ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವೈದ್ಯ ಬಿಚ್ಚಿಟ್ಟ ಆಘಾತಕಾರಿ ವಿಷ್ಯ!

|
Google Oneindia Kannada News

ನವದೆಹಲಿ, ಮಾರ್ಚ್.29: ಕೊರೊನಾ ವೈರಸ್ ಸೋಂಕಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತತ್ತರಿಸಿ ಹೋಗುತ್ತಿವೆ. ಈ ಪೈಕಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ದಿನೇ ದಿನೆ ಸೋಂಕಿತರು ಮತ್ತು ಮೃತರ ಸಂಖ್ಯೆ ಏರಿಕೆಯಾಗುತ್ತಿದೆ.

ಕೊವಿಡ್-19 ಜನ್ಮ ತಾಳಿದ ಚೀನಾದಲ್ಲಿ ಸೋಂಕಿತರು ಮತ್ತು ಮೃತರ ಸಂಖ್ಯೆಯಲ್ಲಿ ಸ್ಥಿರತೆ ಕಂಡು ಬರುತ್ತಿದೆ. ಇನ್ನೊಂದು ಕಡೆಯಲ್ಲಿ ಡ್ರ್ಯಾಗನ್ ರಾಷ್ಟ್ರವನ್ನೇ ಹಿಂದಿಕ್ಕಿದ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ.

ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!ಪೇಶೆಂಟ್ ನಂ.31; ದೇಶಾದ್ಯಂತ ಕೊರೊನಾ ವೈರಸ್ ಹರಡಲು ಈತನೇ ಕಾರಣ!

ಅಮೆರಿಕಾದಲ್ಲಿ ಇದುವರೆಗೂ 2,227 ಜನರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ 1,23,750ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಈ ಪೈಕಿ 3,231 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇದರ ನಡುವೆ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ಆಘಾತಕಾರಿ ಅಂಶವನ್ನು ಹೊರ ಹಾಕಿದ್ದಾರೆ.

ಕೊರೊನಾ ಸೋಂಕಿತರ ಸ್ಥಿತಿಯನ್ನು ಕಂಡು ಅವಕ್ಕಾದ ವೈದ್ಯರು

ಕೊರೊನಾ ಸೋಂಕಿತರ ಸ್ಥಿತಿಯನ್ನು ಕಂಡು ಅವಕ್ಕಾದ ವೈದ್ಯರು

ನಮ್ಮ ಆಸ್ಪತ್ರೆಗೆ ದಾಖಲಾದ ಕೊರೊನಾ ವೈರಸ್ ಸೋಂಕಿತರನ್ನು ಮೊದಲಿಗೆ ಕಂಡು ನಾನೇ ಅವಕ್ಕಾಗಿ ಹೋದನೆ. ನೋಡುವುದಕ್ಕೆ ಅವರೆಲ್ಲ ಆರೋಗ್ಯವಂತರಾಗಿ ಕಂಡು ಬಂದರು. ಗಟ್ಟಿಬುಟ್ಟಾದ ದೇಹ, ಖಡಕ್ ಆಗಿ ಇದ್ದವರ ಆರೋಗ್ಯದಲ್ಲಿ ದಿಢೀರ್ ಬದಲಾವಣೆ ಆಗಿ ಬಿಟ್ಟಿತು. ಟ್ರಕ್ ಒಂದು ಡಿಕ್ಕಿ ಹೊಡೆದ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಂತೆ ಇವರಲ್ಲೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಕೇವಲ ಆಕ್ಸಿಜನ್ ಸಹಾಯದಿಂದ ಬದುಕಿದ್ದ ರೋಗಿಗಳು ನೋಡು ನೋಡುತ್ತಿದ್ದಂತೆ ಉಸಿರಾಟವನ್ನೇ ನಿಲ್ಲಿಸಿದರು, ಎಂದು ವೈದ್ಯರು ತಿಳಿಸಿದ್ದಾರೆ.

