• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Coronavirus Awarness: 65,780 ಜನ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ

|

ನವದೆಹಲಿ, ಮಾರ್ಚ್.11: ಚೀನಾದಲ್ಲಿ ಹುಟ್ಟಿ.. ಜಗತ್ತಿನಾದ್ಯಂತ ಬೆಳೆದು.. ಭಾರತೀಯರಲ್ಲೂ ಭೀತಿ ಹುಟ್ಟಿಸಿರುವ ಡ್ರ್ಯಾಗನ್ ದೇಶದ ಡೆಡ್ಲಿ ಕೂಸಿದು. ಈ ಹೆಸರನ್ನು ಕೇಳಿದರೆ ಭಾರತೀಯರಷ್ಟೇ ಅಲ್ಲ. ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

   karnataka ban selling offood cut fruits on footpaths | Street food Banned | Bangalore

   ಚೀನಾದಲ್ಲಿ ಹುಟ್ಟಿದ ಆ ಕೂಸಿನ ಹೆಸರೇ ಕೊರೊನಾ ವೈರಸ್. ಇದೊಂದು ಮಾರಕ ಸೋಂಕಿನ ಇಂದು ಜಗತ್ತಿಗೆ ಜಗತ್ತೇ ತತ್ತರಿಸಿ ಹೋಗಿದೆ. ವ್ಯಾಪಾರ ವಹಿವಾಟುಗಳೆಲ್ಲ ಬಂದ್ ಆಗುತ್ತಿದೆ. ವ್ಯವಹಾರ, ಆರ್ಥಿಕ ಪರಿಸ್ಥಿತಿಗಳೆಲ್ಲ ಅಲ್ಲೋಲ-ಕಲ್ಲೋಲವಾಗಿದೆ.

   ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!

   ಅಂತಾರಾಷ್ಟ್ರೀಯ ಷೇರುಪೇಟೆ ಪಾತಾಳಕ್ಕೆ ಕುಸಿದಿದ್ದು, ಚಿನ್ನ ಬೆಳ್ಳಿಯ ದರ ಕೈಗೆ ಎಟಗದಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಇಷ್ಟೆಲ್ಲ ಆತಂಕಗಳಿಗೆ ಕಾರಣವಾಗಿದ್ದ ಚೀನಾದಲ್ಲಿ ಪರಿಸ್ಥಿತಿ ಮೊದಲಿನಂತೆ ಇಲ್ಲ. ವಿಶ್ವಕ್ಕೆ ಕೊರೊನಾ ವೈರಸ್ ನ್ನು ಕೊಡುಗೆಯಾಗಿ ಕೊಟ್ಟ ಆ ದೇಶದಲ್ಲಿ ಸೋಂಕಿತರ ಪ್ರಮಾಣ ಕ್ರಮೇಣ ಕುಗ್ಗುತ್ತಿದೆ.

   ಡ್ರ್ಯಾಗನ್ ದೇಶಕ್ಕೆ ಆರಂಭದಲ್ಲಷ್ಟೇ ಕೊರೊನಾ ಆಘಾತ

   ಡ್ರ್ಯಾಗನ್ ದೇಶಕ್ಕೆ ಆರಂಭದಲ್ಲಷ್ಟೇ ಕೊರೊನಾ ಆಘಾತ

   ಕಳೆದ ಜನವರಿ.01ರಂದು ಹುಬೈ ಪ್ರದೇಶದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಂಡೂ ಕೇಳರಿಯದಂತಾ ವಿಶಿಷ್ಟ ರೀತಿಯ ನಿಮೋನಿಯಾ ಸೋಂಕಿತರು ಪತ್ತೆಯಾಗಿರುವ ಬಗ್ಗೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿತು. ನೋಡನೋಡುತ್ತಿದ್ದಂತೆ ಚೀನಾದ ಹ್ಯೂನಾನ್ ಸೀಫುಡ್ ಹೋಲ್ ಸೇಲ್ ಮಾರ್ಕೇಟ್ ನಲ್ಲಿ ಹಲವರಿಗೆ ಈ ವೈರಸ್ ಹರಡಿತು. 40 ಜನರಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದ ನಂತರವಷ್ಟೇ ವೈದ್ಯರು ಈ ವೈರಸ್ ಬಗ್ಗೆ ಗಂಭೀರವಾಗಿ ತೆಗೆದುಕೊಂಡರು.

