ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್?

|
Google Oneindia Kannada News

ನವದಹೆಲಿ, ಮಾರ್ಚ್.21: ಚೀನಾದಲ್ಲಿ ಜನ್ಮ ತಾಳಿದ ಕೊರೊನಾ ವೈರಸ್ ಇಂದು ಚೀನಾಗಿಂತಲೂ ವಿದೇಶಗಳಲ್ಲೇ ಅತಿಹೆಚ್ಚು ಆತಂಕವನ್ನು ಸೃಷ್ಟಿ ಮಾಡಿದೆ. ಆರಂಭದಲ್ಲಿ ವಿದೇಶಗಳು ತೋರಿದ ನಿರ್ಲಕ್ಷ್ಯವೇ ಇಂದಿನ ಈ ಪರಿಸ್ಥಿತಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ವಿದೇಶಗಳಿಂದ ಆಗಮಿಸುತ್ತಿದ್ದ ಪ್ರಯಾಣಿಕರನ್ನು ಯಾವುದೇ ತಪಾಸಣೆಗಳಿಲ್ಲದೇ ಹೊರ ಬಿಟ್ಟಿದ್ದು ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಹಲವು ದೇಶಗಳಲ್ಲಿ ಬಾವಿ ತೋಡುವ ಕೆಲಸವನ್ನು ಮಾಡಲಾಗುತ್ತಿದೆ.

ಕೊರೊನಾ ಅಪಾಯ: ಲಕ್ಷದ ಗಡಿ ದಾಟುತ್ತದೆಯಾ ಸಾವಿನ ಸಂಖ್ಯೆ?ಕೊರೊನಾ ಅಪಾಯ: ಲಕ್ಷದ ಗಡಿ ದಾಟುತ್ತದೆಯಾ ಸಾವಿನ ಸಂಖ್ಯೆ?

ಶನವಾರದ ಅಂಕಿ-ಅಂಶದ ಪ್ರಕಾರ 185 ರಾಷ್ಟ್ರಗಳಿಗೆ ವ್ಯಾಪಿಸಿದ ಕೊರೊನಾ ವೈರಸ್ ನಿಂದ 11,419ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದು, 2,76,996 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 91,981 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಕಡ್ಡಾಯವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಪಡೆಯುವುದು

ಕಡ್ಡಾಯವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಪಡೆಯುವುದು

ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಪರಿಣಾಮದಿಂದ ಹಲವು ದೇಶಗಳು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ. ತುರ್ತು ಪ್ರಯಾಣದ ಅಗತ್ಯವಿದ್ದಲ್ಲಿ ಅಂಥ ಪ್ರಯಾಣಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಮಾರ್ಗಸೂಚಿಯನ್ನು ನೀಡಲಾಗಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ತಮ್ಮೊಡನೆ ಇಟ್ಟುಕೊಂಡು ಸಂಚರಿಸಬೇಕು. ಇಲ್ಲವಾದಲ್ಲಿ ಸಾರಿಗೆ ಸುರಕ್ಷತಾ ಆಡಳಿತ ಮಂಡಳಿ(PSA)ಯ ಅಧಿಕಾರಿಗಳಿಂದ ಕೇಳಿ ಪಡೆಯಬೇಕು.

ಏರ್ ಪೋರ್ಟ್ ತಪಾಸಣಾ ಕೇಂದ್ರದಲ್ಲಿ ಸ್ಯಾನಿಟೈಸರ್

ಏರ್ ಪೋರ್ಟ್ ತಪಾಸಣಾ ಕೇಂದ್ರದಲ್ಲಿ ಸ್ಯಾನಿಟೈಸರ್

ವಿಮಾನ ನಿಲ್ದಾಣಗಳಲ್ಲಿ ಇರುವ ತಪಾಸಣಾ ಕೇಂದ್ರದಲ್ಲಿ ಪ್ರಯಾಣ ಆರಂಭಿಸುವ ಮೊದಲು ಹ್ಯಾಂಡ್ ಸ್ಯಾನಿಟೈಸರ್ ಪಡೆಯುವುದು. ವೈಯಕ್ತಿಕ ಕರವಸ್ತ್ರಗಳನ್ನು ತೆಗೆದುಕೊಳ್ಳುವುದು ಮತ್ತು ಟಿಶ್ಯೂ ಪೇಪರ್ ಗಳನ್ನು ಇಟ್ಟುಕೊಳ್ಳಬೇಕು ಎನ್ನಲಾಗಿದೆ.

