ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ಸ್ನಾನದ ವೇಳೆ ದಂಪತಿ ಲಿಪ್‌ಲಾಕ್: ಮುಂದೇನಾಯ್ತು?

|
Google Oneindia Kannada News

ಅಯೋಧ್ಯೆ ಜೂನ್ 22: ರಾಮನಗರಿ ಅಯೋಧ್ಯೆಯಲ್ಲಿ ಮಂಗಳವಾರ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತಿಯೊಬ್ಬ ತನ್ನ ಪತ್ನಿಗೆ ಮುತ್ತು ಕೊಟ್ಟಿದ್ದಾನೆ. ಹೀಗೆ ಮಾಡುತ್ತಿದ್ದಾಗ ಅಲ್ಲಿದ್ದ ಇತರರೂ ಅವರಿಬ್ಬರನ್ನೂ ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಪವಿತ್ರ ಸ್ಥಳದಲ್ಲಿ ಇಂತಹ ಕೃತ್ಯಗಳು ಇಲ್ಲಿ ನಡೆಯುವುದಿಲ್ಲ ಎಂದು ದೂರಿದ್ದಾರೆ. ಆ ನಂತರ ವಾದ ಶುರುವಾಗಿದೆ. ವಿಷಯ ಎಷ್ಟು ಉಲ್ಬಣಗೊಂಡಿತು ಅಂದರೆ ಕೋಪಗೊಂಡ ಜನರು ಆ ವ್ಯಕ್ತಿಯನ್ನು ಮನಬಂದಂತೆ ಥಳಿಸಿದ್ದಾರೆ. ಈ ಸಮಯದಲ್ಲಿ ಹೆಂಡತಿ ಕ್ಷಮಿಸುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದಾಳೆ. ಆದರೂ ಜನರು ಅವಳ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಂಗಳವಾರ ಪತಿ ಮತ್ತು ಹೆಂಡತಿ ರಾಮ ಮಂದಿರದ ನದಿಯಲ್ಲಿ ಸ್ನಾನ ಮಾಡಲು ಅಯೋಧ್ಯೆಗೆ ಬಂದಿದ್ದರು. ಸ್ನಾನದ ಸಮಯದಲ್ಲಿ ಪತಿ ತನ್ನ ಹೆಂಡತಿಯನ್ನು ಚುಂಬಿಸಿದ್ದಾನೆ. ಇದನ್ನು ಕಂಡ ಅಲ್ಲಿದ್ದ ಜನರು ಆತನನ್ನು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಎರಡು ವಿಡಿಯೋಗಳು ಹೊರಬಿದ್ದಿವೆ. ಒಂದು ವಿಡಿಯೋದಲ್ಲಿ ಪತಿ-ಪತ್ನಿ ಚುಂಬಿಸುತ್ತಿರುವುದು ಕಂಡುಬಂದರೆ, ಮತ್ತೊಂದು ವಿಡಿಯೋದಲ್ಲಿ ಪತಿಗೆ ಥಳಿಸಿರುವುದಿದೆ.

ಪತ್ನಿಯಿಂದ ಹೊಡೆಯದಂತೆ ಮನವಿ

ಪತ್ನಿಯಿಂದ ಹೊಡೆಯದಂತೆ ಮನವಿ

ವಿಡಿಯೊ ಪ್ರಕಾರ, ಎರಡು ಮೂರು ಪುರುಷರು ಪತಿಯನ್ನು ಹಿಡಿದು ಸುಮಾರು 20 ನಿಮಿಷಗಳ ಕಾಲ ಥಳಿಸಿದ್ದಾರೆ. ಈ ವೇಳೆ ಪತ್ನಿ ತನ್ನ ಪತಿಯನ್ನು ಬಿಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಆದರೂ ಯಾರೂ ಕಿವಿಗೊಡಲಿಲ್ಲ. ಹೊಡೆತದ ರಭಸಕ್ಕೆ ಗಂಡನ ಮೈಮೇಲೆ ಹಲವೆಡೆ ಗಾಯಗಳಾಗಿವೆ.