   ಜನವರಿ.11ರಂದು ಕೊರೊನಾದಿಂದ ಮೊದಲ ಸಾವು

   ಜನವರಿ.11ರಂದು ಕೊರೊನಾದಿಂದ ಮೊದಲ ಸಾವು

   ಚೀನಾದಲ್ಲಿ ಕೊರೊನಾ ವೈರಸ್ ನಿಂದಾಗಿ 61 ವರ್ಷದ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟಿರುವ ಬಗ್ಗೆ ಸ್ವತಃ ಚೀನಾ ಸರ್ಕಾರವೇ ಘೋಷಿಸಿತು. ಈ ವ್ಯಕ್ತಿ ಚೀನಾದ ಹ್ಯೂನಾನ್ ಸೀಫುಡ್ ಹೋಲ್ ಸೇಲ್ ಮಾರ್ಕೇಟ್ ನಿಂದ ಸರಕುಗಳನ್ನು ಖರೀದಿಸಿದ್ದನು. ಸೋಂಕಿನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಆರೋಗ್ಯದಲ್ಲಿ ಯಾವುದೇ ರೀತಿ ಚೇತರಿಕೆ ಕಂಡು ಬರಲಿಲ್ಲ. ಹೀಗಾಗಿ ಜನವರಿ.09ರಂದೇ ವ್ಯಕ್ತಿಯು ಪ್ರಾಣ ಬಿಟ್ಟಿದ್ದಾನೆ ಎಂದು ಚೀನಾ ಸರ್ಕಾರವು ಘೋಷಿಸಿತು.

   ಕೊರೊನಾ ವೈರಸ್ ಎಫೆಕ್ಟ್: ವಿಮಾನ ಏರಿದವರಿಗೆ 14 ದಿನ ಗೃಹ ದಿಗ್ಬಂಧನ!

   ದಿನವೊಂದಕ್ಕೆ ಕೊರೊನಾಗೆ ಬಲಿಯಾಗಿದ್ದು ನೂರಾರು ಮಂದಿ

   ದಿನವೊಂದಕ್ಕೆ ಕೊರೊನಾಗೆ ಬಲಿಯಾಗಿದ್ದು ನೂರಾರು ಮಂದಿ

   ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು ಆರಂಭದಲ್ಲಿ ಒಬ್ಬಿಬ್ಬರಾದರೂ ನಂತರದಲ್ಲಿ ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗವನ್ನೇ ಬಾರಿಸಿತು. ದಿನವೊಂದಕ್ಕೆ ನೂರಾರು ಮಂದಿ ಸೋಂಕಿನಿಂದ ಬಳಲಿ ಪ್ರಾಣ ಬಿಟ್ಟರು. ಇದುವರೆಗೂ ಚೀನಾದಲ್ಲಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟವರ ಸಂಖ್ಯೆ 4,000 ಗಡಿ ದಾಟಿದೆ.

   ಕೊರೊನಾ ಕಂಟಕದಿಂದ ಸುಧಾರಿಸಿಕೊಂಡ ಚೀನಾ

   ಕೊರೊನಾ ಕಂಟಕದಿಂದ ಸುಧಾರಿಸಿಕೊಂಡ ಚೀನಾ

   ಚೀನಾದಲ್ಲೇ ಹುಟ್ಟಿಕೊಂಡ ಮಾರಕ ಸೋಂಕು ಕೊರೊನಾ ವೈರಸ್ ಕಾಟದಿಂದ ಚೀನಾ ನಿಧಾನಗತಿಯಲ್ಲಿ ಸುಧಾರಿಸಿಕೊಂಡಿದೆ. ಡ್ರ್ಯಾಗನ್ ರಾಷ್ಟ್ರದಲ್ಲಿ ಪರಿಸ್ಥಿತಿ ಇದೀಗ ಬದಲಾಗಿದೆ. ಜನರಲ್ಲಿ ಕೊರೊನಾ ಬಗ್ಗೆ ಇರುವ ಭೀತಿ ದೂರವಾಗಿದೆ. ಅದಕ್ಕೆ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಪಟ್ಟಿಯೇ ಸಾಕ್ಷಿಯಾಗಿ ನಿಲ್ಲುತ್ತದೆ.

   ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

   ಕೊರೊನಾ ವೈರಸ್ ಬಂದವರೆಲ್ಲ ಮೃತಪಡುವುದಿಲ್ಲ

   ಕೊರೊನಾ ವೈರಸ್ ಬಂದವರೆಲ್ಲ ಮೃತಪಡುವುದಿಲ್ಲ

   ಕೊರೊನಾ ವೈರಸ್ ಒಮ್ಮೆ ಕಾಣಿಸಿಕೊಂಡರೆ ಮುಗೀತು ಕಥೆ. ನಾವಿನ್ನು ಸತ್ತು ಹೋಗ್ತೀವಿ ಅನ್ನೋ ಭಯದಿಂದ ಜನರು ಹೊರ ಬರಬೇಕು. ಏಕೆಂದರೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡವರೆಲ್ಲ ಮೃತಪಟ್ಟಿದ್ದಾರೆ ಎನ್ನುವಂತಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಉದಾಹರಣೆಗಳೂ ಕೂಡಾ ಸಾಕಷ್ಟಿವೆ.

   ಕೊರೊನಾದಿಂದ ಗುಣಮುಖರಾಗಲು ಮನೋಬಲ ಸಾಕು

   ಕೊರೊನಾದಿಂದ ಗುಣಮುಖರಾಗಲು ಮನೋಬಲ ಸಾಕು

   ಮಾರಣಾಂತಿಕ ಕೊರೊನಾ ವೈರಸ್ ರೋಗಕ್ಕೆ ಇದುವರೆಗೂ ಯಾವುದೇ ಔಷಧವನ್ನು ಕಂಡು ಹಿಡಿದಿಲ್ಲ. ಮಾರಕ ಸೋಂಕಿಗೆ ಔಷಧಿ ಕಂಡು ಹಿಡಿಯಬೇಕಾದರೆ ಕನಿಷ್ಠ 18 ತಿಂಗಳಾದರೂ ಬೇಕಾಗುತ್ತದೆ ಎಂದು ಸ್ವತಃ ಅಂತಾರಾಷ್ಟ್ರೀಯ ಆರೋಗ್ಯ ಇಲಾಖೆಯೇ ತಿಳಿಸಿದೆ. ಆದರೆ ವಿಜ್ಞಾನಿಗಳ ಅಭಿಪ್ರಾಯದ ಪ್ರಕಾರ, ಮನುಷ್ಯರಲ್ಲಿ ಇರುವ ರೋಗ ನಿರೋಧಕ ಶಕ್ತಿ ಹಾಗೂ ಮನೋಬಲವಷ್ಟೇ ಸಾಕು. ಕೊರೊನಾ ವೈರಸ್ ನಿಂದ ಸುಲಭವಾಗಿ ಪಾರಾಗಬಹುದು ಎಂದು ವೈದ್ಯರು ಕೂಡಾ ಸಲಹೆ ನೀಡುತ್ತಾರೆ.

   ವೈದ್ಯರು ಮತ್ತು ವಿಜ್ಞಾನಿಗಳ ಮಾತನ್ನು ಸತ್ಯಗೊಳಿಸಿದ ಪಟ್ಟಿ

   ವೈದ್ಯರು ಮತ್ತು ವಿಜ್ಞಾನಿಗಳ ಮಾತನ್ನು ಸತ್ಯಗೊಳಿಸಿದ ಪಟ್ಟಿ

   ಕೊರೊನಾ ವೈರಸ್ ಭಯದಿಂದ ಹೊರ ಬಂದರೆ ಸೋಂಕಿತರು ಅರ್ಧದಷ್ಟು ಗುಣಮುಖರಾದಂತೆ ಎಂಬ ವೈದ್ಯರು ಮತ್ತು ವಿಜ್ಞಾನಿಗಳ ಮಾತನ್ನು ನಿಜ ಎಂದು ಈ ಪಟ್ಟಿ ಸೂಚಿಸುತ್ತದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಆರೋಗ್ಯದಲ್ಲಿ ಚೇತರಿಸಿಕೊಂಡವರ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಸಾವಿರಾರು ಜನರ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡು ಬಂದಿದೆ.

