ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ಕೊರೊನಾ ಗುಣಮುಖರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ!

|
Google Oneindia Kannada News

ನವದೆಹಲಿ, ಜೂನ್ 01: ಕೊರೊನಾವೈರಸ್ ಸೋಂಕಿನ ಬಗ್ಗೆ ಜನರು ಭಯಪಡಬೇಕಿಲ್ಲ. ಸೂಕ್ತ ನಿಯಮಗಳ ಪಾಲನೆ ಮತ್ತು ಚಿಕಿತ್ಸೆ ಪಡೆದರೆ 11 ರಿಂದ 15 ದಿನಗಳಲ್ಲಿ ಕೊವಿಡ್-19 ಸೋಂಕು ನಮ್ಮಿಂದ ದೂರ ಹೋಗುತ್ತದೆ. ಮಹಾಮಾರಿಗೆಯನ್ನು ಯಶಸ್ವಿಯಾಗಿ ಗೆದ್ದ ಜನರಲ್ಲೂ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಕೊವಿಡ್-19 ಸೋಂಕು ತಗುಲಿದ ಸಂದರ್ಭದಲ್ಲಿ ದೈಹಿಕ ಅನಾರೋಗ್ಯ, ನಿಶಕ್ತಿ ಮತ್ತು ಭಯ ಆವರಿಸಿಕೊಂಡಿರುತ್ತದೆ. ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ದೈಹಿಕ ಅನಾರೋಗ್ಯದ ಜೊತೆಗೆ ಖಿನ್ನತೆ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.

ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು! ಭಾರತದಲ್ಲಿ ಪತ್ತೆಯಾದ ಕೊರೊನಾವೈರಸ್ ರೂಪಾಂತರ ತಳಿಗೆ ಹೊಸ ಹೆಸರು!

ಕೊರೊನಾವೈರಸ್ ಸೋಂಕಿನಿಂದಾದ ದೀರ್ಘಾವಧಿವರೆಗೂ ಆಸ್ಪತ್ರೆಗೆ ದಾಖಲಾಗಿರುವುದು, ಐಸೋಲೇಷನ್ ಆಗಿರುವುದು ಹೀಗೆ ಕೊವಿಡ್-19 ಸೋಂಕಿನಿಂದ ಚೇತರಿಕೆ ಕಂಡ ನಂತರದಲ್ಲೂ ಹಲವಾರು ಜನರು ಆಘಾತ, ಒತ್ತಡ, ಭಯ, ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದಾರೆ. ಮಹಾಮಾರಿಯ ಮುಷ್ಠಿಯಿಂದ ತಪ್ಪಿಸಿಕೊಂಡವರಲ್ಲೂ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವೇನು. ಈ ಸಮಸ್ಯೆಗಳ ನಿವಾರಣೆಗೆ ಮಾಡುವುದೇನು ಎಂಬುದರ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ಓದಿ.

ಕೊರೊನಾ ಸೋಂಕಿತ ರೋಗಿ ಮನೆಗೆ ವಾಪಸ್

ಕೊರೊನಾ ಸೋಂಕಿತ ರೋಗಿ ಮನೆಗೆ ವಾಪಸ್

32 ವರ್ಷದ ಕೊರೊನಾವೈರಸ್ ಸೋಂಕಿತೆ ಸಂಧ್ಯಾ ಸಿಂಘಾಲ್ 28 ದಿನಗಳ ನಂತರ ಮನೆಗೆ ವಾಪಸ್ಸಾಗಿದ್ದಾರೆ. ಅಷ್ಟಾದರೂ ಅವರು ಸಹಜ ಸ್ಥಿತಿಗೆ ಬರುವುದಕ್ಕೆ ಮತ್ತಷ್ಟು ಕಾಲ ತೆಗೆದುಕೊಳ್ಳುವ ಹಾಗಾಗಿದೆ ಎಂದು ಪತಿ ರೋಗಿತ್ ಸಿಂಘಾಲ್ ತಿಳಿಸಿದ್ದಾರೆ. "ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಒಂದೇ ವಾರ್ಡಿನಲ್ಲಿದ್ದ ಕೊವಿಡ್-19 ಸೋಂಕಿತರ ಆರೋಗ್ಯ ಸ್ಥಿತಿ ಮತ್ತು ಸಾವಿನ ಸುದ್ದಿಗಳಿಂದ ಆಕೆ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅವಳು ಮನೆಯಲ್ಲಿಯೇ ಇದ್ದಿದ್ದರೆ ಆಕೆ ಆರೋಗ್ಯದಲ್ಲಿ ಬೇಗನೆ ಚೇತರಿಕೆ ಕಂಡುಬರಬಹುದಿತ್ತು ಎಂದು ಕೆಲವೊಮ್ಮೆ ನಾವೂ ಭಾವಿಸಿದ್ದೆವು ಎಂದು ಪತಿ ರೋಹಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾವೈರಸ್ ಸೋಂಕಿತರಲ್ಲಿ ಒಂಟಿತನದ ಭಾವ

