕು?

ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಇರುವ ರಕ್ತದಲ್ಲಿನ ನಾಡಿ ಮಿಡಿತ 95 ರಿಂದ 99ರ ಅಂತರದಲ್ಲಿರಬೇಕು. ಈ ನಾಡಿ ಮಿಡಿತವು 94ಕ್ಕಿಂತ ಕಡಿಮೆಯಾಗಿದ್ದ ಸಂದರ್ಭದಲ್ಲಿ ಕೃತಕ ಆಮ್ಲಜನಕ ವ್ಯವಸ್ಥೆ ಮೂಲಕ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಪೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ. ಸಂಜಯ್ ಶಾ ತಿಳಿಸಿದ್ದಾರೆ. ಅಲ್ಲದೇ ಯಾವುದೇ ಆಮ್ಲಜನಕ ಚಿಕಿತ್ಸೆಯಿಂದ ತಕ್ಷಣಕ್ಕೆ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಅಥವಾ ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಿಲ್ಲ. ಆದರೆ ಕೊರೊನಾವೈರಸ್ ರೋಗಿಗಳು 92 ರವರೆಗೆ ಶುದ್ಧತ್ವವನ್ನು ಸಾಧಿಸುವ ಗುರಿಯನ್ನು ಹೊಂದಿರಬೇಕು. ದೇಹವು ಅನಾರೋಗ್ಯಕ್ಕೆ ತುತ್ತಾದ ವೇಳೆ ರಕ್ತದಲ್ಲಿ ಶೇ.100ರಷ್ಟು ಶುದ್ಧತೆಯನ್ನು ಹೊಂದಲು ಆಗುವುದಿಲ್ಲ. ಈ ಹಂತದಲ್ಲಿ ನಾವುಅಗತ್ಯವಿರುವ ಆಮ್ಲಜನಕ ಸಿಲಿಂಡರ್ ಅಥವಾ ಸಾಂದ್ರಕವನ್ನು ಬಳಸಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಸಾಂದ್ರಕ ಹೇಗೆ ಸಹಕಾರಿ?

ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಮ್ಲಜನಕ ಸಾಂದ್ರಕ ಹೇಗೆ ಸಹಕಾರಿ?

ಆಮ್ಲಜನಕ ಸಾಂದ್ರಕವು ಒಂದು ವಿದ್ಯುತ್ ಚಾಲಿತ ಸಾಧನವಾಗಿದ್ದು ಒಂದು ಕೊಠಡಿಯಲ್ಲಿ ಬೀಸುವ ಗಾಳಿಯಿಂದ ಆಮ್ಲಜನಕವನ್ನು ಪ್ರತ್ಯೇಕಗೊಳಿಸುತ್ತದೆ. ನಿಮ್ಮ ಮೂಗಿನ ಮೂಲಕ ದೇಹಕ್ಕೆ ನೇರವಾಗಿ ಆಮ್ಲಜನಕ ನೀಡುತ್ತದೆ. ದೇಹಕ್ಕೆ ಅಗತ್ಯವಿದ್ದಲ್ಲಿ ಆಮ್ಲಜನಕ ಉತ್ಪಾದಿಸಲಾಗದ ಸ್ಥಿತಿಯಲ್ಲಿ ಇರುವ ಜನರಿಗೆ ಚಿಕಿತ್ಸೆ ನೀಡಲು ಈ ಆಮ್ಲಜನಕದ ಸಿಲಿಂಡರ್ ಮತ್ತು ಸಾಂದ್ರಕವನ್ನು ಬಳಸಲಾಗುತ್ತದೆ. ಪ್ರಯಾಣದ ಸಂದರ್ಭ, ಆಸ್ಪತ್ರೆ ಅಥವಾ ಮನೆಗಳಲ್ಲೇ ರೋಗಿಗಳಿಗೆ ಆಮ್ಲಜನಕ ಒದಗಿಸುವ ಉದ್ದೇಶದಿಂದ ಸಾಂದ್ರಕಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಆಮ್ಲಜನಕ ಸಾಂದ್ರಕವು ತನ್ನ ಸುತ್ತಲಿನ ಗಾಳಿಯಲ್ಲಿ ಇರುವ ಆಮ್ಲಜನಕವನ್ನು ಸಂಗ್ರಹಿಸಿ ಅದನ್ನು ಕೇಂದ್ರೀಕರಿಸಿ ನಂತರದಲ್ಲಿ ರೋಗಿಗಳಿಗೆ ಸರಬರಾಜು ಮಾಡುತ್ತದೆ. ಈ ಆಮ್ಲಜನಕ ಸಾಂದ್ರಕಗಳು ಒದಗಿಸುವ ಆಮ್ಲಜನಕ ಶೇ.92-95ರಷ್ಟು ಶುದ್ಧವಾಗಿರುತ್ತದೆ.

ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್!ಮಹಾನಗರಗಳಿಂದ ಹಳ್ಳಿಗಳಿಗೆ ಶಿಫ್ಟ್ ಆಗುತ್ತಿರುವ ಕೊರೊನಾವೈರಸ್!

ಆಮ್ಲಜನಕ ಸಾಂದ್ರಕ ಮತ್ತು ಸಿಲಿಂಡರ್ ನಡುವಿನ ವ್ಯತ್ಯಾಸ

ಆಮ್ಲಜನಕ ಸಾಂದ್ರಕ ಮತ್ತು ಸಿಲಿಂಡರ್ ನಡುವಿನ ವ್ಯತ್ಯಾಸ

ಒಂದು ಹಂತದಲ್ಲಿ ವೈದ್ಯಕೀಯ ಟ್ಯಾಂಕ್‌ಗಳಂತೆ ಆಮ್ಲಜನಕ ಸಾಂದ್ರಕಗಳನ್ನು ಕೂಡ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಆಕ್ಸಿಜನ್ ಸಿಲಿಂಡರ್ ರೀತಿಯಲ್ಲೇ ಸಾಂದ್ರಕದಿಂದ ರೋಗಿಗಳ ಮುಖಕ್ಕೆ ಹಾಕುವ ಮಾಸ್ಕ್ ಮೂಲಕ ಆಮ್ಲಜನಕವನ್ನು ನೀಡಲಾಗುತ್ತದೆ. ಆದರೆ ಆಕ್ಸಿಜನ್ ಸಿಲಿಂಡರ್ ಮತ್ತು ಆಮ್ಲಜನಕ ಸಾಂದ್ರಕಗಳು ಭಿನ್ನವಾಗಿ ಕಾರ್ಯ ನಿರ್ವಹಿಸುತ್ತವೆ. ಆಕ್ಸಿಜನ್ ಸಿಲಿಂಡರ್ ಈಗಾಗಲೇ ತನ್ನಲ್ಲಿ ತುಂಬಿಟ್ಟುಕೊಂಡ ಆಮ್ಲಜನಕವನ್ನು ರೋಗಿಗಳಿಗೆ ಪೂರೈಕೆ ಮಾಡಿದರೆ, ಆಮ್ಲಜನಕ ಸಾಂದ್ರಕವು ತನ್ನ ಸುತ್ತಲಿನ ಗಾಳಿಯಲ್ಲಿ ಇರುವ ಆಮ್ಲಜನಕವನ್ನು ಸಂಗ್ರಹಿಸಿ ಅದನ್ನು ಕೇಂದ್ರೀಕರಿಸಿ ನಂತರ ರೋಗಿಗಳಿಗೆ ಸರಬರಾಜು ಮಾಡುತ್ತದೆ. ಆಮ್ಲಜನಕ ಸಿಲಿಂಡರ್ ಖಾಲಿಯಾದ ಬಳಿಕ ಮತ್ತೊಮ್ಮೆ ತುಂಬಿಸಬೇಕಾಗುತ್ತದೆ ಆದರೆ ಆಮ್ಲಜನಕ ಸಾಂದ್ರಕವನ್ನು ಬದಲಾಯಿಸುವ ಅಥವಾ ಮತ್ತೊಮ್ಮೆ ತುಂಬಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಆಮ್ಲಜನಕ ಸಾಂದ್ರಕ ಖರೀದಿಸುವ ಮೊದಲು ಎಚ್ಚರಿಕೆ ಇರಲಿ

