ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲೀಸ್ ಒಮ್ಮೆ ನನ್ನ ಪತ್ರ ಓದ್ತೀರಾ - ನಿಮ್ಮ ಜಿಮ್ಮಿ

|
Google Oneindia Kannada News

ಆತ್ಮೀಯ ಅನ್ನದಾತರೇ,

ನಿಮಗೆಲ್ಲ ಈ ನಿಮ್ಮ ಜಿಮ್ಮಿ ಮಾಡುವ ನಮಸ್ಕಾರಗಳು. ನೀವೆಲ್ಲ ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಆದ್ರೆ, ನಾವಂತೂ ಕ್ಷೇಮವಾಗಿಲ್ಲ. ಅದಕ್ಕೆ ಕಾರಣ 'ಕೊರೊನಾ'.

ಮೊನ್ನೆ ನಾನು ಬೀದಿ ಬದಿಯಲ್ಲಿ ಕೂತಿದ್ದೆ. ಅದ್ಯಾರೋ ಮೈಕ್ ನಲ್ಲಿ ಏನೋ ಅನೌನ್ಸ್ ಮಾಡ್ತಿದ್ರು. ಮನೆಯಲ್ಲೇ ಇರಿ, ಸೇಫ್ ಆಗಿರಿ ಅಂತ ಕೂಗ್ಕೊಂಡು ಹೋದ್ರು. ಅಷ್ಟೊತ್ತಿಗೆ ಪಕ್ಕದಲ್ಲೇ ನಿಂತಿದ್ದವ್ರು ಅದೇನೋ ಕೊರೊನಾ ಅಂತೆ.. ಅದು ಅಂಟುರೋಗವಂತೆ.. ಹೊರಗಿದ್ದರೆ ನಮ್ಗೂ ಬರುತ್ತಂತೆ.. ಯಾಕ್ಬೇಕು ಅದರ ಸಹವಾಸ.. ಬೇಗ ಮನೆಗೆ ಹೋಗೋಣ ಅಂತ್ಹೇಳಿ ಅಂತ ಮನೆ ಕಡೆ ಹೆಜ್ಜೆ ಹಾಕಿದ್ರು.

ಹಸಿವಿನ ದವಡೆಗೆ ಸಿಲುಕಿರುವ ಬೀದಿ ನಾಯಿಗಳಿಗೆ ಆಹಾರ ಕೊಡಿ ಪ್ಲೀಸ್ಹಸಿವಿನ ದವಡೆಗೆ ಸಿಲುಕಿರುವ ಬೀದಿ ನಾಯಿಗಳಿಗೆ ಆಹಾರ ಕೊಡಿ ಪ್ಲೀಸ್

ಏನೋ ಇರಬೇಕು ಅಂತ ಅಂದುಕೊಂಡು, ನಾನು ಅವರತ್ತ ನೋಡಿ ಸುಮ್ಮನಾದೆ. ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಆದ್ರೆ, ಅವತ್ತು ಹಾಗೆ ಮನೆ ಸೇರಿಕೊಂಡ ನಮ್ಮ ಬೀದಿಯ ಮಂದಿ ಇನ್ನೂ ಹೊರಗೆ ಬಂದಿಲ್ಲ.

Coronavirus Lock Down effect: Request To Humans By Stray Dogs

ಅತ್ತ, ನಮ್ಮ ಬೀದಿ ತುದಿಯಲ್ಲಿ ಇದ್ದ ಮಾಮೂಲಿ ಬೇಕರಿ, ಮಾಂಸದಂಗಡಿ, ಹೋಟೆಲ್, ಬಿಸ್ಕೆಟ್ ಅಂಗಡಿಯವರೂ ಬಾಗಿಲು ಹಾಕಿಬಿಟ್ಟಿದ್ದಾರೆ. ಈಗ ತೆಗೀಬಹುದೇನೋ, ಆಗ ತೆಗೀಬಹುದೇನೋ ಅಂತ ಕಾದು ಕಾದು ಸುಸ್ತಾಯ್ತು. ಇನ್ನೂ ಅಂಗಡಿಗಳು ಓಪನ್ ಆಗಿಲ್ಲ. ಆಗೋ ಲಕ್ಷಣವೂ ಕಾಣ್ತಿಲ್ಲ. ಹೀಗಾದ್ರೆ ಹೇಗೆ?

