ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿ ಸುದ್ದಿ: ಈಗ ಈ ದೇಶಗಳಿಗೆ ಭಾರತೀಯರ ಪ್ರವಾಸಕ್ಕೆ ಅವಕಾಶ

|
Google Oneindia Kannada News

ನವದೆಹಲಿ, ಜೂ.22: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ ಬೆನ್ನಲ್ಲೇ ಹಲವಾರು ದೇಶಗಳು ಭಾರತೀಯರ ಆಗಮನಕ್ಕೆ ನಿಷೇಧ ಹೇರಿತ್ತು. ಬಳಿಕ ಕೆಲವೊಂದು ದೇಶಗಳು ಭಾರತ ಮತ್ತು ಇತರೆ ದೇಶಗಳನ್ನು ಹೊರತುಪಡಿಸಿ ಕೆಲವು ದೇಶಗಳಿಗೆ ತನ್ನ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡಿತ್ತು.

ಪ್ರಸ್ತುತ ಭಾರತದಲ್ಲಿ ಎರಡನೇ ಕೊರೊನಾ ಅಲೆಯ ತೀವ್ರತೆಯು ಕಡಿಮೆಯಾಗಿದೆ. ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಇಳಿಮುಖವಾಗಿದೆ. ಈ ಹಿನ್ನೆಲೆ ಹಲವಾರು ದೇಶಗಳು ಭಾರತದಿಂದ ಬರುವ ಪ್ರಯಾಣಿಕರಿಗೆ ಬಾಗಿಲು ತೆರೆದಿವೆ.

ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಮುಂಬೈನಿಂದ ದುಬೈಗೆ ಹಾರಿದ 360 ಸೀಟ್‌ ಸಾಮರ್ಥ್ಯದ ವಿಮಾನ!ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಮುಂಬೈನಿಂದ ದುಬೈಗೆ ಹಾರಿದ 360 ಸೀಟ್‌ ಸಾಮರ್ಥ್ಯದ ವಿಮಾನ!

ಹಾಗಾದರೆ ಈ ಕೊರೊನಾ ಸಂದರ್ಭದಲ್ಲಿ ಯಾವೆಲ್ಲಾ ದೇಶಗಳಿಗೆ ಭಾರತೀಯರ ಆಗಮನಕ್ಕೆ ಅನುಮತಿ ಇದೆ ಹಾಗೂ ಯಾವೆಲ್ಲಾ ನಿಯಮಗಳನ್ನು ಭಾರತೀಯರು ಪಾಲಿಸಬೇಕು? ಎಂಬ ಮಾಹಿತಿ ಇಲ್ಲಿದೆ. ಮುಂದೆ ಓದಿ.

 ಟರ್ಕಿ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಟರ್ಕಿ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಈಗ, ಭಾರತದಿಂದ ಪ್ರಯಾಣಿಕರು ಪ್ರವಾಸಿ ತಾಣಗಳಲ್ಲಿ ಒಂದಾದ ಟರ್ಕಿಗೆ ಹೋಗಬಹುದಾಗಿದೆ. ಆದಾಗ್ಯೂ, ಪ್ರವಾಸಿಗರು ಟರ್ಕಿಗೆ ಆಗಮಿಸಿದ ನಂತರ 14 ದಿನಗಳ ಕೋವಿಡ್‌ ಕ್ವಾರಂಟೈನ್‌ ನಿಮಯ ಪಾಲಿಸಬೇಕು. ಇದಲ್ಲದೆ, ಪ್ರಯಾಣಿಕರು ಹದಿನಾಲ್ಕನೆಯ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆ ಸಂದರ್ಭ ಕೋವಿಡ್‌ ವರದಿ ನೆಗೆಟಿವ್‌ ಆದರೆ ನಂತರ ತಮ್ಮ ಪ್ರವಾಸ ಆರಂಭಿಸಬಹುದಾಗಿದೆ.