ಆಮ್ಲಜನಕ ಸಾಂದ್ರಕ ಖರೀದಿಸುವ ಮೊದಲು ಎಚ್ಚರಿಕೆ ಇರಲಿ

ಸಾಮಾನ್ಯವಾಗಿ ಗಾಳಿಯಲ್ಲಿ ಶೇ.21ರಷ್ಟು ಆಮ್ಲಜನಕವಿರುತ್ತದೆ ಎಂದು ವೈದ್ಯಕೀಯ ಸಲಹೆಗಾರ ಡಾ. ಸಂಡಯ್ ಶಾ ತಿಳಿಸಿದ್ದಾರೆ. ಈ ರೀತಿಯ ಸಾಮಾನ್ಯ ಗಾಳಿಯಿಂದ ಸಂಗ್ರಹಿಸಿ ಕೇಂದ್ರೀಕರಿಸಿ ಆಮ್ಲಜನಕ ಸಾಂದ್ರಕ ಒದಗಿಸುವ ಒಂದು ಲೀಟರ್ ವೈದ್ಯಕೀಯ ಆಮ್ಲಜನಕದಿಂದ ಶೇ.24ರಷ್ಟು ನಾಡಿ ಮಿಡಿತ ಹೆಚ್ಚಾಗುತ್ತದೆ. ಎರಡು ಲೀಟರ್ ಆಮ್ಲಜನಕದಿಂದ ಶೇ.28 ಹಾಗೂ 10 ಲೀಟರ್ ಆಮ್ಲಜನಕದಿಂದ ಶೇ.60ರಷ್ಟು ನಾಡಿ ಮಿಡಿತಯ ಪ್ರಮಾಣ ಹೆಚ್ಚಳವಾಗಲಿದೆ. ಒಂದು ನಿಮಿಷಕ್ಕೆ ಎಷ್ಟು ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗುತ್ತದೆ ಎನ್ನುವುದರ ಮೇಲೆ ನಾಡಿಮಿಡಿತದ ಪ್ರಮಾಣ ಏರಿಕೆಯಾಗುತ್ತದೆ. ಈ ಹಿನ್ನೆಲೆ ಕೊರೊನಾವೈರಸ್ ಸೋಂಕು ತಗುಲಿರುವ ನಿಮ್ಮವರಿಗೆ ಒಂದು ನಿಮಿಷದಲ್ಲಿ ಎಷ್ಟು ಲೀಟರ್ ಆಮ್ಲಜನಕವನ್ನು ನೀಡಬೇಕು ಎನ್ನುವುದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ ಎಂದು ಡಾ.ಸಂಜಯ್ ಶಾ ಹೇಳುತ್ತಾರೆ.

ಯಾರು ಆಮ್ಲಜನಕದ ಸಿಲಿಂಡರ್ ಅಥವಾ ಸಾಂದ್ರಕ ಬಳಸಬೇಕು?

ಯಾರು ಆಮ್ಲಜನಕದ ಸಿಲಿಂಡರ್ ಅಥವಾ ಸಾಂದ್ರಕ ಬಳಸಬೇಕು?

ದೇಹದಲ್ಲಿನ ಆಮ್ಲಜನಕದ ಶುದ್ಧತೆಯು 90-94ರಷ್ಟಿರುವ ಸೌಮ್ಯ ಹಾಗೂ ಮಧ್ಯಮ ಪ್ರಮಾಣದ ಕೊರೊನಾವೈರಸ್ ಸೋಂಕಿತರು ಮಾತ್ರ ಮನೆಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಬಳಸುವುದು ಸೂಕ್ತ ಎಂದು ಡಾ.ಸಂಜಯ್ ಶಾ ಸಲಹೆ ನೀಡುತ್ತಾರೆ. ಜೀವರಕ್ಷಕ ಆಕ್ಸಿಜನ್ ಕೊರತೆಯಿಂದ ದೇಶ ಎದುರಿಸುತ್ತಿರುವ ಸಮಸ್ಯೆಯನ್ನು ನಾವು ಅರಿತುಕೊಳ್ಳಬೇಕಿದೆ. ಆಮ್ಲಜನಕ ಶುದ್ಧತೆ ಪ್ರಮಾಣ 80-85ರಷ್ಟಿದ್ದರೆ ಅಂಥವರಿಗೆ ಹೆಚ್ಚು ಒತ್ತಡದ ಆಮ್ಲಜನಕದ ಅಗತ್ಯವಿರುತ್ತದೆ. ಈ ಹಂತದಲ್ಲಿ ರೋಗಿಗಳು ಕಡ್ಡಾಯವಾಗಿ ಆಸ್ಪತ್ರೆಗಳಿಗೆ ದಾಖಲಾಗಬೇಕು ಹಾಗೂ ವೈದ್ಯಕೀಯ ಸಿಲಿಂಡರ್ ಅಥವಾ ದ್ರವರೂಪದ ಸಿಲಿಂಡರ್ ಬಳಸುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡುತ್ತಾರೆ.

2 ವಿಧದ ಆಮ್ಲಜನಕ ಸಾಂದ್ರಕಗಳು ಮತ್ತು ಕಾರ್ಯ

2 ವಿಧದ ಆಮ್ಲಜನಕ ಸಾಂದ್ರಕಗಳು ಮತ್ತು ಕಾರ್ಯ

ಆಮ್ಲಜನಕ ಸಾಂದ್ರಕಗಳಲ್ಲಿ ಎರಡು ವಿಧಗಳಿವೆ. ನಿರಂತರ ಹರಿವ ಸಾಂದ್ರಕ ಹಾಗೂ ನಾಡಿ ಮಿಡಿತ ಆಧಾರಿತ ಸಾಂದ್ರಕ. ಮೊದಲನೆದಾಗಿ ನಿರಂತರ ಹರಿವ ಆಮ್ಲಜನಕ ಸಾಂದ್ರಕಗಳು ರೋಗಿಯ ಉಸಿರಾಟ ಮಾದರಿಯನ್ನು ಲೆಕ್ಕಿಸದೇ ಆರಂಭವಾಗುತ್ತಿದ್ದಂತೆ ನಿರಂತರವಾಗಿ ನಿಮಿಷಕ್ಕೆ ಇಂತಿಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಒದಗಿಸುತ್ತವೆ. ನಾಡಿ ಮಿಡಿತ ಆಧಾರಿತ ಸಾಂದ್ರಕಗಳು ರೋಗಿಯ ಉಸಿರಿನ ಏರಿಳಿತ ಅರಿತುಕೊಂಡು ಅದೇ ಮಾದರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.

