ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಲಸಿಕೆ ಹಾಕಿದವರಲ್ಲಿ ಡೆಲ್ಟಾ ರೂಪಾಂತರ: ಇದೆ ಪುರಾವೆಗಳು!

|
Google Oneindia Kannada News

ನವದೆಹಲಿ, ಜು.26: "ಡೆಲ್ಟಾ ರೂಪಾಂತರವು ಪ್ರಪಂಚವು ಎದುರಿಸಿದ ಕೋವಿಡ್‌ನ ಅತೀ ವೇಗವಾಗಿ ಹರಡಬಲ್ಲ, ಅತ್ಯಂತ ಭೀಕರವಾದ ರೂಪಾಂತರವಾಗಿದೆ. ರಾಷ್ಟ್ರಗಳು ನಿರ್ಬಂಧಗಳನ್ನು ಸಡಿಲಗೊಳಿಸಿ ತಮ್ಮ ಆರ್ಥಿಕತೆಯನ್ನು ಮತ್ತೆ ಆರಂಭ ಮಾಡಿದಾಗಲೂ ಈ ರೋಗದ ಬಗ್ಗೆ ಊಹೆಗಳನ್ನು ಹೆಚ್ಚಿಸುತ್ತಿದೆ," ಎಂದು ವೈರಾಲಜಿಸ್ಟ್‌ಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಹೇಳಿದ್ದಾರೆ.

"ಕೊರೊನಾವೈರಸ್‌ನ ಯಾವುದೇ ರೂಪಾಂತರದಿಂದ ಉಂಟಾಗುವ ತೀವ್ರವಾದ ಸೋಂಕುಗಳು ಮತ್ತು ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣಕ್ಕೆ ಲಸಿಕೆಯು ರಕ್ಷಣೆಯಾಗಿದೆ. ಹಾಗೆಯೇ ಇನ್ನೂ ಲಸಿಕೆ ಹಾಕದವರು ಹೆಚ್ಚು ಅಪಾಯದಲ್ಲಿದ್ದಾರೆ," ಎಂದು 10 ಪ್ರಮುಖ ಕೋವಿಡ್‌ ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಡೆಲ್ಟಾ ರೂಪಾಂತರದ ಬಗ್ಗೆ ಇರುವ ಪ್ರಮುಖ ಆತಂಕವೆಂದರೆ ಅದು ಜನರಿಗೆ ಬೇಗನೇ ತಗುಲುತ್ತದೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ಸುಲಭವಾಗಿ ಹರಡುತ್ತದೆ. ಹಾಗೆಯೇ ಲಸಿಕೆ ಪಡೆಯದವರಲ್ಲಿ ಸೋಂಕು ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಹೆಚ್ಚಿಸುತ್ತದೆ.

ಡೆಲ್ಟಾ ಆತಂಕ; ಮತ್ತೆ ಭಾರತದ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಿದ ಯುಎಇಡೆಲ್ಟಾ ಆತಂಕ; ಮತ್ತೆ ಭಾರತದ ವಿಮಾನಗಳ ಮೇಲೆ ನಿರ್ಬಂಧ ವಿಸ್ತರಿಸಿದ ಯುಎಇ

"ಹಿಂದಿನ ರೂಪಾಂತರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರಿಗೆ ಸೋಂಕು ತಗಲುವ ಸಾಮರ್ಥ್ಯವಿದೆ ಎಂಬುದಕ್ಕೆ ಪುರಾವೆಗಳು ಹೆಚ್ಚುತ್ತಿವೆ. ಹಾಗೆಯೇ ಈ ಜನರಿಂದ ವೈರಸ್‌ ಹರಡಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಲಾಗಿದೆ," ಎಂದು ಈ ತಜ್ಞರು ಹೇಳಿದ್ದಾರೆ.

