ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ನಡುವೆ ಮದುವೆ: ಸಿಕ್ಕಾಪಟ್ಟೆ ವೈರಲ್ ಆದ ವೆಡ್ಡಿಂಗ್ ಪ್ಯಾಕೇಜ್ ಇದು!

|
Google Oneindia Kannada News

ಕುಟುಂಬಸ್ಥರು, ಬಂಧು-ಮಿತ್ರರು ಮತ್ತು ನೂರಾರು ಅತಿಥಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ, ಭರ್ಜರಿಯಾಗಿ, ವಿಜೃಂಭಣೆಯಿಂದ ನಡೆಯುತ್ತಿದ್ದ ಮದುವೆಗಳಿಗೆ 'ಕೊರೊನಾ ವೈರಸ್' ಎಂಬ 'ಮಹಾಮಾರಿ'ಯಿಂದ ಬ್ರೇಕ್ ಬಿದ್ದಿದೆ.

Recommended Video

ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

ವೈಭವೋಪೇತವಾಗಿ ನಡೆಯುತ್ತಿದ್ದ ಮದುವೆಗಳು ಇದೀಗ ಸರಳವಾಗಿ ಜರುಗುತ್ತಿವೆ. ನೂರಾರು, ಸಾವಿರಾರು ಜನ ಸೇರುತ್ತಿದ್ದ ವಿವಾಹಕ್ಕೆ ಈಗ ಕೆಲವೇ ಕೆಲವು ಮಂದಿ ಮಾತ್ರ ಸಾಕ್ಷಿ ಆಗುತ್ತಿದ್ದಾರೆ.

80 ಕಿಲೋ ಮೀಟರ್ ನಡೆದು ಮದುವೆ ಮಾಡಿಕೊಂಡ ಯುವತಿ!80 ಕಿಲೋ ಮೀಟರ್ ನಡೆದು ಮದುವೆ ಮಾಡಿಕೊಂಡ ಯುವತಿ!

ಸರ್ಕಾರದ ಮಾರ್ಗಸೂಚಿ ಪ್ರಕಾರ, ಮದುವೆ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಜೊತೆಗೆ ಮದುವೆ ಮನೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲೇಬೇಕು.

ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕುಳಿತವರಿಗೆ 'ಕೊರೊನಾ ವೈರಸ್' ನಿಂದ ಲಾಭವಾಗಿರುವುದಂತೂ ಸತ್ಯ.

ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?ಭಾನುವಾರ ಸಂಪೂರ್ಣ ಲಾಕ್ ಡೌನ್; ಮದುವೆ ಮಾಡಬಹುದೇ?

ಅತ್ತ ಮದುವೆಗಳನ್ನೇ ನಂಬಿಕೊಂಡಿರುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ 'ಕೊರೊನಾ ವೈರಸ್' ನಿಂದ ಹೊಡೆತ ಬಿದ್ದಿರುವುದು ನಿಜ. ಆದರೂ, ಧೃತಿಗೆಡದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಕೋವಿಡ್-19 ನಂತಹ ಪ್ಯಾಂಡೆಮಿಕ್ ಸಂದರ್ಭದಲ್ಲೂ ಒಂದು 'ವೆಡ್ಡಿಂಗ್ ಪ್ಯಾಕೇಜ್' ಘೋಷಿಸಿದೆ.

ಸಿಕ್ಕಾಪಟ್ಟೆ ವೈರಲ್ ಆಗಿದೆ ವೆಡ್ಡಿಂಗ್ ಪ್ಯಾಕೇಜ್

ಸಿಕ್ಕಾಪಟ್ಟೆ ವೈರಲ್ ಆಗಿದೆ ವೆಡ್ಡಿಂಗ್ ಪ್ಯಾಕೇಜ್

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ 'ವೆಡ್ಡಿಂಗ್ ಪ್ಯಾಕೇಜ್' ಇದೇ ನೋಡಿ. ಸರ್ಕಾರದ ಮಾರ್ಗಸೂಚಿ ಅನ್ವಯ, 1,99,999 ರೂಪಾಯಿಗೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು 50 ಜನರ ಸಮ್ಮುಖದಲ್ಲಿ 'ಕಲ್ಯಾಣ ಮಹೋತ್ಸವ'ವನ್ನು ನೆರವೇರಿಸಿಕೊಡಲಿದೆ.