 ರಷ್ಯಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ರಷ್ಯಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ನೀವು ರಷ್ಯಾವೂ ಕೂಡಾ ಈಗ ಭಾರತೀಯರ ಆಗಮನಕ್ಕೆ ಅವಕಾಶ ನೀಡಿದೆ. ಸಿಂಗಲ್‌ ಎಂಟ್ರಿ ಅಥವಾ ಡಬಲ್ ಎಂಟ್ರಿಗಾಗಿ 30 ದಿನಗಳವರೆಗೆ ಮಾನ್ಯವಾಗಿರುವ ಪ್ರವಾಸಿ ವೀಸಾಕ್ಕೆ ನೀವೀಗ ಅರ್ಜಿ ಸಲ್ಲಿಸಬಹುದು. ರಷ್ಯಾಕ್ಕೆ ತೆರಳುವ ಪ್ರವಾಸಿಗರು ಆಗಮನಕ್ಕೆ 72 ಗಂಟೆಗಳ ಮೊದಲು ಮಾಡಿದ ಕೋವಿಡ್‌-19 ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ರಷ್ಯಾಕ್ಕೆ ತೆರಳುವ ಅವಕಾಶ ದೊರೆತರೆ ಮಾಸ್ಕೋ ಮತ್ತು ಸೇಂಟ್ ಪೀಟರ್‍ಸ್‌ಬರ್ಗ್‌ ನೀವು ಹೋಗಲೇ ಬೇಕಾದ ಸ್ಥಳ. ಇನ್ನು ರಷ್ಯಾದಲ್ಲಿ ಕೋವಿಡ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ ಮಾತ್ರ ನೀವು ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸೂಕ್ತ ಎಂಬುವುದು ನಮ್ಮ ಸಲಹೆ.

 ಈಜಿಪ್ಟ್: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಈಜಿಪ್ಟ್: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಭಾರತೀಯರು ಈಗ ಈಜಿಪ್ಟ್‌ಗೆ ಪ್ರಯಾಣಿಸಬಹುದು ಎಂದು ವರದಿಯೊಂದು ತಿಳಿಸಿದೆ. ಗವರ್ನರೇಟ್‌ಗಳಾದ ಕೆಂಪು ಸಮುದ್ರ, ದಕ್ಷಿಣ ಸಿನಾಯ್ ಮತ್ತು ಮ್ಯಾಟ್ರೌಹ್‌ಗೆ ಬರುವ ಪ್ರವಾಸಿಗರಿಗೆ ಈಜಿಪ್ಟ್‌ನ ಇತರ ಗವರ್ನರೇಟ್‌ಗಳಿಗೆ ಪ್ರಯಾಣಿಸಲು ಪ್ರಸ್ತುತ ನಿರ್ಬಂಧಗಳಿವೆ. ಈಜಿಪ್ಟ್‌ಗೆ ಆಗಮಿಸಿದ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಹಾಗೆಯೇ ಪ್ರಯಾಣಿಕರು ತಮ್ಮ ಆರೋಗ್ಯದ ಪರಿಸ್ಥಿತಿಯ ಬಗ್ಗೆ ಅರ್ಜಿಯೊಂದನ್ನು ಭರ್ತಿ ಮಾಡಬೇಕಾಗುತ್ತದೆ. ಅಲ್ಲದೆ, ವರದಿಗಳ ಪ್ರಕಾರ, ಎಲ್ಲಾ ಪ್ರಯಾಣಿಕರು ಆಗಸ್ಟ್ 15 ರಿಂದ 72 ಗಂಟೆಗಳಿಗಿಂತ ಹಳೆಯದಾದ ಆರ್‌ಟಿ-ಪಿಸಿಆರ್ ನೆಗೆಟಿವ್‌ ವರದಿ ಹೊಂದಿರಬೇಕಾಗಿದೆ.

