ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid Precaution Dose : ಕೋವಿಡ್ ಮುನ್ನೆಚ್ಚರಿಕೆ ಡೋಸ್: ಅರ್ಹತೆ, ಬೆಲೆ, ಹೇಗೆ ಬುಕ್ ಮಾಡುವುದು?

|
Google Oneindia Kannada News

ನವದೆಹಲಿ, ಏಪ್ರಿಲ್ 10: ಭಾನುವಾರದಿಂದ, ದೇಶದ ಎಲ್ಲಾ ವಯಸ್ಕರು ಕೋವಿಡ್ -19 ವಿರುದ್ಧ ಬೂಸ್ಟರ್ ಲಸಿಕೆ ಡೋಸ್‌ಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಈ ವಾರದ ಆರಂಭದಲ್ಲಿ ಘೋಷಣೆ ಮಾಡಿದೆ. ಅದರಂತೆ ಇಂದಿನಿಂದ (ಏಪ್ರಿಲ್‌ 10) ದೇಶದಲ್ಲಿ ವಯಸ್ಕರು ಕೋವಿಡ್ ಮುನ್ನೆಚ್ಚರಿಕೆಯ ಡೋಸ್ ಅಥವಾ ಬೂಸ್ಟರ್ ಡೋಸ್ ಅನ್ನು ಪಡೆಯಲು ಆರಂಭ ಮಾಡಿದ್ದಾರೆ. ಕೊರೊನಾ ವೈರೆಸ್ ಸೋಂಕಿನ ಹೊಸ ರೂಪಾಂತರ ಎಕ್ಸ್‌ಇ ಆತಂಕದ ನಡುವೆ ಭಾರತದಲ್ಲಿ ವಯಸ್ಕರಿಗೂ ಮುನ್ನೆಚ್ಚರಿಕೆಯ ಡೋಸ್ ಅನ್ನು ನೀಡಲು ಆರಂಭ ಮಾಡಲಾಗಿದೆ.

ಈ ಮೊದಲು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಮೂರನೇ ಡೋಸ್‌ಗೆ ಅರ್ಹರಾಗಿದ್ದರು. ಕೋವಿಡ್-19 ಮುನ್ನೆಚ್ಚರಿಕೆ ಡೋಸ್‌ಗಳು ಅಥವಾ ಬೂಸ್ಟರ್ ಶಾಟ್‌ಗಳು ಎಲ್ಲಾ ವಯಸ್ಕರಿಗೆ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತವೆ. ಶುಲ್ಕವನ್ನು ಪಾವತಿಸಿದ ಮೇಲೆ ಈ ಡೋಸ್ ಅನ್ನು ಪಡೆಯಬಹುದು. ಈ ನಡುವೆ ಸರ್ಕಾರಿ ಕೇಂದ್ರಗಳಲ್ಲಿ ಸರ್ಕಾರದ ಉಚಿತ ಲಸಿಕೆ ಅಭಿಯಾನವು ಮೊದಲ ಅಥವಾ ಎರಡನೇ ಲಸಿಕೆ ಪಡೆಯುವವರಿಗೆ ಇದೆ. ಹಾಗೆಯೇ ವಯಸ್ಸಾದವರಿಗೆ, ಮುಂಚೂಣಿಯ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಮುನ್ನೆಚ್ಚರಿಕೆಯ ಡೋಸ್ ಲಭಿಸಲಿದೆ.

ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್: ಸಚಿವ ಸುಧಾಕರ್ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್: ಸಚಿವ ಸುಧಾಕರ್

ವಯಸ್ಕರು ಶುಲ್ಕ ಪಾವತಿ ಮಾಡಿ ಡೋಸ್ ಅನ್ನು ಪಡೆಯಬಹುದಾಗಿದೆ. ನೀವು ಕೂಡಾ ಬೂಸ್ಟರ್ ಡೋಸ್ ಅನ್ನು ಪಡೆಯಲಿದ್ದೀರಾ? ಅರ್ಹತಾ ಮಾನದಂಡಗಳು, ಬೆಲೆ ಮತ್ತು ನಿಮ್ಮ ಸ್ಲಾಟ್ ಅನ್ನು ಹೇಗೆ ಬುಕ್ ಮಾಡುವುದು ಎಂಬುದರ ಕುರಿತು ಇಲ್ಲಿದೆ ಮಾಹಿತಿ ಮುಂದೆ ಓದಿ.

