ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದ ಕರಿನೆರಳಿನಲ್ಲಿ ಅಪ್ಪನ ನೆನೆಯುತ್ತಾ...

By ಮಹೇಂದ್ರ
|
Google Oneindia Kannada News

ಮಧ್ಯಪ್ರಾಯಸ್ಥ.
ಅಪ್ಪಾ, ಹೆಮ್ಮೆಯಿಂದ ಹೇಳುತ್ತಿರುವೆ. ನನಗೀಗ 46 ವರ್ಷ ವಯಸ್ಸು. ಹೌದು, ಈಗ ನಿಂಗೆಷ್ಟು ವಯಸ್ಸು? ಹಾಗೇ, ಲೋಕಾಭಿರಾಮ, ನಿನ್ನ ವಯಸ್ಸು ಕೇಳಿದೆ. ಸಿಟ್ಟಾಗಿ ಬಡಗಿ ತಗೊಂಡು, ಬೆನ್ನು ಬಾಸುಂಡೆ ಬರೋಂಗ ರೆಪಾರೆಪಾ ಅಂತಾ ಹೊಡೀಬೇಡ. ನನಗಂತೂ ವಯಸ್ಸಾಯ್ತು ನೋಡು. ಅದಕ್ಕಾ, ಚೀರಾಕ ಬರಾಂಗಿಲ್ಲ, ಹೊದ್ರಾಕಂತೂ ಆಗಂಗೂ ಇಲ್ಲ. ನಿನ್ನ ಏಟುಗಳ ಸಬ್ದಾ ದಾಟಿ, ನನ್ನ ಕೂಗು ಯಾರಿಗೂ ಮುಟ್ಟಾಂಗಿಲ್ಲ. ನಾನು, ಚೀರಿದ್ದು ಯಾರಿಗೂ ಕೇಳ್ದೇ, ನಿನ್ನ ಬಡಿಗೆ ಏಟುನಾಗೇ ನಾನೂ ಒಂದೀಟು ಮರೆಯಾಗುತೀನಿ ನೋಡು. ಅದಕ್ಕಾ. ಅಪ್ಪಾ, ನಂಗಂತೂ ವಯಸ್ಸಾಯ್ತು. ಹೊಡೀಬ್ಯಾಡ.

Recommended Video

ಇಂತಹ ಪರಿಸ್ಥಿತಿಯಲ್ಲೂ ಎಂಥ ಜನರಿರ್ತಾರೆ ನೋಡಿ | Oneindia Kannada

"ನನ್ನ ಜೀವಕ್ಕಾಗಿ ಅವರ ಪ್ರಾಣವನ್ನೇ ಪಣಕ್ಕಿಟ್ಟರು..." ಕಣ್ಣೀರಿಟ್ಟ ಕೊರೊನಾ ಗುಣಮುಖ ವ್ಯಕ್ತಿ

ಅದಕ್ಕೇ, ಈ ಪತ್ರ ಬಿರೀತಿದೀನಿ ನೋಡು.
ಒಂದದಿನೈದು ವರ್ಷಾತುನೋಡು, ನಿನ್ನ ಕಂಡೇ ಇಲ್ಲ. ಡೈಲಿ ನಿಂದೇ ಮಾತು, ನಿಂದೇ ನೆಪ್ಪು, ಆಗೊಮ್ಮೆ - ಈಗೊಮ್ಮೆ ಕಣ್ಣಾಗ ಕಣ್ಣಾಗಿ ರೆಪ್ಪೆ ಮರೆಯಾಗೇ ಒದ್ದೆಯಾಗಿ, ಮಸುಕು ಮಸುಕಾಗಿ ಕಾಣತೀ. ಕೈಹಿಡಿದು ಮಾತು ಶುರುವಾಗುವಷ್ಟರಲ್ಲೇ ನೀನಿದ್ದ ಜಾಗ, ಖಾಲಿ ಖಾಲಿ. ನಿನ್ನ ಜೊತೆ ಮಾತಾಡೋ ನನ್ನ ಖಯಾಲಿ ಮಾತ್ರ ಇನ್ನೂ ಕೈಬಿಟ್ಟಿಲ್ಲ ನೋಡು. ಒಂದು ನಿಮಿಷ, ಅವ್ವ, ಚೆಂದಾಗವ್ಳೆ. ಆರೋಗ್ಯ ಸಾಕಷ್ಟು ಸುಧಾರಿಸಿದೆ.