ಪರಿಶೀಲನೆಗೂ ಮೊದಲು ಗ್ಲಾಸ್ ಬದಲಿಸಲು ತಿಳಿಸಿ

ಪರಿಶೀಲನೆಗೂ ಮೊದಲು ಗ್ಲಾಸ್ ಬದಲಿಸಲು ತಿಳಿಸಿ

ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರ ಸರಕು ಪರಿಶೀಲನೆ ವೇಳೆ ಪಿಎಸ್ಎ ಅಧಿಕಾರಿಗಳಿಗೆ ತಾವು ಧರಿಸಿರುವ ಗ್ಲೌಸ್ ಗಳನ್ನು ಬದಲಿಸಿಕೊಳ್ಳುವಂತೆ ಪ್ರಯಾಣಿಕರೇ ಮನವಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವಾಗಲೂ ಅಧಿಕಾರಿಗಳು ತಮ್ಮ ಗ್ಲೌಸ್ ಗಳನ್ನು ತೆಗೆದು ಹೊಸ ಗ್ಲೌಸ್ ಗಳನ್ನು ಧರಿಸಬೇಕು. ಗುರುತಿನ ಚೀಟಿಗಳ ಪರಿಶೀಲನೆ ಸಂದರ್ಭದಲ್ಲಿ ಮಾತ್ರವೇ ಮುಖಕ್ಕೆ ಹಾಕಿಕೊಂಡ ಮಾಸ್ಕ್ ಗಳನ್ನು ತೆರೆಯಬೇಕು ಎಂದು ತಿಳಿಸಲಾಗಿದೆ.

ಲಗೇಜ್ ಗಳನ್ನು ಪುನರ್ ಬಳಕೆ ಮಾಡುವುದು ಅಪಾಯ

ಲಗೇಜ್ ಗಳನ್ನು ಪುನರ್ ಬಳಕೆ ಮಾಡುವುದು ಅಪಾಯ

ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರು ತಮ್ಮ ಲಗೇಜ್ ಗಳನ್ನು ತಪಾಸಣಾ ಕೇಂದ್ರದಲ್ಲಿ ಇರುವ ಪಿಎಸ್ಎ ಸಿಬ್ಬಂದಿ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರದಲ್ಲಿ ಯಾವುದೇ ಕಾರಣಕ್ಕೂ ಆ ಲಗೇಜ್ ಗಳನ್ನು ಪುನರ್ ಬಳಕೆ ಮಾಡುವಂತಿಲ್ಲ. ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಪಿಎಸ್ಎ ಅಧಿಕಾರಿಗಳು ಕೂಡಾ ಪದೇ ಪದೆ ಹ್ಯಾಂಡ್ ಸ್ಯಾನಿಟೈಸರ್ ನಿಂದ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು. ಕೈಗಳಿಗೆ ಗ್ಲೌಸ್ ಗಳನ್ನು ಕಡ್ಡಾಯವಾಗಿ ಧರಿಸಿವುದು ಅಗತ್ಯವಾಗಿದೆ.

