ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಭೀತಿ: ಭಾರತಕ್ಕೆ ಭೇಷ್ ಎಂದಿದ್ದೇಕೆ WHO?

|
Google Oneindia Kannada News

ನವದೆಹಲಿ, ಮೇ.20: ಜಗತ್ತಿಗೆ ವ್ಯಾಪಿಸಿದ ನೊವೆಲ್ ಕೊರೊನಾವೈರಸ್ ಸೋಂಕು ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ಭಾರತ ದಿ ಬೆಸ್ಟ್ ಎನಿಸಿದೆ. ಕೊವಿಡ್-19 ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣದಲ್ಲಿ ಇಂಡಿಯಾ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಬುಧವಾರದ ಅಂಕಿ-ಅಂಶಗಳ ಪ್ರಕಾರ 1,06,468 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 3,301 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 42,307 ಸೋಂಕಿತರು ಗುಣಮುಖರಾಗಿದ್ದರೆ 60,854 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಕೊರೊನಾ ವೈರಸ್ ನಿಂದ ಗುಣಮುಖರಾಗುವುದು ಹೇಗೆ? ಇಲ್ಲಿದೆ ಉದಾಹರಣೆಕೊರೊನಾ ವೈರಸ್ ನಿಂದ ಗುಣಮುಖರಾಗುವುದು ಹೇಗೆ? ಇಲ್ಲಿದೆ ಉದಾಹರಣೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದರೂ ಸಾವಿನ ಪ್ರಮಾಣಕ್ಕಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಯಾವ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ನಿಂದ ಅದೆಷ್ಟು ಪ್ರಮಾಣದಲ್ಲಿ ಜನರು ಬಲಿಯಾಗಿದ್ದಾರೆ. ಒಂದು ಲಕ್ಷದಲ್ಲಿ ಶೇಕಡಾವಾರು ಪ್ರಮಾಣದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ದಿ ಬೆಸ್ಟ್ ಎನಿಸಿಕೊಂಡಿದೆ.

ಒಂದು ಲಕ್ಷಕ್ಕೆ ಶೇ.4.1 ಜನರು ಕೊರೊನಾದಿಂದ ಸಾವು

ಒಂದು ಲಕ್ಷಕ್ಕೆ ಶೇ.4.1 ಜನರು ಕೊರೊನಾದಿಂದ ಸಾವು

ಜಾಗತಿಕ ಮಟ್ಟದಲ್ಲಿ 4,946,171 ಜನರಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿದ್ದು, ಕಳೆದ 24 ಗಂಟೆಗಳಲ್ಲೇ 58,047 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ವಿಶ್ವದ ಜನಸಂಖ್ಯೆಯಲ್ಲಿ ಪ್ರತಿ ಒಂದು ಲಕ್ಷಕ್ಕೆ ಶೇ.4.1ರಷ್ಟು ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಜಗತ್ತಿನಲ್ಲಿ ಇದುವರೆಗೂ ಮಹಾಮಾರಿಗೆ 322,579 ಜನರು ಕೊವಿಡ್-19ಗೆ ಬಲಿಯಾಗಿದ್ದಾರೆ.

ಕೊರೊನಾಗೆ ಕಡಿವಾಣ ಹಾಕುವಲ್ಲಿ ಭಾರತವೇ ಬೆಸ್ಟ್

ಕೊರೊನಾಗೆ ಕಡಿವಾಣ ಹಾಕುವಲ್ಲಿ ಭಾರತವೇ ಬೆಸ್ಟ್

ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಮಹಾಮಾರಿಯ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಭಾರತವೇ ಬೆಸ್ಟ್ ಎನಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಹಿಡಿತ ಕಾಯ್ದುಕೊಂಡಿದ್ದು, ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ವೈರಸ್ ಸೋಂಕಿತರಿಗೆಲ್ಲ ಸಾವು ಖಚಿತವಲ್ಲ ಎಂದು ಜಗತ್ತಿನ ಎದುರು ಭಾರತವು ಸಾಧಿಸಿ ತೋರಿಸಿದೆ.