Covid Delta Variant Infecting Fully-Vaccinated People: Shows Growing Evidence

"ಈ ಸಮಯದಲ್ಲಿ ಜಗತ್ತಿಗೆ ದೊಡ್ಡ ಅಪಾಯವೆಂದರೆ ಡೆಲ್ಟಾ" ಕೊರೊನಾವೈರಸ್ ರೂಪಾಂತರಗಳ ಜೀನೋಮ್‌ಗಳನ್ನು ಅನುಕ್ರಮಗೊಳಿಸಲು ಬ್ರಿಟನ್‌ನ ಪ್ರಯತ್ನಗಳನ್ನು ನಡೆಸುತ್ತಿರುವ ಮೈಕ್ರೋಬಯಾಲಜಿಸ್ಟ್ ಶರೋನ್ ಪೀಕಾಕ್ ಹೇಳಿದ್ದಾರೆ. ಹಾಗೆಯೇ "ಇದು ವೇಗದ ರೂಪಾಂತರ" ಎಂದು ಕರೆದಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ತೀವ್ರ ಏರಿಕೆ: ಸಿಎಮ್‌ಐಇ ವರದಿಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರ ತೀವ್ರ ಏರಿಕೆ: ಸಿಎಮ್‌ಐಇ ವರದಿ

"ಕೋವಿಡ್‌ ವೈರಸ್‌ಗಳು ರೂಪಾಂತರದ ಮೂಲಕ ನಿರಂತರವಾಗಿ ವಿಕಸನಗೊಳ್ಳುತ್ತವೆ. ಹೊಸ ರೂಪಾಂತರಗಳು ಉದ್ಭವಿಸುತ್ತವೆ. ಕೆಲವೊಮ್ಮೆ ಇವು ಮೂಲಕ್ಕಿಂತ ಹೆಚ್ಚು ಅಪಾಯಕಾರಿ. ಡೆಲ್ಟಾ ರೂಪಾಂತರದ ಪ್ರಸರಣದ ಕುರಿತು ಹೆಚ್ಚಿನ ಮಾಹಿತಿ ಬರುವವರೆಗೆ, ಬೃಹತ್‌ ಲಸಿಕೆ ಅಭಿಯಾನವನ್ನು ಹೊಂದಿರುವ ದೇಶಗಳಲ್ಲಿ ಮಾಸ್ಕ್‌, ಸಾಮಾಜಿಕ ದೂರ ಮತ್ತು ಇತರ ಕ್ರಮಗಳನ್ನು ನಿಗದಿಪಡಿಸುವ ಅಗತ್ಯವಿರುತ್ತದೆ," ಎಂದು ರೋಗ ತಜ್ಞರು ಹೇಳುತ್ತಾರೆ.

Covid Delta Variant Infecting Fully-Vaccinated People: Shows Growing Evidence

"ಡೆಲ್ಟಾ ರೂಪಾಂತರದೊಂದಿಗೆ ಬ್ರಿಟನ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಒಟ್ಟು 3,692 ಜನರಲ್ಲಿ 58.3% ಜನರು ಲಸಿಕೆ ಪಡೆದಿಲ್ಲ. 22.8% ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ," ಎಂದು ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ ಶುಕ್ರವಾರ ತಿಳಿಸಿದೆ. "ಡೆಲ್ಟಾ ಅತ್ಯಂತ ಸಾಮಾನ್ಯ ರೂಪಾಂತರವಾಗಿರುವ ಸಿಂಗಾಪುರದಲ್ಲಿ, ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಕೊರೊನಾ ವೈರಸ್‌ ಪ್ರಕರಗಳು ಮುಕ್ಕಾಲು ಭಾಗದಷ್ಟು ಜನರಿಗೆ ಕಾಣಿಸಿಕೊಂಡಿದೆ," ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ವರದಿ ಮಾಡಿದ್ದಾರೆ. ಹಾಗೆಯೇ "ಆದರೆ ಯಾರೂ ಕೂಡಾ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಲಿಲ್ಲ," ಎಂದು ಹೇಳಲಾಗಿದೆ.

