ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಪೋರೇಟ್ ಕಂಪನಿಗಳಿಂದ 921 ಕೋಟಿ ರೂ. ದೇಣಿಗೆ; ಬಿಜೆಪಿ ಬುಟ್ಟಿಗೆ ಅತಿಹೆಚ್ಚು ಕಾಸು!

|
Google Oneindia Kannada News

ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಲೋಕಸಭಾ ಚುನಾವಣೆ ನಡೆದಿರುವ 2019-20ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್ ಸಂಸ್ಥೆಗಳಿಂದ ಕೋಟಿ ಕೋಟಿ ರೂಪಾಯಿ ಹಣವು ದೇಣಿಗೆ ರೂಪದಲ್ಲಿ ಹೋಗಿದೆ. ಬಿಜೆಪಿಗೆ ಅದರಲ್ಲಿ ಸಿಂಹಪಾಲು ಸಿಕ್ಕಿದೆ.

ಕಳೆದ ಲೋಕಸಭೆ ಚುನಾವಣೆಗಳ ಸಂದರ್ಭದಲ್ಲಿಯೇ ರಾಜಕೀಯ ಪಕ್ಷಗಳು ಕಾರ್ಪೊರೇಟ್ ದೇಣಿಗೆ ರೂಪದಲ್ಲಿ ಬರೋಬ್ಬರಿ 920 ಕೋಟಿ ರೂಪಾಯಿ ಅನ್ನು ಪಡೆದಿರುವ ಬಗ್ಗೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ವರದಿ ತಿಳಿಸಿದೆ. ಈ ವರದಿಯಲ್ಲಿ ಐದು ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳು ನೀಡಿರುವ ದೇಣಿಗೆಗಳ ಕುರಿತು ವಿಶ್ಲೇಷಿಸಲಾಗಿದೆ ಭಾರತೀಯ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳ ಕಾರ್ಪೋರೇಟ್ ದೇಣಿಗೆಗಳ ಬಗ್ಗೆ ವಿಶ್ಲೇಶಿಸಲಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ವಿದೇಶಿ ದೇಣಿಗೆ ಸಂಗ್ರಹಕ್ಕೆ ಅನುಮತಿ ಕೋರಿ ಎನ್‌ಜಿಒ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿದೇಶಿ ದೇಣಿಗೆ ಸಂಗ್ರಹಕ್ಕೆ ಅನುಮತಿ ಕೋರಿ ಎನ್‌ಜಿಒ ಅರ್ಜಿ

ಅತಿಹೆಚ್ಚು ಕಾರ್ಪೊರೇಟ್ ದೇಣಿಗೆಗಳನ್ನು ಪಡೆದಿರುವ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿಯು ಅಗ್ರಸ್ಥಾನದಲ್ಲಿದ್ದು, ಕಾಂಗ್ರೆಸ್ ಎರಡು ಹಾಗೂ NCP ನಂತರದ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬಿಜೆಪಿ ಮತ್ತು ಐಎನ್‌ಸಿಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅತಿಹೆಚ್ಚು ದೇಣಿಗೆ ನೀಡಿದೆ. ನಂತರದ ಸ್ಥಾನದಲ್ಲಿ ಜನಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಐಟಿಸಿ ಲಿಮಿಟೆಡ್ ಕಾಣಿಸಿಕೊಂಡಿವೆ.

ಪ್ರಮುಖ ಅಂಶಗಳು:

ಪ್ರಮುಖ ಅಂಶಗಳು:

- ಭಾರತೀಯ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಗಳ ಒಟ್ಟು ಆದಾಯದಲ್ಲಿ ಚುನಾವಣಾ ಬಾಂಡ್‌ಗಳು ಅತ್ಯಧಿಕ ಪಾಲನ್ನು ಹೊಂದಿವೆ.

- ಕಾರ್ಪೊರೇಟ್ ದೇಣಿಗೆಗಳು NCP ಯ ಒಟ್ಟು ಆದಾಯದ ಪ್ರಮುಖ ಭಾಗವಾಗಿದೆ.

- ಎರಡು ರಾಷ್ಟ್ರೀಯ ಪಕ್ಷಗಳಿಗೆ (ಬಿಜೆಪಿ ಮತ್ತು ಐಎನ್‌ಸಿ) ಅಗ್ರ ದಾನಿ ಎನಿಸಿರುವ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಒಟ್ಟು 248 ಕೋಟಿ ರೂಪಾಯಿ ದೇಣಿಗೆ ನೀಡಿದೆ.

8 ವರ್ಷಗಳಲ್ಲಿ ಅತಿಹೆಚ್ಚು ದೇಣಿಗೆ ಸಂಗ್ರಹ:

8 ವರ್ಷಗಳಲ್ಲಿ ಅತಿಹೆಚ್ಚು ದೇಣಿಗೆ ಸಂಗ್ರಹ:

ಕಳೆದ 2020ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು ಅತಿಹೆಚ್ಚು ದೇಣಿಗೆ ಸಂಗ್ರಹಿಸಿವೆ. ದೇಶದ ಐದು ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್‌ಗಳಿಂದ 920 ಕೋಟಿಗೂ ಹೆಚ್ಚು ಹಣವನ್ನು ಪಡೆದಿರುವುದು ಎಂಟು ವರ್ಷಗಳ ದಾಖಲೆಯನ್ನು ಮೀರಿ ನಿಂತಿದೆ. ಕಾರ್ಪೊರೇಟ್ ದೇಣಿಗೆಗಳು ತಿಳಿದಿರುವ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಒಟ್ಟು ಕೊಡುಗೆಯ ಶೇ.91ರಷ್ಟಿದೆ. ರಾಷ್ಟ್ರೀಯ ಪಕ್ಷಗಳಿಗೆ 20,000 ರೂಪಾಯಿಗಿಂತ ಹೆಚ್ಚು ಹಣವನ್ನು ದೇಣಿಗೆಯಾಗಿ ನೀಡಿರುವ ದಾನಿಗಳ ಕುರಿತು ಮಾಹಿತಿಯು ಭಾರತದ ಚುನಾವಣಾ ಆಯೋಗದಲ್ಲಿ ಲಭ್ಯವಿರುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಎಷ್ಟು ಹಣ ಸಂಗ್ರಹವಾಗಿತ್ತು ಎನ್ನುವುದರ ಪಟ್ಟಿಯನ್ನು ಇಲ್ಲಿ ಓದಿ.