ವಂಡರ್ ಫುಲ್ ವರದಿ: ಕೊರೊನಾಗೆ ಬಲಿ ಆದವರಿಗಿಂತ ಸಾವು ಗೆದ್ದವರೇ ಹೆಚ್ಚು!ವಂಡರ್ ಫುಲ್ ವರದಿ: ಕೊರೊನಾಗೆ ಬಲಿ ಆದವರಿಗಿಂತ ಸಾವು ಗೆದ್ದವರೇ ಹೆಚ್ಚು!

ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸಲಿಲ್ಲ ಭಾರತ

ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸಲಿಲ್ಲ ಭಾರತ

ಚೀನಾ, ಅಮೆರಿಕಾ, ಇಟಲಿ, ಇಂಗ್ಲೆಂಡ್ ನಂತ ದೈತ್ಯ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ಭಾರತ ಸರ್ಕಾರ ಮುನ್ನೆಚ್ಚರಿಕೆ ವಹಿಸಿತು. ಜನವರಿ ಮೊದಲ ವಾರದಿಂದಲೇ ಲ್ಯಾಬೋರೇಟರಿಗಳಲ್ಲಿ ಸೋಂಕಿತ ಲಕ್ಷಣ ಕಂಡು ಬಂದವರ ತಪಾಸಣೆ ಆರಂಭಿಸಲಾಯಿತು. ಎರಡು ತಿಂಗಳಿನಲ್ಲೇ ದೇಶದಲ್ಲಿ ಕೊರೊನಾ ವೈರಸ್ ತಪಾಸಣೆಗೆ ಸರ್ಕಾರಿ ಲ್ಯಾಬ್ ಗಳ ಸಂಖ್ಯೆಯನ್ನು 385ಕ್ಕೆ ಏರಿಕೆ ಮಾಡಲಾಯಿತು. 158 ಖಾಸಗಿ ಲ್ಯಾಬ್ ಗಳಲ್ಲೂ ಕೊವಿಡ್-19 ತಪಾಸಣೆ ನಡೆಸಲಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಲ್ಯಾಬ್ ಗಳಲ್ಲಿ ಸೋಂಕಿತರ ರಕ್ತ ಹಾಗೂ ಗಂಟಲು ಮಾದರಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಯಿತು.

ದೇಶದಲ್ಲಿ 24 ಲಕ್ಷ ಜನರಿಗೆ ಕೊರೊನಾ ವೈರಸ್ ಟೆಸ್ಟ್

ದೇಶದಲ್ಲಿ 24 ಲಕ್ಷ ಜನರಿಗೆ ಕೊರೊನಾ ವೈರಸ್ ಟೆಸ್ಟ್

ಕಳೆದ ಜನವರಿಯಿಂದ ಮೇ.19 ಮಧ್ಯಾಹ್ನದ ವೇಳೆಯ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಈವರೆಗೂ 24,25,742 ಜನರಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲೇ 1,08,233 ಜನರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ತಪಾಸಣೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲೇ ದೇಶದಲ್ಲಿ 3,607 ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, 60 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೊರೊನಾ ಕೀಚಕ: ಸಾವಿನ ಸುರುಳಿ ಸುತ್ತಿಕೊಂಡ ಟಾಪ್-10 ರಾಷ್ಟ್ರಗಳುಕೊರೊನಾ ಕೀಚಕ: ಸಾವಿನ ಸುರುಳಿ ಸುತ್ತಿಕೊಂಡ ಟಾಪ್-10 ರಾಷ್ಟ್ರಗಳು

