ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ' ಕಾರಣಕ್ಕಾದರೂ ನೀವು ಕಡ್ಡಾಯವಾಗಿ ಮಾಸ್ಕ್ ಧರಿಸಿ.!

|
Google Oneindia Kannada News

''ಮನೆಯಿಂದ ಆಚೆ ಕಾಲಿಡುವ ಮುನ್ನ ಮಾಸ್ಕ್ ಧರಿಸಿ.. ರಸ್ತೆಯಲ್ಲಿ ಓಡಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ಮುಖಗವಸು ಕಡ್ಡಾಯ'' ಎಂಬ ಸಂದೇಶ ವೈದ್ಯರಿಂದಲೇ ಬಂದಿದೆ. ಮಾಸ್ಕ್ ಇಲ್ಲದೆ ರೋಡಿಗಿಳಿಯುತ್ತಿರುವವರಿಗೆ ಹಲವು ಕಡೆ ದಂಡ ಕೂಡ ವಿಧಿಸಲಾಗುತ್ತಿದೆ.

ಹಾಗಾದ್ರೆ, ಆರೋಗ್ಯದ ದೃಷ್ಟಿಯಿಂದ 'ಮಾಸ್ಕ್' ಅಷ್ಟೊಂದು ಮುಖ್ಯವೇ.? ಎಂಬ ಪ್ರಶ್ನೆ ಕೇಳಿದರೆ.. ಉತ್ತರ 'ಹೌದು'. ಮಾಸ್ಕ್ ಧರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಮಾತ್ರ ಅಲ್ಲ.. ಬೇರೊಬ್ಬರ ಆರೋಗ್ಯಕ್ಕೂ ಒಳಿತು.!

ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

ಕಲುಷಿತ ಗಾಳಿ, ವೈರಾಣುಗಳಿಂದ ರಕ್ಷಿಸಿಕೊಳ್ಳಲು ನಾವು ಮಾಸ್ಕ್ ಧರಿಸಬಹುದು. ಹಾಗೇ, ನಾವು ಕೆಮ್ಮಿದಾಗ ಅಥವಾ ಸೀನಿದಾಗ ಇತರರಿಗೆ ಸೋಂಕು ತಾಗದಂತೆ ತಡೆಯಲೂ ಮಾಸ್ಕ್ ಅತ್ಯವಶ್ಯಕ.

ಮಾಸ್ಕ್ ಧರಿಸುವುದರಿಂದ ಸೋಂಕು ಹರಡುವ ಮೂಲಕ್ಕೆ ನಾವು ಕಡಿವಾಣ ಹಾಕಿದರೆ, ಕೋವಿಡ್-19 ಖಂಡಿತ ನಿಯಂತ್ರಣಕ್ಕೆ ಬರುತ್ತದೆ.!

ಮಾಸ್ಕ್ ಉಪಕಾರಿ

ಮಾಸ್ಕ್ ಉಪಕಾರಿ

ನಾವು ಮಾತನಾಡುವಾಗ, ಕೆಮ್ಮುವಾಗ, ಸೀನುವಾಗ.. ಹನಿಗಳ ಮೂಲಕ ವೈರಾಣುಗಳು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಆಗ, ಹತ್ತರದಲ್ಲಿ ಇದ್ದವರಿಗೆ ಸೋಂಕು ತಗಲುತ್ತದೆ. ಇದನ್ನ ತಪ್ಪಿಸಲು 'ಮಾಸ್ಕ್' ಉಪಕಾರಿಯಾಗುತ್ತದೆ. ಅದರಲ್ಲೂ, ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅನಿವಾರ್ಯ.

ಕಾಟನ್ ಮಾಸ್ಕ್ ಕೂಡ ಉಪಯುಕ್ತ

ಕಾಟನ್ ಮಾಸ್ಕ್ ಕೂಡ ಉಪಯುಕ್ತ

ಕಾಟನ್ ಬಟ್ಟೆಯಿಂದ ತಯಾರಾದ ಮಾಸ್ಕ್ ಕೂಡ ನಮ್ಮ ಬಾಯಿಯಿಂದ ಹೊರಸೂಸುವ ವೈರಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಇದರಿಂದ ಮಾಸ್ಕ್ ಧರಿಸಿದವರಿಗೂ ಮತ್ತು ಇತರ ಆರೋಗ್ಯಕ್ಕೂ ಉತ್ತಮ ಅಲ್ಲವೇ.?!