 ಸೆರ್ಬಿಯಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಸೆರ್ಬಿಯಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ನೀವು ಸೆರ್ಬಿಯಾಕ್ಕೆ ಪ್ರವಾಸ ಹೋಗಲು ನಿರ್ಧರಿಸಿದ್ದರೆ, ದೇಶದಿಂದ ತೆರಳುವ ಮುನ್ನ 48 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ ಅದರ ನೆಗೆಟಿವ್‌ ವರದಿ ಹೊಂದಿರಬೇಕಾಗಿದೆ. ಈ ನಿಮಯವು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ. ಸೆರ್ಬಿಯಾದ ಕೆಲವು ಆಕರ್ಷಕಾ ಪ್ರದೇಶಗಳಾದ ಚರ್ಚ್ ಆಫ್ ಸೇಂಟ್ ಸಾವಾ, ಹೌಸ್ ಆನ್ ದ ಡ್ರಿನಾ, ಸ್ಟೂಡೆನಿಕಾ ಮೊನಾಸ್ಟರಿ, ಸುಬೊಟಿಕಾ ಸಿಟಿ ಹಾಲ್ ಮತ್ತು ಕಲೆಮೆಗ್ಡಾನ್‌ಗೆ ನೀವು ಭೇಟಿ ನೀಡಲೇ ಬೇಕಾಗಿದೆ. ಮುಂಬೈಯಿಂದ ಬೆಲ್‌ಗ್ರೇಡ್‌ಗೆ ಲುಫ್ತಾನ್ಸಾ ಹಾಗೂ ಕೆಎಲ್‌ಎಂ ರಾಯಲ್ ಡಚ್‌ ನಿರ್ವಹಿಸುವ ಸೀಮಿತ ವಿಮಾನಗಳು ಮಾತ್ರ ಇವೆ.

 ಐಸ್‌ಲ್ಯಾಂಡ್‌: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಐಸ್‌ಲ್ಯಾಂಡ್‌: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಐಸ್‌ಲ್ಯಾಂಡ್‌ಗೆ ಹೋಗಲು ಬಯಸುವ ಪ್ರವಾಸಿಗರು, ಮಾನ್ಯ ವ್ಯಾಕ್ಸಿನೇಷನ್ ಪ್ರಮಾಣಪತ್ರ ಹೊಂದಿರಬೇಕು. ಹಾಗೆಯೇ ಆಗಮನದ ನಂತರ ನೆಗೆಟಿವ್‌ ಪಿಸಿಆರ್ ಪರೀಕ್ಷೆ ಎಲ್ಲಾ ಪ್ರವಾಸಿಗರಿಗೆ ಕಡ್ಡಾಯವಾಗಿದೆ ಎಂದು ವರದಿಗಳು ತಿಳಿಸಿವೆ. ಹಾಗೆಯೇ ಆಗಮಿಸಿದಾಗ, ಗಡಿಯಲ್ಲಿ ಕೋವಿಡ್‌ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾಡಲಾಗುವುದು. ಇನ್ನು ಕೋವಿಡ್‌ ವರದಿ ನೆಗೆಟಿವ್‌ ಆದವರು ಕ್ವಾರಂಟೈನ್‌ನಿಂದ ಮುಕ್ತರಾಗಲಿದ್ದಾರೆ. ಆದಾಗ್ಯೂ, ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಸೇರಿದಂತೆ ಇಯು ಅನುಮೋದಿಸಿದ ಲಸಿಕೆಯನ್ನು ಹಾಕಿಸಿಕೊಂಡಿರಬೇಕು. ನ್ಯೂಸ್ 18 ರ ವರದಿಯ ಪ್ರಕಾರ, ಕೆಎಫ್‌ಟಿಯ ಲಕ್ಸ್ ಎಂಬ ಕಂಪನಿಯು ದೇಶಕ್ಕೆ ಖಾಸಗಿ ಚಾರ್ಟರ್ ಮತ್ತು ಲ್ಯಾಂಡ್ ಪ್ಯಾಕೇಜ್‌ಗಳನ್ನು ಒದಗಿಸುತ್ತಿದೆ. ಏಕೆಂದರೆ ಭಾರತವು ಐಸ್‌ಲ್ಯಾಂಡ್‌ ದೇಶದೊಂದಿಗೆ ಏರ್ ಬಬಲ್ ಒಪ್ಪಂದವನ್ನು ಹೊಂದಿಲ್ಲ.