ಅವಾಚ್ಯ ಶಬ್ದಗಳಿಂದ ನಿಂದನೆ

ಅವಾಚ್ಯ ಶಬ್ದಗಳಿಂದ ನಿಂದನೆ

ವ್ಯಕ್ತಿಯನ್ನು ಸಾರ್ವಜನಿಕವಾಗಿ ಥಳಿಸಲಾಯಿತು ಮತ್ತು ಅಲ್ಲಿದ್ದ ಇತರ ಜನರು ಘಟನೆಯ ವೀಡಿಯೊಗಳನ್ನು ಮಾಡುತ್ತಲೇ ಇದ್ದರು. ಕೆಲವರು ತಮ್ಮ ಕುಟುಂಬದವರೊಂದಿಗೆ ಅಲ್ಲಿದ್ದರು. ಪತಿ-ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಸಹಿಸಲಾಗದ ಕೆಲ ಜನರು ದಂಪತಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನಾಚಾರ ಮಾಡಬಾರದು ಎಂದು ತಿಳಿ ಹೇಳಿದ್ದಾರೆ.

ಭಕ್ತರಲ್ಲಿ ಅಸಮಧಾನ

ಭಕ್ತರಲ್ಲಿ ಅಸಮಧಾನ

ಈ ವಿಡಿಯೋ ಒಂದು ವಾರ ಹಳೆಯದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಇದುವರೆಗೆ ಯಾವುದೇ ದೂರು ಬಂದಿಲ್ಲ. ಈ ವೇಳೆ ಪೊಲೀಸರು ಸದ್ಯ ದೃಶ್ಯವನ್ನು ನೋಡಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿದಲ್ಲ. ಘಟನೆಯ ಬಗ್ಗೆ ರಾಮನ ಭಕ್ತರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜನರು ಹೊಡೆಯುವ ಮೂಲಕ ಚೆನ್ನಾಗಿ ಪಾಠ ಕಲಿಸಿದ್ದಾರೆ. ಇಂತಹ ಘಟನೆಗಳು ಮುಂದೆ ನಡೆಯಬಾರದು ಎಂದು ಹೇಳಿಕೊಂಡಿದ್ದಾರೆ.

'ಸಮಾಜದ ಜನರಿಗೆ ತಪ್ಪು ಸಂದೇಶ'

'ಸಮಾಜದ ಜನರಿಗೆ ತಪ್ಪು ಸಂದೇಶ'

ಈ ವೇಳೆ ಸಂತರು ಅಸಮಾಧಾನ ವ್ಯಕ್ತಪಡಿಸಿ ವ್ಯಕ್ತಿಗೆ ಥಳಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಶ್ರೀ ರಾಮವಲ್ಲಭಕುಂಜ್ ಮುಖ್ಯಸ್ಥ ಸ್ವಾಮಿ ರಾಜ್‌ಕುಮಾರ್ ದಾಸ್ ಹೇಳಿದ್ದಾರೆ. ತೀರ್ಥಕ್ಷೇತ್ರಗಳಲ್ಲಿ ಧರ್ಮ ಮತ್ತು ಅಲಂಕಾರಗಳನ್ನು ಅನುಸರಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಅಸಭ್ಯತೆ ನಡೆದರೆ ಸಮಾಜದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದೇ ವೇಳೆ ಹನುಮತ್ ನಿವಾಸದ ಮಹಂತ್ ಡಾ.ಮಿಥಿಲೇಶ್ ನಂದಿನಿ ಶರಣ್ ಮಾತನಾಡಿ, ಜನರು ಅವರಿಗೆ ಥಳಿಸಿ ಒಳ್ಳೆಯದನ್ನು ಮಾಡಿದ್ದಾರೆ ಎಂದಿದ್ದಾರೆ.

English summary
A husband has kissed his wife when she was bathing in a river in Ramanagari Ayodhya on Tuesday. angry devotees beat to husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X