Coronavirus Crisis: Son Writes Letter to His Father Remembering Memories

ಅದೇನೋ, ನೀನು ಕಥೆಕಟ್ಟಿ, ಕೈಮಾಡಿ, ಕಣ್ಣಗಲಿಸಿ, ದೊಡ್ಡ ದನಿಯಲ್ಲಿ ಬಣ್ಣಬಣ್ಣವಾಗಿ ಹೇಳ್ತಿದ್ದೀಯಲ್ಲ, ಅದೇ, ಸಿಡುಬು, ದಢಾರ, ಪ್ಲೇಗ್, ಪೋಲಿಯೋ, ಅಂಥದ್ದೇ ಅದ್ಯಾವುದೋ ಕೊರೊನಾ ಅಂತ ನಮ್ಮನ್ನೆಲ್ಲಾ ಸಿಕ್ಕಾಪಟ್ಟೆ ಕಾಡ್ತಿದೆ. ಕೊರೊನಾ ಮುದುಕುರುಗೇ ಹೆಚ್ಚು ಕಾಡ್ತದಂತೆ, ಅದಕ್ಕೇ ನಿನ್ನ ಹುಡುಕಾಡ್ತಲೇ ಇದ್ದೀನಿ, ಎಲ್ಲಿದ್ದೀಯಿ ಹೇಳು? ಕೆಟ್ಟು ಕೊರೊನಾ ಕಣ್ಣು ನಿನ್ನ ಮೇಲೆ ಬೀಳದಿರಲಿ ಅಂತಾ ನಮ್ಮೂರು ದುರ್ಗಮ್ಮಗೇ ಕೈಮುಗಿದೀನಿ. ಹೌದು, ದುರ್ಗಮ್ಮನ ಆಶೀರ್ವಾದ ನಿನ್ನ ಮೇಲೈತೆ ಅಲ್ಲವಾ?

ಇರು, ವಯಸ್ಸಾಯ್ತಲ್ಲಾ, ದಣಿವಾಯ್ತು. ಒಂದು ಗುಟುಕು ನೀರು ಕುಡುದು, ಬಿಸಿ ಬಿಸಿ ಛಾಯ್ ಹೀರಿ, ಬರ್ತೀನಿ.

ಜೀವಬಿಂದು ತುಂಬಿದ ಜೀವಿ. ಅಕ್ಷರ ಕಲಿಸಿದ ಗುರು. ದಿಕ್ಕೆಟ್ಟ ಬದುಕಿನ ದಿಕ್ಸೂಚಿ. ಸ್ವಾವಲಂಬನೆ, ಸ್ವಯಂ ಕೃಷಿ, ಸ್ವಯಂ ರೂಪಿತ ವ್ಯಕ್ತಿತ್ವ - ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡಿದ ಪ್ರೇರಣಾ ಶಕ್ತಿ. ಸೂಜಿಮೊನೆಯ ರಂಧ್ರದಲ್ಲೂ ವಿಶ್ವವನ್ನೇ ನೋಡುವ ಕನಸುಗಳ ಕೃಷಿಕ. ಸಾಲ ಮಾಡದ, ಕೈ ಒಡ್ಡದ, ಮೈಮರೆಯದ ಬದುಕು ನಿನ್ನದಾಗಬೇಕು ಎನ್ನುವ ವಿಚಾರಗಳಲ್ಲೇ ವ್ಯಕ್ತಿತ್ವ ರೂಪಿಸಿದ ನೀನು, ಈಗೆಲ್ಲಿದ್ದೀಯಿ? ಹೇಗಿದ್ದೀಯಿ?

ಜೈಲು ಸೇರುವ ಮುನ್ನ ಆನಂದ್ ತೇಲ್ತುಂಬ್ಡೆ 'ಭಾರತೀಯರಿಗೆ ಬರೆದ ಪತ್ರ'ಜೈಲು ಸೇರುವ ಮುನ್ನ ಆನಂದ್ ತೇಲ್ತುಂಬ್ಡೆ 'ಭಾರತೀಯರಿಗೆ ಬರೆದ ಪತ್ರ'

ನನ್ನಮ್ಮಳ - ನಮ್ಮೆಲ್ಲರ ನೆಪ್ಪಾಗುತ್ತಿಲ್ಲವೇ? ನಿನ್ನ ಮಾನವೀಯ ಹೃದಯ ಕಲ್ಲಾಯಿತೇ?

ಇರಲಿ. ಕೊರೊನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಐಸೊಲೇಷನ್ ವಾರ್ಡ್, ಹೋಂ ಕ್ವಾರಂಟೈನ್, ಕಂಟೈನ್ಮೆಂಟ್, ಲಾಕ್ ಡೌನ್, ಸೀಲ್ ‍ಡೌನ್ ಹೀಗೆಲ್ಲಾ ಹತ್ತಾರು ಹೊಸ ಅನುಭವಗಳನ್ನು ವಿಶ್ವ ಪಡೆಯುತ್ತಿದೆ. ಈ ಎಲ್ಲಾವುಗಳ ಮಧ್ಯೆ ಪದೇ ಪದೇ ನಿನ್ನ ನೆಪ್ಪು. ಅದ್ಹ್ಯಾಗೆ, ಆರು ಮಕ್ಕಳನ್ನು ನೀ ಸಾಕಿ ಸಲುಹಿದ್ದು?

ಹೋಟೆಲ್, ಮಾರ್ಕೆಟ್, ಸ್ಕೂಲ್, ಟ್ಯೂಷನ್, ಬಸ್, ರೈಲು, ಧ್ಯಾನ, ಮಂತ್ರ - ಜಪ - ತಪ ಎಲ್ಲೆಂದರಲ್ಲಿ ನಿನ್ನನ್ನೇ ಎಡಬಿಡದೆ ಹುಡುಕುತ್ತಿವೆ. ಕನಿಷ್ಠ ಒಮ್ಮೆ, ಈ ಕಂದನನ್ನು ಕಾಣಲಾದರೂ ಬಾ,

ನಿನಗಾಗಿ ಕಾಯುವ,
ನಿನ್ನ ಮಗ
ಮಹೇಂದ್ರ (ಮಹಿ)

English summary
Son Written letter to his father remembering his memories in this corona situation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X