2012-13ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 82.04 ಕೋಟಿ ರೂಪಾಯಿ

2013-14ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 224.61 ಕೋಟಿ ರೂಪಾಯಿ

2014-15ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 573.18 ಕೋಟಿ ರೂಪಾಯಿ

2015-16ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 76.94 ಕೋಟಿ ರೂಪಾಯಿ

2016-17ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 563.19 ಕೋಟಿ ರೂಪಾಯಿ

2017-18ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 421.99 ಕೋಟಿ ರೂಪಾಯಿ

2018-19ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 881.26 ಕೋಟಿ ರೂಪಾಯಿ

2019-20ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ: 921.95 ಕೋಟಿ ರೂಪಾಯಿ

ಯಾವ ಪಕ್ಷಕ್ಕೆ ಎಷ್ಟು ದೇಣಿಗೆ?:

ಯಾವ ಪಕ್ಷಕ್ಕೆ ಎಷ್ಟು ದೇಣಿಗೆ?:

ಕಳೆದ 2019-20ನೇ ಸಾಲಿನಲ್ಲಿ ಸಂಗ್ರಹವಾದ ದೇಣಿಗೆ 921.95 ಕೋಟಿ ರೂಪಾಯಿ ಆಗಿದೆ. ಈ ಪೈಕಿ ಭಾರತೀಯ ಜನತಾ ಪಕ್ಷಕ್ಕೆ ಅತಿಹೆಚ್ಚು ದೇಣಿಗೆ ಸಿಕ್ಕಿದ್ದು, ಯಾವ ಪಕ್ಷವು ಎಷ್ಟು ಹಣವನ್ನು ದೇಣಿಗೆಯಾಗಿ ಪಡೆದಿದೆ ಎನ್ನುವುದನ್ನು ಮುಂದೆ ತಿಳಿಯಿರಿ.

ಭಾರತೀಯ ಜನತಾ ಪಕ್ಷ : 720.41 ಕೋಟಿ ರೂಪಾಯಿ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 133.04 ಕೋಟಿ ರೂಪಾಯಿ

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ : 57.09 ಕೋಟಿ ರೂಪಾಯಿ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ : 6.92 ಕೋಟಿ ರೂಪಾಯಿ

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ : 4.5 ಕೋಟಿ ರೂಪಾಯಿ

ಬಿಜೆಪಿಗೆ ದೇಣಿಗೆ ನೀಡಿದ ಕಂಪನಿಗಳು:

ಬಿಜೆಪಿಗೆ ದೇಣಿಗೆ ನೀಡಿದ ಕಂಪನಿಗಳು:

- ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ 216.75 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಐಟಿಸಿ ಲಿಮಿಟೆಡ್ ಕಂಪನಿಯು 55.02 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಜನಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್ 45.95 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಕಂಪನಿಗಳು:

- ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ 31 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಜನಕಲ್ಯಾಣ್ ಎಲೆಕ್ಟೋರಲ್ ಟ್ರಸ್ಟ್ 25 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಐಟಿಸಿ ಲಿಮಿಟೆಡ್ ಕಂಪನಿಯು 13.65 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಕಂಪನಿಗಳು:

- ಬಿಜಿ ಶಿರ್ಕೆ ಕಂಸ್ಟ್ರಕ್ಷನ್ ಟೆಕ್ನಾಲಜಿ ಲಿಮಿಟೆಡ್ 25 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಪಂಚಶಿಲಾ ಕಾರ್ಪೋರೇಟ್ ಪಾರ್ಕ್ ಪ್ರೈ. ಲಿ 7.5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಮಾಡರ್ನ್ ರೋಡ್ ಮೇಕರ್ಸ್ ಪ್ರೈ ಲಿ 7 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಕ್ಕೆ ದೇಣಿಗೆ ನೀಡಿದ ಕಂಪನಿಗಳು:

- ಮುತ್ತೂಟ್ ಫೈನ್ಯಾನ್ಸ್ ಫ್ರೈ ಲಿ 2.65 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಕಲ್ಯಾಣ್ ಜ್ಯುವೆಲರ್ಸ್ 1.12 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ನವಯುಗ ಇಂಜಿನಿಯರಿಂಗ್ ಕಂಪನಿ 0.5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದ ಕಂಪನಿಗಳು:

- ನ್ಯೂ ಡೆಮಾಕ್ರೆಟಿಕ್ ಎಲೆಕ್ಟೋಲರ್ ಟ್ರಸ್ಟ್ 2 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಟೆಕ್ಸ್ ಮ್ಯಾಕೋ ರೈಲು ಆಂಡ್ ಇಂಜಿನಿಯರಿಂಗ್ ಲಿ. 0.5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

- ಟೆಕ್ಸ್ ಮ್ಯಾಕೋ ಇನ್ಫ್ರಾ ಸ್ಟ್ರಕ್ಚರ್ ಹೋಲ್ಡಿಂಗ್ ಲಿ. 0.5 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ಮಾಹಿತಿ ಕೃಪೆ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್

English summary
Corporate donations to political parties in 2019-20: Which party received the most? Here is the details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X