 ಕೃಷಿ ಕಾನೂನಿಗೆ ವಿರೋಧ: ಸಂಸತ್ತಿಗೆ ಟ್ರ್ಯಾಕ್ಟರ್‌ ಚಲಾಯಿಸಿ ಬಂದ ರಾಹುಲ್ ಗಾಂಧಿ ಕೃಷಿ ಕಾನೂನಿಗೆ ವಿರೋಧ: ಸಂಸತ್ತಿಗೆ ಟ್ರ್ಯಾಕ್ಟರ್‌ ಚಲಾಯಿಸಿ ಬಂದ ರಾಹುಲ್ ಗಾಂಧಿ

ಪ್ರಸ್ತುತ ಆಸ್ಪತ್ರೆಗೆ ದಾಖಲಾದ ಕೋವಿಡ್‌ ಪ್ರಕರಣಗಳಲ್ಲಿ 60% ಲಸಿಕೆ ಹಾಕಿದ ಜನರಲ್ಲಿದೆ ಎಂದು ಇಸ್ರೇಲಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆ ಪೈಕಿ ಹೆಚ್ಚಿನವರು 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಆಗಾಗ್ಗೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದು ವರದಿಯಾಗಿದೆ. ಇನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇತರ ದೇಶಗಳಿಗಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಮತ್ತು ಸಾವುಗಳು ಕಾಣಿಸಿಕೊಂಡಿದೆ. ಡೆಲ್ಟಾ ರೂಪಾಂತರವು ಸುಮಾರು 83% ಹೊಸ ಸೋಂಕಿತರಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ, ಕೋವಿಡ್‌ ಲಸಿಕೆ ಹಾಕದ ಸುಮಾರು 97% ಜನರಲ್ಲಿ ತೀವ್ರತರವಾದ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದೆ.

Covid Delta Variant Infecting Fully-Vaccinated People: Shows Growing Evidence

ಕೊರೊನಾವೈರಸ್‌ ನಮಗೆ ಪಾಠಗಳಿಸುತ್ತಿದೆ

"ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮ್ಯಾಜಿಕ್ ಬುಲೆಟ್ ಇದೆ ಎಂಬ ಭ್ರಮೆ ಯಾವಾಗಲೂ ಇರುತ್ತದೆ. ಕೊರೊನಾವೈರಸ್ ನಮಗೆ ಪಾಠ ಕಲಿಸುತ್ತಿದೆ," ಎಂದು ಇಸ್ರೇಲ್‌ನ ಬೆನ್ ಗುರಿಯನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆಯ ನಿರ್ದೇಶಕ ನಾಡವ್ ಡೇವಿಡೋವಿಚ್ ಹೇಳಿದರು

ಇಸ್ರೇಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, "ಡೆಲ್ಟಾ ರೂಪಾಂತರವು ಹರಡುತ್ತಿದ್ದಂತೆ ಕಳೆದ ಒಂದು ತಿಂಗಳಿನಿಂದ ಇಸ್ರೇಲ್‌ನಲ್ಲಿ ರೋಗಲಕ್ಷಣದ ಸೋಂಕುಗಳನ್ನು ತಡೆಯುವಲ್ಲಿ ಫೈಜರ್‌ ಇಂಕ್ / ಬಯೋಟೆಕ್ ಲಸಿಕೆ ಇದುವರೆಗೆ ಕೇವಲ 41% ಪರಿಣಾಮಕಾರಿಯಾಗಿದೆ". "ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಹೆಚ್ಚಿನ ವಿಶ್ಲೇಷಣೆ ಅಗತ್ಯ," ಎಂದು ಇಸ್ರೇಲಿ ತಜ್ಞರು ಎಂದಿದ್ದಾರೆ. "ಈ ಲಸಿಕೆಗಳು ವ್ಯಕ್ತಿಗೆ ರಕ್ಷಣೆ ತುಂಬಾ ಪ್ರಬಲವಾಗಿ ನೀಡುತ್ತದೆ. ಇತರರಿಗೆ ಸೋಂಕು ತಗುಲಿಸುವ ರಕ್ಷಣೆ ಗಮನಾರ್ಹವಾಗಿ ಕಡಿಮೆಯಾಗಿದೆ," ಡೇವಿಡೋವಿಚ್ ತಿಳಿಸಿದ್ದಾರೆ.