 ಉಜ್ಬೇಕಿಸ್ತಾನ್: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಉಜ್ಬೇಕಿಸ್ತಾನ್: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ವರದಿಯ ಪ್ರಕಾರ, ಸಿಐಎಸ್ ದೇಶಗಳಿಗೆ (ರಷ್ಯಾವನ್ನು ಹೊರತುಪಡಿಸಿ) ಮಾನ್ಯ ವೀಸಾವನ್ನು ಹೊಂದಿರುವ ಯಾವುದೇ ಭಾರತೀಯ ನಾಗರಿಕರು ಉಜ್ಬೇಕಿಸ್ತಾನ್‌ಗೆ ಪ್ರಯಾಣಿಸಲು ಅರ್ಹರಾಗಿದ್ದಾರೆ. ಆದಾಗ್ಯೂ, ಪ್ರಯಾಣಿಕರು ದೇಶಕ್ಕೆ ಬರುವ ಮೊದಲು 72 ಗಂಟೆಗಳಿಗಿಂತ ಮುಂಚೆ ಕೋವಿಡ್‌ ಪರೀಕ್ಷೆಗೆ ಒಳಗಾದ ನೆಗೆಟಿವ್‌ ವರದಿ ಹೊಂದಿರಬೇಕಾಗಿದೆ. 14 ದಿನಗಳವರೆಗೆ ಕ್ವಾರಂಟೈನ್‌ಗೆ ಕಡ್ಡಾಯವಾಗಿ ಒಳಗಾಗಬೇಕಾಗಿದೆ.

 ರುವಾಂಡಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ರುವಾಂಡಾ: ಇತ್ತೀಚಿನ ಕೋವಿಡ್‌ ಮಾರ್ಗಸೂಚಿ, ನಿಯಮಗಳು

ಮಾನ್ಯ ವೀಸಾವನ್ನು ಹೊಂದಿರುವ ಯಾವುದೇ ಭಾರತೀಯ ರಾಷ್ಟ್ರೀಯರು ರುವಾಂಡಾಗೆ ಪ್ರಯಾಣಿಸಬಹುದು. ಕೋವಿಡ್‌ ಸಂಬಂಧಿತ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ, ರುವಾಂಡಾಗೆ ಬರುವ ಎಲ್ಲಾ ಪ್ರಯಾಣಿಕರು ಪ್ರಯಾಣಿಕರ ಲೊಕೇಟರ್ ಫಾರ್ಮ್ ಅನ್ನು ಭರ್ತಿಗೊಳಿಸಬೇಕು. ಹಾಗೆಯೇ ಆಗಮನಕ್ಕೂ ಮೊದಲು ನೆಗೆಟಿವ್‌ ಕೋವಿಡ್‌ ಪರೀಕ್ಷಾ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು. ಆಗಮಿಸಿದ ಪ್ರತಿ ಪ್ರಯಾಣಿಕನು ಎರಡನೇ ಬಾರಿ ಕೋವಿಡ್‌ ಪರೀಕ್ಷೆಗೆ ಸರ್ಕಾರ ಗೊತ್ತುಪಡಿಸಿದ ಹೋಟೆಲ್‌ಗೆ ಹೋಗಬೇಕು. Www.rbc.gov.rw ನಲ್ಲಿ ಪ್ರಯಾಣಿಕರ ಲೊಕೇಟರ್ ಫಾರ್ಮ್ ಮತ್ತು ಗೊತ್ತುಪಡಿಸಿದ ಸಾರಿಗೆ ಹೋಟೆಲ್‌ಗಳ ಪಟ್ಟಿಯನ್ನು ಕಂಡು ಕೊಳ್ಳಬಹುದಾಗಿದೆ.

English summary
Indians Can Now Travel to Russia, Turkey And Other Countries as COVID Cases Decline. Check latest COVID guidelines, rules and more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X