ದಿನ ಬೆಳಗಾದರೆ, ಬೇಕರಿ ಕಾಕಾ ನನಗೊಂದು ಬನ್ ಕೊಡ್ತಿದ್ರು. ಟೀ ಅಂಗಡಿ ಚಾಚಾ ನೀರು, ಬಿಸ್ಕೆಟ್ಟು ಹಾಕಿದ್ರು. ಮಾಂಸದಂಗಡಿ ಮುಸ್ತಫಾ ಒಂದು ಹಿಡಿ ಮೂಳೆ ಮಾಂಸ ಎಸೀತಿದ್ರು. ಅದನ್ನೆಲ್ಲ ತಿಂದು ಹೇಗೋ ಹೊಟ್ಟೆ ತುಂಬಿಸಿಕೊಳ್ತಿದ್ದೆ. ಆದ್ರೀಗ, ಅವರ್ಯಾರು ಪತ್ತೆನೇ ಇಲ್ಲ. ನಾನು ಆಹಾರ ಕಂಡು ಮೂರು ದಿನ ಆಗಿದೆ.

Coronavirus Lock Down effect: Request To Humans By Stray Dogs

ಬೀದಿ ಬೀದಿ ಬಿಕೋ ಎನ್ನುತ್ತಿವೆ. ಅನ್ನ ಹಾಕ್ತಾರೇನೋ ಅಂತ ಮನೆಗಳ ಗೇಟ್ ಮುಂದೆ ಹೋದ್ರೆ, ಓಡಿಸ್ತಾರೆ. ಹಾಗಾದ್ರೆ, ನಮಗೆ ಯಾರ್ ದಿಕ್ಕು.?

ನೀವೇನೋ ಕೊರೊನಾಗೆ ಹೆದರಿ, ಮನೆ ಬಾಗಿಲು ಹಾಕಿಕೊಂಡ್ರಿ. ನಿಮ್ಮ ಸಂಸಾರದವರನ್ನು ಕಾಪಾಡಿಕೊಂಡ್ರಿ. ಆದ್ರೆ, ನಮಗೆ ಯಾರು ಗತಿ.? ನಮ್ಮ ಮರಿಗಳ ಗೋಳು ಕೇರ್ಳೋರ್ ಯಾರು.? ಕೊರೊನಾ ಬಂದು ಮನುಷ್ಯರೇನೋ ಸಾಯ್ತಿದ್ದಾರಂತೆ. ಕೊರೊನಾ ನಮ್ಮನ್ನ ಬಲಿ ಪಡೆಯುತ್ತಿಲ್ಲ ನಿಜ. ಆದ್ರೆ, ನಮ್ಮ ಅನ್ನ ಕಿತ್ತೊಂಡು ಸಾವಿನತ್ತ ದೂಡುತ್ತಿದೆ.

Coronavirus Lock Down effect: Request To Humans By Stray Dogs

ಕೊರೊನಾದಿಂದ ನೀವು ಸೇಫ್ ಆಗಬೇಕು ನಿಜ. ನೀವಿದ್ದರೆ ನಮಗೂ ಉಳಿವು. ಹಾಗಾಗಿ ನೀವೆಲ್ಲ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಆದ್ರೆ, ನನ್ನಂತೆ ಹಸಿವಿನಿಂದ ಒದ್ದಾಡುತ್ತಿರುವ ನನ್ನ ಅದೆಷ್ಟೋ ಕುಲಬಾಂಧವರು ನಿಮ್ಮ ಬೀದಿ ತುದಿಯಲ್ಲಿ ಕಂಗೆಟ್ಟು ನಿಂತಿದ್ದಾರೆ. ಅವರತ್ತವೂ ಕರುಣೆ ತೋರಿಸಿ.

ನಾವು ನಿಮ್ಮನ್ನು ಬೇಡುವುದಿಷ್ಟೇ.. ತತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ. ಬದುಕಿರೋವರೆಗೂ ನಿಮ್ಮ ಬೀದಿಯನ್ನ ಕಾಯ್ತಿರ್ತೇವೆ. ನಿಮ್ಮಿಂದ ಆಹಾರದ ನಿರೀಕ್ಷೆಯಲ್ಲಿ...

ವಂದನೆಗಳೊಂದಿಗೆ,

- ಇಂತಿ ನಿಮ್ಮ ಜಿಮ್ಮಿ ಮತ್ತು ಬೌಬೌ ಬಳಗ.

English summary
Coronavirus Lock Down effect: Request to Humans by Stray Dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X