ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19: ಎಲ್ಲಾ ವಿಜ್ಞಾನಿಗಳ ಕಣ್ಣು BCG ಲಸಿಕೆ ಮೇಲೆ.!

|
Google Oneindia Kannada News

ಮಹಾಮಾರಿ ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ಹೆಣಗಾಡುತ್ತಿದೆ. ಕೋವಿಡ್-19 ನಿಂದಾಗಿ ಇಲ್ಲಿಯವರೆಗೂ 1,14,980 ಪ್ರಾಣ ಕಳೆದುಕೊಂಡಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಲೇ ಇದೆ.

ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಹೋರಾಡಿ ಇಲ್ಲಿಯವರೆಗೂ 4,31,613 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಆದರೂ, ಕೋವಿಡ್-19 ಗೆ ನಿರ್ದಿಷ್ಟ ಔಷಧಿಯನ್ನು ಈವರೆಗೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಕೊರೊನಾ ವೈರಸ್ ನ ಬಗ್ಗು ಬಡಿಯಲು ಔಷಧಿ ಮತ್ತು ಲಸಿಕೆಯ ಅಭಿವೃದ್ಧಿ ಕಾರ್ಯದಲ್ಲಿ ಹಲವು ಸಂಶೋಧಕರು ಮತ್ತು ವಿಜ್ಞಾನಿಗಳು ತೊಡಗಿದ್ದಾರೆ.

ಕೊರೊನಾ ಮಹಾಮಾರಿಯಿಂದ ಭಾರತವನ್ನು ಕಾಪಾಡುತ್ತಿದೆಯಾ BCG ಲಸಿಕೆ?ಕೊರೊನಾ ಮಹಾಮಾರಿಯಿಂದ ಭಾರತವನ್ನು ಕಾಪಾಡುತ್ತಿದೆಯಾ BCG ಲಸಿಕೆ?

ಈ ನಡುವೆ ಬಹುತೇಕ ವಿಜ್ಞಾನಿಗಳು ಮತ್ತು ಸಂಶೋಧಕರ ಕಣ್ಣು ಬಿಸಿಜಿ ಲಸಿಕೆ ಮೇಲೆ ಬಿದ್ದಿದೆ. ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ದಶಕಗಳಿಂದ ಬಳಕೆಯಲ್ಲಿರುವ ಬಿಸಿಜಿ ಲಸಿಕೆ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗುತ್ತಾ ಎಂಬುದರ ಕುರಿತು ಅಧ್ಯಯನ, ಪ್ರಯೋಗ ನಡೆಯುತ್ತಿದೆ.

ಬಿಸಿಜಿ ಲಸಿಕೆ ಕುರಿತು

ಬಿಸಿಜಿ ಲಸಿಕೆ ಕುರಿತು

ಕ್ಷಯ ರೋಗ (ಟ್ಯೂಬರ್ ಕ್ಯುಲಾಸಿಸ್) ವಿರುದ್ಧ ಹೋರಾಡಲು ಬಿಸಿಜಿ - Bacillus Calmette Guerin ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಟಿಬಿ ಕಾಯಿಲೆಗೆ ಕಾರಣವಾಗುವ ಬ್ಯಾಕ್ಟೀರಿಯಾ ವಿರುದ್ಧ ಬಿಸಿಜಿ ಲಸಿಕೆ ರಕ್ಷಣೆ ನೀಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಸದ್ಯ ಇಡೀ ಜಗತ್ತನ್ನು ಭಾದಿಸುತ್ತಿರುವ ಕೋವಿಡ್-19ಗೆ 'ನೋವೆಲ್ ಕೊರೊನಾ ವೈರಸ್' ಕಾರಣವಾಗಿರುವುದು ಎಲ್ಲರಿಗೂ ಗೊತ್ತಿದೆ. ಟಿಬಿ ಹೊರತಾಗಿ ಇತರೆ ಸೂಕ್ಷ್ಮ ಜೀವಿಗಳಿಂದಲೂ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಬಿಸಿಜಿ ಲಸಿಕೆ ಸಹಕಾರಿಯಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ.

ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?

ಡಾ.ಡೆನಿಸ್ ಫಾಸ್ಟ್ ಮನ್ ಏನಂತಾರೆ.?

ಡಾ.ಡೆನಿಸ್ ಫಾಸ್ಟ್ ಮನ್ ಏನಂತಾರೆ.?

''ಬಿಸಿಜಿ ಲಸಿಕೆಯಿಂದ ಟ್ಯೂಬರ್ ಕ್ಯುಲಾಸಿಸ್ ಹೊರತಾಗಿಯೂ ಜನರಿಗೆ ಸಕಾರಾತ್ಮಕ ಲಾಭವಾಗಿರುವುದು ಕ್ಲಿನಿಕಲ್ ಪ್ರಯೋಗದಲ್ಲಿ ಕಂಡುಬಂದಿದೆ'' ಎಂದು Massachusetts ಜನರಲ್ ಆಸ್ಪತ್ರೆಯ ಇಮ್ಯೂನೋಬಯಾಲಜಿ ನಿರ್ದೇಶಕ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಹಾಯಕ ಪ್ರಾಧ್ಯಾಪಕ ಡಾ.ಡೆನಿಸ್ ಫಾಸ್ಟ್ ಮನ್ ತಿಳಿಸಿದ್ದಾರೆ. ಟೈಪ್ 1 ಡಯಾಬಿಟೀಸ್ ಹೊಂದಿರುವವರ ಮೇಲೆ ಬಿಸಿಜಿ ಲಸಿಕೆ ಪರಿಣಾಮ ಬೀರುವ ಕುರಿತು ಡಾ.ಫಾಸ್ಟ್ ಮನ್ ಅಧ್ಯಯನ ನಡೆಸಿದ್ದಾರೆ.

ಪ್ರಯೋಗ ನಡೆಯುತ್ತಿದೆ

ಪ್ರಯೋಗ ನಡೆಯುತ್ತಿದೆ

ಕೊರೊನಾ ವೈರಸ್ ಮೇಲೆ ಬಿಸಿಜಿ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ, ಬಿಸಿಜಿ ಲಸಿಕೆಯಿಂದ ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟು ಮಾಡುವುದು ಸ್ಪಷ್ಟ ಎಂಬ ನಂಬಿಕೆ ಹಲವು ವಿಜ್ಞಾನಿಗಳಲ್ಲಿದೆ. ಕೊರೊನಾ ವೈರಸ್ ಮೇಲೆ ಬಿಸಿಜಿ ಲಸಿಕೆಯ ಪರಿಣಾಮಕಾರಿತ್ವವನ್ನು ತಿಳಿದುಕೊಳ್ಳಲು ಆಸ್ಟ್ರೇಲಿಯಾ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಚಾಲ್ತಿಯಲ್ಲಿವೆ.

English summary
Covid 19: What is BCG Vaccine, How will it help in Fight against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X