ಸೋಂಕಿತರ ದಿಢೀರ್ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ

ಸೋಂಕಿತರ ದಿಢೀರ್ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ

ಪ್ರತಿಯೊಬ್ಬ ಕೊರೊನಾ ವೈರಸ್ ಸೋಂಕಿತರನ್ನು ಆಸ್ಪತ್ರೆಯ ಅಬ್ಸರ್ ವೇಷನ್ ವಿಭಾಗದಲ್ಲಿ ಇರಿಸಿ ನಾಲ್ಕು ಗಂಟೆಗೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಈ ವೇಳೆ ಅವರ ಹೃದಯ ಬಡಿತದ ವೇಗವು ದಿಢೀರನೇ ಏರಿಕೆ ಆಗುತ್ತಿತ್ತು, ಇಲ್ಲವೇ ಇಳಿಕೆಯಾಗುತ್ತಿತ್ತು. ಈ ಸೋಂಕಿತ ರೋಗಿಗಳು ಉಸಿರಾಡುವುದೇ ದೊಡ್ಡ ಹೋರಾಟವಾಗಿತ್ತು. ನಂತರದಲ್ಲಿ ಚಿಕಿತ್ಸೆ ಸ್ಪಂದಿಸದೇ ರೋಗಿಗಳು ಉಸಿರಾಡುವುದನ್ನೇ ನಿಲ್ಲಿಸುತ್ತಿದ್ದರು, ಎಂದು ವೈದ್ಯರು ತಿಳಿಸಿದ್ದಾರೆ.

ಎಚ್ಚೆತ್ತುಕೊಳ್ಳದಿದ್ದರೆ ಅಪಾಯ: ಕರ್ನಾಟಕದಲ್ಲೇ 26 ಮಂದಿಗೆ ಕೊರೊನಾ!ಎಚ್ಚೆತ್ತುಕೊಳ್ಳದಿದ್ದರೆ ಅಪಾಯ: ಕರ್ನಾಟಕದಲ್ಲೇ 26 ಮಂದಿಗೆ ಕೊರೊನಾ!

ಸೋಂಕಿತರ ಶ್ವಾಸಕೋಶದಲ್ಲಿ ಉಸಿರಾಟ ಸಮಸ್ಯೆ

ಸೋಂಕಿತರ ಶ್ವಾಸಕೋಶದಲ್ಲಿ ಉಸಿರಾಟ ಸಮಸ್ಯೆ

ಕೊರೊನಾ ವೈರಸ್ ಸೋಂಕಿತರ ಶ್ವಾಸಕೋಶದಲ್ಲಿ ತೀವ್ರ ಉಸಿರಾಟ(ARDS) ತೊಂದರಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ಸೋಂಕಿತರನ್ನು ಕ್ಷ-ಕಿರಣ(X-Ray) ಪರೀಕ್ಷೆಗೆ ಒಳಪಡಿಸಿದಾಗ ತಿಳಿದು ಬಂದಿತು. ಶ್ವಾಸಕೋಶದಲ್ಲಿ ಸ್ರವಿಸುವಿಕೆ ಕಂಡು ಬಂದಿದ್ದು, ಈ ರೀತಿಯ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡುವುದು ಕೂಡಾ ಕಷ್ಟಸಾಧ್ಯವಾಗಲಿದೆ. ಇಂಥ ಸೋಂಕಿತರ ಮರಣ ಪ್ರಮಾಣ ಹೆಚ್ಚಾಗಿದ್ದು, ಶೇ.40ರಷ್ಟು ಸೋಂಕಿತರಿಗೆ ವೆಂಟಿಲೇಟರ್ ನಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಎಂದು ವೈದ್ಯರು ಹೇಳಿದ್ದಾರೆ.

ಮನುಷ್ಯನ ದೇಹದಲ್ಲಿರುವ ಶ್ವಾಸಕೋಶಕ್ಕೆ ಅಪಾಯ

ಮನುಷ್ಯನ ದೇಹದಲ್ಲಿರುವ ಶ್ವಾಸಕೋಶಕ್ಕೆ ಅಪಾಯ

ಎಆರ್ ಡಿಎಸ್ ಸಮಸ್ಯೆಯಿಂದ ಮನುಷ್ಯರ ಶ್ವಾಸಕೋಶದ ಮೇಲೆ ಹೆಚ್ಚಿನ ದುಷ್ಪರಿಣಾಮಗಳು ಕಂಡು ಬರುತ್ತದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶದಲ್ಲಿ ಸಣ್ಣ ಸಣ್ಣ ಬಲೂನ್ ರೀತಿಯ ಆಕಾರದಲ್ಲಿ ಇರುತ್ತವೆ. ಕೊರೊನಾ ಸೋಂಕಿತ ವ್ಯಕ್ತಿ ಉಸಿರಾಡಿದಾಗ ಗಿಡದ ಎಲೆಗಳು ಉದುರಿದಂತೆ ಶ್ವಾಸಕೋಶದಲ್ಲಿ ಗಾಳಿಯ ಚೀಲ(ಅಲ್ವಿಯೋಲಿ)ಗಳು ಹಿಗ್ಗುತ್ತವೆ.

