ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಸುಳ್ಳು ಸುದ್ದಿ ನಂಬುವ ಮುನ್ನ ಇದು ನಿಮಗೆ ತಿಳಿದಿರಲಿ

|
Google Oneindia Kannada News

ಮಾರಕ ಕೊರೊನಾ ವೈರಸ್ ಚೀನಾದಲ್ಲಿ ಈಗಾಗಲೇ ಸುಮಾರು 170 ಮಂದಿಯ ಜೀವ ಬಲಿಪಡೆದುಕೊಂಡಿದೆ. ಕೊರೊನಾವೈರಸ್‌ನ ಮೂಲ ಎನ್ನಲಾದ ವುಹಾನ್ ನಗರದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಕೇರಳದ ವಿದ್ಯಾರ್ಥಿನಿಯೊಬ್ಬರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅದರ ಬೆನ್ನಲ್ಲೇ ತ್ರಿಪುರಾದ 23 ವರ್ದ ವ್ಯಕ್ತಿಯೊಬ್ಬರು ಮಲೇಷ್ಯಾ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದು, ಅದಕ್ಕೆ ಕೊರೊನಾ ವೈರಸ್ ಕಾರಣ ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಹೊರ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಮತ್ತು ಇತರರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು? ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಈ ನಡುವೆ ಕೊರೊನಾ ವೈರಸ್ ಕುರಿತು ಅನೇಕ ಮಿಥ್ಯೆಗಳು ಹರಿದಾಡುತ್ತಿವೆ. ಕೊರೊನಾ ವೈರಸ್‌ ಒಂದು ಜೈವಿಕ ಯುದ್ಧ. ಉದ್ದೇಶಪೂರ್ವಕವಾಗಿಯೇ ಈ ವೈರಸ್ ತಯಾರಿಸಿ ಹರಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಕುರಿತು ತಪ್ಪು ಮಾಹಿತಿಗಳು ಕೂಡ ಪ್ರಸಾರವಾಗುತ್ತಿವೆ. ಅವುಗಳ ಕುರಿತು ನೀವು ತಿಳಿದಿರಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

ಸುಳ್ಳು ಜಾಹೀರಾತು ವಿಡಿಯೋಗಳು

ಸುಳ್ಳು ಜಾಹೀರಾತು ವಿಡಿಯೋಗಳು

ಕೆಎಫ್‌ಸಿ ಮತ್ತು ಎಲೆವಿಟ್ ವಿಟಮಿನ್ಸ್ ಸೇರಿದಂತೆ ಯೂಟ್ಯೂಬ್‌ನ ವಿವಿಧ ಜಾಹೀರಾತು ವಿಡಿಯೋಗಳಲ್ಲಿ ಕೊರೊನಾ ವೈರಸ್ ಚೀನಾವನ್ನು ಗುರಿಯಾಗಿರಿಸಿಕೊಂಡಿರುವ ಜೈವಿಕ ಆಯುಧ ಎಂದು ಬಿಂಬಿಸಿತ್ತು. ಈ ವಿಡಿಯೋಗಳನ್ನು ಗೂಗಲ್ ತೆಗೆದುಹಾಕಿದೆ.

ಕೊರೊನಾ ವೈರಸ್ ವೇಗವಾಗಿ ಹರಡುತ್ತಿದ್ದು, ಅದರ ಬಗ್ಗೆ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣ ಅಥವಾ ಯಾವುದೇ ವೇದಿಕೆಯಲ್ಲಿ ಅದರ ಕುರಿತಾದ ಯಾವುದೇ ಅಂಶ ಹಂಚಿಕೊಂಡರೂ ಅದು ಕೂಡ ಸೋಂಕಿನಂತೆಯೇ ವೇಗವಾಗಿ ಹರಡುತ್ತದೆ. ಸೋಂಕಿನ ಕುರಿತು ಮಾಹಿತಿಗಿಂತಲೂ ತಪ್ಪು ಮಾಹಿತಿಗಳೇ ಪ್ರಸಾರವಾಗುತ್ತಿವೆ. ಈ ರೀತಿಯ ಸುಳ್ಳು ಮಾಹಿತಿಗಳು ಜನರನ್ನು ಮತ್ತಷ್ಟು ಕಳವಳಕ್ಕೀಡುಮಾಡುತ್ತವೆ.