ದೇಶದಲ್ಲಿ 1 ಲಕ್ಷಕ್ಕೆ ಶೇ.0.2ರಷ್ಟು ಜನ ಕೊರೊನಾಗೆ ಬಲಿ

ದೇಶದಲ್ಲಿ 1 ಲಕ್ಷಕ್ಕೆ ಶೇ.0.2ರಷ್ಟು ಜನ ಕೊರೊನಾಗೆ ಬಲಿ

ಕೊರೊನಾ ವೈರಸ್ ಸೋಂಕಿನಿಂದ ಭಾರತದಲ್ಲಿ ಮೃತಪಟ್ಟವರ ಸಂಖ್ಯೆಯು ಬೇರೆ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ತೀರಾ ಕಡಿಮೆಯಾಗಿದೆ. ಒಂದು ಲಕ್ಷ ಜನಸಂಖ್ಯೆಯಲ್ಲಿ ಶೇ.0.2ರಷ್ಟು ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ ಎಂದು WHO ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನು, ದೇಶದಲ್ಲಿ ಇದುವರೆಗೂ 3,163 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಶೇ.38.73ರಷ್ಟು ಸೋಂಕಿತರು ಗುಣಮುಖ

ಭಾರತದಲ್ಲಿ ಶೇ.38.73ರಷ್ಟು ಸೋಂಕಿತರು ಗುಣಮುಖ

ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರಿಗಿಂತಲೂ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,350 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೂ ದೇಶದಲ್ಲಿ 37,174 ಜನರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಶೇ.38.73ರಷ್ಟು ಕೊರೊನಾ ವೈರಸ್ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 58,802 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಪೈಕಿ ಶೇ.2.9ರಷ್ಟು ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಲ್ಜಿಯಂನಲ್ಲಿ 1 ಲಕ್ಷಕ್ಕೆ ಶೇ.79.3ರಷ್ಟು ಮಂದಿಗೆ ಸಾವು

ಬೆಲ್ಜಿಯಂನಲ್ಲಿ 1 ಲಕ್ಷಕ್ಕೆ ಶೇ.79.3ರಷ್ಟು ಮಂದಿಗೆ ಸಾವು

ವಿಶ್ವದಲ್ಲೇ ಬೆಲ್ಜಿಯಂನಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಮರಣ ಪ್ರಮಾಣ ಸಂಖ್ಯೆ ಹೆಚ್ಚಾಗಿದೆ. ಒಟ್ಟು 55,791 ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಬೆಲ್ಜಿಯಂ ರಾಷ್ಟ್ರದ ಜನಸಂಖ್ಯೆಯಲ್ಲಿ ಪ್ರತಿ ಒಂದು ಲಕ್ಷಕ್ಕೆ ಶೇ.79.3ರಷ್ಟು ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೂ 9,052 ಜನರು ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದಾರೆ ಎಂದು WHO ಅಂಕಿ-ಅಂಶಗಳು ತಿಳಿಸಿವೆ.

ಕೊವಿಡ್-19 ದಾಳಿಗೆ ಸಿಕ್ಕು ನಲುಗಿದ ಸ್ಪೇನ್ ರಾಷ್ಟ್ರ

ಕೊವಿಡ್-19 ದಾಳಿಗೆ ಸಿಕ್ಕು ನಲುಗಿದ ಸ್ಪೇನ್ ರಾಷ್ಟ್ರ

ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಸ್ಪೇನ್ ಸಿಕ್ಕು ನಲುಗಿದೆ. 2,78,188 ಮಂದಿ ಸೋಂಕಿತರನ್ನು ಹೊಂದಿರುವ ರಾಷ್ಟ್ರದ ಜನಸಂಖ್ಯೆಯಲ್ಲಿ ಪ್ರತಿ ಲಕ್ಷದ ಶೇ.59.2ರಷ್ಟು ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ. ಸ್ಪೇನ್ ನಲ್ಲಿ ಇದುವರೆಗೂ 27,650 ಜನ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಇಂಗ್ಲೆಂಡ್, ಇಟಲಿ ರಾಷ್ಟ್ರಗಳ ನಡುವೆ ವ್ಯತ್ಯಾಸವಿಲ್ಲ