   ವಿಶ್ವದಾದ್ಯಂತ 65 ಸಾವಿರಕ್ಕೂ ಅಧಿಕ ಜನರ ಆರೋಗ್ಯದಲ್ಲಿ ಚೇತರಿಕೆ

   ವಿಶ್ವದಾದ್ಯಂತ 65 ಸಾವಿರಕ್ಕೂ ಅಧಿಕ ಜನರ ಆರೋಗ್ಯದಲ್ಲಿ ಚೇತರಿಕೆ

   ಜಾಗತಿಕ ಮಟ್ಟದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಬಳಲಿ ಬೆಂಡಾಗಿದ್ದ 65 ಸಾವಿರಕ್ಕೂ ಅಧಿಕ ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗೆ ಚೇತರಿಕೆ ಕಂಡು ಬಂದ ಟಾಪ್-10 ಪ್ರದೇಶಗಳು ಮತ್ತು ಜನರ ಸಂಖ್ಯೆಯನ್ನು ಈ ಪಟ್ಟಿಯಲ್ಲಿ ಹೇಳಲಾಗಿದೆ.

   ಚೀನಾದಲ್ಲಿ ಅತಿಹೆಚ್ಚು ಜನರು ಕೊರೊನಾ ವೈರಸ್ ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಅದರಂತೆ ಅದೇ ಚೀನಾದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಪೈಕಿ ಚೀನಾದ ಹುಬೈ ನಗರ ಮೊದಲ ಸ್ಥಾನದಲ್ಲಿದೆ. ಹುಬೈ ನಗರ ಒಂದರಲ್ಲೇ 49,062 ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಪಟ್ಟಿಯಲ್ಲಿ ಇರಾನ್ ಎರಡನೇ ಸ್ಥಾನದಲ್ಲಿದೆ. ಇರಾನ್ ನಲ್ಲಿ ಇದುವರೆಗೂ 2,731 ಕೊರೊನಾ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

   ಚೀನಾದ ಗೌಂಗ್ ದಾಂಗ್ ಪ್ರದೇಶದಲ್ಲಿ 1,282 ಸೋಂಕಿತರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಚೀನಾದ ಹೆನನ್ ಪ್ರದೇಶದಲ್ಲಿ 1,249 ಜನರಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಚೀನಾದ ಝೇಜಿಯಾಂಗ್ ಪ್ರದೇಶದಲ್ಲಿ 1,193 ಜನರ ಆರೋಗ್ಯ ಸುಧಾರಿಸಿದೆ. ಚೀನಾದ ಹುನಾನ್ ಪ್ರದೇಶದಲ್ಲಿ 995 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೀನಾದ ಅಂಹುಯ್ ಪ್ರದೇಶದಲ್ಲಿ 984 ಜನರ ಚೇತರಿಸಿಕೊಂಡಿದ್ದಾರೆ. ಚೀನಾದ ಜಿಯಾಂಗ್ ಕ್ಸಿ ಪ್ರದೇಶದಲ್ಲಿ 932 ಜನರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಇನ್ನು, ಇಟಲಿಯಲ್ಲಿ 724 ಜನರ ಆರೋಗ್ಯ ಸುಧಾರಿಸಿದ್ದರೆ, ಚೀನಾದ ಶಾಂದೊಂಗ್ ಪ್ರದೇಶದಲ್ಲಿ 721 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ.

   ಕೇರಳದಲ್ಲೂ ಮೂವರ ಆರೋಗ್ಯದಲ್ಲಿ ಚೇತರಿಕೆ

   ಕೇರಳದಲ್ಲೂ ಮೂವರ ಆರೋಗ್ಯದಲ್ಲಿ ಚೇತರಿಕೆ

   ಇನ್ನು, ಭಾರತೀಯರು ಕೊರೊನಾ ವೈರಸ್ ಗೆ ಭಯ ಪಡುವ ಅಗತ್ಯವೇ ಇಲ್ಲ. ಏಕೆಂದರೆ ಕೇರಳದಲ್ಲಿ ಪತ್ತೆಯಾಗಿದ್ದ ಮೊದಲ ಮೂವರು ಸೋಂಕಿತರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದ ಉದಾಹರಣೆ ಕಣ್ಣು ಮುಂದಿದೆ. ಅಲ್ಲದೇ, ಇದುವರೆಗೂ ಭಾರತದಲ್ಲಿ 56 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೂ ಕೂಡಾ ಒಂದೇ ಒಂದು ಸಾವಿನ ಪ್ರಕರಣಗಳ ಬಗ್ಗೆ ವರದಿಯಾಗಿಲ್ಲ. ಬದಲಿಗೆ ಸೋಂಕಿತರನ್ನೆಲ್ಲ ಐಸೋಲೆಟೆಡ್ ವಾರ್ಡ್ ಗಳಲ್ಲಿ ಇರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

   English summary
   Coronavirus: Worldwide More Than 65,000 Recovered Cases Found. China Top In The List.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X