ಆಸ್ಟ್ರೇಲಿಯಾದಲ್ಲಿ ಹರಡಿದ ಭೀತಿ

ಆಸ್ಟ್ರೇಲಿಯಾದಲ್ಲಿ ಹರಡಿದ ಭೀತಿ

ಚೀನಾದಿಂದ ಆಮದಾದ ಕುಕ್ಕೀಸ್‌ ಮತ್ತು ವಾಗ್ಯು ಬೀಫ್‌ ಖಾದ್ಯಗಳು ಕೊರೊನಾ ವೈರಸ್‌ನಿಂದ ಕಲುಷಿತವಾಗಿವೆ ಎಂದು ಆಸ್ಟ್ರೇಲಿಯಾದ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡುವ ಪೋಸ್ಟ್‌ಗಳು ಈ ವಾರದ ಆರಂಭದಲ್ಲಿ ವೈರಲ್ ಆಗಿದ್ದವು. ಬ್ಯೂರೋ ಆಫ್ ಡಿಸೀಸಾಲಜಿ ಪರ್ರಮಟ್ಟಾ ಸಂಸ್ಥೆಯು ಸಿಡ್ನಿಯ ರೈಲು ನಿಲ್ದಾಣಗಳಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವ ಪ್ರಕರಣಗಳನ್ನು ಪತ್ತೆಹಚ್ಚಿದೆ ಎಂದೂ ಹೇಳಲಾಗಿತ್ತು. ವಾಸ್ತವವಾಗಿ ಈ ಹೆಸರಿನ ಸಂಸ್ಥೆಯೇ ಅಸ್ತಿತ್ವದಲ್ಲಿ ಇಲ್ಲ.

ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!

ಬಿಲ್ ಗೇಟ್ಸ್ ಸಂಚು ಎಂಬ ವದಂತಿ

ಬಿಲ್ ಗೇಟ್ಸ್ ಸಂಚು ಎಂಬ ವದಂತಿ

ಫೇಸ್‌ಬುಕ್ ಹಾಗೂ ಮತ್ತಿತರ ತಾಣಗಳಲ್ಲಿ ಇನ್ನೊಂದು ಸಂಚಿನ ಸಿದ್ಧಾಂತ ಕೂಡ ಹರಿದಾಡುತ್ತಿದೆ. ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್, ಹಲವು ತಿಂಗಳ ಹಿಂದೆಯೇ ಕೊರೊನಾ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದರು. ಅದರ ಮೇಲೆ 'ಹಕ್ಕುಸ್ವಾಮ್ಯ' ಹೊಂದುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ರೀತಿ ಸುದ್ದಿಗಳನ್ನು ಹರಡಿದ ಪೋಸ್ಟ್‌ಗಳನ್ನು ಫೇಸ್‌ಬುಕ್ ಅಳಿಸಿಹಾಕಿದೆ.

ಸಹಜವಾದ ಶೀತ, ಜಠರ ಕರುಳಿನ ಸೋಂಕು ಮುಂತಾದ ಅಸ್ವಸ್ಥತೆಗಳಿಗೆ ಕಾರಣವಾಗುವ ದೊಡ್ಡ ಪ್ರಮಾಣದ ವೈರಸ್ ಗುಂಪುಗಳು ಮತ್ತು ಇತ್ತೀಚಿನ ಸಾರ್ಸ್ ಹಾಗೂ ಮರ್ಸ್ ಮುಂತಾದ ಕಾಯಿಲೆಗಳೂ ಇದೇ ರೀತಿಯ ಲಕ್ಷಣಗಳನ್ನು ಹೊಂದಿದ್ದವು.

ಜೈವಿಕ ಆಯುಧ ದಾಳಿ ಎಂಬ ಸುಳ್ಳು

ಜೈವಿಕ ಆಯುಧ ದಾಳಿ ಎಂಬ ಸುಳ್ಳು

ಕೊರೊನಾ ವೈರಸ್ ಒಂದು ಜೈವಿಕ ಶಸ್ತ್ರ ಎಂಬ ವದಂತಿ ಕೂಡ ಹಬ್ಬಿದೆ. ದೇಶದ ಜನಸಂಖ್ಯೆಯ ಗಾತ್ರವನ್ನು ತಗ್ಗಿಸುವ ಸಲುವಾಗಿ ಚೀನಾ ಸರ್ಕಾರವೇ ಈ ಕೊರೊನಾ ವೈರಸ್‌ಅನ್ನು ಹುಟ್ಟುಹಾಕಿದೆ ಎಂದು ಟಿಕ್‌ಟಾಕ್‌ನ ವಿಡಿಯೋದಲ್ಲಿ ಕೂಡ ಪ್ರಚಾರ ಮಾಡಲಾಗಿದೆ. ಸರ್ಕಾರ ಅಥವಾ ಚೀನಾ ಮೇಲೆ ದ್ವೇಷವುಳ್ಳವರು ತಮ್ಮ ಸಂಚಿನ ಭಾಗವಾಗಿ ಇದನ್ನು ಸೃಷ್ಟಿ ಮಾಡಿದ್ದಾರೆ ಎಂದು ಹಬ್ಬಿಸಲಾಗಿದೆ. ಇದೇ ರೀತಿಯ ವದಂತಿ ಎಬೋಲಾ ವೈರಸ್ ವಿಚಾರದಲ್ಲಿಯೂ ಹರಡಿತ್ತು. ಯೂಟ್ಯೂಬ್‌ನಲ್ಲಿಯೂ ಕೊರೊನಾ ವೈರಸ್ ಜೈವಿಕ ಆಯುಧ ಎಂದು ಪ್ರತಿಪಾದಿಸುವ ವಿಡಿಯೋಗಳು ವ್ಯಾಪಕವಾಗಿದ್ದವು. ಅವುಗಳನ್ನು ಯೂಟ್ಯೂಬ್ ಅಳಿಸಿಹಾಕಿದೆ.