ಇಂಗ್ಲೆಂಡ್, ಇಟಲಿ ರಾಷ್ಟ್ರಗಳ ನಡುವೆ ವ್ಯತ್ಯಾಸವಿಲ್ಲ

ಕೊವಿಡ್-19 ಸೋಂಕು ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಇಂಗ್ಲೆಂಡ್ ಮತ್ತು ಇಟಲಿ ರಾಷ್ಟ್ರಗಳು ಆರಂಭದಲ್ಲೇ ಎಡವಿದ್ದವು. ಅದರ ಪ್ರಭಾವದಿಂದ ಎರಡೂ ರಾಷ್ಟ್ರಗಳದ್ದೂ ಇಂದು ಒಂದೇ ಕಥೆಯಾಗಿದೆ. ಇಟಲಿಯ ಜನಸಂಖ್ಯೆಯ ಪ್ರತಿ ಲಕ್ಷದಲ್ಲಿ ಶೇ.52.8ರಷ್ಟು ಮಂದಿ ಅಂದರೆ 31,908 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇನ್ನು, ಇಂಗ್ಲೆಂಡ್ ಜನಸಂಖ್ಯೆಯಲ್ಲಿ ಪ್ರತಿ ಒಂದು ಲಕ್ಷದ ಶೇ.52.1ರಷ್ಟು ಅಂದರೆ 34,636 ಮಂದಿ ಕೊವಿಡ್-19 ನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾಗೆ ಸಿಕ್ಕು ನಲುಗಿದ ವಿಶ್ವದ ದೊಡ್ಡಣ್ಣ

ಕೊರೊನಾಗೆ ಸಿಕ್ಕು ನಲುಗಿದ ವಿಶ್ವದ ದೊಡ್ಡಣ್ಣ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಎಂಬ ದೈತ್ಯ ರಾಷ್ಟ್ರ ನೊವೆಲ್ ಕೊರೊನಾ ವೈರಸ್ ದಾಳಿಗೆ ಸಿಕ್ಕು ಹೈರಾಣಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಶೇಕಡಾವಾರು ಮರಣ ಪ್ರಮಾಣ ಶೇ.26.6ರಷ್ಟಿದೆ. ಅಂದರೆ ಅಮೆರಿಕಾದ ಜನಸಂಖ್ಯೆಯ ಪ್ರತಿ ಒಂದು ಲಕ್ಷದಲ್ಲಿ ಶೇ.26.6ರಷ್ಟು ಜನರು ಅಂದರೆ 87,180 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಚೀನಾದಲ್ಲಿ ಕಂಟ್ರೋಲ್ ಗೆ ಬಂತಾ ಕೊರೊನಾ ವೈರಸ್?

ಚೀನಾದಲ್ಲಿ ಕಂಟ್ರೋಲ್ ಗೆ ಬಂತಾ ಕೊರೊನಾ ವೈರಸ್?

ನೊವೆಲ್ ಕೊರೊನಾ ವೈರಸ್ ಸೋಂಕಿನ ಮಾತೃಭೂಮಿ ಎಂದೇ ಕರೆಸಿಕೊಳ್ಳುತ್ತಿರುವ ಚೀನಾದಲ್ಲಿ ಮಹಾಮಾರಿ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆ. ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊವಿಡ್-19 ಚೀನಾದಲ್ಲಿ ಮಾತ್ರ ಸೈಲೆಂಟ್ ಆಗಿ ಬಿಟ್ಟಿದೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಶೇಕಡಾವಾರು ಸಂಖ್ಯೆ ಅಚ್ಚರಿ ಮೂಡಿಸುತ್ತಿದೆ.

ಚೀನಾದ ಜನಸಂಖ್ಯೆಯ ಪ್ರತಿ ಒಂದು ಲಕ್ಷದಲ್ಲಿ ಶೇ.0.3ರಷ್ಟು ಅಂದರೆ 4,645 ಮಂದಿ ಮಾತ್ರ ನೊವೆಲ್ ಕೊರೊನಾ ವೈರಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನೀಡಿದ ಅಂಕಿ-ಅಂಶಗಳು ಹೇಳುತ್ತಿವೆ.

English summary
Coronavirus: Low Mortality Rate In India Compared To Other Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X