ಬೂಸ್ಟರ್ ಡೋಸ್ ಎಂದರೇನು?

ಬೂಸ್ಟರ್ ಡೋಸ್ ಎಂದರೇನು?

ನಾವು ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವುದಕ್ಕೂ ಮುನ್ನ ಬೂಸ್ಟರ್ ಡೋಸ್ ಎಂದರೆ ಏನು ಎಂದು ತಿಳಿಯುವುದು ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಪ್ರಕಾರ, ಬೂಸ್ಟರ್ ಡೋಸ್‌ಗಳು ಈಗಾಗಲೇ ಲಸಿಕೆಯನ್ನು ಪಡೆದ ವ್ಯಕ್ತಿಗೆ ನೀಡಲಾಗುವ ಡೋಸ್ ಆಗಿದೆ. ಕಾಲ ಕಳೆದಂತೆ ಲಸಿಕೆ ಪಡೆದ ಜನರಲ್ಲಿ ರೋಗನಿರೋಧಕ ಶಕ್ತಿ ಮಟ್ಟ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಮೂರನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ. ಇದಕ್ಕೆ ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತದೆ.

ಯಾರು ಬೂಸ್ಟರ್ ಡೋಸ್ ಪಡೆಯಬಹುದು?

ಯಾರು ಬೂಸ್ಟರ್ ಡೋಸ್ ಪಡೆಯಬಹುದು?

ನೀವು ಕೋವಿಡ್ ಮೂರನೇ ಡೋಸ್ ಪಡೆಯಬೇಕಾದರೆ ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಹಾಗೆಯೇ ನೀವು ಕನಿಷ್ಠ ಒಂಬತ್ತು ತಿಂಗಳ ಹಿಂದೆ ನಿಮ್ಮ ಎರಡನೇ ಡೋಸ್ ಅನ್ನು ಪಡೆದಿರಬೇಕು. ಇನ್ನು ಕೆಲವು ತಿಂಗಳುಗಳ ಹಿಂದಿನಿಂದಲೇ ಭಾರತದಲ್ಲಿ ವಯಸ್ಸಾದವರಿಗೆ, ಮುಂಚೂಣಿಯ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಮುನ್ನೆಚ್ಚರಿಕೆಯ ಡೋಸ್ ನೀಡಲಾಗುತ್ತಿದೆ. ಅದು ಮುಂದುವರಿಯಲಿದೆ.

ಬೂಸ್ಟರ್ ಡೋಸ್‌ಗೆ ಯಾವ ಕೋವಿಡ್ ಲಸಿಕೆ?

ಬೂಸ್ಟರ್ ಡೋಸ್‌ಗೆ ಯಾವ ಕೋವಿಡ್ ಲಸಿಕೆ?

ನಿಮ್ಮ ಬೂಸ್ಟರ್ ಡೋಸ್‌ಗಾಗಿ, ನಿಮ್ಮ ಮೊದಲ ಮತ್ತು ಎರಡನೇ ಡೋಸ್‌ನ ಸಮಯದಲ್ಲಿ ನೀವು ಪಡೆದ ಅದೇ ಲಸಿಕೆಯನ್ನು ನಿಮಗೆ ನೀಡಲಾಗುತ್ತದೆ. ಉದಾಹರಣೆಗೆ, ನಿಮ್ಮ ಮೊದಲ ಮತ್ತು ಎರಡನೇ ಡೋಸ್ ಸಮಯದಲ್ಲಿ ನೀವು ಕೋವಿಶೀಲ್ಡ್ ಅನ್ನು ನಿರ್ವಹಿಸಿದ್ದರೆ, ನಿಮ್ಮ ಬೂಸ್ಟರ್ ಡೋಸ್ ಆಗಿ ನಿಮಗೆ ಕೋವಿಶೀಲ್ಡ್ ಅನ್ನು ನೀಡಲಾಗುತ್ತದೆ.

ಬೂಸ್ಟರ್ ಡೋಸ್‌ನ ಬೆಲೆ ಎಷ್ಟು?

ಬೂಸ್ಟರ್ ಡೋಸ್‌ನ ಬೆಲೆ ಎಷ್ಟು?