ಅಧ್ಯಯನ: ತಮ್ಮ ಆರೋಗ್ಯಕ್ಕಿಂತ ಪ್ರೀತಿಪಾತ್ರರ ಆರೋಗ್ಯದ ಮೇಲೆ ಜನರು ಚಿಂತಾಕ್ರಾಂತ!ಅಧ್ಯಯನ: ತಮ್ಮ ಆರೋಗ್ಯಕ್ಕಿಂತ ಪ್ರೀತಿಪಾತ್ರರ ಆರೋಗ್ಯದ ಮೇಲೆ ಜನರು ಚಿಂತಾಕ್ರಾಂತ!

ಕೊರೊನಾಗೆ ಬ್ರೇಕ್ ಹಾಕಲು ಸಾಧ್ಯ

ಕೊರೊನಾಗೆ ಬ್ರೇಕ್ ಹಾಕಲು ಸಾಧ್ಯ

ರೋಗ ಲಕ್ಷಣ ಕಾಣಿಸಿಕೊಳ್ಳದೇ ಇದ್ದರೂ, ಹಲವರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಹೀಗಾಗಿ, ತಮಗೆ ಅರಿವಿಲ್ಲದೆ ಹಲವರು ಸೋಂಕನ್ನು ಹರಡುತ್ತಿರಬಹುದು. ಆದ್ದರಿಂದ, ಎಲ್ಲರೂ ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಗೆ ಕಡಿವಾಣ ಹಾಕಬಹುದು. ಹೆಚ್ಚು ಜನರು ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವಿಕೆಗೆ ಬ್ರೇಕ್ ಹಾಕಲು ಸಾಧ್ಯ.

ನೀವೆಲ್ಲ ಗಮನಿಸಬೇಕಾದ ಅಂಶ

ನೀವೆಲ್ಲ ಗಮನಿಸಬೇಕಾದ ಅಂಶ

ಹಲವು ದೇಶಗಳಲ್ಲಿ ಈಗಾಗಲೇ 80% ರಷ್ಟು ಜನಸಂಖ್ಯೆ ಮಾಸ್ಕ್ ಬಳಕೆ ಮಾಡುತ್ತಿದೆ. ಹಾಂಗ್ ಕಾಂಗ್ ಸೇರಿದಂತೆ ಹಲವೆಡೆ ಮಾಸ್ಕ್ ಧರಿಸದವರಿಗೆ ಅಂಗಡಿಗಳ ಒಳಗೆ ಪ್ರವೇಶ ನೀಡುತ್ತಿಲ್ಲ. ಇಸ್ರೇಲ್, ಸಿಂಗಾಪೂರ್, ಜೆಕ್ ರಿಪಬ್ಲಿಕ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದೇ ಕಾರಣದಿಂದ ಈ ಎಲ್ಲಾ ದೇಶಗಳಲ್ಲೂ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ಜಾಸ್ತಿಯಿಲ್ಲ.

ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ, ಮರುಬಳಕೆ ಮಾಡುವುದು ಹೇಗೆ?ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಸ್ವಚ್ಛಗೊಳಿಸಿ, ಮರುಬಳಕೆ ಮಾಡುವುದು ಹೇಗೆ?

ಆರೋಗ್ಯದ ಮೇಲೆ ಕಾಳಜಿ ಇರಲಿ

ಆರೋಗ್ಯದ ಮೇಲೆ ಕಾಳಜಿ ಇರಲಿ

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತದೋ, ಗೊತ್ತಿಲ್ಲ. ಲಸಿಕೆ ಬರುವವರೆಗೂ ನಮ್ಮನ್ನ ನಾವು ಕಾಪಾಡಿಕೊಳ್ಳಲು, ನಮ್ಮ ಪ್ರೀತಿಪಾತ್ರರನ್ನು, ಆತ್ಮೀಯರನ್ನು ರಕ್ಷಿಸುವ ಕಾರಣಕ್ಕಾದರೂ ಮಾಸ್ಕ್ ಹಾಕಿಕೊಳ್ಳಲೇಬೇಕು. ಎಲ್ಲರೂ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡರೆ ಮಾರಣಾಂತಿಕ ಕೊರೊನಾ ವೈರಸ್ ಅನ್ನು ಕೊಂದ ಹಾಗೇ ಲೆಕ್ಕ.!

English summary
Coronavirus Scare: Why it is important to wear a Mask?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X