ಪೇಶೆಂಟ್ ನಂ.13: ಕರ್ನಾಟಕಕ್ಕೆ ಸೋಂಕಿತರ ಕೊಡುಗೆ ಕೊಡುತ್ತಾರಾ ಮಹಿಳೆ?ಪೇಶೆಂಟ್ ನಂ.13: ಕರ್ನಾಟಕಕ್ಕೆ ಸೋಂಕಿತರ ಕೊಡುಗೆ ಕೊಡುತ್ತಾರಾ ಮಹಿಳೆ?

ಉದಾಹರಣೆ: ಮನುಷ್ಯನ ತೋಳನ್ನು ಬಿಗಿಯಾಗಿ ಹಿಡಿದಾಗ ರಕ್ತ ಪರಿಚಲನೆಯು ಕ್ಷಣಕಾಲ ನಿಂತು ಹೋಗಿ ತೋಳಿನ ಮುಂಭಾಗವು ಕೆಂಪಾಗಿ ಗೋಚರಿಸುತ್ತದೆ. ಅದೇ ರೀತಿಯಾಗಿ ಶ್ವಾಸಕೋಶಕ್ಕೆ ಹೆಚ್ಚುವರಿ ರಕ್ತ ಮತ್ತು ದ್ರವ್ಯ ಪರಿಚಲನೆ ಆದಷ್ಟು ದ್ರವದ ರೂಪದಲ್ಲಿ ಶ್ವಾಸಕೋಶವನ್ನು ಪ್ರವೇಶಿಸುವ ವೈರಸ್ ಗಳು ಜೀವಕೋಶಕ್ಕೆ ಅಪಾಯವನ್ನು ತಂದೊಡ್ಡುತ್ತವೆ.

ಅಲ್ವಿಯೋಲಿಗಳಲ್ಲಿ ದ್ರವ್ಯದ ಸೋರಿಕೆಯಿಂದ ಅಪಾಯ

ಅಲ್ವಿಯೋಲಿಗಳಲ್ಲಿ ದ್ರವ್ಯದ ಸೋರಿಕೆಯಿಂದ ಅಪಾಯ

ಶ್ವಾಸಕೋಶದಲ್ಲಿ ಇರುವ ಗಾಳಿಯ ಚೀಲಗಳನ್ನು ಅಲ್ವಿಯೋಲಿ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಈ ಅಲ್ವಿಯೋಲಿಯಲ್ಲಿ ವೈರಸ್ ನಿಂದಾಗಿ ದ್ರವ್ಯದ ಪ್ರಮಾಣ ಸೇರ್ಪಡೆಯಾಗುತ್ತದೆ. ಇದು ಕ್ಷ-ಕಿರಣ(ಎಕ್ಸ್ ರೇ) ಪರೀಕ್ಷೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕ್ಷ-ಕಿರಣ ಪರಿಶೀಲನೆ ವೇಳೆ ಶ್ವಾಸಕೋಶದಲ್ಲಿರುವ ದ್ರವ್ಯವು ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಸೋಂಕಿತರ ಉಸಿರಾಟದಲ್ಲಿ ಏರಿಳಿತದ ಬಗ್ಗೆ ಆತಂಕ

ಸೋಂಕಿತರ ಉಸಿರಾಟದಲ್ಲಿ ಏರಿಳಿತದ ಬಗ್ಗೆ ಆತಂಕ

ಕೊರೊನಾ ವೈರಸ್ ಸೋಂಕಿತರನ್ನು ಒಂದು ಬಾರಿ ವೆಂಟಿಲೇಟರ್ ನಲ್ಲಿ ಇರಿಸಿದ ಮೇಲೆ ಅತಿಯಾದ ಏರಿಳಿತ ಕಂಡು ಬರುತ್ತದೆ. ಈ ಮೊದಲು ಯಾವುದೇ ರೋಗಿಗಳಲ್ಲಿ ಇಂಥ ಲಕ್ಷಣಗಳನ್ನು ಕಂಡಿರಲಿಲ್ಲ ಎಂದು ವೈದ್ಯರೇ ತಿಳಿಸುತ್ತಾರೆ. ಇಷ್ಟಲ್ಲದೇ ಕೊರೊನಾ ಸೋಂಕಿತರ ಶ್ವಾಸಕೋಶದಲ್ಲಿ ಕೆಟ್ಟ ದ್ರವ್ಯವು ಸೇರ್ಪಡೆಯಾಗಿರುತ್ತದೆ. ಈ ದ್ರವ್ಯ ಶ್ವಾಸಕೋಶವನ್ನು ಆವರಿಸಿ ಕ್ಷಿಪ್ರಗತಿಯಲ್ಲಿ ಆರೋಗ್ಯವನ್ನು ಹಾಳುಗೆಡವುತ್ತದೆ.