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ವೃದ್ಧರನ್ನು ಹೊರತುಪಡಿಸಿ ಉಳಿದ ಎಲ್ಲಾ ವಯಸ್ಕರು ಕೊರೊನಾ ವೈರಸ್ ವಿರುದ್ಧ ಕೋವಿಡ್-19 ಮುನ್ನೆಚ್ಚರಿಕೆ ಡೋಸ್‌ಗಳನ್ನು ಪಡೆಯಲು ಪಾವತಿ ಮಾಡಬೇಕಾಗುತ್ತದೆ. ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಮಾತ್ರ ಇದನ್ನು ನೀಡಲಾಗುತ್ತದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ಒಂದು ಡೋಸ್ ಈಗ ಖಾಸಗಿ ಆಸ್ಪತ್ರೆಗಳಲ್ಲಿ 225 ರೂ.ಗಳಾಗಲಿದೆ ಎಂದು ಶನಿವಾರ ಪ್ರಕಟಿಸಲಾಯಿತು. ಈ ಮೊದಲು, ಪ್ರತಿ ಡೋಸ್‌ಗೆ ಕ್ರಮವಾಗಿ 600 ಮತ್ತು 1,200 ರೂ. ಆಗಿತ್ತು. ಲಸಿಕೆ ಡೋಸ್‌ನ ವೆಚ್ಚಕ್ಕಿಂತ ಹೆಚ್ಚಿನ ಖಾಸಗಿ ಲಸಿಕೆ ಕೇಂದ್ರಗಳು ಗರಿಷ್ಠ 150 ರೂ.ಗಳನ್ನು ಸೇವಾ ಶುಲ್ಕವಾಗಿ ವಿಧಿಸಬಹುದು ಎಂದು ಸರ್ಕಾರ ಪ್ರಕಟಿಸಿದೆ. ಹಾಗಾಗಿ ಒಟ್ಟು 375 ರೂಪಾಯಿಗೆ ಬೂಸ್ಟರ್ ಡೋಸ್ ಲಭಿಸಲಿದೆ.

ಬೂಸ್ಟರ್ ಡೋಸ್ ಬುಕ್ ಮಾಡುವುದು ಹೇಗೆ?

ಬೂಸ್ಟರ್ ಡೋಸ್ ಬುಕ್ ಮಾಡುವುದು ಹೇಗೆ?

ಕೋವಿಡ್ -19 ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಾಗಿ ಲಸಿಕೆ ಫಲಾನುಭವಿಗಳು ಮತ್ತೆ CoWIN ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ಎಲ್ಲಾ ಅರ್ಹ ಫಲಾನುಭವಿಗಳು ಈಗಾಗಲೇ CoWIN ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ನಿಮ್ಮ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಸ್ಲಾಟ್ ಅನ್ನು ಬುಕ್ ಮಾಡಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ CoWIN ಪೋರ್ಟಲ್‌ಗೆ ಲಾಗ್ ಇನ್ ಮಾಡಿ ಮತ್ತು ಮೊದಲ ಮತ್ತು ಎರಡನೇ ಡೋಸ್ ಸಮಯದಲ್ಲಿ ಮಾಡಿದ ರೀತಿಯಲ್ಲಿಯೇ ಸ್ಲಾಟ್ ಅನ್ನು ಬುಕ್ ಮಾಡಿ . ನಿಮಗೆ ಹತ್ತಿರವಿರುವ ವ್ಯಾಕ್ಸಿನೇಷನ್ ಕೇಂದ್ರವನ್ನು ನೀವು ಆಯ್ಕೆ ಮಾಡಬಹುದು ಮತ್ತು ಪೋರ್ಟಲ್‌ನಲ್ಲಿ ಅನುಕೂಲಕರ ದಿನಾಂಕ ಮತ್ತು ಸಮಯವನ್ನು ಕಾಯ್ದಿರಿಸಬಹುದು. ನೀವು ಆನ್‌ಲೈನ್‌ನಲ್ಲಿ ಮುಂಗಡವಾಗಿ ಸ್ಲಾಟ್ ಅನ್ನು ಬುಕ್ ಮಾಡುವ ಬದಲು ವಾಕ್-ಇನ್ ನೋಂದಣಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ನೀವು ಮೊದಲು ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

Recommended Video

Dewald Brevisಗೆ Kohli ತಮಾಷೆಯಾಗಿ ಹೇಳಿದ್ದೇನು | Oneindia Kannada

English summary
Covid-19 precaution dose for 18+ age group from April 10nth, Here's Details eligibility, price and how to book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X