ಕೊರೊನಾವೈರಸ್ ಸೋಂಕಿತರಲ್ಲಿ ಒಂಟಿತನದ ಭಾವ

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಕೊವಿಡ್-19 ಸೋಂಕಿತರು ತಮ್ಮ ಕುಟುಂಬದ ಸದಸ್ಯರ ಜೊತೆಗಿನ ಸಮಯ ಹಾಗೂ ಇತರೆ ಸಮಯಕ್ಕೆ ಹೋಲಿಸಿದಾಗ ಒಂಟಿತನದ ಭಾವ ಹೆಚ್ಚಾಗಿ ಕಾಡುತ್ತದೆ. ಚಿಕಿತ್ಸೆಗೆ ಒಳಗಾಗಿರುವ ಸೋಂಕಿತರಲ್ಲಿ ಸಾಮಾಜಿಕ ಪ್ರತ್ಯೇಕತೆಯ ಅಸಮಾಧಾನ ಮನೆ ಮಾಡಿರುತ್ತದೆ. ಅಂದರೆ ಎಲ್ಲರಿಗಿಂತಲೂ ತಾವು ದೂರವಾಗಿದ್ದು, ತಮ್ಮನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ನೋವಿನಿಂದಲೇ ಹೆಚ್ಚು ನೊಂದುಕೊಂಡಿರುತ್ತಾರೆ ಎಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮನೋವೈದ್ಯಶಾಸ್ತ್ರಜ್ಞ ಡಾ. ಮನೀಷ್ ಕಂದಪಾಲ್ ತಿಳಿಸಿದ್ದಾರೆ.

ಕೊರೊನಾ ಕಾಲದಲ್ಲಿ ಆಸ್ಪತ್ರೆಗಳ ಬಗ್ಗೆ ಹೆಚ್ಚಾಗುತ್ತಿರುವ ಭಯ

ಕೊರೊನಾ ಕಾಲದಲ್ಲಿ ಆಸ್ಪತ್ರೆಗಳ ಬಗ್ಗೆ ಹೆಚ್ಚಾಗುತ್ತಿರುವ ಭಯ

"ಕೊರೊನಾವೈರಸ್ ರೋಗಿಗಳಲ್ಲಿ ಅನಿಶ್ಚಿತತೆಯು ಹೆಚ್ಚಾಗುತ್ತದೆ. ಕೊವಿಡ್-19 ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಿದರೆ, ಅವರು ಜೀವಂತವಾಗಿ ಮನೆಗೆ ಬರುವುದಿಲ್ಲ ಎಂದು ಜನರು ಭಯಪಡುತ್ತಾರೆ. ವೈದ್ಯರು ಸಹ ಪಿಪಿಇ ಕಿಟ್‌ಗಳಲ್ಲಿ ಧರಿಸಿರುತ್ತಾರೆ ಹಾಗೂ ರೋಗಿಗಳನ್ನು ದೈಹಿಕವಾಗಿ ಸ್ಪರ್ಶಿಸಲು ಅನುಮತಿಸುವುದಿಲ್ಲ. ನರಮಂಡಲದಲ್ಲಿ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಅಪಾಯವಿದೆ. ತುರ್ತು ನಿಗಾ ಘಟಕದಲ್ಲಿ ದೀರ್ಘಾವಧಿ ಚಿಕಿತ್ಸೆ ಪಡೆಯುವ ರೋಗಿಗಳು ತೀವ್ರ ಭಾವೋದ್ವೇಕಕ್ಕೆ ಒಳಗಾಗಿರುತ್ತಾರೆ ಎಂದು ಡಾ. ಮನೀಷ್ ಕಂದಪಾಲ್ ತಿಳಿಸಿದ್ದಾರೆ.

Recommended Video

Rockline ವಿರುದ್ದ ವಿಷ್ಣು ಅಭಿಮಾನಿಯ ಆಕ್ರೋಶ | Oneindia Kannada
ಕೊವಿಡ್-19 ಗುಣಮುಖರಲ್ಲಿ ಅನಾರೋಗ್ಯ ಸಮಸ್ಯೆ

ಕೊವಿಡ್-19 ಗುಣಮುಖರಲ್ಲಿ ಅನಾರೋಗ್ಯ ಸಮಸ್ಯೆ

ಒಂದು ಬಾರಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ವ್ಯಕ್ತಿಯು ಗುಣಮುಖರಾದ ನಂತರದಲ್ಲೂ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾನಸಿಕ ಒತ್ತಡ, ಖಿನ್ನತೆ, ಭಾವನಾತ್ಮಕ ಸ್ಥಿರತೆಯ ಕೊರತೆ, ಜ್ಞಾಪಕ ಶಕ್ತಿ ಕೊರತೆ, ಮರೆವು, ಆತಂಕ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸ್ಟೀರಾಯ್ಡ್ ಬಳಕೆಯು ವ್ಯಕ್ತಿಯ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಈ ಹಂತದಲ್ಲಿ ವ್ಯಕ್ತಿಯ ಆರೋಗ್ಯ ಸುಧಾರಿಸುವಲ್ಲಿ ಕುಟುಂಬವು ಪ್ರಮುಖ ಪಾತ್ರ ಮತ್ತು ಜವಾಬ್ದಾರಿಯನ್ನು ವಹಿಸಲಿದೆ ಎಂದು ಡಾ. ಮನೀಷ್ ಕಂದಪಾಲ್ ಹೇಳಿದ್ದಾರೆ.

English summary
Due to long hospitalisation and isolation, several covid-19 patients are grappling with trauma, stress, fear, depression and anxiety after recovery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X