ಆಮ್ಲಜನಕ ಸಾಂದ್ರಕದ ಸಾಧಕಗಳೇನು?

ಆಮ್ಲಜನಕ ಸಾಂದ್ರಕದ ಸಾಧಕಗಳೇನು?

* ಅನಿಯಮಿತ ಆಮ್ಲಜನಕ ಪೂರೈಕೆ: ವೈದ್ಯಕೀಯ ಆಮ್ಲಜನಕ ಸಾಂದ್ರಕಗಳು ಅನಿಯಮಿತವಾಗಿ ನಿರಂತರವಾಗಿ ಆಮ್ಲಜನಕವನ್ನು ಪೂರೈಕೆ ಮಾಡುತ್ತಿರುತ್ತವೆ. ಆಕ್ಸಿಜನ್ ಟ್ಯಾಂಕ್‌ಗಳ ರೀತಿ ಖಾಲಿಯಾಗುವ ಆತಂಕ ಅಥವಾ ಮತ್ತೊಮ್ಮೆ ತುಂಬಿಸುವ ಅಗತ್ಯ ಇರುವುದಿಲ್ಲ

* ಅತಿಹೆಚ್ಚು ತೂಕ ಇರುವುದಿಲ್ಲ: ಆಕ್ಸಿಜನ್ ಟ್ಯಾಂಕ್‌ಗಳಿಗೆ ಹೋಲಿಸಿದರೆ ಈ ಆಮ್ಲಜನಕ ಸಾಂದ್ರಕಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸಹಾಯಕವಾಗಿದೆ. ಈ ಸಾಂದ್ರಕಗಳಿಗೆ ಯಾವುದೇ ಲೋಹದ ಟ್ಯಾಂಕ್ ಅಗತ್ಯವಿರುವುದಿಲ್ಲ

ಆಮ್ಲಜನಕ ಸಾಂದ್ರಕದ ಬಾಧಕಗಳೇನು?

ಆಮ್ಲಜನಕ ಸಾಂದ್ರಕದ ಬಾಧಕಗಳೇನು?

* ಬ್ಯಾಟರಿಗಳ ಅಗತ್ಯ: ಆಮ್ಲಜನಕ ಸಾಂದ್ರಕಗಳು ತನ್ನಲ್ಲಿರುವ ಆಮ್ಲಜನಕದ ಒತ್ತಡದ ಮೇಲೆ ಕೆಲಸ ಮಾಡುವುದಿಲ್ಲ. ಗಾಳಿಯನ್ನು ಕೇಂದ್ರೀಕರಿಸುವುದು ಮತ್ತು ಅದನ್ನು ಚಿಕಿತ್ಸೆಗೆ ಪೂರೈಸುವುದರಿಂದ ಈ ಸಾಂದ್ರಕಗಳಿಗೆ ವಿದ್ಯುತ್ ಅಥವಾ ಬ್ಯಾಟರಿಗಳು ಬೇಕಾಗುತ್ತವೆ.

* ಹೆಚ್ಚಿನ ಸದ್ದು: ಆಮ್ಲಜನಕ ಸಾಂದ್ರಕವು ಗಾಳಿಯಲ್ಲಿನ ಆಮ್ಲಜನಕನ್ನು ಸಂಗ್ರಹಿಸಿ ಅದನ್ನು ಕೇಂದ್ರೀಕರಿಸಿ ಶುದ್ಧಗೊಳಿಸಿ ನಂತರದಲ್ಲಿ ಪೂರೈಕೆ ಮಾಡುವುದರಿಂದ ಈ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಸದ್ದು ಕೇಳಿ ಬರುತ್ತದೆ

* ದುಬಾರಿ: ಆಮ್ಲಜನಕ ಸಾಂದ್ರಕಗಳು ಹೆಚ್ಚು ವಿದ್ಯುತೀಕರಣದಿಂದ ಕೂಡಿರುವ ಹಿನ್ನೆಲೆ ಆರಂಭಿಕ ಹಂತದಲ್ಲಿ ಹೆಚ್ಚು ದುಬಾರಿ ಎಂದು ಅನಿಸುತ್ತವೆ

English summary
Covid Patients How Should Opt Oxygen Cylinder And Concentrator For Treatment At Home; Here Read Guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X