ಹೀಗೆ ವೈರಸ್ ತಡೆಯಲು ಸಾಧ್ಯವೇ?

ಹೀಗೆ ವೈರಸ್ ತಡೆಯಲು ಸಾಧ್ಯವೇ?

ಕೊರೊನಾ ವೈರಸ್ ಹುಟ್ಟು, ಅದರ ಹರಡುವಿಕೆ, ಲಕ್ಷಗಳು ಮತ್ತು ಅದಕ್ಕೆ ಇರುವ ಮದ್ದಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೇ ಹೊಸ ಸಂಶೋಧನಾ ವರದಿಗಳು ಪ್ರಕಟವಾಗುತ್ತಿವೆ! ಮಾಸ್ಕ್‌ಗಳು ಮತ್ತು ಇತರೆ ಸುರಕ್ಷತಾ ಕ್ರಮಗಳ ಬಗ್ಗೆ ಅನೇಕರು ಸಲಹೆಗಳನ್ನು ನೀಡುತ್ತಿದ್ದಾರೆ. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಕೊರೊನಾ ವೈರಸ್ ಸೋಂಕು ತಗುಲುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಲಹೆ ನೀಡಲಾಗಿದೆ. ಆದರೆ ಇದನ್ನು ಯಾವುದೇ ವೈದ್ಯಕೀಯ ಸಂಸ್ಥೆಗಳು ಅನುಮೋದಿಸಿಲ್ಲ.

ಇನ್ನು ಕೆಲವರು ಮತ್ತಷ್ಟು ಅಪಾಯಕಾರಿ ಸಲಹೆಗಳನ್ನು ನೀಡುತ್ತಿದ್ದಾರೆ. ಸೋಂಕುಗಳನ್ನು ಸಾಯಿಸುವ ಶಕ್ತಿಯುಳ್ಳ ಬ್ಲೀಚ್‌ಅನ್ನು ಕುಡಿಯುವಂತೆ ಕೆಲವರು ಹೇಳುತ್ತಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿಯೇ ಜನರ ದಾರಿ ತಪ್ಪಿಸುವ ಹಾಗೂ ಅವರಿಗೆ ಹಾನಿ ಮಾಡುವ ಸಲುವಾಗಿ ಮಾಡಿರುವ ಸಂಚು ಎನ್ನಲಾಗಿದೆ.

ಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾ

ಸಾಮಾಜಿಕ ಜಾಲತಾಣದ ಮಾಹಿತಿ ನಂಬದಿರಿ

ಸಾಮಾಜಿಕ ಜಾಲತಾಣದ ಮಾಹಿತಿ ನಂಬದಿರಿ

ಹೀಗಾಗಿ ಕೊರೊನಾ ವೈರಸ್ ಅಥವಾ ಇತರೆ ಯಾವುದೇ ರೋಗ ಹಾಗೂ ಸೋಂಕಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವ ಮಾಹಿತಿಗಳನ್ನು ಒಮ್ಮೆಲೆ ನಂಬಬೇಡಿ ಹಾಗೂ ರೋಗದಿಂದ ಮುಕ್ತರಾಗಲು ವೈದ್ಯರ ಸಲಹೆ ಸೂಚನೆ ಇಲ್ಲದೆ ಸ್ವಯಂ ಔಷಧ ಮತ್ತು ಸಾಮಾಜಿಕ ಜಾಲತಾಣ ಪ್ರೇರಿತ ಕ್ರಮಗಳನ್ನು ಅನುಸರಿಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಂಬಲರ್ಹ ಮಾಧ್ಯಮಗಳು ಮತ್ತು ಸರ್ಕಾರದ ಮೂಲಗಳಿಂದ ಲಭ್ಯವಾಗುವ ಮಾಹಿತಿಗಳನ್ನು ಮಾತ್ರ ಪರಿಗಣಿಸಲು ಸೂಚಿಸಲಾಗಿದೆ.

English summary
Misinformation and fake news related to Coronavirus is being spreaded all over social media. People need to be careful on these things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X