ಇನ್ನು ಚೀನಾದಲ್ಲಿ ನಡೆದ ಅಧ್ಯಯನವೊಂದರಲ್ಲಿ ಡೆಲ್ಟಾ ರೂಪಾಂತರದಿಂದ ಸೋಂಕಿತ ಜನರು ತಮ್ಮ ಉಸಿರಾಟದ ಮೂಲಕವೇ 1,000 ಪಟ್ಟು ಹೆಚ್ಚು ವೈರಸ್ ಅನ್ನು ಹರಡುತ್ತಾರೆ ಎಂಬುವುದು ಪತ್ತೆಯಾಗಿದೆ. "ನೀವು ನಿಜವಾಗಿಯೂ ಹೆಚ್ಚು ವೈರಸ್ ಅನ್ನು ಹೊರಹಾಕಬಹುದು. ಆದ್ದರಿಂದಲ್ಲೇ ಇದು ಹೆಚ್ಚು ಹರಡಬಹುದು. ಅದನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ," ಎಂದಿದ್ದಾರೆ.

Covid Delta Variant Infecting Fully-Vaccinated People: Shows Growing Evidence

ಸ್ಯಾನ್ ಡಿಯಾಗೋದಲ್ಲಿನ ಲಾ ಜೊಲ್ಲಾ ಇನ್ಸ್ಟಿಟ್ಯೂಟ್ ಫಾರ್ ಇಮ್ಯುನೊಲಾಜಿಯ ವೈರಾಲಜಿಸ್ಟ್ ಶೇನ್ ಕ್ರೊಟ್ಟಿ, ಯುಕೆಯಲ್ಲಿ ಮೊದಲು ಪತ್ತೆಯಾದ ಆಲ್ಫಾ ರೂಪಾಂತರಕ್ಕಿಂತ ಡೆಲ್ಟಾ 50% ಹೆಚ್ಚು ಸಾಂಕ್ರಾಮಿಕವಾಗಿದೆ. ಇದು ಇತರ ಎಲ್ಲ ಕೋವಿಡ್‌ನ ವೈರಸ್‌ಗಳನ್ನು ಮೀರಿಸುತ್ತದೆ. ಏಕೆಂದರೆ ಅದು ಹೆಚ್ಚು ಪರಿಣಾಮಕಾರಿಯಾಗಿ ಹರಡುತ್ತದೆ," ಎಂದು ವಿವರಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕ್ರಿಪ್ಪ್ಸ್ ಸಂಶೋಧನಾ ಅನುವಾದ ಸಂಸ್ಥೆಯ ನಿರ್ದೇಶಕ ಜೀನೋಮಿಕ್ಸ್ ತಜ್ಞ ಎರಿಕ್ ಟೋಪೋಲ್, ಡೆಲ್ಟಾ ಸೋಂಕುಗಳು ಕಡಿಮೆ ಜನನ ಪ್ರಕ್ರಿಯೆ ಅವಧಿಯನ್ನು ಹೊಂದಿರುತ್ತವೆ. ಮತ್ತು ಹೆಚ್ಚಿನ ಪ್ರಮಾಣದ ವೈರಲ್ ಕಣಗಳನ್ನು ಹೊಂದಿವೆ. ಅದಕ್ಕಾಗಿಯೇ ಲಸಿಕೆಗಳನ್ನು ಪ್ರಶ್ನಿಸಲಾಗುವುದು. ಲಸಿಕೆ ಹಾಕಿದ ಜನರು ವಿಶೇಷವಾಗಿ ಜಾಗರೂಕರಾಗಿರಬೇಕು. ಇದು ಕಠಿಣವಾದದ್ದು," ಎಂದು ಎಚ್ಚರಿಕೆ ನೀಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಡೆಲ್ಟಾ ರೂಪಾಂತರವು ಅನೇಕ ಅಮೆರಿಕನ್ನರಲ್ಲಿ ಕಾಣಿಸಿಕೊಂಡಿದೆ. ಲಸಿಕೆ ಹಾಕಿಸಿಕೊಂಡಿದ್ದರೂ, ಇಲ್ಲದಿದ್ದರೂ ಈ ಸೋಂಕು ಕಾಣಿಸಿಕೊಂಡಿದೆ. ಆದರೆ ಇಲ್ಲಿ ಒಳಾಂಗಣದಲ್ಲಿ ಮಾಸ್ಕ್‌ ಧರಿಸುವುದು ನಿಲ್ಲಿಸಲಾಗಿದೆ. "ಇದು ಡಬಲ್‌ ರೂಪಾಂತರ" ಎಂದು ಹೇಳಿರುವ ಟೋಪೋಲ್, "ಇನ್ನೂ ವೈರಸ್‌ನ ಅತ್ಯಂತ ಭೀಕರವಾದ ರೂಪಾಂತರಗಳನ್ನು ಎದುರಿಸುತ್ತಿರುವಾಗ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಪರಿಣಾಮಕಾರಿಯಾದ ಲಸಿಕೆಗಳ ಅಭಿವೃದ್ಧಿಯು ಒಮ್ಮೆ ಲಸಿಕೆ ಹಾಕಿದ ನಂತರ, ಕೋವಿಡ್‌ ಸ್ವಲ್ಪ ಅಪಾಯವನ್ನುಂಟುಮಾಡುತ್ತದೆ ಎಂದು ಅನೇಕ ಜನರು ನಂಬಲು ಕಾರಣವಾಗಬಹುದು. "ಲಸಿಕೆಗಳನ್ನು ಮೊದಲು ಅಭಿವೃದ್ಧಿಪಡಿಸಿದಾಗ, ಸೋಂಕನ್ನು ತಡೆಗಟ್ಟುವ ಬಗ್ಗೆ ಯಾರೂ ಯೋಚಿಸುತ್ತಿರಲಿಲ್ಲ," ಎಂದು ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದ ಔಷಧ ಮತ್ತು ಸಾಂಕ್ರಾಮಿಕ ರೋಗ ಶಾಸ್ತ್ರದ ಪ್ರಾಧ್ಯಾಪಕ ಕಾರ್ಲೋಸ್ ಡೆಲ್ ರಿಯೊ ಹೇಳಿದರು. "ತೀವ್ರ ರೋಗ ಮತ್ತು ಸಾವನ್ನು ತಡೆಗಟ್ಟುವುದು ಯಾವಾಗಲೂ ಗುರಿಯಾಗಿದೆ," ಎಂದು ಡೆಲ್‌ ರಿಯೊ ಹೇಳಿದ್ದಾರೆ.