ಪ್ಯಾಕೇಜ್ ನಲ್ಲಿ ಏನೆಲ್ಲ ಇರಲಿದೆ.?

ಪ್ಯಾಕೇಜ್ ನಲ್ಲಿ ಏನೆಲ್ಲ ಇರಲಿದೆ.?

'ವೆಡ್ಡಿಂಗ್ ಪ್ಯಾಕೇಜ್' ನಲ್ಲಿ ಇ-ಇನ್ವಿಟೇಷನ್ ಕಾರ್ಡ್ ಡಿಸೈನಿಂಗ್, ಬ್ರೈಡಲ್ ಮೇಕಪ್, ಮೆಹಂದಿ ಆರ್ಟಿಸ್ಟ್, ಫೋಟೋ ಬೂತ್, ಕಾರ್ ಡೆಕೋರೇಷನ್, ಮಂಟಪ-ಎಂಟ್ರೆನ್ಸ್ ಡೆಕೊರೇಷನ್, ವಾದ್ಯಗೋಷ್ಟಿ, 50 ಜನರಿಗೆ ಸಸ್ಯಹಾರ ಭೋಜನ, ಫೋಟೋಗ್ರಾಫಿ, ವಿಡಿಯೋಗ್ರಾಫಿ ಮತ್ತು ಫೋಟೋ ಆಲ್ಬಂ ಲಭ್ಯವಿದೆ.

ಮದುವೆ ಸಮಾರಂಭಕ್ಕೆ ಸರಕಾರ ಹೊರಡಿಸಿದ 17 ನಿಯಮಗಳ ಪಟ್ಟಿಮದುವೆ ಸಮಾರಂಭಕ್ಕೆ ಸರಕಾರ ಹೊರಡಿಸಿದ 17 ನಿಯಮಗಳ ಪಟ್ಟಿ

ಕೊರೊನಾ ವೈರಸ್ ಮಹಿಮೆ

ಕೊರೊನಾ ವೈರಸ್ ಮಹಿಮೆ

ಎಲ್ಲದಕ್ಕಿಂತ ಮುಖ್ಯವಾಗಿ ಮದುವೆಗೆ ಬರುವ ಅತಿಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಯು.ವಿ ಹ್ಯಾಂಡ್ ಸ್ಯಾನಿಟೈಜೇಷನ್ ಸ್ಟೇಷನ್, ಹ್ಯಾಂಡ್ ಸ್ಯಾನಿಟೈಸರ್, ಎನ್-95 ಮಾಸ್ಕ್ ಗಳನ್ನೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯವರೇ ಕೊಡ್ತಾರಂತೆ.

ವೆಬ್ ಟೆಲಿಕಾಸ್ಟ್ ಲಭ್ಯ

ವೆಬ್ ಟೆಲಿಕಾಸ್ಟ್ ಲಭ್ಯ

ಸಾಲದಕ್ಕೆ ಸಾಮಾಜಿಕ ಅಂತರ ಕಾಪಾಡುವಂತೆ ಕುರ್ಚಿ ವ್ಯವಸ್ಥೆ ಮತ್ತು ವೆಬ್ ಟೆಲೆಕಾಸ್ಟ್ ಅನ್ನೂ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯವರೇ ಮಾಡಿಕೊಡ್ತಾರಂತೆ. 'ಈಗಿನ ವ್ಯವಸ್ಥೆಗೆ ತಕ್ಕ ಹಾಗೆ ಪ್ಯಾಕೇಜ್ ಇದೆ' ಎಂದು ಹಲವರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಭೇಷ್ ಅಂತಿದ್ರೆ, ಎಂಥಾ ಕಾಲ ಬಂತು ಅಂತ ಅನೇಕರು ಬಾಯ್ಮೇಲೆ ಬೆಟ್ಟಿಡುತ್ತಿದ್ದಾರೆ.

English summary
Have a look at the Wedding Package which has gone viral on Social Media. Wedding Package includes all Regulations given by Government during Covid-19 Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X