ಪ್ರಯಾಣಿಕರ ತಪಾಸಣೆ ಬಳಿಕ ಕೈ ತೊಳೆಯುವುದು

ಪ್ರಯಾಣಿಕರ ತಪಾಸಣೆ ಬಳಿಕ ಕೈ ತೊಳೆಯುವುದು

ಏರ್ ಪೋರ್ಟ್ ಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕನನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಿದ ನಂತರದಲ್ಲಿ ಪ್ರತಿಬಾರಿಯೂ ಪಿಎಸ್ಎ ಅಧಿಕಾರಿಗಳು ತಮ್ಮ ಗ್ಲೌಸ್ ಗಳನ್ನು ಬದಲಿಸಬೇಕು. ಜೊತೆಗೆ ತಮ್ಮ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು ಎಂದು ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ನಿಯಂತ್ರಣ ಕೇಂದ್ರ ( ಸಿಡಿಸಿ ) ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಏರ್ ಪೋರ್ಟ್ ನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಬೇಕು

ಏರ್ ಪೋರ್ಟ್ ನಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಬೇಕು

ಕೊರೊನಾ ವೈರಸ್ ನಿಂದ ದೇಶವನ್ನು ಕಾಪಾಡಲು ಆಯಾ ದೇಶದ ಸರ್ಕಾರಗಳು ಶ್ರಮಿಸುತ್ತಿವೆ. ಈ ಹಿನ್ನೆಲೆ ಏರ್ ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದ್ದು, ಈ ವೇಳೆ ಸೋಂಕಿತ ಲಕ್ಷಣಗಳು ಕಂಡು ಬಂದಲ್ಲ. ಅಂಥ ಪ್ರಯಾಣಿಕರು ಚೀನಾ, ಇಟಲಿ, ದಕ್ಷಿಣ ಕೊರಿಯಾದಂತಾ ಸೋಂಕಿತ ರಾಷ್ಟ್ರಗಳಿಂದ ಆಗಮಿಸಿದರೆ, ಆ ದೇಶದಲ್ಲಿ ಯಾವ ಸ್ಥಳಕ್ಕೆ ಭೇಟಿ ನೀಡಿದ್ದರು. ಎಷ್ಟು ದಿನಗಳ ಕಾಲ ಅಲ್ಲಿ ವಾಸಿಸುತ್ತಿದ್ದರು, ಆ ದೇಶದ ಯಾವ ಯಾವ ಪ್ರದೇಶಕ್ಕೆ ತೆರಳಿದ್ದರು ಎಂದು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕಾಗುತ್ತದೆ.

ದೇಶದ 20ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್

ದೇಶದ 20ಕ್ಕೂ ಅಧಿಕ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್

ಕೊರೊನಾ ವೈರಸ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಕೇಂದ್ರ ವಿಮಾನಯಾನ ಸಚಿವಾಲಯವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಾಥಮಿಕ ಹಂತದಲ್ಲಿ ದೇಶದ 20ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಅಷ್ಟೇ ಅಲ್ಲದೇ ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಭಾರತದ ಯಾವ ಏರ್ ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್?

ಭಾರತದ ಯಾವ ಏರ್ ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್?

ಕಳೆದ ಮಾರ್ಚ್.04ರಿಂದಲೇ ದೇಶದ 20ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರು, ಚೆನ್ನೈ, ವಿಶಾಖಪಟ್ಟಣ, ಭುವನೇಶ್ವರ್, ಹೈದ್ರಾಬಾದ್, ಕೊಚ್ಚಿ, ದೆಹಲಿ, ಮುಂಬೈ, ಅಮೃತಸರ್ ಮತ್ತು ಕೊಲ್ಕತ್ತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಯನ್ನು ನಡೆಸಲಾಗುತ್ತಿದೆ.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮ

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮ

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸುವ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶನಿವಾರ ಒಂದೇ ದಿನ ದೇಶದಲ್ಲಿ 26 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 275ಕ್ಕೆ ಏರಿಕೆಯಾಗಿದೆ. ಇದುವರೆಗೂ ಭಾರತದಲ್ಲಿ ಕೊರೊನಾ ವೈರಸ್ ನಿಂದ ಐದು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

English summary
Coronavirus: Worldwide Thermal Screening Systerm In International Airports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X