ಕೊರೊನಾ ತಗುಲಿರುವವರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಕಾಣಬೇಕು?ಕೊರೊನಾ ತಗುಲಿರುವವರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಕಾಣಬೇಕು?

ವೈದ್ಯರು ಮೊದಲು ಕಂಡ ಸೋಂಕಿತನಲ್ಲಿನ ಲಕ್ಷಣಗಳು

ವೈದ್ಯರು ಮೊದಲು ಕಂಡ ಸೋಂಕಿತನಲ್ಲಿನ ಲಕ್ಷಣಗಳು

ಕೊರೊನಾ ವೈರಸ್ ಸೋಂಕಿತನಲ್ಲಿ ಕಾಣಿಸಿಕೊಳ್ಳುವ ಜ್ವರ ಕೇವಲ ಜ್ವರವಷ್ಟೇ ಆಗಿರುವುದಿಲ್ಲ. ಈ ಸೋಂಕಿತರು ಉಸಿರಾಡುವುದಕ್ಕೆ ಪಡುವ ಸಂಕಟವು ಅಷ್ಟಿಷ್ಟಲ್ಲ. ವೆಂಟಿಲೇಟರ್ ಅಳವಡಿಸಿದರೂ ಕೂಡಾ ಯುವಕನೊಬ್ಬ ಉಸಿರಾಡಲು ಹರಸಾಹಸ ಪಡುತ್ತಿದ್ದನು. ಗಾಳಿ ತುಂಬಿನ ಟ್ಯೂಬ್ ನ್ನು ಕತ್ತರಿಸಿದಾಗ ಬರುವ ಗಾಳಿಯ ವೇಗದಂತೆ ಸೋಂಕಿತರು ಉಸಿರಾಟವು ಇರುತ್ತದೆ.

ಇನ್ನು, ಸಾಮಾನ್ಯವಾಗಿ ಜ್ವರ ಮತ್ತು ಉಸಿರಾಟ ತೊಂದರೆ ಕಾಣಿಸಿಕೊಂಡ ರೋಗಿಗಳು ಹಸಿರು ಮತ್ತು ಹಳದಿ ಮೈಬಣ್ಣವನ್ನು ಹೊಂದಿರುತ್ತಾರೆ. ಆದರೆ ಕೊರೊನಾ ವೈರಸ್ ಸೋಂಕಿತರ ಶ್ವಾಸಕೋಶದಲ್ಲಿ ದ್ರವ್ಯವು ಸೋರಿಕೆಯಾದ ಹಿನ್ನೆಲೆ ಗುಲಾಬಿ ಬಣ್ಣದಲ್ಲಿ ಮೈಬಣ್ಣವು ಬದಲಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತದೆ, ಸೋಂಕಿತರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ ಎಂಬ ಮಾತುಗಳು ಹಾಸ್ಯವನ್ನು ಹುಟ್ಟಿಸುತ್ತಿತ್ತು. ತದನಂತರದಲ್ಲಿ ಕಂಡು ಬಂದ ಬೆಳವಣಿಗೆಗಳು ತಮ್ಮಲ್ಲೇ ಆಶ್ಚರ್ಯ ಮತ್ತು ಆತಂಕವನ್ನು ಹುಟ್ಟಿಸಿತು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಮೊದಲಿಗೆ ತಮ್ಮ ಆಸ್ಪತ್ರೆಗೆ ಇಬ್ಬರು ಸೋಂಕಿತರು ದಾಖಲಾಗಿದ್ದು, ಇಬ್ಬರಿಂದ ಐದು, ಐದರಿಂದ 10, ಹತ್ತರಿಂದ 20ಕ್ಕೆ ಸೋಂಕಿತರ ಸಂಖ್ಯೆ ಏರಿತು.

ಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ

ವೈದ್ಯರಿಗೇ ಧರಿಸುವುದಕ್ಕೆ ಮಾಸ್ಕ್ ಇಲ್ಲದ ದುಸ್ಥಿತಿ

ವೈದ್ಯರಿಗೇ ಧರಿಸುವುದಕ್ಕೆ ಮಾಸ್ಕ್ ಇಲ್ಲದ ದುಸ್ಥಿತಿ

ಇನ್ನು, ಆರಂಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಎಲ್ಲ ಉಪಕರಣಗಳು ನಮ್ಮಲ್ಲಿದ್ದವು. ತದನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಬ್ಬ ಶಂಕಿತರಿಗೆ ಒಂದು ಮಾಸ್ಕ್ ಬಳಸಿದೆವು. ನಂತರ ಸೋಂಕಿತರಿಗೆ ಒಂದು ಮಾಸ್ಕ್ ಬಳಸಲು ಆರಂಭಿಸಿದೆವು. ಇದೀಗ ಒಂದೇ ಮಾಸ್ಕ್ ತೊಟ್ಟು ಎಲ್ಲರನ್ನು ತಪಾಸಣೆಗೆ ಒಳಪಡಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಏಕೆಂದರೆ ಅಷ್ಟೊಂದು ಮಾಸ್ಕ್ ಗಳ ಅಭಾವ ಉಂಟಾಗಿದೆ ಎನ್ನುತ್ತಾರೆ ವೈದ್ಯರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಿರತ ಶ್ರಮ

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಿರತ ಶ್ರಮ

ಈ ಮೊದಲು ವೈದ್ಯರು 12 ಗಂಟೆಗಳ ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಪರಿಸ್ಥಿತಿ ಬದಲಾಗಿದೆ. ಸೋಂಕಿತರನ್ನು ತಪಾಸಣೆ ನಡೆಸುವುದಕ್ಕೆ ವೈದ್ಯರಿಗೆ ಇರುವ ಸಮಯ ಸಾಕಾಗುತ್ತಿಲ್ಲ. ಮನೆಗಳಿಗೆ ತೆರಳುವುದಕ್ಕೂ ಸಮಯವಿಲ್ಲದಂತಾಗಿದೆ. ಸೋಂಕಿತರ ಚಕಿತ್ಸೆಗೆ ಹೆಚ್ಚು ಅವಧಿಯನ್ನು ಮೀಸಲಿಡುವಂತಾ ಅನಿವಾರ್ಯತೆ ಎದುರಾಗಿ ಬಿಟ್ಟಿದೆ.

ಸೋಂಕಿತರ ಸಾವಿಗೆ ವೆಂಟಿಲೇಟರ್ ಅಭಾವವೂ ಕಾರಣ

ಸೋಂಕಿತರ ಸಾವಿಗೆ ವೆಂಟಿಲೇಟರ್ ಅಭಾವವೂ ಕಾರಣ

ಕೊರೊನಾ ವೈರಸ್ ಸೋಂಕಿತರ ಸಾವಿನ ಹಿಂದೆ ಒಂದು ಕರಾಳ ಸತ್ಯವೂ ಕೂಡಾ ಇದೆ. ಮಾರಕ ಸೋಂಕಿಗೆ ತುತ್ತಾಗಿರುವವರನ್ನು ವೆಂಟಿಲೇಟರ್ ನಲ್ಲಿಯೇ ಇರಿಸಿ ಚಿಕಿತ್ಸೆ ನೀಡಬೇಕಾದಂತಾ ಅಗತ್ಯತೆ ಇರುತ್ತದೆ. ಆದರೆ, ವೆಂಟಿಲೇಟರ್ ಸಮಸ್ಯೆ ಇರುವುದರಿಂದ ಸೋಂಕಿತರು ಪ್ರಾಣ ಬಿಡುವಂತಾ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಸೋಂಕಿತರ ಸಂಖ್ಯೆ ಅಷ್ಟೊಂದು ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದು ಯಾವುದೇ ಒಂದು ದೇಶಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದು ಸ್ವತಃ ವೈದ್ಯರೇ ಆತಂಕ ವ್ಯಕ್ತಪಡಿಸಿದ್ದಾರೆ.

English summary
Coronavirus: United States Of America Doctors Explained About Covid-19 Patients Situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X