ಲಸಿಕೆಗಳು ಅಧಿಕ ಪರಿಣಾಮಕಾರಿಯಾಗಿದ್ದವು. ಆದರೂ ಲಸಿಕೆಗಳು ಮೊದಲಿನ ಕೊರೊನಾವೈರಸ್ ರೂಪಾಂತರಗಳ ಹರಡುವಿಕೆ ತಡೆಯುವ ಲಕ್ಷಣಗಳು ಮಾತ್ರ ಹೊಂದಿದ್ದವು. ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ವೈದ್ಯರಾದ ಡಾ. ಮೋನಿಕಾ ಗಾಂಧಿ, "ಜನರು 100% ಸೌಮ್ಯ ಪ್ರಗತಿಯಿಂದ ರಕ್ಷಿಸಲ್ಪಟ್ಟಿಲ್ಲ ಎಂಬ ಕಾರಣದಿಂದಾಗಿ ಜನರು ಇದೀಗ ನಿರಾಶೆಗೊಂಡಿದ್ದಾರೆ," ಎಂದರು. ಆದರೆ, ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಎಲ್ಲ ಅಮೆರಿಕನ್ನರು ಲಸಿಕೆ ಹಾಕದವರು ಆಗಿದ್ದಾರೆ, ಎಂಬ ಅಂಶವು ತಿಳಿದು ಬಂದಿದೆ ಎಂದು ವರದಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Covid Delta Variant Infecting Fully-Vaccinated People: Shows Growing Evidence. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X