• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

|

ಬೆಂಗಳೂರು, ಮಾರ್ಚ್.09: ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನದ್ದೇ ಮಾತು. ಎದ್ದರೂ ಕೊರೊನಾ, ಬಿದ್ದರೂ ಕೊರೊನಾ, ಉಸಿರಾಡಿದರೂ ಕೊರೊನಾ ವೈರಸ್. ಜನರು ಬಾಯಿ ತೆರೆದರೆ ಕೊರೊನಾ ವೈರಸ್ ಬಗ್ಗೆಯೇ ಮಾತನಾಡುತ್ತಿದ್ದಾರೆ.

   Karnataka Government Declared Holiday For primary (5th standard) Students | School Holiday

   ವಿಶ್ವದಲ್ಲಿ ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಕೊರೊನಾ ವೈರಸ್ ಸೋಂಕು ಹರಡಲು ಸಾಕಷ್ಟು ಕಾರಣಗಳಿವೆ. ಸೋಂಕಿತರ ಕಣ್ಣು, ಬಾಯಿ, ಮೂಗು, ಮುಖ, ಹಾಗೂ ಸ್ಪರ್ಶದಿಂದ ಕೊರೊನಾ ವೈರಸ್ ಹರಡುತ್ತದೆ. ಇದಿಷ್ಟೇ ಅಲ್ಲದೇ ಸೋಂಕಿತರು ಒಮ್ಮೆ ಕೆಮ್ಮಿದರೆ ಸುತ್ತಲೂ ಇರುವ ಜನರಿಗೆ ಸೋಂಕು ಹರಡುವ ಅಪಾಯವಿದೆ.

   Breaking: ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆ

   ಇದೆಲ್ಲಕ್ಕಿಂತಲೂ ಡೇಂಜರಸ್ ಎಂದರೆ ಅದು ಸಾಮಾನ್ಯವಾಗಿ ಎಲ್ಲರೂ ಬಳಸುವ ಮೊಬೈಲ್ ಫೋನ್ ಗಳು. ಈ ಸ್ಮಾರ್ಟ್ ಫೋನ್ ಗಳಿಂದಲೂ ಕೊರೊನಾ ವೈರಸ್ ಹರಡುತ್ತವೆ ಎಂದು ಜರ್ನಲ್ ಆಫ್ ಹಾಸ್ಪಿಟಲ್ ಇನ್ಫೆಕ್ಷನ್ ತನ್ನ ಅಧ್ಯಯನದಲ್ಲಿ ತಿಳಿಸಿದೆ.

   9 ದಿನ ಫೋನ್ ನಲ್ಲಿ ಜೀವಿಸುತ್ತೆ ಕೊರೊನಾ ವೈರಸ್!

   9 ದಿನ ಫೋನ್ ನಲ್ಲಿ ಜೀವಿಸುತ್ತೆ ಕೊರೊನಾ ವೈರಸ್!

   ಜನರು ದಿನನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನಗಳ ಕಾಲ ಜೀವಿಸುವ ಶಕ್ತಿಯನ್ನು ಕೊರೊನಾ ವೈರಸ್ ಹೊಂದಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಕೈಗಳನ್ನು ಎಷ್ಟು ಶುಭ್ರವಾಗಿ ಇಟ್ಟುಕೊಳ್ಳುತ್ತಾರೋ ಅಷ್ಟೇ ಸ್ವಚ್ಛವಾಗಿ ತಮ್ಮ ಮೊಬೈಲ್ ಫೋನ್ ಗಳನ್ನೂ ಕೂಡಾ ನೋಡಿಕೊಳ್ಳೂಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

   ಒಂದು ದಿನಕ್ಕೆ 2,617 ಬಾರಿ ಮೊಬೈಲ್ ಟಚ್!

   ಒಂದು ದಿನಕ್ಕೆ 2,617 ಬಾರಿ ಮೊಬೈಲ್ ಟಚ್!

   2019ರಲ್ಲಿ ನಡೆಸಿದ ಸರ್ವೇ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಸರಿಸುಮಾರು 2,617 ಬಾರಿ ತಮ್ಮ ಟಚ್ ಸ್ಕ್ರೀನ್ ಮೊಬೈಲ್ ನ್ನು ಬಳಕೆ ಮಾಡುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಇದರಿಂದ ಶೌಚಾಲಯಕ್ಕಿಂತ ಶೇ.10ರಷ್ಟು ಬ್ಯಾಕ್ಟಿರಿಯಾ ಮೊಬೈಲ್ ಫೋನ್ ನಿಂದ ಹರಡುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

   ಸ್ಮಾರ್ಟ್ ಫೋನ್ ಗಳನ್ನು ಶುದ್ಧಗೊಳಿಸುವುದು ಉತ್ತಮ

   ಸ್ಮಾರ್ಟ್ ಫೋನ್ ಗಳನ್ನು ಶುದ್ಧಗೊಳಿಸುವುದು ಉತ್ತಮ

   ಆಪಲ್ ಮತ್ತು ಸ್ಯಾಮ್ ಸಂಗ್ ಕಂಪನಿಗಳು ಮೊಬೈಲ್ ಗಳನ್ನು ಹೇಗೆ ಶುದ್ಧಗೊಳಿಸಬೇಕು ಎಂಬುದರ ಬಗ್ಗೆ ಸಲಹೆಯನ್ನು ನೀಡಿವೆ. ಮೊದಲಿಗೆ ನಿಮ್ಮ ಮೊಬೈಲ್‌ ಅನ್ನು ಚಾರ್ಜ್‌ನಿಂದ ತೆಗೆದು ಸ್ವಿಚ್ಡ್ ಆಫ್‌ ಮಾಡಬೇಕು. ಮೊಬೈಲ್ ಕೇಸ್ ಇದ್ದರೆ ಅದನ್ನು ಬಿಚ್ಚಿ, ಫೋನ್‌ ಸ್ಕ್ರೀನ್ ಅನ್ನು ಮೃದುವಾದ ಬಟ್ಟೆಯಿಂದ ಒರೆಸಬೇಕು. ಮೊಬೈಲ್‌ನಲ್ಲಿ ಕೊಳೆ ಎದ್ದು ಕಾಣುತ್ತಿದ್ದರೆ ಸ್ವಲ್ಪ ಸೋಪ್ ನೀರು ಮಾಡಿ, ಅದನ್ನು ಚಿಮುಕಿಸಿ ಅದರಿಂದ ಒರೆಸಬೇಕು, ನಂತರ ಮೃದುವಾದ ಬಟ್ಟೆಯಿಂದ ಒರೆಸಬೇಕು ಎಂದು ಕಂಪನಿಗಳು ತಿಳಿಸಿವೆ.

   ಮೊಬೈಲ್ ಕೇಸ್ ನ್ನು ಕೂಡಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು

   ಮೊಬೈಲ್ ಕೇಸ್ ನ್ನು ಕೂಡಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು

   ಇನ್ನು, ನೀವು ಮೊಬೈಲ್ ಕೇಸ್ ಬಳಕೆ ಮಾಡುತ್ತಿದ್ದರೆ ಅದನ್ನೂ ಕೂಡಾ ಶುಭ್ರವಾಗಿ ನೋಡಿಕೊಳ್ಳಬೇಕು. ಕೇಸ್‌ ಸ್ವಚ್ಛಗೊಳಿಸಲು ಮನೆ ಸ್ವಚ್ಛತೆಗೆ ಬಳಸುವ ಕ್ಲೀನರ್ ಬಳಸಬಹುದು. ನಂತರ ಆ ಕೇಸ್‌ ಮೊಬೈಲ್ ಹಾಕುವ ಮುನ್ನ ಅದರಲ್ಲಿ ಸ್ವಲ್ಪವೂ ತೇವಾಂಶವಿರಬಾರದು.

   ಮೊಬೈಲ್ ಬಳಕೆದಾರರು ಈ ಸೂಚನೆಗಳನ್ನು ಪಾಲಿಸುವುದು ಉತ್ತಮ

   ಮೊಬೈಲ್ ಬಳಕೆದಾರರು ಈ ಸೂಚನೆಗಳನ್ನು ಪಾಲಿಸುವುದು ಉತ್ತಮ

   ನೀವು ನಿರಂತರವಾಗಿ ಫೋನ್‌ ಬಳಸುತ್ತಿದ್ದರೆ ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು ಶುದ್ಧಗೊಳಿಸಬೇಕು. ಫೋನ್‌ ಅನ್ನು ನೇರವಾಗಿ ಕೈಯಿಂದ ಮುಟ್ಟುವುದಕ್ಕಿಂತ ಎರ್ ಪೋಡ್ಸ್, ಬಡ್ಸ್ ಗಳನ್ನು ಬಳಸುವುದು ಒಳ್ಳೆಯದು. ಇವುಗಳನ್ನು ಐಸೋಪ್ರೊಪೈಲ್ ಆಲ್ಕೊಹಾಲ್ ಹಾಕಿ ಸ್ವಚ್ಛ ಕೂಡ ಮಾಡಬಹುದು.

   ಶೌಚಾಲಯಗಳಲ್ಲಿ ಮೊಬೈಲ್ ಬಳಕೆಯಿಂದ ಅಪಾಯ

   ಶೌಚಾಲಯಗಳಲ್ಲಿ ಮೊಬೈಲ್ ಬಳಕೆಯಿಂದ ಅಪಾಯ

   ಇನ್ನು, ಶೌಚಾಲಯಗಳಲ್ಲೂ ಮೊಬೈಲ್ ಬಳಕೆ ಮಾಡುವ ಅಭ್ಯಾಸ ಬಹಳಷ್ಟು ಜನರಲ್ಲಿ ಇರುತ್ತದೆ. ಬ್ಯಾಕ್ಟಿರಿಯಾ ಹರಡಲು ಇದೂ ಕೂಡಾ ಪ್ರಮುಖ ಕಾರಣವಾಗುತ್ತದೆ. ಇದರಿಂದ ಅಪಾಯ ಎದುರಿಸಬೇಕಾಗುತ್ತದೆ ಎಂದು ಸರ್ವೇಯೊಂದು ತಿಳಿಸಿದೆ.

   English summary
   Coronavirus Spread From SmartPhones. Because Virus 9 Days Alive In Smartphones. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X